ವಿಜಯ ಕರ್ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೯ ನೇ ಸಾಲು:
=='ವಿಜಯ ಕರ್ನಾಟಕ ಪತ್ರಿಕೆ, ನಡೆದು ಬಂದ ರೀತಿ'==
ಸನ್, ೨೦೦೦ ರಲ್ಲಿ ಭಟ್ಟರು ಪತ್ರಿಕೆಯ ಸಂಪಾದಕರಾಗಿ ಜವಾಬ್ದಾರಿ ವಹಿಸಿಕೊಂಡಾಗ ಪತ್ರಿಕೆಯ ಪ್ರಸಾರ ೧ ಲಕ್ಷ ೧೬ ಸಾವಿರವಿತ್ತು. ಹತ್ತು ವರ್ಷಗಳ ಅವಧಿಯಲ್ಲಿ ಪತ್ರಿಕೆಯ ಪ್ರಸಾರವನ್ನು ೬ ಲಕ್ಷಗಳ ಗಡಿ ದಾಟಿಸಿದ ಖ್ಯಾತಿ ವಿಶ್ವೇಶ್ವರ ಭಟ್ಟರದು. ಕೇವಲ ಸಂಪಾದಕರಾಗಿಯೇ ಉಳಿಯದೆ, 'ನಿತ್ಯ ಬರೆಯುವ' ಸಂಪಾದಕ ಎಂಬ ಖ್ಯಾತಿ ಅವರದಾಗಿತ್ತು. '[[ನೂರೆಂಟು ಮಾತು]]', ಎನ್ನುವುದು, ಭಟ್ಟರ, 'ಗುರುವಾರದ ವಿಶೇಷ ಅಂಕಣ'ವಾಗಿದ್ದು ಅತ್ಯಂತ ಜನಪ್ರಿಯತೆಯನ್ನು ಹಾಸಿಲ್ ಮಾಡಿತ್ತು. ಶನಿವಾರದ ಅಂಕಣ, '[[ಸುದ್ದಿಮನೆ ಕತೆ]]', '[[ವಕ್ರತುಂಡೋಕ್ತಿ]]', ರವಿವಾರದ, '[[ಜನಗಳ ಮನಗಳು]]' ಅಲ್ಲದೆ ಇನ್ನೂ ಹತ್ತು ಹಲವು, ಹೊಸ-ಹೊಸ ಪ್ರಕರಣಗಳನ್ನು ಸಮರ್ಥವಾಗಿಯೂ, ಸಮಯೋಚಿತವಾಗಿಯೂ ಪತ್ರಿಕೆಯಲ್ಲಿ ಹೊರತಂದು, ಓದುಗರ ಹೃದಯಗಳನ್ನು ಗೆದ್ದಿದ್ದರು.
 
==ಭಟ್ಟರ ವ್ಯಕ್ತಿತ್ವ==
೪೫ ವರ್ಷದ ಹರೆಯದ ವಿಶ್ವೇಶ್ವರ ಭಟ್ಟರು, ಅಂಕಣಕಾರರು, ಸಮರ್ಥ ಸಂಪಾದಕರು, ಉತ್ತಮ ಲೇಖಕರು, ಈಗಾಗಲೇ ೪೮ ಪುಸ್ತಕಗಳನ್ನು ಬರೆದು, ತಮ್ಮ ಪತ್ರಿಕೋದ್ಯಮ ವಲಯದಲ್ಲಿ ಒಂದು ಹೊಸಕ್ರಾಂತಿಯನ್ನೇ ಸ್ಥಾಪಿಸಿದ್ದಾರೆ. ಉನ್ನತ ವ್ಯಾಸಂಗ ಕೈಗೊಳ್ಳುವ ಉದ್ದೇಶದಿಂದ ಹುದ್ದೆಗೆ ರಾಜೀನೇಮೆ ಕೊಟ್ಟಿರುವುದಾಗಿ ದಟ್ಸ್ ಕನ್ನಡಕ್ಕೆ ಪತ್ರಿಕೆಗೆ ಸಂದರ್ಶನಗಲ್ಲಿ ತಿಳಿಸಿದ್ದಾರೆ. ಅಕ್ಷರ ಹಸಿವಿಗೆ ಹಿಡಿದ ಕನ್ನಡಿ. ವಿಶ್ವೇಶ್ವರ ಭಟ್ಟರ ಸ್ಥಾನದಲ್ಲಿ, ಪತ್ರಕರ್ತ, '[[ಇ. ರಾಘವನ್]]' 'ವಿಜಯ ಕರ್ನಾಟಕ ದಿನಪತ್ರಿಕೆ'ಯ ಸಂಪಾದಕರಾಗಿ ನೇಮಕಗೊಂಡಿದ್ದಾರೆ. "ವಿಜಯ್Next" ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿರುವ ರಾಘವನ್ ಅವರಿಗೆ ವಿಜಯ ಕರ್ನಾಟಕದ ಹುದ್ದೆ ಹೆಚ್ಚುವರಿ ಜವಾಬ್ದಾರಿ ಆಗಿರುತ್ತದೆ. 'ರಾಘವನ್ ರವರು' ಇದಕ್ಕೆ ಮೊದಲು, '[[ಎಕನಾಮಿಕ್ ಟೈಂಮ್ಸ್ ಪತ್ರಿಕೆ]]'ಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಅದಕ್ಕೂ ಮುನ್ನ, '[[ಬೆಂಗಳೂರು ಇಂಡಿಯನ್ ಎಕ್ಸ್ ಪ್ರೆಸ್]]' ಆವೃತ್ತಿಯಲ್ಲಿ ಮುಖ್ಯ ವರದಿಗಾರರಾಗಿ ದುಡಿದ ಅನುಭವಿಗಳು.
 
 
 
 
 
==ಹೊರಗಿನ ಸಂಪರ್ಕಗಳು==
"https://kn.wikipedia.org/wiki/ವಿಜಯ_ಕರ್ನಾಟಕ" ಇಂದ ಪಡೆಯಲ್ಪಟ್ಟಿದೆ