ವಿಜಯ ಕರ್ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 2 interwiki links, now provided by Wikidata on d:q2464129 (translate me)
No edit summary
೭ ನೇ ಸಾಲು:
}}
'''ವಿಜಯ ಕರ್ನಾಟಕ''' ಕನ್ನಡದ ಇತ್ತೀಚಿನ ಪತ್ರಿಕೆಗಳಲ್ಲೊಂದು. ಹುಬ್ಬಳ್ಳಿಯ ವಿಜಯಾನಂದ ರೋಡ್ ಲೈನ್ಸ್ ಬಳಗದ ಪತ್ರಿಕೆಯಾಗಿದ್ದ ವಿಜಯಕರ್ನಾಟಕವನ್ನು ಇತ್ತೀಚೆಗೆ, [[ಟೈಂಸ್ ಆಫ್ ಇಂಡಿಯಾ]] ಪತ್ರಿಕೆ ಸಮೋಹದ, [[ಬೆನ್ನೆಟ್,ಕೊಲ್ಮನ್ ಅಂಡ್ ಸನ್ಸ್]] ಸಂಸ್ಥೆಯವರು, ತಮ್ಮ ಸ್ವಾಮ್ಯಕ್ಕೆ ಸೇರಿಸಿಕೊಂಡಿದ್ದಾರೆ. ಪ್ರಸಾರ ಹಾಗೂ ಸುದ್ದಿ ಪ್ರಸ್ತುತಿಯಲ್ಲಿ ಮಂಚೂಣಿಯಲ್ಲಿರುವ, "{ವಿಜಯ ಕರ್ನಾಟಕ ಪತ್ರಿಕೆಯ, ಕರ್ನಾಟಕದ ನಂ .೧, ದಿನಪತ್ರಿಕೆಯ ಸಂಪಾದಕ, '[[ವಿಶ್ವೇಶ್ವರ ಭಟ್]]' ರವರು, ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಆಡಳಿತ ವರ್ಗಕ್ಕೆ ಸೇರಿಕೊಂಡು ಸುಮಾರು ಒಂದು ದಶಕದ ಅವಧಿಯಲ್ಲಿ ಪತ್ರಿಕೆಯ ಪ್ರಸಾರವನ್ನು ೪ ಪಟ್ಟು ಹೆಚ್ಚಿಸಿಕೊಟ್ಟಿದ್ದಾರೆ. ಈಗ ತಮ್ಮ ಕೆಲವು ವೈಯಕ್ತಿಕ ಕಾರಣಗಳಿಂದಾಗಿ ತಮ್ಮ ರಾಜೀನಾಮೆ ಕೊಟ್ಟಿರುತ್ತಾರೆ.
==ಭಟ್ಟರ ದಿಢೀರ್ ರಾಜೀನಾಮೆ ಓದುಗರನ್ನು ಚಕಿತಗೊಳಿಸಿದೆ==
ಕಳೆದ ಹತ್ತು ವರ್ಷಗಳಿಂದ ಸಂಪಾದಕರಾಗಿ ಪತ್ರಿಕೆಯ ಚುಕ್ಕಾಣಿ ಹಿಡಿದು ವಿಜಯ ಕರ್ನಾಟಕವನ್ನು ಮುನ್ನಡೆಸಿದ್ದ ಭಟ್ಟರ ರಾಜೀನಾಮೆ ನಿರ್ಧಾರ ಪತ್ರಿಕೆಯ ಅಸಂಖ್ಯಾತ ಓದುಗರನ್ನು ಮತ್ತು ಅವರ ಅಭಿಮಾನಿ ವರ್ಗವನ್ನು ಬೆಚ್ಚಿಬೀಳಿಸಿದೆ. ಅಲ್ಲದೆ, ಸಮರ್ಥವಾದ ಒಂದು ಸಂಪಾದಕೀಯ ತಂಡವನ್ನು ಕಟ್ಟುವುದು ಮತ್ತು ಸಹೋದ್ಯೋಗಿಗಳಿಗೆ ನಿತ್ಯ ಮಾರ್ಗದರ್ಶನ ಮಾಡುವುದು ಅವರ ವೃತ್ತಿ ಕೌಶಲ್ಯದ ಒಂದು ಪ್ರಮುಖ ಅಂಗ. ಟೈಮ್ಸ್ ಆಫ್ ಇಂಡಿಯಾ ಮಾಲೀಕತ್ವದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕಳೆದ ಕೆಲ ದಿನಗಳಲ್ಲಿ ನಡೆದ ಕ್ಷಿಪ್ರಬದಲಾವಣೆಗಳೆಂದರೆ ವಿಶ್ವೇಶ್ವರ ಭಟ್ ಅವರು ಸಂಪಾದಕ ಹುದ್ದೆಗೆ ರಾಜೀನಾಮೆಯಿತ್ತ ಬೆನ್ನಲ್ಲೆ ಅವರನ್ನು ಹಿಂಬಾಲಿಸುತ್ತ ಪ್ರತಾಪ್ ಸಿಂಹ, ತ್ಯಾಗರಾಜ್, ರಾಧಾಕೃಷ್ಣ ಭಡ್ತಿ ಮುಂತಾಗಿ ಉಪಸಂಪಾದಕ ವರ್ಗದವರೂ ರಾಜೀನಾಮೆ ಕೊಟ್ಟು ಹೊರನಡೆದಿದ್ದಾರೆ. ಅವರೆಲ್ಲರ ಆಕರ್ಷಕ ಅಂಕಣಗಳು ಈಗ ಪ್ರಕಟವಾಗುತ್ತಿಲ್ಲ. ಹಾಗೆಯೇ ಎಸ್. ಷಡಕ್ಷರಿಯವರ ಜನಪ್ರಿಯ ದೈನಂದಿನ ಅಂಕಣ ’ಕ್ಷಣಹೊತ್ತು ಆಣಿಮುತ್ತು’ಮುನಿ ತರುಣ್ ಸಾಗರ್ ಅವರ "ನಗ್ನ ಸತ್ಯ " ರವಿ ಬೆಳಗೆರೆಯವರ ಅಂಕಣ ’ಸೂರ್ಯ ಶಿಕಾರಿ’, ಹಾಲ್ದೊಡ್ಡೇರಿ ಸುಧೀಂದ್ರ ಅವರ ’ನೆಟ್ ನೋಟ’ ಮುಂತಾದ ಅಂಕಣಗಳೂ ನಿಂತು ಹೋಗಿವೆ.
=='ವಿಜಯ ಕರ್ನಾಟಕ ಪತ್ರಿಕೆ, ನಡೆದು ಬಂದ ರೀತಿ'==
ಸನ್, ೨೦೦೦ ರಲ್ಲಿ ಭಟ್ಟರು ಪತ್ರಿಕೆಯ ಸಂಪಾದಕರಾಗಿ ಜವಾಬ್ದಾರಿ ವಹಿಸಿಕೊಂಡಾಗ ಪತ್ರಿಕೆಯ ಪ್ರಸಾರ ೧ ಲಕ್ಷ ೧೬ ಸಾವಿರವಿತ್ತು. ಹತ್ತು ವರ್ಷಗಳ ಅವಧಿಯಲ್ಲಿ ಪತ್ರಿಕೆಯ ಪ್ರಸಾರವನ್ನು ೬ ಲಕ್ಷಗಳ ಗಡಿ ದಾಟಿಸಿದ ಖ್ಯಾತಿ ವಿಶ್ವೇಶ್ವರ ಭಟ್ಟರದು. ಕೇವಲ ಸಂಪಾದಕರಾಗಿಯೇ ಉಳಿಯದೆ, 'ನಿತ್ಯ ಬರೆಯುವ' ಸಂಪಾದಕ ಎಂಬ ಖ್ಯಾತಿ ಅವರದಾಗಿತ್ತು. '[[ನೂರೆಂಟು ಮಾತು]]', ಎನ್ನುವುದು, ಭಟ್ಟರ, 'ಗುರುವಾರದ ವಿಶೇಷ ಅಂಕಣ'ವಾಗಿದ್ದು ಅತ್ಯಂತ ಜನಪ್ರಿಯತೆಯನ್ನು ಹಾಸಿಲ್ ಮಾಡಿತ್ತು. ಶನಿವಾರದ ಅಂಕಣ, '[[ಸುದ್ದಿಮನೆ ಕತೆ]]', '[[ವಕ್ರತುಂಡೋಕ್ತಿ]]', ರವಿವಾರದ, '[[ಜನಗಳ ಮನಗಳು]]' ಅಲ್ಲದೆ ಇನ್ನೂ ಹತ್ತು ಹಲವು, ಹೊಸ-ಹೊಸ ಪ್ರಕರಣಗಳನ್ನು ಸಮರ್ಥವಾಗಿಯೂ, ಸಮಯೋಚಿತವಾಗಿಯೂ ಪತ್ರಿಕೆಯಲ್ಲಿ ಹೊರತಂದು, ಓದುಗರ ಹೃದಯಗಳನ್ನು ಗೆದ್ದಿದ್ದರು.
"https://kn.wikipedia.org/wiki/ವಿಜಯ_ಕರ್ನಾಟಕ" ಇಂದ ಪಡೆಯಲ್ಪಟ್ಟಿದೆ