ಪ್ರಾಣ್ (ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(~~~~)
No edit summary
೧೪ ನೇ ಸಾಲು:
}}
 
'''ಪ್ರಾಣ್''' ([[ಫೆಬ್ರುವರಿ ೧೨]],[[೧೯೨೦]]) ಎಂದು ಭಾರತೀಯ ಚಿತ್ರರಂಗದಲ್ಲಿ ಹೆಸರಾದ 'ಪ್ರಾಣ್ ಕೇವಲ್ ಕ್ರಿಶನ್ ಸಿಕಂದ್' ಒಬ್ಬ ಮಹಾನ್ ಕಲಾವಿದರು. ಹಿಂದಿಚಲನ ಚಿತ್ರರಂಗದ ನಾಯಕನಟರಾಗಿ, ಖಳ ನಟರಾಗಿ, ಪೋಷಕ ನಟರಾಗಿ ಅವರು ಸಲ್ಲಿಸಿದ ಐದು ದಶಕಗಳಿಗೂ ಹೆಚ್ಚಿನ ಸೇವೆ ಅವಿಸ್ಮರಣೀಯವಾದುದು. ಅವರು ನಟಿಸಿದ ಚಿತ್ರಗಳ ಸಂಖ್ಯೆ ೩೫೦ಕ್ಕೂ ಹೆಚ್ಚಿನದು. ಪ್ರಾಣ್ ಅವರಿಗೆ ೨೦೧೨ನೇ ವರ್ಷದ ಸಾಲಿಗಾಗಿ ಭಾರತೀಯ ಚಿತ್ರರಂಗದಲ್ಲಿನ ಶ್ರೇಷ್ಠ ಸಾಧನೆಗಾಗಿ ನೀಡುವ '೪೪ ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ'ಯನ್ನು ಘೋಷಿಸಲಾಗಿದೆ.
==ಜೀವನ==
ಪ್ರಾಣ್ ಅವರು ಫೆಬ್ರುವರಿ ೧೨, ೧೯೨೦ರ ವರ್ಷದಲ್ಲಿ ಹಳೆಯ ದಿಲ್ಲಿಯ ಬಡಾವಣೆಯ ಪಂಜಾಬಿ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರು. ಪ್ರಾಣರ ಅಂದಿನ ಹೆಸರು 'ಪ್ರಾಣ್ ಕ್ರಿಶನ್ ಸಿಕಂದ್'. ಅವರ ತಂದೆ 'ಕೇವಲ್ ಕ್ರಿಶನ್ ಸಿಕಂದರು' ವೃತ್ತಿಯಲ್ಲಿ ಸಿವಿಲ್ ಇಂಜಿನಿಯರರಾಗಿದ್ದು ಸರ್ಕಾರಿ ಕಾಮಗಾರಿಗಳ ಗುತ್ತಿಗೆದಾರರಾಗಿದ್ದರು. ಅವರ ತಾಯಿಯ ಹೆಸರು 'ರಾಮೇಶ್ವರಿ'. ಈ ದಂಪತಿಗಳಿಗೆ ಮೂರು ಗಂಡು ಮಕ್ಕಳೂ ಮೂರು ಹೆಣ್ಣು ಮಕ್ಕಳೂ ಇದ್ದರು. ಪ್ರಾಣ್, ಸನ್.೧೯೪೫ ರಲ್ಲಿ 'ಶುಕ್ಲಾ ಅಹ್ಲೂವಾಲಿಯ'ರನ್ನು ಮದುವೆಯಾದರು. ಇವರಿಗೆ, ಎರಡು ಗಂಡುಮಕ್ಕಳು, ಅರವಿಂದ್, ಸುನಿಲ್, ಮತ್ತು ಒಬ್ಬ ಮಗಳು ಪಿಂಕಿ ಭಲ್ಲಾ.
"https://kn.wikipedia.org/wiki/ಪ್ರಾಣ್_(ನಟ)" ಇಂದ ಪಡೆಯಲ್ಪಟ್ಟಿದೆ