"ಅಂತರ್ಜಲ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ನೆಲದೊಳಗೆ ಶೇಖರವಾಗಿರುವ ನೀರಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಹೊರತೆಗೆದರೆ ಅದು ಮೀರೆಳೆತ ಎನ್ನಿಸುತ್ತದೆ. ಸಮುದ್ರ ತೀರ ಪ್ರದೇಶಗಳಲ್ಲಿ ಇದು ಮತ್ತೊಂದು ಸಮಸ್ಯೆಯನ್ನು ಸೃಷ್ಟಿಸುತ್ತದೆ. ಮೀರೆಳೆತದಿಂದ ಅಂತರ್ಜಲದ ಮಟ್ಟ ಕುಸಿದಾಗ ಸಾಗರದ ಉಪ್ಪು ನೀರು ಜಿನುಗಿ ಅಂತಿಮವಾಗಿ ಅಂತರ್ಜಲ ಭಂಡಾರವನ್ನು ಉಪ್ಪಾಗಿಸುತ್ತದೆ. ಇದೂ ಕೂಡ ಮಾಲಿನ್ಯದ ಒಂದು ಮುಖವೇ.
==ಅಂತರ್ಜಲ ನಿಯಂತ್ರಣ ಮತ್ತು ನಿರ್ವಹಣೆಯತ್ತ ಸರ್ಕಾರ==
===ಕರ್ನಾಟಕ ಅಂತರ್ಜಲ ಪ್ರಾಧಿಕಾರ===
:ಕಾಯ್ದೆಗಳು
*ಕರ್ನಾಟಕ ಅಂತರ್ಜಲ ಕಾಯ್ದೆ ( ನಿಯಂತ್ರಣ ಹಾಗೂ ನಿರ್ವಹಣೆ) (೨೦೧೧)
:ಸಂಘ ಸಂಸ್ಥೆಗಳು
===* [[ಕರ್ನಾಟಕ ಅಂತರ್ಜಲ ಪ್ರಾಧಿಕಾರ===]]
 
ನಗರಗಳಲ್ಲಿ ವಿಶೇಷವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಹತ್ತು ಜಿಲ್ಲೆಗಳ 35 ತಾಲ್ಲೂಕುಗಳಲ್ಲಿ ಅಂತರ್ಜಲದ ಮೀರೆಳೆತದಿಂದಾಗಿ ಉದ್ಭವಿಸಿದ ಸಮಸ್ಯೆಯನ್ನು ಪರಿಗಣಿಸಿದ ಕರ್ನಾಟಕ ಸರ್ಕಾರ 2011ರಲ್ಲೇ ಕರ್ನಾಟಕ ಅಂತರ್ಜಲ ಕಾಯ್ದೆ ( ನಿಯಂತ್ರಣ ಹಾಗೂ ನಿರ್ವಹಣೆ) ಕಾಯ್ದೆಗೆ ಒಪ್ಪಿಗೆ ನೀಡಿ, ಇದರ ಭಾಗವಾಗಿ 2012ರಲ್ಲಿ [[ಕರ್ನಾಟಕ ಅಂತರ್ಜಲ ಪ್ರಾಧಿಕಾರ]] ರಚಿಸಿತು. ಈ ಕಾಯ್ದೆಯನ್ವಯ ಸದ್ಯ ಬೆಂಗಳೂರು ನಗರದ ಎಲ್ಲ ಕೊಳವೆ ಬಾವಿಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಹಾಗೆಯೇ ಹೊಸತಾಗಿ ಕೊಳವೆ ಬಾವಿಗಳನ್ನು ತೆಗೆಯಲು ಸರ್ಕಾರದ ಅನುಮತಿ ಪಡೆಯಬೇಕು.
 
ಬೆಂಗಳೂರು ನಗರದ ವಾರ್ಷಿಕ ಮಳೆ ಪ್ರಮಾಣ ಸುಮಾರು 900 ಮಿ.ಮೀ.ಗಳಷ್ಟು. ಬಿದ್ದ ಮಳೆ ನೆಲದಾಳದಲ್ಲಿ ಜಿನುಗಲು ಟಾರ್ ರಸ್ತೆಗಳು ತಡೆಯೊಡ್ಡುತ್ತವೆ. ಅಲ್ಲದೆ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಹಾಗೂ ಜಲಮಂಡಳಿಗೆ ಸೇರಿದ ಸುಮಾರು ಮೂರು ಲಕ್ಷಕ್ಕೂ ಅಧಿಕ ಕೊಳವೆ ಬಾವಿಗಳು ಬೆಂಗಳೂರು ನಗರದಲ್ಲಿವೆ. ಸರ್ಕಾರದ ನಿಯಮವನ್ನು ಮೀರಿ ನೋಂದಣಿ ಮಾಡಿಕೊಳ್ಳದೆ ಕೊಳವೆ ಬಾವಿಗಳನ್ನು ತೋಡಿದರೆ ಗರಿಷ್ಠ ರೂ. 10,000 ದವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.
 
 
"https://kn.wikipedia.org/wiki/ವಿಶೇಷ:MobileDiff/329398" ಇಂದ ಪಡೆಯಲ್ಪಟ್ಟಿದೆ