ಗಿರೀಶ್ ರಾವ್ ಹತ್ವಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೧ ನೇ ಸಾಲು:
ಜೋಗಿ, ಜಾನಕಿ, ಗಿರೀಶ್ ರಾವ್ ಹತ್ವಾರ್, ಎಚ್ ಗಿರೀಶ ರಾವ್, ಸತ್ಯವ್ರತ ಹೊಸಬೆಟ್ಟು ಹೀಗೆ ಅನೇಕ ಕಾವ್ಯನಾಮಗಳಲ್ಲಿ ಬರೆಯುತ್ತಿರುವ ಜೋಗಿ, ಕನ್ನಡಪ್ರಭ ಪತ್ರಿಕೆಯಲ್ಲಿ ಸಹ ಪುರವಣಿ ಸಂಪಾದಕರಾಗಿ ಕೆಲಸ ಮಾಡಿದವರು. ತಮ್ಮ ಚುರುಕಾದ ಚಲನಚಿತ್ರ ವಿಮರ್ಶೆಗಳಿಂದ, ಪುಸ್ತಕ ವಿಮರ್ಶೆಯಿಂದ ಗಮನ ಸೆಳೆದರು. ಅದರ ಜೊತೆಗೇ ಕತೆಗಾರರಾಗಿಯೂ ಹೊರಹೊಮ್ಮಿದ ಅವರು, ಕ್ರಮೇಣ ಕಾದಂಬರಿಗಳತ್ತ ಹೊರಳಿದರು. ಈಗ ಬರೆಯುತ್ತಿರುವ ಕಾದಂಬರಿಕಾರರ ಪಟ್ಟಿಯಲ್ಲಿ ಜೋಗಿ ಅವರದ್ದು ಜನಪ್ರಿಯ ಹೆಸರು.
 
ಪತ್ರಿಕೋದ್ಯಮ ಮತ್ತು ಸಾಹಿತ್ಯದ ಜೊತೆಗೇ ಜೋಗಿ ಕಿರುತೆರೆ ಧಾರವಾಹಿಗಳಿಗೆ ಸಂಭಾಷಣೆ ಬರೆದಿದ್ದಾರೆ. ಶಕ್ತಿ, ಯಶವಂತ ಚಿತ್ತಾಲರ ಶಿಕಾರಿ, ಬೆಳ್ಳಿತೆರೆ, ಗುಪ್ತಗಾಮಿನಿ, ಪ್ರೀತಿ ಇಲ್ಲದ ಮೇಲೆ, ಬಂದೇಬರತಾವ ಕಾಲ, ಶುಭಮಂಗಳ- ಅವರು ಸಂಭಾಷಗೆ ಬರೆದ ಕೆಲವು ಧಾರಾನಾಹಿಗಳು. ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆಗಳನ್ನೂ ಬರೆದ ಜೋಗಿ, ಅನಂತಮೂರ್ತಿಯವರ ಮೌನಿ ಕತೆಯನ್ನು ತೆರೆಗೆ ಅಳವಡಿಸುವಲ್ಲಿ ಚಿತ್ರಕತೆ ಮತ್ತು ಸಂಭಾಷಣೆಯನ್ನೂ ಬರೆದಿದ್ದಾರೆ. ಅವರದೇ ಕತೆ ಕಾಡಬೆಳದಿಂಗಳು ಚಿತ್ರವಾಗಿದೆ. ಅದಕ್ಕೆ ರಾಜ್ಯ ಸರ್ಕಾರದ ಅತ್ಯುತ್ತಮ ಕತೆ ಪ್ರಶಸ್ತಿಯೂ ಲಭಿಸಿದೆ.
 
==ಲೇಖಕ==