ಗೋಪಾಲ ವಾಜಪೇಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೧ ನೇ ಸಾಲು:
೧೯೯೬ರಲ್ಲಿ ಮತ್ತೆ ‘'ಕರ್ಮವೀರ'’ ಪತ್ರಿಕೆಯ ಸಹಸಂಪಾದಕರಾಗಿ ಬೆಂಗಳೂರಿಗೆ ವರ್ಗಾವಣೆಗೊಂಡ ವಾಜಪೇಯಿ ಅವರು ಆ ಪತ್ರಿಕೆಗೆ ಹಲವಾರು ಆಕರ್ಷಣೆಗಳನ್ನು ಮೂಡಿಸುವಲ್ಲಿ ವಿಶಿಷ್ಟ ಪಾತ್ರ ನಿರ್ವಹಿಸಿದರು. ನಂತರ ‘ಸಂಯುಕ್ತ ಕರ್ನಾಟಕ’ ದೈನಿಕದ ಗ್ರಾಮಾಂತರ ಸುದ್ಧಿ ವಿಭಾಗವನ್ನೂ, ‘ಸಾಪ್ತಾಹಿಕ ಪುರವಣಿ’ ವಿಭಾಗವನ್ನೂ ಕೆಲವು ಕಾಲ ವಾಜಪೇಯಿ ನಿರ್ವಹಿಸಿದರು. ಪತ್ರಿಕೋದ್ಯಮದಲ್ಲಿನ ಮೂರು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ ವಾಜಪೇಯಿ ‘ಗೋವಾ’, ‘ವೃಷಭೇಂದ್ರಯ್ಯ’ ಮುಂತಾದ ಕಾವ್ಯನಾಮಗಳಲ್ಲಿ, ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಬರೆದ ಲೇಖನಗಳ ಗಾತ್ರ ಸಾವಿರಾರು ಪುಟಗಳ ವ್ಯಾಪ್ತಿಯನ್ನು ದಾಟಿದ್ದು. ಇತ್ತೀಚೆಗೆ ಅವರು 'ಅವಧಿ' ಎಂಬ ವೆಬ್ ಮೆಗಜೀನಿನಲ್ಲಿ ೪೫ ವಾರಗಳ ಕಾಲ ಬರೆದ 'ಸುಮ್ಮನೇ ನೆನಪುಗಳು' ಎಂಬ ಅಂಕಣ ಜಗತ್ತಿನಾದ್ಯಂತದ ಕನ್ನಡಿಗರ ಮೆಚ್ಚುಗೆ ಗಳಿಸಿತು. ಈ ಅಂಕಣದಲ್ಲಿ ವಾಜಪೇಯಿಯವರು ತಮ್ಮ ರಂಗಾನುಭವಗಳನ್ನು ವಿಶಿಷ್ಟ ಶೈಲಿಯಲ್ಲಿ ನಿರೂಪಿಸಿದ್ದಾರೆ. ಈಗಲೂ ವಾಜಪೇಯಿಯವರು ಕನ್ನಡ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿರುತ್ತಾರೆ.
 
==ಕಿರುತೆರೆ ಕ್ಷೇತ್ರddದಲ್ಲಿ ==
==ಕಿರು==
೧೯೯೯ರ ವರ್ಷದಲ್ಲಿ ಪತ್ರಿಕಾ ಕ್ಷೇತ್ರದಿಂದ ಸ್ವಯಂನಿವೃತ್ತಿ ಪಡೆದ ವಾಜಪೇಯಿಯವರು ೨೦೦೬ರ ವರ್ಷದವರೆಗೆ ಟೆಲಿವಿಜನ್ ರಂಗದಲ್ಲಿ ‘(ಈಟಿವಿ ಕನ್ನಡ ವಾಹಿನಿ’ಯ ಕಥಾವಿಭಾಗದ ಸಂಯೋಜಕರಾಗಿ ಹೈದರಾಬಾದಿನಲ್ಲಿ) ಕಾರ್ಯನಿರ್ವಹಿಸಿ ನಂತರದಲ್ಲಿ ಪೂರ್ಣ ನಿವೃತ್ತಿ ಪಡೆದರು. ಈಗವರು ಪೂರ್ಣ ಫ್ರೀಲ್ಯಾನ್ಸರ್.
 
"https://kn.wikipedia.org/wiki/ಗೋಪಾಲ_ವಾಜಪೇಯಿ" ಇಂದ ಪಡೆಯಲ್ಪಟ್ಟಿದೆ