"ಹಾಸನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಮಲೆನಾಡು ಮತ್ತು ಮೈದಾನ ೨ ಪ್ರದೇಶಗಳನೊಳಗೊಂಡ ಜಿಲ್ಲೆ ಹಾಸನ ಇದನ್ನು ದಕ್ಷಿಣ ಮಲೆನಾಡು,ಉಪ ಮಲೆನಾಡು ಮತ್ತು .ದಕ್ಷಿಣಮೈದಾನಪ್ರದೇಶ ಎಂಬ ೩ ವಿಭಾಗ ಮಾಡಬಹುದು
ಹಾಸನ ಎಂಬ ಹೆಸರಿನ ಬಗ್ಗೆ ಸಾಕಷ್ಟು ಸ್ಥಳ ಪುರಾಣಗಳಿವೆ.ಒಂದು ಮೂಲದ ಪ್ರಕಾರ ಸಿಂಹಾಸನಪುರ ಎಂಬ ಹೆಸರಿನಿಂದ ಬಂದಿದೆ.ಇಲ್ಲಿ ಹಾಸನಾಂಬ ದೇವಾಲಯವಿದೆ.
ಐತಿಹಾಸಿಕವಾಗಿ ಸುಮಾರು ೧೧ ನೇಶತಮಾನದಲ್ಲಿ ಚೋಳ ಅರಸರ ಅಧಿಪತಿಯಾದ ಬುಕ್ಕ ನಾಯಕ ತನ್ನ ವಿಜಯೋತ್ಸಾವದ ನೆನಪಾಗಿ ಒಂದು ಕೋಟೆ ಮತ್ತುಮಾರುಕಟ್ಟೆಮತ್ತು ಮಾರುಕಟ್ಟೆ ಕಟ್ಟಿ ಅದಕ್ಕೆ ಚೆಲುವಾದ ಪಟ್ಟಣ ಹೆಸರಿಟ್ಟ .
ಒಂದನೆ ಶತಮಾನದ ನಂತರ ಇದೇ ವಂಶದ ಸಂಜೀವಕೃಷ್ಣನಾಯಕ ಪ್ರಯಾಣಕ್ಕೆ ಹೊರಟಗಹೊರಟಾಗ ಮೊಲ ಅಡ್ಡ ಬಂದು ಹೆಬ್ಬಾಗಿಲಿನೊಳಗೆ ಪ್ರವೇಶಿಸಿತೆಂದು, ಅಪಶಕುನ ಎಂದು ಚಿಂತಾಕ್ರಾಂತನಾಗಿದ್ದಾಗ ಹಾಸನಾಂಬ ಪ್ರತ್ಯಕ್ಷಳಾಗಿ ಅಲ್ಲಿ ಒಂದು ಕೋಟೆ ಕಟ್ಟುವಂತೆ ತಿಳಿಸಿ,ಅದೇ ಪ್ರಕಾರ ಅತ ಮಾಡಿ ಹಾಸನವೆಂದು ಹೆಸರಿಟ್ಟ. ಸುಮಾರು ೧೨ನೇ ಶತಮಾನದ ಅಂತ್ಯದಲ್ಲಿ ಸ್ಥಾಪನೆಗೊಂಡಿದೆ.ಹಾಸನ ತಾಲುಕಿನ ಕದರ ಗುಂಡಿ ಎಂಬ ಗ್ರಾಮದಲ್ಲಿರುವ ೧೪೪೦ರ ಶಿಲಾನಸದಲ್ಲಿ ಹೆಸರಿನ ಉಲ್ಲೇಖವಿದೆ.
ಹಾಸನಾಂಬ ದೇವಾಲಯ ಪ್ರಮುಖ ಕೇಂದ್ರ.ಕೊಳಲು ಗೋಪಾಲ ಕೃಷ್ಣ,ಗಂಗಾಧರೇಶ್ವರ,ಮಲ್ಲೇಶ್ವರ ದೇವಾಲಯ ಇದೆ.
ಹಾಸನಕ್ಕೆ ೧೮ ಕಿ.ಮೀ ದೂರದಲ್ಲಿ ದೊಡ್ಡಗದ್ದವಳ್ಳಿ ಎಂಬ ಗ್ರಾಮದಲ್ಲಿ ಲಕ್ಷಿ ದೇವಾಲಯವು ವಾಸ್ತುಶಿಲ್ಲ ಅಧ್ಯಯ್ದನ್ಲ್ಲದಲ್ಲಿ ಅಧ್ಯಯನದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.ಒಂದು ಶಾಸನದ ಪ್ರಕಾರ ಹೊಯ್ಸಳ ದೊರೆ ವಿಷ್ಣುವರ್ಧನನ ಕಾಲದಲ್ಲಿ ವ್ಯಾಪಾರಿ ಕುಲ್ಲಹಣ ಮತ್ತು ಪತ್ನಿ ಸಹಜಾದೇವಿ ಲಕ್ಷಿ ದೇವಾಲಯವನ್ನು ನಿರ್ಮಿಸಿದರು.
ಹಾಸನಕ್ಕೆ ೨೪ ಕಿ.ಮೀ ದೂರದಲ್ಲಿ ಹೆರಗು ಎಂಬ ಗ್ರಾಮದಲ್ಲಿ ನಾರಾಯಣ ದೇವಾಲಯವಿದೆ.ಈ ಊರಿನಲ್ಲಿ ಸುಮಾರು ೧೧೫೫ ರಲ್ಲಿ ನಿರ್ಮಾಣಗೊಂಡ ಜೈನ ಬಸದಿ ಇದೆ.
 
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/332092" ಇಂದ ಪಡೆಯಲ್ಪಟ್ಟಿದೆ