ಭಾರತೀಸುತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{
'''ಭಾರತೀಸುತ''' ಇದು '''ಎಸ್.ಆರ್.ನಾರಾಯಣರಾವ್''' ಇವರ ಕಾವ್ಯನಾಮ. ಇವರು [[೧೯೧೫]] [[ಮೇ ೧೫]]ರಂದು [[ಕೊಡಗು]] ಜಿಲ್ಲೆಯ [[ಮಡಿಕೇರಿ]] ತಾಲೂಕಿನ '''ಬಿಳಿಗೇರಿ''' ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಸುಬ್ಬಮ್ಮ ; ತಂದೆ ರಾಮಯ್ಯ.
Infobox writer
| name = ಭಾರತೀಸುತ
| birth_name = ಶಾನಭಾಗ ರಾಮಯ್ಯ ನಾರಾಯಣರಾವ್
| birth_date = ಮೇ ೧೫, ೧೯೧೫
| birth_place = ಮಡಿಕೇರಿ ಬಳಿಯ ಬಿಳಿಗೇರಿ
| death_date = ಏಪ್ರಿಲ್ ೪, ೧೯೭೬
| occupation = ಕಥೆಗಾರರು. ಶಿಕ್ಷಕರು
}}
 
'''ಭಾರತೀಸುತ''' ಇದು '''ಎಸ್.ಆರ್.ನಾರಾಯಣರಾವ್''' ([[ಮೇ ೧೫]], [[೧೯೧೫]] - [[ಏಪ್ರಿಲ್ ೪]] [[೧೯೭೬]]) ಇವರ ಕಾವ್ಯನಾಮ. ಭಾರತೀಸುತ ಕನ್ನಡದ ಪ್ರಸಿದ್ಧ ಕಾದಮ್ಬರಿಕಾರರೆನಿಸಿದ್ದಾರೆ.
ಎಸ್.ಆರ್.ನಾರಾಯಣರಾಯರು ಚಿಕ್ಕ ವಯಸ್ಸಿನಲ್ಲಿಯೆ [[ಭಾರತ]]ದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಇದು ಅವರ ಶಿಕ್ಷಣವನ್ನು ಅಪೂರ್ಣವನ್ನಾಗಿ ಮಾಡಿತು. ಆದರೂ ಸಹ, ಮದರಾಸಿನ (ಈಗ [[ಚೆನ್ನೈ]]) ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೆಲಕಾಲ [[ಮಡಿಕೇರಿ]]ಯ ಮಾಧ್ಯಮಿಕ ಶಾಲೆಯಲ್ಲಿ ಉಪಾಧ್ಯಾಯರಾಗಿದ್ದರು. ಕೆಲಕಾಲ “'''ರಾಷ್ಟ್ರಬಂಧು'''” ಹಾಗು “'''ಗುರುವಾಣಿ'''” ಪತ್ರಿಕೆಗಳಿಗೆ ಸಂಪಾದಕರಾಗಿದ್ದರು.
 
==ಜೀವನ==
ಗ್ರಾಮೀಣ ಪರಿಸರದ ಹಿನ್ನೆಲೆಯ ಕಾದಂಬರಿಕಾರರಾದ ಶಾನಭಾಗ ರಾಮಯ್ಯ ನಾರಾಯಣರಾವ್ (ಭಾರತೀಸುತ) ಅವರು ಮಡಿಕೇರಿಯ ಬಳಿಯ ಬಿಳಿಗೇರಿ ಗ್ರಾಮದಲ್ಲಿ ಮೇ ೧೫, ೧೯೧೫ರಂದು ಜನಿಸಿದರು. ತಂದೆ ರಾಮಯ್ಯ, ತಾಯಿ ಸುಬ್ಬಮ್ಮ. ಏಳನೆಯ ತರಗತಿ ಓದುತ್ತಿದ್ದಾಗಲೇ ತಂದೆಯ ಪ್ರೀತಿಯಿಂದ ವಂಚಿತರಾದರು. ಪ್ರೌಢಶಾಲೆ ವ್ಯಾಸಂಗ ಮಾಡುವಾಗ ಪಂಜೆಯವರ ಶಿಷ್ಯರಾಗಿ ಸಾಹಿತ್ಯ ಸಂಸ್ಕಾರ ಪಡೆದ ಭಾಗ್ಯ ಅವರದ್ದಾಗಿತ್ತು.
 
ಸ್ವಾತಂತ್ರ್ಯ ಚಳವಳಿಯ ಕಾವಿನಿಂದ ಓದಿಗೆ ತಿಲಾಂಜಲಿ ಕೊಟ್ಟ ಭಾರತೀಸುತರು ಕಣ್ಣಾನೂರು ಹಾಗೂ ತಿರುಚನಾಪಳ್ಳಿ ಸೆರೆಮನೆಗಳಲ್ಲಿದ್ದಾಗ ಗಾಂಧೀ ತತ್ತ್ವಗಳನ್ನು ಮೈಗೂಡಿಸಿಕೊಂಡರು. ಸತ್ಯಾಗ್ರಹಿಯಾದರೂ ಅವರು ರಾಜಕೀಯ ವ್ಯಕ್ತಿಯಾಗಲಿಲ್ಲ. ಬಿಡುಗಡೆಯ ನಂತರ ಕೆಲಕಾಲ ಕಾಫಿ ಎಸ್ಟೇಟಿನಲ್ಲಿ ಗುಮಾಸ್ತೆ ಕೆಲಸ ಮಾಡಿದರು. 1942ರಲ್ಲಿ ಶಾಲಾ ಶಿಕ್ಷಕರಾಗಿ ನೇಮಕಗೊಂಡರು. ೧೯೪೫ರಲ್ಲಿ ಮದರಾಸು ವಿಶ್ವವಿದ್ಯಾಲಯದಿಂದ ವಿದ್ವಾನ್ ಪದವಿ ಪಡೆದರು. ೧೯೭೩ರವರೆಗೂ ಪ್ರೌಢಶಾಲೆಯಲ್ಲಿ ಕನ್ನಡ ಪಂಡಿತರಾಗಿ ಸೇವೆ ಸಲ್ಲಿಸಿದರು.
 
==ಕಾದಂಬರಿ ಲೋಕದಲ್ಲಿ==
ಭಾರತೀಸುತರ ಕಾದಂಬರಿಗಳಲ್ಲಿ ದಾಂಪತ್ಯ ಜೀವನದ ಸಮಸ್ಯೆಗಳ ಆಳವಾದ ವಿವೇಚನೆ, ಹೆಣ್ಣಿನ ಬಗೆಗಿನ ಸಹಾನುಭೂತಿಯುಳ್ಳ ದೃಷ್ಟಿಕೋನಗಳು ಪ್ರಮುಖ ಪಾತ್ರವಹಿಸಿವೆ. ಎಡಕಲ್ಲು ಗುಡ್ಡದ ಮೇಲೆ ಮತ್ತು ಸಂತಾನ ಭಿಕ್ಷೆ ಮಾನವೀಯ ದೃಷ್ಟಿಕೋನದ ಕಾದಂಬರಿಗಳೆನಿಸಿವೆ. 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ ಕೀರ್ತಿ ಭಾರತೀಸುತರದು. ಹುಲಿಯ ಹಾಲಿನ ಮೇವು, ಗಿರಿಕನ್ನಿಕೆ, ಬಯಲುದಾರಿ, ಇಳಿದು ಬಾ ತಾಯಿ, ವಕ್ರರೇಖೆ, ಬೆಳಕಿನೆಡೆಗೆ, ಬೆಂಕಿಯ ಮಳೆ, ಅಮಾತ್ಯ ನಂದಿನಿ, ಗಿಳಿಯು ಪಂಜರದೊಳಿಲ್ಲ, ಸಾಧನ ಕುಟೀರ, ಹಾವಿನ ಹುತ್ತ, ದೊರೆ ಮಗಳು ಮುಂತಾದುವು ಭಾರತೀಸುತರ ಪ್ರಮುಖ ಕಾದಂಬರಿಗಳು. ಹುಲಿಬೋನು, ಗಿರಿಕನ್ನಿಕೆ, ಗಿಳಿಯು ಪಂಜರದೊಳಿಲ್ಲ ರಾಜ್ಯ ಸಾಹಿತ್ಯ ಅಕಾಡಮಿ ಪುರಸ್ಕೃತ ಕಾದಂಬರಿಗಳು. ಅವರ ಬಯಲು ದಾರಿ, ಹುಲಿಯ ಹಾಲಿನ ಮೇವು, ಎಡಕಲ್ಲು ಗುಡ್ಡದ ಮೇಲೆ ಕೃತಿಗಳು ಚಲನಚಿತ್ರಗಳಾಗಿ ಪ್ರಖ್ಯಾತಗೊಂಡಿವೆ. ಇವರ ಮಿನಿಕಾದಂಬರಿ ‘ವಲ್ಮಿಕ’ ಬಹಳಷ್ಟು ಖ್ಯಾತಿ ಪಡೆದ ಕೃತಿ.
 
==ಶಿಶು ಸಾಹಿತ್ಯದಲ್ಲಿ==
ಶಿಶು ಸಾಹಿತ್ಯದಲ್ಲೂ ಸಾಧನೆ ಮಾಡಿರುವ ಭಾರತೀಸುತರು 25ಕ್ಕೂ ಹೆಚ್ಚು ಶಿಶು ಸಾಹಿತ್ಯ ಕೃತಿಗಳನ್ನು ರಚಿಸಿ ಮಕ್ಕಳ ಮನಸ್ಸನ್ನು ಗೆದ್ದಿದ್ದಾರೆ. ವಯಸ್ಕರ ಶಿಕ್ಷಣ ಬೆಳವಣಿಗೆಗೂ ಅವರು ಹಲವಾರು ಕೃತಿ ರಚನೆ ಮಾಡಿದ್ದಾರೆ.
 
==ಪತ್ರಿಕೋದ್ಯಮದಲ್ಲಿ==
ಪತ್ರಿಕೋದ್ಯಮದಲ್ಲೂ ತಮ್ಮ ಶ್ರಮ ನೀಡಿರುವ ಭಾರತೀಸುತರು ರಾಷ್ಟ್ರಬಂಧು, ಗುರುವಾಣಿ ಮುಂತಾದ ಪತ್ರಿಕೆಗಳನ್ನು ಕೆಲಕಾಲ ನಡೆಸಿದರು.
 
==ಪ್ರಶಸ್ತಿ ಗೌರವಗಳು==
ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿಯು ೧೯೭೬ರಲ್ಲಿ ಭಾರತೀಸುತರಿಗೆ ಮರಣೋತ್ತರ ಗೌರವವನ್ನು ಘೋಷಿಸಿತು. ಭಾರತೀಸುತರ ಗೌರವಾರ್ಥವಾಗಿ ಸಾಹಿತ್ಯಾಭಿಮಾನಿಗಳು ‘ಬ್ರಹ್ಮಗಿರಿ’ ಎಂಬ ಸಂಸ್ಮರಣ ಗ್ರಂಥವನ್ನು ಹೊರತಂದರು.
 
==ವಿದಾಯ==
ಭಾರತೀಸುತರು ಏಪ್ರಿಲ್ ೪, ೧೯೭೬ರಲ್ಲಿ ಈ ಲೋಕವನ್ನಗಲಿದರು.
 
==ಕೃತಿಗಳು==
Line ೪೯ ⟶ ೭೭:
==ಪುರಸ್ಕಾರ==
* 'ಹುಲಿ ಬೋನು' , 'ಗಿರಿಕನ್ನಿಕೆ' , 'ಗಿಳಿಯು ಪಂಜರದೊಳಿಲ್ಲ' ಈ ಕಾದಂಬರಿಗಳಿಗೆ ಹಾಗು 'ಜಿಂಬ ಹಿಡಿದ ಮೀನು' ಈ ಕಥಾಸಂಕಲನಕ್ಕೆ [[ಕರ್ನಾಟಕ]] [[ರಾಜ್ಯ ಸಾಹಿತ್ಯ ಅಕಾಡೆಮಿ]] ಪ್ರಶಸ್ತಿ ದೊರೆತಿದೆ.
 
==ನಿಧನ==
ಭಾರತೀಸುತರು [[೧೯೭೬]] [[ಏಪ್ರಿಲ್ ೪]]ರಂದು ನಿಧನರಾದರು.
 
 
 
 
[[ವರ್ಗ:ಕನ್ನಡ ಸಾಹಿತ್ಯ]]
"https://kn.wikipedia.org/wiki/ಭಾರತೀಸುತ" ಇಂದ ಪಡೆಯಲ್ಪಟ್ಟಿದೆ