ಅಂತರ್ಜಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೭ ನೇ ಸಾಲು:
ಅಂತರ್ಜಲ ಭಂಡಾರವೂ ಕೂಡ ಮಾಲಿನ್ಯದಿಂದ ಮುಕ್ತವಾಗಿಲ್ಲ. ವಿಶೇಷವಾಗಿ ಕೈಗಾರಿಕೆಗಳಿಂದ ಹೊರಬೀಳುವ ತ್ಯಾಜ್ಯ ಹೆಚ್ಚು ವಿಷಯುಕ್ತ ರಾಸಾಯನಿಕಗಳಿಂದ ಕೂಡಿದ್ದರೆ, ನಿಧಾನ ಗತಿಯಲ್ಲಿ ಅದು ಅಂತರ್ಜಲ ಭಂಡಾರವನ್ನು ಸೇರಬಲ್ಲದು. ನೀರನ್ನು ಮೀರೆಳೆದರೆ ಹೆಚ್ಚಿನ ಪ್ರಮಾಣದ ಲವಣಗಳು ಸಾರೀಕರಣವಾಗುವುದುಂಟು. ಗ್ರನೈಟ್ ಪ್ರಧಾನವಾಗಿರುವ ಪ್ರದೇಶಗಳಲ್ಲಿ ಅದರಲ್ಲಿ ಸಹಜವಾಗಿರುವ [[ಫ್ಲೂರೈಡ್]] ಖನಿಜ ನೀರಿನಲ್ಲಿ ವಿಲೀನವಾಗಿ ಅದನ್ನು ಬಳಸಿದವರಿಗೆ ಪ್ಲೂರೋಸಿಸ್ ಎಂಬ ಕಾಯಿಲೆ ಬಂದಿರುವ ಉದಾಹರಣೆಗಳು ಸಾಕಷ್ಟಿವೆ. ಪಶ್ಚಿಮ ಬಂಗಾಳ, ಬಾಂಗ್ಲಾದೇಶ ಮುಂತಾದ ಕಡೆಗಳಲ್ಲಿ ಮೆಕ್ಕಲು ಮಣ್ಣಿನಲ್ಲಿ [[ಆರ್ಸೆನಿಕ್]] ಬೆರೆತು ತೀರ ವಿಷಕಾರಿಯಾಗಿ ಅನೇಕ ಚರ್ಮ ಕಾಯಿಲೆಗೆ ಕಾರಣವಾಗಿರುವುದುಂಟು. [[ಸೀಸ]], [[ಪಾದರಸ ]]ಮತ್ತು ಆರ್ಸೆನಿಕ್ ಖನಿಜಗಳು ಸುಲಭವಾಗಿ ನೀರಿನಲ್ಲಿ ವಿಲೀನವಾಗುವುದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ ಅಂತರ್ಜಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಲಿಕ, ಕಬ್ಬಿಣ, ಕ್ಯಾಲ್ಸಿಯಮ್, ಮೆಗ್ನಿಸಿಯಮ್ , ಸೋಡಿಯಮ್, ಕಾರ್ಬೋನೇಟ್, ಬೈ ಕಾರ್ಬೋನೇಟ್, ಸಲ್ಫೇಟ್, ಕ್ಲೋರೈಡ್ ಮತ್ತು ನೈಟ್ರೇಟ್ ಗಳು ವಿಲೀನ ಸ್ಥಿತಿಯಲ್ಲಿರಬಹುದು. ಇವುಗಳ ಪ್ರಮಾಣ ಇಂತಿಷ್ಟೇ ಎಂದು ಹೇಳಲು ಸಾಧ್ಯವಿಲ್ಲ. ಆಯಾ ಪ್ರದೇಶದ ನಾಡಶಿಲೆಯ ರಾಸಾಯನಿಕ ಸಂಯೋಜನೆಯ ಮೇಲೆ ಅವಲಂಬಿಸಿರುತ್ತದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸುವುದರಿಂದಲೂ ಅವು ನೀರಿನಲ್ಲಿ ಕರಗಿ ನೆಲದೊಳಗೆ ಜಿನುಗಿ ಅಂತರ್ಜಲ ಭಂಡಾರವನ್ನು ಸೇರಿ ಕಲುಷಿತಗೊಳಿಸಬಹುದು.
 
ನೆಲದೊಳಗೆ ಶೇಖರವಾಗಿರುವ ನೀರಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಹೊರತೆಗೆದರೆ ಅದು ಮೀರೆಳೆತ ಎನ್ನಿಸುತ್ತದೆ. ಸಮುದ್ರ ತೀರ ಪ್ರದೇಶಗಳಲ್ಲಿ ಇದು ಮತ್ತೊಂದು ಸಮಸ್ಯೆಯನ್ನು ಸೃಷ್ಟಿಸುತ್ತದೆ. ಮೀರೆಳೆತದಿಂದ ಅಂತರ್ಜಲದ ಮಟ್ಟ ಕುಸಿದಾಗ ಸಾಗರದ ಉಪ್ಪು ನೀರು ಜಿನುಗಿ ಅಂತಿಮವಾಗಿ ಅಂತರ್ಜಲ ಭಂಡಾರವನ್ನು ಉಪ್ಪಾಗಿಸುತ್ತದೆ. ಇದೂ ಕೂಡ ಮಾಲಿನ್ಯದ ಒಂದು ಮುಖವೇ.
===ಕರ್ನಾಟಕ ಅಂತರ್ಜಲ ಪ್ರಾಧಿಕಾರ===
 
ನಗರಗಳಲ್ಲಿ ವಿಶೇಷವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಹತ್ತು ಜಿಲ್ಲೆಗಳ 35 ತಾಲ್ಲೂಕುಗಳಲ್ಲಿ ಅಂತರ್ಜಲದ ಮೀರೆಳೆತದಿಂದಾಗಿ ಉದ್ಭವಿಸಿದ ಸಮಸ್ಯೆಯನ್ನು ಪರಿಗಣಿಸಿದ ಕರ್ನಾಟಕ ಸರ್ಕಾರ 2011ರಲ್ಲೇ ಕರ್ನಾಟಕ ಅಂತರ್ಜಲ ಕಾಯ್ದೆ ( ನಿಯಂತ್ರಣ ಹಾಗೂ ನಿರ್ವಹಣೆ) ಕಾಯ್ದೆಗೆ ಒಪ್ಪಿಗೆ ನೀಡಿ, ಇದರ ಭಾಗವಾಗಿ 2012ರಲ್ಲಿ ಕರ್ನಾಟಕ ಅಂತರ್ಜಲ ಪ್ರಾಧಿಕಾರ ರಚಿಸಿತು. ಈ ಕಾಯ್ದೆಯನ್ವಯ ಸದ್ಯ ಬೆಂಗಳೂರು ನಗರದ ಎಲ್ಲ ಕೊಳವೆ ಬಾವಿಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಹಾಗೆಯೇ ಹೊಸತಾಗಿ ಕೊಳವೆ ಬಾವಿಗಳನ್ನು ತೆಗೆಯಲು ಸರ್ಕಾರದ ಅನುಮತಿ ಪಡೆಯಬೇಕು.
 
ಬೆಂಗಳೂರು ನಗರದ ವಾರ್ಷಿಕ ಮಳೆ ಪ್ರಮಾಣ ಸುಮಾರು 900 ಮಿ.ಮೀ.ಗಳಷ್ಟು. ಬಿದ್ದ ಮಳೆ ನೆಲದಾಳದಲ್ಲಿ ಜಿನುಗಲು ಟಾರ್ ರಸ್ತೆಗಳು ತಡೆಯೊಡ್ಡುತ್ತವೆ. ಅಲ್ಲದೆ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಹಾಗೂ ಜಲಮಂಡಳಿಗೆ ಸೇರಿದ ಸುಮಾರು ಮೂರು ಲಕ್ಷಕ್ಕೂ ಅಧಿಕ ಕೊಳವೆ ಬಾವಿಗಳು ಬೆಂಗಳೂರು ನಗರದಲ್ಲಿವೆ. ಸರ್ಕಾರದ ನಿಯಮವನ್ನು ಮೀರಿ ನೋಂದಣಿ ಮಾಡಿಕೊಳ್ಳದೆ ಕೊಳವೆ ಬಾವಿಗಳನ್ನು ತೋಡಿದರೆ ಗರಿಷ್ಠ ರೂ. 10,000 ದವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.
 
 
"https://kn.wikipedia.org/wiki/ಅಂತರ್ಜಲ" ಇಂದ ಪಡೆಯಲ್ಪಟ್ಟಿದೆ