ರಂಗಭೂಮಿಯಲ್ಲಿ ಮಹಿಳೆಯರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೯ ನೇ ಸಾಲು:
=== ಸ್ರೀ ನಾಟಕ ಮಂಡಳಿಗಳು ===
ಸ್ರೀ ನಾಟಕ ಮಂಡಳಿಗಳಿಗಳಲ್ಲಿ ಪುರುಷ ಹಾಗೂ ಸ್ರೀ ಪಾತ್ರ ಎರಡನ್ನೂ ಸ್ರೀಯರೇ ಅಭಿನಯಿಸುತ್ತಾರೆ.
ಗುಳೇದಗುಡ್ಡದ ಗಂಗೂಬಾಯಿ ೧೯೨೫ರಲ್ಲಿ ಆರಂಬಿಸಿದ ಶ್ರೀಕೃಷ್ಣ ನಾಟಕ ಮಂಡಳಿ ಹಲವು ವರ್ಷಗಳ ಕಾಲ ನಡೆಯಿತು.ಆ ಕಾಲದ ಹೆಸರಾಂತ ಕಲಾವಿದರೆಲ್ಲ ಈ ಕಂಪೆನಿಯಲ್ಲಿದ್ದರು.ಇದೆ ಸುಮಾರಿನಲ್ಲಿ (೧೯೨೦-೧೯೩೦) ನಂಜಾಸಾನಿ,ಲಕ್ಷ್ಮಾಸಾನಿಯವರ ನಾಟಕ ಮಂಡಳಿಗಳಿದ್ದವು.ಮುಂದೆ ಮೈಸೂರಿನ ಅಂಬುಜಮ್ಮ ಎನ್ನುವವರು ಶ್ರೀ ಸ್ರೀ ನಾಟಕ ಮಂಡಳಿ ಸ್ಥಾಪಿಸುತ್ತಾರೆ.ನಂತರದ ಪ್ರಮುಖ ಸ್ರೀಯರ ನಾಟಕ ಕಂಪನಿಗಳೆಂದರೆ ಮೈಸೂರು ಭಾಗದಲ್ಲಿ ಜಿ.ಕೆ.ಅಯ್ಯಂಗಾರರ 'ಗಾಯತ್ರಿ ಸ್ರೀ ನಾಟಕ ಮಂಡಳಿ ' ,ಜಿ.ಬಿ.ಮಲ್ಲಪ್ಪನವರ "ಅಕ್ಕಮಹಾದೇವಿ ಕೃಪಾಪೋಷಿತ ನಾಟಕ ಸಬಾ", ಉತ್ತರ ಕರ್ನಾಟಕದಲ್ಲಿ ಸೋನೂಬಾಯಿ ದೊಡ್ಡಮನಿಯವರ "ನೂತನ ಸಂಗೀತ ನಾಟಕ ಮಂಡಳಿ" ಮುಂತಾದವು. ಕುಕನೂರು ರೆಹಿಮಾನವ್ವನವರು ೧೯೫೦ರಲ್ಲಿ ಸ್ತಾಪಿಸಿದ "ಶ್ರೀ ಲಲಿತ ಕಲಾ ನಾಟ್ಯ ಸಂಘ' ಸುಮಾರು ೨೫ ವರ್ಷಗಳ ಕಾಲ ನಡೆಸುತ್ತಾರೆ.ಮೈಸೂರು ಮಹಾರಾಜರು ಸ್ಥಾಪಿಸಿದ "ಶ್ರೀ ಚಾಮರಾಜೇಂದ್ರ ಕರ್ನಾಟಕ ನಾಟಕ ಸಬಾ"'ವನ್ನು ಮುಂದೆ [http://kn.wikipedia.org/wiki/%E0%B2%AE%E0%B2%B3%E0%B2%B5%E0%B2%B3%E0%B3%8D%E0%B2%B3%E0%B2%BF_%E0%B2%B8%E0%B3%81%E0%B2%82%E0%B2%A6%E0%B2%B0%E0%B2%AE%E0%B3%8D%E0%B2%AE ಮಳವಳ್ಳಿ ಸುಂದರಮ್ಮನವರುಸುಂದರಮ್ಮ] ನವರು ದೀರ್ಘ ಕಾಲ ನಡೆಸುತ್ತಾರೆ. ಜುಬೇದಾ ಬಾಯಿ ಸವಣೂರರ "ಜಯ ಕನ್ನಡ ಕಲಾ ಸಂಘ", ಕುಂದಾಪುರ ಸುಮಿತ್ರಾರ ಮಹಿಳಾ ತಂಡ,ಬೆಂಗಳೂರಿನಲ್ಲಿ ಆರು ಮಂದಿ ಅಕ್ಕ ತಂಗಿಯರು ಸೇರಿ ಸ್ತಾಪಿಸಿದ "ಸರಸ್ವತಿ ನಾಟಕ ಮಂಡಳಿ", ಆರ್.ನಾಗರತ್ನಮ್ಮನವರ "ಸ್ರೀ ನಾಟಕ ಮಂಡಳಿ", ಬಳ್ಳಾರಿ ಲಲಿತಮ್ಮನವರ ಕಂಪೆನಿ,ಇಳಕಲ್,ಮರಿಯಮ್ಮನ ಹಳ್ಳಿ,ಗದಗ,ಹುಬ್ಬಳ್ಳಿ,ದಾವಣಗೆರೆ,ಹಂಸನೂರು ನಟಿಯರು ಸ್ತಾಪಿಸಿದ ತಂಡಗಳೂ ಸೇರಿದಂತೆ ಮಹಿಳೆಯರೇ ನಾಟಕ ತಂಡಗಳನ್ನು ಸುದೀರ್ಘ ಕಾಲ ನಡೆಸಿದ ದೊಡ್ಡ ಚರಿತ್ರೆಯೇ ಇದೆ,ಇಲ್ಲಿ ಹೆಸರಿಸಿರುವುದು ಕೆಲವು ಮಾತ್ರ.
 
ವ್ರತ್ತಿ ರಂಗ ಭೂಮಿ ಪರಿ ಭಾಷೆಯಲ್ಲಿ ಬಹಳ ದೊಡ್ಡ ಕಲಾವಿದರನ್ನು "ದಂತ ಕತೆ"ಎಂದು ಕರೆಯುವುದು ವಾಡಿಕೆ.ಸುಬ್ಬಯ್ಯ ನಾಯ್ಡು,ಹಂದಿಗನೂರು ಸಿದ್ದರಾಮಪ್ಪ,ಗುಬ್ಬಿ ವೀರಣ್ಣ,ಪೀರ್ ಮಹಮ್ಮದ್,ಗರುಡರುಇವರೆಲ್ಲ ದಂತಕತೆಗಳು.ಇವರನ್ನೂ ಮೀರಿಸಿ ಬೆಳೆದ ಮಹಿಳೆಯರ ಪಟ್ಟಿ ದೊಡ್ಡದಾಗಿಯೇ ಇದೆ,ಸುಂದರಮ್ಮ,ಸ್ವರ್ಣಮ್ಮ,ಮೋಹನ್ ಕುಮಾರಿ,ಸೋಹನ್ ಕುಮಾರಿ,ಲಕ್ಷ್ಮಿ ಬಾಯಿ,ಬಿ.ಜಯಮ್ಮ,ಆದವಾನಿ ಲಕ್ಷ್ಮಿದೇವಿ,ಏಣಗಿ ಲಕ್ಷ್ಮಿ ಬಾಯಿ ಮುಂತಾದವರು.