ಚಾರ್ಲ್ಸ್ ಸಾಲಮನ್ ಪಿಚ್ಚಮುತ್ತು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
==ಚಾರ್ಲ್ಸ್ ಸಾಲಮನ್ ಪಿಚ್ಚಮುತ್ತು==
 
ಚಾರ್ಲ್ಸ್ ಸಾಲಮನ್ ಪಿಚ್ಚಮುತ್ತು ( 1900-1990) ಭಾರತದ ಪ್ರಸಿದ್ಧ ಭೂವಿಜ್ಞಾನಿಗಳಲ್ಲೊಬ್ಬರು. ಜನನ ಮಾರ್ಚ್ 10,1900 ದಿಂಡಿಹಲ್ದಿಂಡಿಗಲ್ ನಲ್ಲಿ. ತಂದೆ ಶಾಂತಪ್ಪ ವೆಲ್ಲಯ್ಯ ಅವರು ದಿಂಡಿಗಲ್ಲಿನ ವೆಸ್ಲಿ ಮಿಷನ್ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ಪಿಚ್ಚಮುತ್ತು ಅವರ ಪ್ರಾರಂಭದ ಅಧ್ಯಯನ ಇದೇ ಶಾಲೆಯಲ್ಲಾಯಿತು. ಅದು ಗುಣಮಟ್ಟಕ್ಕೆ ಹೆಸರಾಗಿತ್ತು. ತಂದೆ ಶಾಂತಪ್ಪ ವೆಲ್ಲಯ್ಯ ಇಂಗ್ಲಿಷ್ ಸಾಹಿತ್ಯದಲ್ಲಿ ಅಸಾಧಾರಣ ಪರಿಣತಿ ಹೊಂದಿದ್ದವರು ಹಾಗೆಯೇ ಶಿಸ್ತಿಗೆ ಹೆಸರಾಗಿದ್ದವರು. ಮನೆಯಲ್ಲಿ ಉತ್ತಮ ಪುಸ್ತಕ ಭಂಡಾರವಿತ್ತು. ಇಂಗ್ಲಿಷ್ ಸಾಹಿತ್ಯದ ಅಭಿಜಾತ ಗ್ರಂಥಗಳು ಆ ಸಂಗ್ರಹದಲ್ಲಿದ್ದವು. ಬಾಲಕ ಸಾಲಮನ್ ಪಿಚ್ಚಮುತ್ತು ತಮ್ಮ ಓದಿನಲ್ಲಿ ಆಸಕ್ತಿ ತಳೆಯಲು ಇದು ವಿಶೇಷವಾಗಿ ನೆರವಾಯಿತು. ತರಗತಿಯಲ್ಲಿ ಎಲ್ಲ ವಿಷಯಗಳಲ್ಲೂ ಈ ಹುಡುಗನೇ ಮುಂದು.
 
===ಭೂವಿಜ್ಞಾನದ ಸೆಳೆತ===
೨೦ ನೇ ಸಾಲು:
ಬಿ.ರಾಮರಾವ್ ಅವರು ಮೈಸೂರು ಭೂವಿಜ್ಞಾನ ಇಲಾಖೆಯ ನಿದೇರ್ಶಕ ಹುದ್ದೆಯಿಂದ 1948ರಲ್ಲಿ ನಿವೃತ್ತರಾದರು. ಆ ಹುದ್ದೆಗೆ ಪಿಚ್ಚಮುತ್ತು ಅವರನ್ನು ನೇಮಕಮಾಡಲಾಯಿತು. ಇಲಾಖೆಗೆ ಅತ್ಯುತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಸೇರಿಸಿಕೊಂಡರು. ಸ್ವತಃ ಅವರ ಸಂಶೋಧನಾ ಕಾರ್ಯವು ಈ ಅವಧಿಯಲ್ಲಿ ವಿಸ್ತರಿಸಿತು. ಮರಳುಗಲ್ಲಿನಲ್ಲಿ ಶ್ರೇಣೀಕೃತ ಸ್ತರಗಳನ್ನು, ಕಬ್ಬಿಣದ ಪಟ್ಟೆ ಶಿಲೆಯಲ್ಲಿ ಅಂತರ್ ಶಿಲಾ ಮಡಿಕೆಗಳನ್ನೂ, [[ಆರ್ಷೇಯಕಲ್ಪ]]ದ ಲಾವಾ ಹರಿವಿನಲ್ಲಿ ದಿಂಬು ರಚನೆಗಳನ್ನೂ ಚಾರ್ನೋಕೈಟ್ ಎಂಬ ಶಿಲೆಯೊಂದಿಗೆ ಕಂಡುಬಂದ ಪಾಟಲ ವರ್ಣದ ಗ್ರನೈಟ್ ಶಿಲೆಗಳನ್ನೂ, ಡೈಕ್ ಶಿಲೆಗಳಲ್ಲಿದ್ದ [[ಪ್ಲೇಜಿಯೋಕ್ಲೇಸ್ ಫೆಲ್ಡ್ ಸ್ಪಾರ್]] ಎಂಬ ಖನಿಜದಲ್ಲಿ ಮುಸುಕು ರಚನೆಯನ್ನೂ ಅವರು ಅತ್ಯಂತ ವಿವರಗಳೊಂದಿಗೆ ದಾಖಲೆ ಮಾಡಿದರು. 19949ರಲ್ಲಿ ಮೈಸೂರು ಭೂವಿಜ್ಞಾನಿಗಳ ಸಂಘ ಅಸ್ತಿತ್ವಕ್ಕೆ ಬಂತು. ಅದರ ಅಧ್ಯಕ್ಷರಾಗಿ ಪಿಚ್ಚಮುತ್ತು ಅವರು ಆಯ್ಕೆಯಾದರು. ಅಲ್ಲಿನ ವಾರ್ಷಿಕ ಸಭೆಗಳಲ್ಲೂ ಮೈಸೂರು ಭೂವಿಜ್ಞಾನ ಕುರಿತಂತೆ ತಮ್ಮ ಅವಲೋಕನಗಳನ್ನು ಬಿಚ್ಚು ಮನಸ್ಸಿನಿಂದ ಹಂಚಿಕೊಳ್ಳುತ್ತಿದ್ದರು. ಗ್ರನೈಟ್ ಸಮಸ್ಯೆ ಕುರಿತು ಕೆಮ್ಮಣ್ಣುಗುಂಡಿಯಲ್ಲೂ ಚಾರ್ನೋಕೈಟ್ ಸಮಸ್ಯೆ ಕುರಿತು ಶಿಂಷಾದಲ್ಲೂ ಅವರು ನೀಡಿದ ಉಪನ್ಯಾಸಗಳನ್ನು ಮುಂದೆ ಮುದ್ರಿಸಿ ಭೂವಿಜ್ಞಾನಿಗಳಿಗೆ ಹಂಚಲಾಯಿತು. ಶಿಷ್ಯನ ಈ ಸಾಧನೆ ಕಂಡು ಸರ್ ಎಡ್ಮಂಡ್ ಬೈಲಿ ಮುಕ್ತಕಂಠದಿಂದ ಪ್ರಶಂಸಿಸಿದರು. ಪಿಚ್ಚಮುತ್ತು ಅವರು ಮಾಡಿದ ಅಧ್ಯಯನ ಇಡೀ ಜಗತ್ತಿನಲ್ಲಿ ಈ ಸಮಸ್ಯೆಯನ್ನು ಬೆನ್ನು ಹತ್ತಿದವರಿಗೆ ಅತ್ಯುಪಯುಕ್ತವಾಗುತ್ತದೆಂದು ಅಭಿಪ್ರಾಯಪಟ್ಟರು. ತೀರ ಇತ್ತೀಚಿನ ಮಾಹಿತಿ ಸೇರಿಸಿ ಹೊರತಂದಿರುವ ನಿರ್ದಿಷ್ಟ ವಿಚಾರ ಕುರಿತ ನಿಮ್ಮ ಕೃತಿಗಳಿಗೆ ವಿಶೇಷ ಮಹತ್ವವಿದೆ ಎಂದು ಸರ್. ಆರ್ಥರ್ ಹೋಮ್ಸ್ ಪ್ರಶಂಸಿಸಿದರು.
 
===ಅಂತಾರಾಷ್ಟ್ರೀಯ ಮನ್ನಣೆ===
 
ಪಿಚ್ಚಮುತ್ತು ಅವರನ್ನು ಭೂವಿಜ್ಞಾನಗಳು ಸ್ಮರಿಸುವುದು ಅವರು ಚಾರ್ನೋಕೈಟ್ ಎಂಬ ಶೆಲೆಯ ಉಗಮದ ಬಗ್ಗೆ ಪ್ರತಿಪಾದಿಸಿದ ಸಿದ್ಧಾಂತಕ್ಕಾಗಿ. ನೈಸ್ ಶಿಲೆ ಚಾರ್ನೋಕೈಟ್ ಆಗಿ ಪರಿವರ್ತನೆಯಾಗಿರುವುದನ್ನು ಪಿಚ್ಚಮುತ್ತು ಅವರು ಕನಕಪುರದ ಬಳಿಯ ಕಬ್ಬಾಲದುರ್ಗದ ಕಲ್ಲುಗಣಿಯಲ್ಲಿ ಸಾಕ್ಷಿಗಳೊಡನೆ ಪ್ರತಿಪಾದಿಸಿದರು.`ಚಾರ್ನೋಕೈಟ್ ಹುಟ್ಟುವ ಸ್ಥಿತಿಯಲ್ಲಿ' ಎಂಬ ಶೀರ್ಷಿಕೆಯಡಿ ನೇಚರ್ ಪತ್ರಿಕೆಯಲ್ಲಿ ಸಂಶೋಧನಾ ಲೇಖನ ಪ್ರಕಟಿಸಿದರು. ಇದು ಜಗತ್ತಿನ ಗಮನ ಸೆಳೆಯಿತು. ಜೊತೆಗೆ ಕಬ್ಬಾಲದುರ್ಗ ಜಾಗತಿಕ ಮನ್ನಣೆ ಪಡೆಯಿತು. 1953ರಲ್ಲಿ ವಿನಿಮಯ ಯೋಜನೆಯಡಿಯಲ್ಲಿ ಅಮೆರಿಕಕ್ಕೆ ಭೇಟಿ ಕೊಡುವ ಅವಕಾಶ ಇವರಿಗೆ ಲಭ್ಯವಾಯಿತು. ಮುಂದೆ ಅವರು ತಮ್ಮ ಅನುಭವವನ್ನು `ಮೈ ಅಮೆರಿಕನ್ ಡೈರಿ' ಎಂದು ಬರೆದರು. ಮೈಸೂರು ಭೂವಿಜ್ಞಾನಿಗಳ ಸಂಸ್ಥೆ ಅದನ್ನು ಪ್ರಕಟಿಸಿತು. 1955ರಲ್ಲಿ ಪಿಚ್ಚಮುತ್ತು ನಿವೃತ್ತರಾದರು. ಆರ್ಥರ್ ಹೋಮ್ಸ್ ಅವರ ಸಲಹೆಯ ಮೇರೆಗೆ ಸಿಂಗಪುರದ ಮಲೆಯ ವಿಶ್ವವಿದ್ಯಾಲಯದಲ್ಲಿ ಭೂವಿಜ್ಞಾನದ ಪ್ರೊಫೆಸರ್ ಹುದ್ದೆ ಸ್ವೀಕರಿಸಿದರು. 1963ರಲ್ಲಿ ಆಂಧ್ರ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಸಿ. ಮಹದೇವನ್ ಅವರ ನಿಧನಾನಂತರ ಖಾಲಿ ಇದ್ದ ಹುದ್ದೆಯನ್ನು ಸ್ವೀಕರಿಸಿ ವಾಲ್ಟೇರ್ ಗೆ (ವಿಶಾಖಪಟ್ಟಣ) ತೆರಳಿದರು. ಭಾರತದ ಪ್ರಿಕೇಂಬ್ರಿಯನ್ ಭೂವಿಜ್ಞಾನಕ್ಕೆ ನೀಡಿದ ಕೊಡುಗೆಯಿಂದಾಗಿ ಅವರಿಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆಯಿತು. ಪ್ರೊಫೆಸರ್ ರಂಕಾಮ ಅವರ ಸಲಹೆಯ ಮೇರೆಗೆ ಅವರೇ ರೂಪಿಸಿದ್ದ ಜಗತ್ತಿನ ಪ್ರಿಕೇಂಬ್ರಿಯನ್ ಶಿಲೆಗಳನ್ನು ಕುರಿತ ಯೋಜನೆಗೆ ಪಿಚ್ಚಮುತ್ತು ಅವರು ಭಾರತ ಮತ್ತು ಶ್ರೀಲಂಕದ ಭೂವಿಜ್ಞಾನ ಕುರಿತಂತೆ ಅಧ್ಯಾಯಗಳನ್ನು ಬರೆದರು. ಈಗಲೂ ಅದೊಂದು ಅತ್ಯುತ್ತಮ ಪ್ರಮಾಣಗ್ರಂಥವೆಂದೇ ಪರಿಗಣಿತವಾಗಿದೆ.
 
1972ರಲ್ಲಿ ಭಾರತೀಯ ಭೂವೈಜ್ಞಾನಿಕ ಸಂಘದ ಅಧ್ಯಕ್ಷರಾಗಿ ಚುನಾಯಿತರಾದರು. 1984ರವರೆಗೆ ಆ ಹುದ್ದೆಯಲ್ಲಿ ಮುಂದುವರಿದು ಸಂಘದ ಚಾಲಕ ಶಕ್ತಿಯಾಗಿದ್ದರು. ಭಾರತದ ಪ್ರಿಕೇಂಬ್ರಿಯನ್ ಭೂವಿಜ್ಞಾನಕ್ಕೆ ಅವರು ನೀಡಿದ ಕೊಡುಗೆಯನ್ನು ಗೌರವಿಸಿ 1988ರಲ್ಲಿ `ಡಿ.ಎನ್. ವಾಡಿಯ ಪಾರಿತೋಷಿಕ'ಕ್ಕೆ ಭಾಜನರಾದರು. ಪಿಚ್ಚಮುತ್ತು ಅವರು ಭಾರಿ ಕ್ರಿಕೆಟ್ ಪ್ರೇಮಿ. ನುರಿತ ಚೆಸ್ ಆಟಗಾರರಾಗಿದ್ದರು. ವೈ.ಎಂ.ಸಿ.ಎ. ಸದಸ್ಯರಾಗಿ ಕ್ರೀಡೆಗಳಲ್ಲಿ ಅತ್ಯುತ್ಸಾಹವಾಗಿ ಭಾಗವಹಿಸುತ್ತಿದ್ದರು.
[[ವರ್ಗ:1900 ಜನನ]]
[[ವರ್ಗ:1990 ನಿಧನ]]