ಚಾರ್ಲ್ಸ್ ಸಾಲಮನ್ ಪಿಚ್ಚಮುತ್ತು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೨೨ ನೇ ಸಾಲು:
===ಅಂತಾರಾಷ್ಟ್ರೀಯ ಮನ್ನಣೆ===
 
ಪಿಚ್ಚಮುತ್ತು ಅವರನ್ನು ಭೂವಿಜ್ಞಾನಗಳುಭೂವಿಜ್ಞಾನಿಗಳು ಸ್ಮರಿಸುವುದು ಅವರು ಚಾರ್ನೋಕೈಟ್ ಎಂಬ ಶೆಲೆಯ ಉಗಮದ ಬಗ್ಗೆ ಪ್ರತಿಪಾದಿಸಿದ ಸಿದ್ಧಾಂತಕ್ಕಾಗಿ.[[ ನೈಸ್ ಶಿಲೆ]] ಚಾರ್ನೋಕೈಟ್ ಆಗಿ ಪರಿವರ್ತನೆಯಾಗಿರುವುದನ್ನು ಪಿಚ್ಚಮುತ್ತು ಅವರು ಕನಕಪುರದ ಬಳಿಯ ಕಬ್ಬಾಲದುರ್ಗದ ಕಲ್ಲುಗಣಿಯಲ್ಲಿ ಸಾಕ್ಷಿಗಳೊಡನೆ ಪ್ರತಿಪಾದಿಸಿದರು.`ಚಾರ್ನೋಕೈಟ್ ಹುಟ್ಟುವ ಸ್ಥಿತಿಯಲ್ಲಿ' ಎಂಬ ಶೀರ್ಷಿಕೆಯಡಿ [[ನೇಚರ್ ಪತ್ರಿಕೆ]]ಯಲ್ಲಿ ಸಂಶೋಧನಾ ಲೇಖನ ಪ್ರಕಟಿಸಿದರು. ಇದು ಜಗತ್ತಿನ ಗಮನ ಸೆಳೆಯಿತು. ಜೊತೆಗೆ ಕಬ್ಬಾಲದುರ್ಗ ಜಾಗತಿಕ ಮನ್ನಣೆ ಪಡೆಯಿತು. 1953ರಲ್ಲಿ ವಿನಿಮಯ ಯೋಜನೆಯಡಿಯಲ್ಲಿ ಅಮೆರಿಕಕ್ಕೆ ಭೇಟಿ ಕೊಡುವ ಅವಕಾಶ ಇವರಿಗೆ ಲಭ್ಯವಾಯಿತು. ಮುಂದೆ ಅವರು ತಮ್ಮ ಅನುಭವವನ್ನು `ಮೈ ಅಮೆರಿಕನ್ ಡೈರಿ' ಎಂದು ಬರೆದರು. ಮೈಸೂರು ಭೂವಿಜ್ಞಾನಿಗಳ ಸಂಸ್ಥೆ ಅದನ್ನು ಪ್ರಕಟಿಸಿತು. 1955ರಲ್ಲಿ ಪಿಚ್ಚಮುತ್ತು ನಿವೃತ್ತರಾದರು. ಆರ್ಥರ್ ಹೋಮ್ಸ್ ಅವರ ಸಲಹೆಯ ಮೇರೆಗೆ ಸಿಂಗಪುರದ ಮಲೆಯ ವಿಶ್ವವಿದ್ಯಾಲಯದಲ್ಲಿ ಭೂವಿಜ್ಞಾನದ ಪ್ರೊಫೆಸರ್ ಹುದ್ದೆ ಸ್ವೀಕರಿಸಿದರು. 1963ರಲ್ಲಿ ಆಂಧ್ರ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್[[ ಸಿ. ಮಹದೇವನ್]] ಅವರ ನಿಧನಾನಂತರ ಖಾಲಿ ಇದ್ದ ಹುದ್ದೆಯನ್ನು ಸ್ವೀಕರಿಸಿ[[ ವಾಲ್ಟೇರ್]] ಗೆ (ವಿಶಾಖಪಟ್ಟಣ) ತೆರಳಿದರು. ಭಾರತದ ಪ್ರಿಕೇಂಬ್ರಿಯನ್ ಭೂವಿಜ್ಞಾನಕ್ಕೆ ನೀಡಿದ ಕೊಡುಗೆಯಿಂದಾಗಿ ಅವರಿಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆಯಿತು. ಪ್ರೊಫೆಸರ್ ರಂಕಾಮ ಅವರ ಸಲಹೆಯ ಮೇರೆಗೆ ಅವರೇ ರೂಪಿಸಿದ್ದ ಜಗತ್ತಿನ[[ ಪ್ರಿಕೇಂಬ್ರಿಯ]]ನ್ಪ್ರಿಕೇಂಬ್ರಿಯನ್ ಶಿಲೆಗಳನ್ನು ಕುರಿತ ಯೋಜನೆಗೆ ಪಿಚ್ಚಮುತ್ತು ಅವರು ಭಾರತ ಮತ್ತು ಶ್ರೀಲಂಕದ ಭೂವಿಜ್ಞಾನ ಕುರಿತಂತೆ ಅಧ್ಯಾಯಗಳನ್ನು ಬರೆದರು. ಈಗಲೂ ಅದೊಂದು ಅತ್ಯುತ್ತಮ ಪ್ರಮಾಣಗ್ರಂಥವೆಂದೇ ಪರಿಗಣಿತವಾಗಿದೆ.
 
1972ರಲ್ಲಿ[[ಭಾರತೀಯ ಭೂವೈಜ್ಞಾನಿಕ ಸಂಘದ ]]ಅಧ್ಯಕ್ಷರಾಗಿ ಚುನಾಯಿತರಾದರು. 1984ರವರೆಗೆ ಆ ಹುದ್ದೆಯಲ್ಲಿ ಮುಂದುವರಿದು ಸಂಘದ ಚಾಲಕ ಶಕ್ತಿಯಾಗಿದ್ದರು. ಭಾರತದ ಪ್ರಿಕೇಂಬ್ರಿಯನ್ ಭೂವಿಜ್ಞಾನಕ್ಕೆ ಅವರು ನೀಡಿದ ಕೊಡುಗೆಯನ್ನು ಗೌರವಿಸಿ 1988ರಲ್ಲಿ [[`ಡಿ.ಎನ್. ವಾಡಿಯ ]]ಪಾರಿತೋಷಿಕ'ಕ್ಕೆ ಭಾಜನರಾದರು. ಪಿಚ್ಚಮುತ್ತು ಅವರು ಭಾರಿ ಕ್ರಿಕೆಟ್ ಪ್ರೇಮಿ. ನುರಿತ ಚೆಸ್ ಆಟಗಾರರಾಗಿದ್ದರು. ವೈ.ಎಂ.ಸಿ.ಎ. ಸದಸ್ಯರಾಗಿ ಕ್ರೀಡೆಗಳಲ್ಲಿ ಅತ್ಯುತ್ಸಾಹವಾಗಿ ಭಾಗವಹಿಸುತ್ತಿದ್ದರು.