ಮಳವಳ್ಳಿ ಸುಂದರಮ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ತಮ್ಮ ಜೀವನವನ್ನೇ ರಂಗಭೂಮಿಗೆ ಸಮರ್ಪಿಸಿಕೊಂಡ ಸುಂದ್ರಮ್ಮ, ಆಗಿನ ಕಾಲದಲ್ಲಿ...
 
No edit summary
೧ ನೇ ಸಾಲು:
 
ತಮ್ಮ ಜೀವನವನ್ನೇ ರಂಗಭೂಮಿಗೆ[http://kn.wikipedia.org/wiki/%E0%B2%B0%E0%B2%82%E0%B2%97%E0%B2%AD%E0%B3%82%E0%B2%AE%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF_%E0%B2%AE%E0%B2%B9%E0%B2%BF%E0%B2%B3%E0%B3%86%E0%B2%AF%E0%B2%B0%E0%B3%81 ರಂಗಭೂಮಿ]ಗೆ ಸಮರ್ಪಿಸಿಕೊಂಡ ಸುಂದ್ರಮ್ಮ, ಆಗಿನ ಕಾಲದಲ್ಲಿಯೇ ಹಲವು ಪ್ರಯೋಗಗಳನ್ನು ಮಾಡಿದ್ದ ದಿಟ್ಟೆ. ೧೯೦೫ರಲ್ಲಿ ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಜನನ. ತಂದೆ ಮಳವಳ್ಳಿ ಸುಬ್ಬಣ್ಣ ಸಂಗೀತ ವಿದ್ವಾಂಸರು, ಹೆಸರಾಂತ ಪಿಟೀಲು ವಾದಕರು. ತಾಯಿ ಲಕ್ಷ್ಮೀದೇವಿ ಕೂಡ ಸಂಗೀತ ಕಲಾವಿದೆ. ಅಮ್ಮ ಮಾಡಿಸಿದ ಸಂಗೀತಾಭ್ಯಾಸ ಮಗಳಿಗೆ ದಾರಿದೀಪವಾಯಿತು.
 
ಪುರುಷರೇ ಮಹಿಳೆಯರ ಪಾತ್ರಗಳನ್ನು ಮಾಡುತ್ತಿದ್ದ ಆ ಕಾಲದಲ್ಲಿ ಹೆಣ್ಣೊಬ್ಬಳು ವೇದಿಕೆಯಲ್ಲಿ ಕಾಣಿಸಿಕೊಳ್ಳುವುದು, ಅದರಲ್ಲೂ ೧೮ ಮೊಳದ ಸೀರೆಯುಟ್ಟು ಅಭಿನಯಿಸುವುದು ಸುಲಭದ ಮಾತಾಗಿರಲಿಲ್ಲ. ಆದರೂ ನಾಟಕ ರಂಗವನ್ನು ಪ್ರವೇಶಿಸಿದ ಸುಂದರಮ್ಮ ಹಂತಹಂತವಾಗಿ ಮೇಲೇರಿದರು. ಉತ್ತರ ಕರ್ನಾಟಕದಲ್ಲಿ ಮಹಿಳಾ ನಾಟಕ ಕಂಪನಿಯನ್ನೇ ಪ್ರಾರಂಭಿಸಿದ ಕೀರ್ತಿ ಕೂಡ ಇವರಿಗೆ ಸಲ್ಲಬೇಕು. ಪುರುಷ ಪಾತ್ರಗಳಲ್ಲೂ ಅಭಿನಯಿಸಿ ಸೈ ಎನ್ನಿಸಿಕೊಂಡ ಕಲಾವಿದೆ ಸುಂದ್ರಮ್ಮ. ಮೈಸೂರು ಒಡೆಯರು ಅಂದು ನಾಟಕ ರಂಗದಲ್ಲಿ ಇವರು ಮಾಡಿದ ದಿಟ್ಟ ಪ್ರಯತ್ನಗಳನ್ನು ಗುರುತಿಸಿ 'ನಾಟ್ಯ ಶಾರದೆ' ಬಿರುದು ನೀಡಿದ್ದಾರೆ. ರಾಜ್ಯ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಇವರಿಗೆ ಸಂದಿವೆ. ೧೯೩೬ರಲ್ಲಿ 'ಚಿರಂಜೀವಿ' ಚಲನಚಿತ್ರದಲ್ಲಿಯೂ ನಟಿಸಿದ್ದರು.
"https://kn.wikipedia.org/wiki/ಮಳವಳ್ಳಿ_ಸುಂದರಮ್ಮ" ಇಂದ ಪಡೆಯಲ್ಪಟ್ಟಿದೆ