ವರ್ಗ:ವಿಜ್ಞಾನಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೯ ನೇ ಸಾಲು:
 
 
===ಮೈಸೂರು ಭೂವಿಜ್ಞಾನ ಇಲಾಕೆಯಲ್ಲಿಇಲಾಖೆಯಲ್ಲಿ===
 
ಬಿ.ರಾಮರಾವ್ ಅವರು ಮೈಸೂರು ಭೂವಿಜ್ಞಾನ ಇಲಾಖೆಯ ನಿದೇರ್ಶಕ ಹುದ್ದೆಯಿಂದ 1948ರಲ್ಲಿ ನಿವೃತ್ತರಾದರು. ಆ ಹುದ್ದೆಗೆ ಪಿಚ್ಚಮುತ್ತು ಅವರನ್ನು ನೇಮಕಮಾಡಲಾಯಿತು. ಇಲಾಖೆಗೆ ಅತ್ಯುತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಸೇರಿಸಿಕೊಂಡರು. ಸ್ವತಃ ಅವರ ಸಂಶೋಧನಾ ಕಾರ್ಯವು ಈ ಅವಧಿಯಲ್ಲಿ ವಿಸ್ತರಿಸಿತು. ಮರಳುಗಲ್ಲಿನಲ್ಲಿ ಶ್ರೇಣೀಕೃತ ಸ್ತರಗಳನ್ನು, ಕಬ್ಬಿಣದ ಪಟ್ಟೆ ಶಿಲೆಯಲ್ಲಿ ಅಂತರ್ ಶಿಲಾ ಮಡಿಕೆಗಳನ್ನೂ, [[ಆರ್ಷೇಯಕಲ್ಪ]]ದ ಲಾವಾ ಹರಿವಿನಲ್ಲಿ ದಿಂಬು ರಚನೆಗಳನ್ನೂ ಚಾರ್ನೋಕೈಟ್ ಎಂಬ ಶಿಲೆಯೊಂದಿಗೆ ಕಂಡುಬಂದ ಪಾಟಲ ವರ್ಣದ ಗ್ರನೈಟ್ ಶಿಲೆಗಳನ್ನೂ, ಡೈಕ್ ಶಿಲೆಗಳಲ್ಲಿದ್ದ [[ಪ್ಲೇಜಿಯೋಕ್ಲೇಸ್ ಫೆಲ್ಡ್ ಸ್ಪಾರ್]] ಎಂಬ ಖನಿಜದಲ್ಲಿ ಮುಸುಕು ರಚನೆಯನ್ನೂ ಅವರು ಅತ್ಯಂತ ವಿವರಗಳೊಂದಿಗೆ ದಾಖಲೆ ಮಾಡಿದರು. 19949ರಲ್ಲಿ ಮೈಸೂರು ಭೂವಿಜ್ಞಾನಿಗಳ ಸಂಘ ಅಸ್ತಿತ್ವಕ್ಕೆ ಬಂತು. ಅದರ ಅಧ್ಯಕ್ಷರಾಗಿ ಪಿಚ್ಚಮುತ್ತು ಅವರು ಆಯ್ಕೆಯಾದರು. ಅಲ್ಲಿನ ವಾರ್ಷಿಕ ಸಭೆಗಳಲ್ಲೂ ಮೈಸೂರು ಭೂವಿಜ್ಞಾನ ಕುರಿತಂತೆ ತಮ್ಮ ಅವಲೋಕನಗಳನ್ನು ಬಿಚ್ಚು ಮನಸ್ಸಿನಿಂದ ಹಂಚಿಕೊಳ್ಳುತ್ತಿದ್ದರು. ಗ್ರನೈಟ್ ಸಮಸ್ಯೆ ಕುರಿತು ಕೆಮ್ಮಣ್ಣುಗುಂಡಿಯಲ್ಲೂ ಚಾರ್ನೋಕೈಟ್ ಸಮಸ್ಯೆ ಕುರಿತು ಶಿಂಷಾದಲ್ಲೂ ಅವರು ನೀಡಿದ ಉಪನ್ಯಾಸಗಳನ್ನು ಮುಂದೆ ಮುದ್ರಿಸಿ ಭೂವಿಜ್ಞಾನಿಗಳಿಗೆ ಹಂಚಲಾಯಿತು. ಶಿಷ್ಯನ ಈ ಸಾಧನೆ ಕಂಡು ಸರ್ ಎಡ್ಮಂಡ್ ಬೈಲಿ ಮುಕ್ತಕಂಠದಿಂದ ಪ್ರಶಂಸಿಸಿದರು. ಪಿಚ್ಚಮುತ್ತು ಅವರು ಮಾಡಿದ ಅಧ್ಯಯನ ಇಡೀ ಜಗತ್ತಿನಲ್ಲಿ ಈ ಸಮಸ್ಯೆಯನ್ನು ಬೆನ್ನು ಹತ್ತಿದವರಿಗೆ ಅತ್ಯುಪಯುಕ್ತವಾಗುತ್ತದೆಂದು ಅಭಿಪ್ರಾಯಪಟ್ಟರು. ತೀರ ಇತ್ತೀಚಿನ ಮಾಹಿತಿ ಸೇರಿಸಿ ಹೊರತಂದಿರುವ ನಿರ್ದಿಷ್ಟ ವಿಚಾರ ಕುರಿತ ನಿಮ್ಮ ಕೃತಿಗಳಿಗೆ ವಿಶೇಷ ಮಹತ್ವವಿದೆ ಎಂದು ಸರ್. ಆರ್ಥರ್ ಹೋಮ್ಸ್ ಪ್ರಶಂಸಿಸಿದರು.
 
 
 
"https://kn.wikipedia.org/wiki/ವರ್ಗ:ವಿಜ್ಞಾನಿಗಳು" ಇಂದ ಪಡೆಯಲ್ಪಟ್ಟಿದೆ