ಪ್ರಾಣ್ (ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೯ ನೇ ಸಾಲು:
 
ಓದಿನಲ್ಲಿ ಅದರಲ್ಲೂ ಗಣಿತದಲ್ಲಿ ಪ್ರಾಣ್ ಅತಿ ಪ್ರತಿಭಾಶಾಲಿಯಾಗಿದ್ದರು. ಅವರ ತಂದೆಯವರಿಗೆ ಬೇರೆ ಬೇರೆ ಊರಿಗೆ ವರ್ಗವಾಗುತ್ತಿದ್ದುದರಿಂದ ಹಲವಾರು ಊರುಗಳಲ್ಲಿ ಅವರ ಶಿಕ್ಷಣ ನಡೆದು 'ರಾಂಪುರದಲ್ಲಿನ ರಝಾ ಹೈಸ್ಕೂಲಿ'ನಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಮುಂದೆ ಅವರು ಛಾಯಾಗ್ರಾಹಕನಾಗಬೇಕೆಂಬ ಆಶಯದಿಂದ ದೆಹಲಿಯಲ್ಲಿ 'ಎ. ದಾಸ್ ಅಂಡ್ ಕಂಪೆನಿ'ಯಲ್ಲಿ ತರಬೇತಿ ಅಭ್ಯರ್ಥಿಯಾಗಿ ಸೇರಿಕೊಂಡರು. ಆದರೆ ಅವರು ರೂಪುಗೊಂಡಿದ್ದು ಕಲಾವಿದನಾಗಿ. ತಮ್ಮ ಕೆಲಸದ ನಿಮಿತ್ತ ಸಿಮ್ಲಾಗೆ ಹೋದಾಗ ಪ್ರಾಣ್, ನಟ ಮದನ್ ಪುರಿ ಅವರು ರಾಮನಾಗಿ ಅಭಿನಯಿಸಿದ್ದ ರಾಮಲೀಲಾ ನಾಟಕದಲ್ಲಿ ಸೀತೆಯ ಪಾತ್ರಧಾರಿಯಾಗಿ ಅಭಿನಯಿಸಿದರು.
 
==ಚಿತ್ರರಂಗದಲ್ಲಿ ನಾಯಕನಟನಾಗಿ==
ಮುಂದೆ ಪ್ರಾಣ್ ಲಾಹೋರಿಗೆ ಭೇಟಿ ಕೊಟ್ಟಾಗ, ಪ್ರಸಿದ್ಧ ಬರಹಗಾರ ವಲಿ ಮಹಮ್ಮದ್ ವಲಿ ಅವರೊಡನೆ ಒದಗಿದ ಅನಿರೀಕ್ಷಿತ ಭೇಟಿ ಅವರನ್ನು ಚಿತ್ರರಂಗದಲ್ಲಿ ನಾಯಕನಟನನ್ನಾಗಿಸಿತು. ಹೀಗೆ ಅವರು ನಟಿಸಿದ ಪ್ರಥಮ ಚಿತ್ರ ೧೯೪೦ರ ವರ್ಷದಲ್ಲಿ ತಯಾರಾದ, ಪಂಚೋಲಿ ಅವರ ಪಂಜಾಬಿ ಚಿತ್ರ ‘ಯಮ್ಲಾ ಜಾತ್’. ಮುಂದೆ ೧೯೪೧ರ ವರ್ಷದಲ್ಲಿ ಅವರು ‘ಚೌಧರಿ’, ‘ಖಜಾಂಚಿ’ ಎಂಬ ಚಿತ್ರಗಳಲ್ಲಿ ಪುಟ್ಟ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದರು. ೧೯೪೨ರ ವರ್ಷದಲ್ಲಿ ತಯಾರಾದ ‘ಖಾಂದಾನ್’ ಚಿತ್ರದಲ್ಲಿ ಪ್ರಾಣ್ ನೂರ್ ಜೆಹಾನ್ ಜೊತೆಯಲ್ಲಿ ಪ್ರಣಯರಾಜನಾಗಿ ಅಭಿನಯಿಸಿದರು. ಹೀಗೆ ಪ್ರಾಣ್ ೧೯೪೯ರ ವರ್ಷದವರೆಗೆ ‘ಕೈಸೆ ಕಹೂಂ’, ‘ಕಾಮೋಶ್ ನ ಗಹೇನ್’ ಮುಂತಾದ ೨೨ ಚಿತ್ರಗಳ ನಾಯಕನಟರಾಗಿ ಅಭಿನಯಿಸಿದರು. ಹೀಗೆ ಪ್ರಾಣ್ ಅವರು ಈ ಅವಧಿಯಲ್ಲಿ ನಟಿಸಿದ್ದ ಚಿತ್ರಗಳಲ್ಲಿ ೧೮ಚಿತ್ರಗಳು ಲಾಹೋರಿನಲ್ಲೇ ತಯಾರಾಗಿದ್ದವು. ೧೯೪೭ರ ದೇಶ ವಿಭಜನೆಯ ಸಮಯದಲ್ಲಿ ಭಾರತಕ್ಕೆ ಬರಬೇಕಾದ ಅನಿವಾರ್ಯತೆಯಿದ್ದ ಪ್ರಾಣ್ ಅವರ ವೃತ್ತಿ ಗೆ ಅಲ್ಪಕಾಲದ ವಿರಾಮ ಉಂಟಾಯಿತು. ೧೯೪೭ರ ಸಮಯದಲ್ಲಿ ತಯಾರಾದ ಅವರು ‘ತರಾಷ್’, ‘ಖಾನಾಬಾದೋಷ್’ ಮುಂತಾದ ಚಿತ್ರಗಳು ಸ್ವಾತಂತ್ರ್ಯಾನಂತರದಲ್ಲಿ ಪಾಕಿಸ್ತಾನದಲ್ಲಿ ಮಾತ್ರ ಬಿಡುಗಡೆಯಾದವು.
 
==ಸ್ವಾತಂತ್ರ್ಯಾನಂತರ ೧೯೪೮-೬೬ರ ಅವಧಿಯಲ್ಲಿ==
ಮುಂದೆ ಅವರು ಲಾಹೋರಿನಿಂದ ಮುಂಬೈಗೆ ವಲಸೆ ಬಂದಾಗ ಕೈಯಲ್ಲಿ ಕೆಲಸವಿಲ್ಲದೇ ಅಭಿನಯಕ್ಕಾಗಿ ಅವಕಾಶಗಳನ್ನು ಅರಸುವುದರೊಂದಿಗೆ ಹೊಟ್ಟೆಪಾಡಿಗಾಗಿ ಇತರ ಕಾಯಕಗಳನ್ನೂ ಮಾಡ ತೊಡಗಿದರು. ಈ ಸಮಯದಲ್ಲಿ ಅವರು ಮೆರಿನ್ ಡ್ರೈವ್ ಪ್ರದೇಶದಲ್ಲಿರುವ ಡೆಲ್ಮಾರ್ ಹೋಟೆಲಿನಲ್ಲಿ ಎಂಟುತಿಂಗಳುಗಳ ಕಾಲ ಕೆಲಸಮಾಡಿದರು. ೧೯೪೮ರ ವರ್ಷದಲ್ಲಿ ಬರಹಗಾರ ಸಾದತ್ ಹಸನ್ ಮಾಂಟೋ ಮತ್ತು ನಟ ಶ್ಯಾಮ್ ಅವರ ಸಹಾಯದಿಂದ ಚಲನಚಿತ್ರರಂಗದಲ್ಲಿ ಪುನಃ ಮೊದಲಿನಿಂದ ತಮ್ಮ ವೃತ್ತಿಯನ್ನು ಆರಂಭಿಸಿದರು. ಬಾಂಬೆ ಟಾಕೀಸ್ ಚಿತ್ರ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿದ ಅವರು, ದೇವಾನಂದ್ ಮತ್ತು ಕಾಮಿನಿ ಕೌಶಲ್ ನಟಿಸಿದ ‘ಜಿದ್ದಿ’ ಚಿತ್ರದಲ್ಲಿ ಅಭಿನಯಿಸಿದರು. ಇದು ದೇವಾನಂದ್ ಅವರಿಗೆ ದೊಡ್ಡ ರೀತಿಯಲ್ಲಿ ಬ್ರೇಕ್ ನೀಡಿದ ಚಿತ್ರ. ಈ ಚಿತ್ರದ ನಂತರ ಪ್ರಾಣ್ ಅವರು ಹಿಂದಿರುಗಿ ನೋಡಲೇ ಇಲ್ಲ. ೧೯೫೦ರ ವೇಳೆಗೆ ಕ್ರಮೇಣವಾಗಿ ಅವರು ಚಿತ್ರರಂಗದಲ್ಲಿ ಖಳಪಾತ್ರಧಾರಿಯಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು. ‘ಜಿದ್ದಿ’ ಚಿತ್ರ ಯಶಸ್ಸಾದ ಒಂದು ವಾರದ ಒಳಗೆ ಅವರು ಮೂರು ಚಿತ್ರಗಳಲ್ಲಿ ಸಹಿ ಮಾಡಿದ್ದರು. ಅವರುಗಳಲ್ಲಿ ಎಸ್ ಎಮ್ ಯೂಸುಫ್ ಅವರ ‘ಗೃಹಸ್ಥಿ’ ವಜ್ರಮಹೋತ್ಸವ ಆಚರಿಸಿತು. ಪ್ರಭಾತ್ ಫಿಲಂಸ್ನ ಅಪರಾಧಿ ಮತ್ತು ವಾಲೀ ಮೊಹಮದ್ ಅವರ ಪುತ್ಲಿ ಮತ್ತೆರಡು ಚಿತ್ರಗಳು. ಇದೇ ವೇಳೆಗೆ ಪ್ರಾಣ್ ಅವರಿಗೆ ಪ್ರೇರೇಪಣೆ ನೀಡಿದ್ದ ಮಹಮದ್ ಅವರು ತಮ್ಮದೇ ಆದ ತಯಾರಿಕಾ ಸಂಸ್ಥೆಯನ್ನು ಮುಂಬೈನಲ್ಲಿ ಪ್ರತಿಷ್ಟಾಪಿಸಿದ್ದರು. ೧೯೫೦ರ ಶೀಷ್ ಮಹಲ್, ೧೯೫೫ರ ಜಶಾನ್, ೧೯೫೮ರ ಅದಾಲತ್ ಮುಂತಾದ ಚಿತ್ರಗಳು ಪ್ರಾಣ್ ಅವರ ಸಂಭಾಷಣೆಯ ಕುಶಲತೆ ಮತ್ತು ಅಭಿನಯದ ಶ್ರೇಷ್ಠತೆಗಳಿಗೆ ಪ್ರಸಿದ್ಧವಾದವು.
Line ೩೫ ⟶ ೩೩:
 
ಕಿಶೋರ್ ಕುಮಾರ್ ಮೆಹಮೂದ್ ಅವರುಗಳ ಹಾಸ್ಯಪ್ರಧಾನ ಚಿತ್ರಗಳಲ್ಲಿ ಪ್ರಾಣ್ ಅವರಿಗೆ ಕೂಡಾ ಗಣನೀಯ ಪಾತ್ರಗಳು ದೊರೆತವು. ‘ಚಂ ಚಮಾ ಚಂ’, ‘ಪೆಹ್ಲಿ ಝಲಕ್’, ‘ನಯಾ ಅಂದಾಜ್’, ‘ಆಶಾ’, ‘ಬೇವಫಾ’, ‘ಏಕ್ ರಾಜ್’, ‘ಜಾಲ್ ಸಾಜ್’, ‘ಹಾಲ್ಫ್ ಟಿಕೆಟ್’, ‘ಮನ್-ಮೌಜಿ’, ‘ಸಾಧು ಔರ್ ಸೈತಾನ್’, ‘ಲಾಕೊನ್ ಕೆ ಏಕ್’ ಹೀಗೆ ಇವರ ಒಟ್ಟುಗಾರಿಕೆ ಬಹುಕಾಲವಿತ್ತು.
 
==ಚಿತ್ರರಂಗದ ಉತ್ತರಾರ್ಧ ೧೯೬೭-೧೯೯೦ರ ಅವಧಿ==
೧೯೬೭ರ ಮನೋಜ್ ಕುಮಾರ್ ಅವರ ಪ್ರಸಿದ್ಧ ‘ಉಪಕಾರ್’ ಚಿತ್ರದಲ್ಲಿ ‘ಮಾಲಂಗ್ ಚಾಚಾ’ಪಾತ್ರಧಾರಿಯಾಗಿ ಪ್ರಾಣ್ ಅವರಿಗೆ ಸಕಾರಾತ್ಮಕ ಪಾತ್ರ ದೊರಕಿದುದರ ಜೊತೆ ಕಲ್ಯಾಣ್ ಜಿ ಆನಂದಜಿ ಅವರ ಪ್ರಸಿದ್ಧ ಗೀತೆ ‘ಕಸ್ಮೆ ವಾದೇ ಪ್ಯಾರ್ ವಫಾ’ದಂತಹ ಹಾಡಿನ ಅಭಿನಯ ಕೂಡಾ ಮೂಡಿಬಂತು. ಮನೋಜ್ ಕುಮಾರ್ ಅವರ ಇನ್ನಿತರ ಚಿತ್ರಗಳಾದ ಶಹೀದ್, ಪೂರಬ್ ಔರ್ ಪಶ್ಚಿಮ್, ಬೇ-ಇಮಾನ್, ಸನ್ಯಾಸಿ, ದಸ್ ನಂಬರಿ, ಪತ್ತರ್ ಕೆ ಸನಮ್ ಮುಂತಾದ ಚಿತ್ರಗಳಲ್ಲೂ ಪ್ರಾಣ್ ಅವರಿಗೆ ಪ್ರಮುಖ ಪಾತ್ರಗಳಿದ್ದವು. 1960ರ ದಶಕದಲ್ಲಿ ಪ್ರಾಣ್ ಅವರು ಕೆಲವೊಂದು ಬೆಂಗಾಲಿ ಚಿತ್ರಗಳಲ್ಲೂ ಅಭಿನಯಿಸಿದ್ದರು.
Line ೫೧ ⟶ ೪೮:
ಪ್ರಸಿದ್ಧ ನಿರ್ದೇಶಕ ಪ್ರಕಾಶ್ ಮೆಹ್ರಾ ಅವರು ತಮ್ಮ ೯ ಜನಪ್ರಿಯ ಚಿತ್ರಗಳಾದ ‘ಏಕ್ ಕುನ್ವರಿ ಏಕ್ ಕುನ್ವರ’, ‘ಜಂಜೀರ್’, ‘ಆನ್ ಬಾನ್’, ‘ಖಲೀಫಾ’, ‘ಜ್ವಾಲಾಮುಖಿ’, ‘ಶರಾಭಿ’, ‘ಮುಖದ್ದರ್ ಕಾ ಸಿಖಂದರ್’, ‘ಮೊಹಬ್ಬತ್ ಕೆ ದುಷ್ಮನ್’, ‘ಜಾದುಗರ್’ಗಳಲ್ಲಿ ಪ್ರಾಣ್ ಅವರನ್ನು ಬಳಸಿದ್ದರು. ಮನಮೋಹನ್ ದೇಸಾಯಿ ಅವರಿಗಂತೂ ಪ್ರಾಣ್ ಅಂದರೆ ಪ್ರಾಣ. ಅವರ ‘ಚಾಲಿಯಾ’, ‘ಬ್ಲಫ್ ಮಾಸ್ಟರ್’, ‘ಧರಂ ವೀರ್’, ‘ನಸೀಬ್’, ‘ಅಮರ್ ಅಕ್ಬರ್ ಆಂತೋನಿ’ ಚಿತ್ರಗಳಲ್ಲಿ ಪ್ರಾಣ್ ಇದ್ದರು. ಸುಭಾಷ್ ಘೈ ಅವರ ‘ವಿಶ್ವನಾಥ್’, ‘ಕರ್ಜ್’, ‘ಕ್ರೋಧಿ’ ಚಿತ್ರಗಳಲ್ಲೂ ಪ್ರಾಣ್ ಇದ್ದರು.
 
೧೯೯೦ರ ನಂತರದಲ್ಲಿ ಪ್ರಾಣ್ ತಮ್ಮ ಆರೋಗ್ಯದ ದೃಷ್ಟಿಯಿಂದ ಪಾತ್ರಗಳನ್ನು ತಿರಸ್ಕರಿಸುತ್ತಾ ಬಂದರು. ಅಮಿತಾಬ್ ಬಚ್ಚನ್ನರು ಚಿತ್ರರಂಗದಲ್ಲಿ ಅಪಾರ ಸೋಲಿನಿಂದ ಹತಾಶೆಗೊಂಡಿದ್ದ ದಿನಗಳಲ್ಲಿ ಪ್ರಾಣ್, ಅಮಿತಾಬರ ಸ್ವಯಂ ನಿರ್ಮಾಣದ ‘ಮೃತ್ಯುದಾತಾ’ ಮತ್ತು ‘ತೇರೇ ಮೇರೇ ಸಪನೇ’ ಚಿತ್ರಗಳನ್ನು ಒಪ್ಪಿಕೊಂಡು ನಟಿಸಿದರು. ಇದರ ಹೊರತಾಗಿ ಅವರು ಇನ್ಯಾವುದೇ ಆಹ್ವಾನಗಳನ್ನೂ ಒಪ್ಪಿಕೊಳ್ಳಲಿಲ್ಲ. ೨೦೦೦ದ ವರ್ಷದ ನಂತರದಲ್ಲಿ ಅವರು ಕೆಲವೊಂದು ಗೌರವ ಅತಿಥಿ ಪಾತ್ರಗಳಲ್ಲಿ ದರ್ಶನ ನೀಡಿದ್ದುಂಟು.
 
==ಪ್ರಾಣ್ ಎಂಬ ಸ್ವರೂಪ==
ಮಕ್ಕಳು ಗಲಾಟೆ ಮಾಡಿದರೆ 'ಪ್ರಾಣ್ ಬಂದ್ರು' ಎಂದು ಪೋಷಕರು ಹೆದರಿಸುತ್ತಿದ್ದ ಕಥೆ ಒಂದು ರೀತಿಯದ್ದಾದರೆ, ಇಡೀ ಚಿತ್ರರಂಗದಲ್ಲಿ ‘ಪ್ರಾಣ್ ಸಾಹೇಬ್’ ಅಂದರೆ ಒಂದು ಗೌರವಾನ್ವಿತ ವ್ಯಕ್ತಿತ್ವ. ಪ್ರಾಣ್ ತಮ್ಮ ಪಾತ್ರಗಳಲ್ಲಿ ಅಭಿನಯಿಸುವಾಗ ಒಂದು ಚಿತ್ರದಲ್ಲಿ ಹೇಳುವ 'ಬರ್ಕ್ಹುರ್ದಾರ್', ಎನ್ನುವ ಡಯಲಾಗ್, ಅತ್ಯಂತ ಜನಪ್ರಿಯತೆ ಗಳಿಸಿದೆ.ಪ್ರಾಣ್ ಮಾತನಾಡುವಾಗ ಅವರ ಧ್ವನಿ ಹೃದಯದಿಂದ ಬರುತ್ತಿತ್ತು. ಮಾತಿನಲ್ಲಿ ಒಂದು ಗತ್ತು ಇತ್ತು. ಅವರ ಮಾತಿನ ಧಾಟಿಯನ್ನು ನಾವು,'ಜಂಜೀರ್' ಚಿತ್ರದಲ್ಲಿ ಕಾಣಬಹುದು : "ಈಸ್ ಇಲಾಖೆ ಮೇ ನಯೇ ಆಯೆ ಹೊ ಸಾಹೇಬ್; ವರ್ನಾ ಶೇರ್ ಖಾನ್ ಕೊ ಕೌನ್ ನಹಿ ಜಾನ್ತಾ" ಹಾಗೂ 'ಜಿಸ್ ದೇಸ್ ಮೇ ಗಂಗಾ ಬೆಹ್ತಿ ಹೈ' ಚಿತ್ರದಲ್ಲಿ, "ತುಮ್ಹಾರ ಬಾಪ್ ರಾಕಾ",
Line ೬೭ ⟶ ೬೩:
* ರಾಜ್ಕಪೂರ್ ನಿರ್ಮಿಸಿದ 'ಬಾಬಿ' ಚಿತ್ರದಲ್ಲಿ 'ಪ್ರಾಣ್' ಅವರು ಮಾಡಿದ ಪಾತ್ರಕ್ಕೆ ಆಗಿನ ಅವರ ಫೀಸ್ ಕೊಡುವ ಸಾಮರ್ಥ್ಯವಿರದೆ ರಾಜ್ಕಪೂರ್ ಪೇಚಾಡಿಕೊಂಡಾಗ, ಕೇವಲ ಒಂದು ರೂಪಾಯಿ ಮಾತ್ರ ತೆಗೆದುಕೊಂಡರು.
* ಒಂದು ಸಮಯದಲ್ಲಿ, ಪ್ರಾಣ್, ಅಮಿತಾಬ್, ವಿನೋದ್ ಖನ್ನ, ನವೀನ್ ನಿಶ್ಚಲ್, ಶತ್ರುಘ್ನ ಸಿಂಹ, ರಣ್ಧೀರ್ ಕಪೂರ್, ರಿಷಿ ಕಪೂರ್, ರವರಿಗಿಂತ ಅಧಿಕ ಸಂಭಾವನೆಗಳಿಸುತ್ತಿದ್ದರು.೧೯೭೦-೧೯೮೨ ರಲ್ಲಿ, ಕೇವಲ ರಾಜೇಶ್ ಖನ್ನ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು. ಸನ್.೧೯೭೦-೧೯೮೯ ಸಮಯದಲ್ಲಿ, ಪ್ರಾಣ್ ರವರಿಗೂ ಸಂಜೀವ್ ಕುಮಾರ್ ಧರ್ಮೇಂದ್ರ,ಶಶಿಕಪೂರ್, ಒಟ್ಟಿಗೆ ಅಭಿನಯಿಸಿದಾಗ, ಅವರಷ್ಟೇ ಹಣ ಪಡೆಯುತ್ತಿದ್ದರು.
* ೨ ತೆಲುಗು ಚಿತ್ರಗಳಲ್ಲಿ, ೧ ೯ ೮ ೬,ರಲ್ಲಿ, 'ತಂದ್ರ ಪಾಪರಾಯುಡು', ೧೯೯೦ ರಲ್ಲಿ ಚಿರಂಜೀವಿ ಜೊತೆಗೆ, 'ಕೊಡಮ ಸಿಂಹಂ' ಎಂಬ ಚಿತ್ರಗಳಲ್ಲಿ ಅಭಿನಯಿಸಿದರು. ಸನ್.೧೯೯೧ ರಲ್ಲಿ 'ಹೊಸರಾಗ'ವೆಂಬ ಕನ್ನಡ ಚಿತ್ರದಲ್ಲಿ ಅಭಿನಯಿಸಿದರು.
.
 
 
 
 
http://www.imdb.com/name/nm0695199/bio
 
==ಪ್ರಶಸ್ತಿ ಗೌರವಗಳು==
'''ಪ್ರಾಣ್ ಅವರಿಗೆ ಸಂದ ಗೌರವಗಳು ಅನೇಕವಾದವು.'''
Line ೧೦೭ ⟶ ೯೨:
* 'ಪ್ರೆಸ್ ಕ್ಲಬ್ ಆಫ್ ಇಂಡಿಯ ದೆಹಲಿ',
* 'ದ ಒಟ್ಟರ್ಸ್ ಕ್ಲಬ್ ಬಾಂಬೆ',
 
==ಸಮಾಜ ಸೇವೆಯಲ್ಲಿ==
ತಮ್ಮ ಪ್ರಮುಖ ವೃತ್ತಿಯಾದ,ಸಿನಿಮಾ ವಲಯದಲ್ಲಿ ತಮ್ಮ ಹೆಚ್ಚುಸಮಯ ಕಳೆದರೂ, ಇತರ ಸಮಾಜಸೇವಾ ಕಾರ್ಯಕ್ರಮಗಳಲ್ಲೂ ಆಸಕ್ತಿ ವಹಿಸುತ್ತಿದ್ದರು.
Line ೧೧೫ ⟶ ೯೯:
* ಹಲವಾರು ಚಾರಿಟಿ ಇವೆಂಟ್ಸ್ ಆಯೊಜಿಸಿದ್ದಾರೆ. ಕ್ರಿಕೆಟ್ ಮ್ಯಾಚ್, ಮತ್ತು ಫಿಲ್ಮ್ ಇಂಡಸ್ಟ್ರಿಯಲ್ಲಿ ಕೆಲಸಮಾಡುವ ಜನರಿಗಾಗಿ, 'ಹೋಪ್-೮೬' ಮತ್ತು 'ಹೋಪ್-೮೭' ಗಳು.
* 'ದಿವಂಗತ ನವಾಬ್ ಆಲಿ ಯವರ ಜಂಗ್' ಜೊತೆ ಸೇರಿ ಅನೇಕ ಧರ್ಮಾರ್ಥ-ಸಹಾಯ ನಿಧಿಗಳು. 'ಬಂಗ್ಲಾ ದೇಶ್ ಶರಣಾರ್ಥಿಗಳಿಗಗಾಗಿ', 'ಕಿವುಡರು ಮತ್ತು ಮೂಕರ ಸಹಾಯ'ಕ್ಕಾಗಿ ದುಡಿಯುತ್ತಿದ್ದಾರೆ.
 
==ಅಭಿನಂದನೆ==
ಸನ್.೧೯೯೭ ರ ಚಿತ್ರೀಕರಣದ ಸಮಯದಲ್ಲೇ ಅವರಿಗೆ ಮೊಣಕಾಲು ಚಿಪ್ಪಿನ ನೋವು ಹೆಚ್ಚಾಯಿತು. ಬಹಳ ಕಾಲದಿಂದ ಅದರ ನೋವನ್ನು ಅನುಭವಿಸುತ್ತಿದ್ದಾರೆ. 'ವೀಲ್ ಛೇರ್' ನಲ್ಲೇ ಕುಳಿತು ಕೆಲವು ಚಿತ್ರಗಳಲ್ಲಿ ಅತಿಥಿನಟನಾಗಿ ನಟಿಸಿದ್ದಾರೆ. ೯೩ ವರ್ಷ ಪ್ರಾಯದ 'ಪ್ರಾಣ್' ಅವರ ಹಿರಿತನದ ಜೀವನಕ್ಕೆ ಸೌಖ್ಯ, ನೆಮ್ಮದಿಗಳು ದೊರಕಿ ಅವರ ಜೀವನ ಸುಗಮವಾಗಿರಲಿ ಎಂದು ಹಾರೈಸುತ್ತಾ, ಅವರಿಗೆ ಸಂದಿರುವ ಚಿತ್ರರಂಗದ ಶ್ರೇಷ್ಠ ಗೌರವವಾದ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು ಸ್ವೀಕರಿಸಲು ನವ ದೆಹಲಿಗೆ ಹೋಗುವ ಸಾಮರ್ಥ್ಯವನ್ನು ಭಗವಂತನು ಅನುಗ್ರಹಿಸಲಿ. ಸನ್. ೨೦೧೩ ರ, ಮೇ ತಿಂಗಳಿನಲ್ಲಿ ;ಭಾರತೀಯ ಚಲನಚಿತ್ರರಂಗದ ನೂರನೆಯ ವರ್ಷದ ಆಚರಣೆಯ ಶುಭ ಸಂದರ್ಭ;ದಲ್ಲಿ 'ರಾಷ್ತ್ರಪತಿ ಪ್ರಣಬ್ ಮುಖರ್ಜಿ'ಯವರ ಹಸ್ತದಿಂದ ಈ ಪ್ರಶಸ್ತಿಯನ್ನು ವಿತರಿಸಲಾಗುತ್ತದೆ.
 
 
* [[http://www.imdb.com/name/nm0695199/bio]]
 
[[ವರ್ಗ: ಭಾರತೀಯ ಚಲನಚಿತ್ರ ನಟರು]] [[ವರ್ಗ: ಚಲನಚಿತ್ರ ನಟರು]]
"https://kn.wikipedia.org/wiki/ಪ್ರಾಣ್_(ನಟ)" ಇಂದ ಪಡೆಯಲ್ಪಟ್ಟಿದೆ