ಬಾಗಲಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೩ ನೇ ಸಾಲು:
}}
'''[[ಬಾಗಲಕೋಟೆ]]'''ಯು ಕರ್ನಾಟಕದ ಒಂದು [[ಜಿಲ್ಲೆ|ಜಿಲ್ಲಾ ಕೇಂದ್ರ]]. ಈ ಜಿಲ್ಲೆಯು ಉತ್ತರ ಕರ್ನಾಟಕದಲ್ಲಿ ಸ್ಥಾಪಿತವಾಗಿದೆ. ಮತ್ತು [[ಬೆಳಗಾವಿ]], [[ಗದಗ]], [[ಕೊಪ್ಪಳ]], [[ರಾಯಚೂರು]] ಹಾಗೂ [[ಬಿಜಾಪುರ]]ಗಳೊಂದಿಗೆ ತನ್ನ ಗಡಿಯನ್ನು ಹೊಂದಿದೆ. ೧೯೯೭ರಲ್ಲಿ ಭಾರತದ ೫೦ನೆಯ ಸ್ವಾತಂತ್ರ್ಯೋತ್ಸವದ ಸ್ಮರಣೀಯ ಘಟ್ಟದಲ್ಲಿ [[ಕರ್ನಾಟಕ ಸರ್ಕಾರ]]ದ ''[[ಪ್ರಕಟಣೆ ಆರ್‌ಡಿ ೪೨ ಎಲ್ಆರ್‌ಡಿ ೮೭ ಭಾಗ ೩]]'' ನಿರ್ದೇಶದ ದ್ವಾರಾ ಹೊಸ ಜಿಲ್ಲೆಯಾಗಿ ಅಂದಿನ ಮುಖ್ಯಮಂತ್ರಿ ಮಾನ್ಯ ಜೆ.ಎಚ್.ಪಟೇಲರಿಂದ ಉದ್ಘಾಟಿಸಲ್ಪಟ್ಟಿತು, ಅದಕ್ಕೆ ಮೊದಲು ಈ ಜಿಲ್ಲೆಯು [[ಬಿಜಾಪುರ]] ಜಿಲ್ಲೆಯ ಭಾಗವಾಗಿತ್ತು. ಐತಿಹಾಸಿಕವಾಗಿ ಬಾಗಲಕೋಟೆ ಜಿಲ್ಲೆಯು [[ಚಾಲುಕ್ಯ]]ರಾಳಿದ ನಾಡು. [[ಬಾದಾಮಿ]], [[ಐಹೊಳೆ]], [[ಪಟ್ಟದಕಲ್ಲು]], [[ಕೂಡಲಸಂಗಮ]] ಮತ್ತು [[ಮಹಾಕೂಟ]] ಇಲ್ಲಿಯ ಅತ್ಯಂತ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು.
 
==ಇತಿಹಾಸ==
 
ಇಲ್ಲಿ ದೊರೆತ ಶಿಲಾಶಾಸನಗಳ ಪ್ರಕಾರ ಮೂಲ ಹೆಸರು ಬಾಗಡಿಗೆ ಎಂದು ಆಗಿತ್ತು. ಪುರಾಣಗಳ ಪ್ರಕಾರ ಲಂಕಾಧಿಪತಿಯಾದ ರಾವಣ ಈ ಪ್ರದೇಶವನ್ನು ಆಳುತ್ತಿದ್ದ, ಅವನು ಈ ನಗರವನ್ನು ಬಜಂತ್ರಿ (ಸಂಗೀತಗಾರರು) ಗೆ ಕೊಡುಗೆಯಾಗಿ ನೀಡಿದ್ದನು. ಬಿಜಾಪುರ ರಾಜರು ತನ್ನ ಮಗಳಿಗೆ ಕಂಕಣ ಕಾಣಿಕೆ (ಮಗಳ ಮದುವೆ ನಂತರ ಬಳೆ, ಸೀರೆ, ಆಭರಣಗಳ ಖರೀದಿಸಲು ತಂದೆ-ತಾಯಿ ಹಣ ಕೋಡುವ ಸಂಪ್ರದಾಯದಂತೆ) ಯಾಗಿ ಈ ಪಟ್ಟಣವನ್ನು ಕೊಡುಗೆಯಾಗಿ ನೀಡಿದನು ಎಂದು ಹೇಳಲಾಗುತ್ತದೆ. ಪರಿಣಾಮವಾಗಿ ಪಟ್ಟಣದ ಹೆಸರು "ಬಾಗಡಿಕೋಟೆ"ಯಾಗಿ ನಂತರ ಬಾಗಲಕೋಟೆಯಾಗಿ ಮಾರ್ಪಟ್ಟಿತು. ನಂತರದ ದಿನಗಳಲ್ಲಿ ಬಾಗಲಕೋಟೆ ವಿಜಯನಗರ ದೊರೆಗಳ, ಪೇಶ್ವೆಗಳ, ಮೈಸೂರಿನ ಹೈದರಾಲಿ, ಮರಾಠ ಆಡಳಿತಗಾರರು ಮತ್ತು ಅಂತಿಮವಾಗಿ 1818 ರಲ್ಲಿ ಬ್ರಿಟಿಷ್ ಆಳ್ವೆಕೆಗೆ ಒಳಗಾಯಿತು. 1865 ರಲ್ಲಿ ಪುರಸಭೆಯಾಗಿ ಅಸ್ಥಿತ್ವಕ್ಕೆ ಬಂದಿತು. ಬಾಗಲಕೋಟೆಯು "ಸ್ವಾತಂತ್ರ್ಯ ಚಳುವಳಿ" ಮತ್ತು "ಕರ್ನಾಟಕ ಏಕೀಕರಣ ಚಳುವಳಿ"ಗಳಿಗೆ ಕೇಂದ್ರವಾಗಿತ್ತು.
 
ಇಂದು, ಬಾಗಲಕೋಟೆ ಪಟ್ಟಣ ಎರಡು ಭಾಗಗಳಲ್ಲಿ ಹಂಚಿ ಹೋಗಿದೆ, ಹೊಸ ಬಾಗಲಕೋಟೆ ಅಥವಾ ನವನಗರ ಮತ್ತು ಹಳೆಯ ಬಾಗಲಕೋಟೆ ಪಟ್ಟಣ. ಆಲಮಟ್ಟಿ ಅಣೆಕಟ್ಟಿನ ನಿರ್ಮಾಣದಿಂದಾಗಿ ಹಳೆಯ ಪಟ್ಟಣದ ಬಹುತೇಕ ಭಾಗಗಳು ಮುಳುಗಡೆ ಹೋದಿದೆ. ಆ ಕಾರಣದಿಂದ ಹೊಸ ನವನಗರ ನಿರ್ಮಾಣ ಅನಿವಾರ್ಯವಾಯಿತು. ನವನಗರವು ವಿಶಾಲ ರಸ್ತೆಗಳು, ಉದ್ಯಾನಗಳು, ಮತ್ತು ಇತರ ಆಧಿನಿಕ ಸೌಲಭ್ಯಗಳನ್ನು ಹೊಂದಿ ಮಾದರಿ ವಿನ್ಯಾಸದಿಂದ ಯೋಜಿತ ರೀತಿಯಲ್ಲಿ ಕಟ್ಟಿದ ಪಟ್ಟಣವಾಗಿದೆ.
 
=='''ನದಿಗಳು'''==
"https://kn.wikipedia.org/wiki/ಬಾಗಲಕೋಟೆ" ಇಂದ ಪಡೆಯಲ್ಪಟ್ಟಿದೆ