ವರ್ಗ:ಜೀವಶಾಸ್ತ್ರ ವಿಜ್ಞಾನಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫ ನೇ ಸಾಲು:
 
ಬಡ ಕುಟುಂಬದಿಂದ ಬಂದ ಆನಿಂಗ್ ಗೆ ಆಕೆಯ ತಂದೆಯೇ ಗುರು. ಆತ ಬಡಗಿಯಾಗಿದ್ದ. ಇವಳ ಹನ್ನೊಂದನೇ ವಯಸ್ಸಿನಲ್ಲಿ ತಂದೆ ಅಪಘಾತದಿಂದ ಮೃತನಾದ. ಮುಂದಿನ ಮೂವತ್ತೈದು ವರ್ಷಗಳನ್ನು ಆಕೆ ಜೀವ್ಯವಶೇಷ ಸಂಗ್ರಹಕ್ಕಾಗಿಯೇ ಮುಡುಪಾಗಿಟ್ಟಳು. ಅದನ್ನು ತಾಯಿಯ ನೆರವಿನಿಂದ ಉದ್ಯಮವಾಗಿ ಬೆಳೆಸಿದಳು. ಅಮೊನೈಟ್, ಡೈನೋಸಾರ್ ಮತ್ತು ಸಾಗರ ಜೀವಿಗಳ ಅವಶೇಷಗಳ ಬಗ್ಗೆ ಆಕೆ ಗಳಿಸಿದ್ದ ಜ್ಞಾನ ಅನೇಕರ ಮೆಚ್ಚುಗೆ ಗಳಿಸಿತ್ತು. ಆದರೆ ಆರ್ಥಿಕವಾಗಿ ಆಕೆಯ ಬದುಕು ಅಷ್ಟೇನೂ ಸುಧಾರಿಸಲಿಲ್ಲ. 18838ರಲ್ಲಿ ಸರ್ಕಾರ ಸಂಶೋಧನಾ ವೇತನ ನೀಡಿತಾದರೂ ಆ ಕಾಲದಲ್ಲಿ ಮಹಿಳೆಯರು ಲಂಡನ್ನಿನ ಜಿಯಲಾಜಿಕಲ್ ಸೊಸೈಟಿಯಲ್ಲಿ ತಮ್ಮ ಶೋಧನೆ ಕುರಿತು ಉಪನ್ಯಾಸ ನೀಡುವ ಸಂಪ್ರದಾಯವಿರಲಿಲ್ಲ. ಆನಿಂಗ್ ಕೂಡ ತನ್ನ ಶೋಧವನ್ನು ಪ್ರಕಟಮಾಡುವ ಉತ್ಸಾಹ ತೋರಲಿಲ್ಲ. ಆಕೆ ಸಂಗ್ರಹಿಸಿದ ಅನೇಕ ಜೀವ್ಯವಶೇಷಗಳನ್ನು ಲಂಡನ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿದೆ. ಎಷ್ಟೋ ಸಂದರ್ಭಗಳಲ್ಲಿ ಅವಳ ಹೆಸರನ್ನು ನಮೂದಿಸಿಯೂ ಇಲ್ಲ. ಹಿಮಯುಗದ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದ ಸ್ವಿಡ್ಜ ರ್ ಲೆಂಡಿನ ವಿಜ್ಞಾನಿ ಲೂಯಿಸ್ ಅಗಾಸಿಸ್ ಎರಡು ಜೀವ್ಯವಶೇಷಗಳಿಗೆ ಆಕೆಯ ಹೆಸರನ್ನು ಕೊಡುವುದರ ಮೂಲಕ ಗೌರವ ವ್ಯಕ್ತಪಡಿಸಿದ್ದಾನೆ. ಅವಳ ನಿಧನಾನಂತರ ಆಕೆಯ ಹೆಸರು ಹೆಚ್ಚು ಪ್ರಸಿದ್ಧಿಗೆ ಬಂತು. ಜಾರ್ಜ್ ಕುವಿಯರ್ ನ ಸಂಶೋಧನೆಗಳನ್ನು ಅರ್ಥಮಾಡಿಕೊಳ್ಳಲು ಆಕೆ ಫ್ರೆಂಚ್ ಭಾಷೆಯನ್ನೂ ಕಲಿತಿದ್ದಳು. ಡೈನೋಸಾರ್ ಗಳ ಜೀವ್ಯವಶೇಷ, ವಿಶೇಷವಾಗಿ ಅವುಗಳ ಅಂಗರಚನೆಯ ಬಗ್ಗೆ ಆಕೆಗಿದ್ದ ಜ್ಞಾನ ತುಂಬಾ ಆಳವಾದದ್ದು. ಮಹಿಳೆಯರಿಗೆ ಹೆಚ್ಚು ಪ್ರಾಧಾನ್ಯ ಕೊಡದಿದ್ದ ಲಂಡನ್ನಿನ ಜಿಯಲಾಜಿಕಲ್ ಸೊಸೈಟಿ ನ್ಯೂ ಡೋರ್ ಸೆಟ್ ನ ಕೌಂಟಿ ಮ್ಯೂಸಿಯಂಗೆ ಆಕೆಯನ್ನು ಗೌರವಾನ್ವಿತ ಸದಸ್ಯಳನ್ನಾಗಿ ಆರಿಸಿತು. ಇದಾದ ಒಂದು ವರ್ಷದಲ್ಲಿ ಆಕೆ ಸ್ತನ ಕ್ಯಾನ್ಸರ್ ನಿಂದ ನಿಧನಳಾದಳು. ಆಕೆಯ ಶ್ರದ್ಧಾಂಜಲಿಯನ್ನು ಜಿಯಲಾಜಿಕಲ್ ಸೊಸೈಟಿ ಅದರ ತ್ರೈಮಾಸಿಕದಲ್ಲಿ ಪ್ರಕಟಿಸಿತು.
 
ಪ್ರಸಿದ್ಧ ಕಾದಂಬರಿಕಾರ ಚಾರ್ಲ್ಸ್ ಡಿಕನ್ಸ್ ಹೊರತರುತ್ತಿದ್ದ `ಆಲ್ ದಿ ಇಯರ್ ರೌಂಡ್' ಎಂಬ ಪತ್ರಿಕೆಯಲ್ಲಿ `ಬಡಗಿಯೊಬ್ಬಳ ಮಗಳು ಲೋಕಪ್ರಸಿದ್ಧಿಯಾದಳು. ಆಕೆಗೆ ಆ ಪ್ರಸಿದ್ಧಿ ಸಲ್ಲಬೇಕಾದ್ದೇ' ಎಂದು ಬರೆದಿದ್ದ. ನಾಲಗೆ ಹೇಳಲು ತಡಕಾಡುವ ಪ್ರಸಿದ್ಧ ಪದಪುಂಜ `ಷಿ ಸೆಲ್ಸ್ ಸೀ ಷೆಲ್ಸ್ ಬೈದಿ ಸೀ ಷೋರ್' ಎಂಬುದು ಈಕೆಯ ಸೃಷ್ಟಿ ಎಂದು ಹೇಳುವುದಿದೆ.