ಪ್ರಾಣ್ (ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೬ ನೇ ಸಾಲು:
'''ಪ್ರಾಣ್''' ([[ಫೆಬ್ರುವರಿ ೧೨]],[[೧೯೨೦]]) ಭಾರತೀಯ ಚಿತ್ರರಂಗದ ಮಹಾನ್ ಕಲಾವಿದರು. ಚಲನಚಿತ್ರರಂಗದ ನಾಯಕನಟರಾಗಿ, ಖಳ ನಟರಾಗಿ, ಪೋಷಕ ನಟರಾಗಿ ಅವರು ಸಲ್ಲಿಸಿದ ಐದು ದಶಕಗಳಿಗೂ ಹೆಚ್ಚಿನ ಸೇವೆ ಅವಿಸ್ಮರಣೀಯವಾದುದು. ಅವರು ನಟಿಸಿದ ಚಿತ್ರಗಳ ಸಂಖ್ಯೆ ೩೫೦ಕ್ಕೂ ಹೆಚ್ಚಿನದು. ಪ್ರಾಣ್ ಅವರಿಗೆ ೨೦೧೨ನೇ ವರ್ಷದ ಸಾಲಿಗಾಗಿ ಭಾರತೀಯ ಚಿತ್ರರಂಗದಲ್ಲಿನ ಶ್ರೇಷ್ಠ ಸಾಧನೆಗಾಗಿ ನೀಡುವ '೪೪ ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ'ಯನ್ನು ಘೋಷಿಸಲಾಗಿದೆ.
==ಜೀವನ==
ಪ್ರಾಣ್ ಅವರು ಫೆಬ್ರುವರಿ ೧೨, ೧೯೨೦ರ ವರ್ಷದಲ್ಲಿ ಹಳೆಯ ದಿಲ್ಲಿಯ ಬಡಾವಣೆಯ ಪಂಜಾಬಿ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರು. ಪ್ರಾಣರ ಅಂದಿನ ಹೆಸರು 'ಪ್ರಾಣ್ ಕ್ರಿಶನ್ ಸಿಕಂದ್'. ಅವರ ತಂದೆ 'ಕೇವಲ್ ಕ್ರಿಶನ್ ಸಿಕಂದರು' ವೃತ್ತಿಯಲ್ಲಿ ಸಿವಿಲ್ ಇಂಜಿನಿಯರರಾಗಿದ್ದು ಸರ್ಕಾರಿ ಕಾಮಗಾರಿಗಳ ಗುತ್ತಿಗೆದಾರರಾಗಿದ್ದರು. ಅವರ ತಾಯಿಯ ಹೆಸರು 'ರಾಮೇಶ್ವರಿ'. ಈ ದಂಪತಿಗಳಿಗೆ ನಾಲ್ಕುಮೂರು ಗಂಡು ಮಕ್ಕಳೂ ಮೂರು ಹೆಣ್ಣು ಮಕ್ಕಳೂ ಇದ್ದರು. ಪ್ರಾಣ್, ಸನ್.೧೯೪೫ ರಲ್ಲಿ 'ಶುಕ್ಲಾ ಅಹ್ಲೂವಾಲಿಯ'ರನ್ನು ಮದುವೆಯಾದರು. ಇವರಿಗೆ, ಎರಡು ಗಂಡುಮಕ್ಕಳು, ಅರವಿಂದ್, ಸುನಿಲ್, ಮತ್ತು ಒಬ್ಬ ಮಗಳು ಪಿಂಕಿ, ಸನ್ಭಲ್ಲಾ.೧೯೪೭ ರ ಭಾರತ ವಿಭಜನೆಯಾಗುವ ಮೊದಲೇ ಜನಿಸಿದ್ದರು.
 
ಓದಿನಲ್ಲಿ ಅದರಲ್ಲೂ ಗಣಿತದಲ್ಲಿ ಪ್ರಾಣ್ ಅತಿ ಪ್ರತಿಭಾಶಾಲಿಯಾಗಿದ್ದರು. ಅವರ ತಂದೆಯವರಿಗೆ ಬೇರೆ ಬೇರೆ ಊರಿಗೆ ವರ್ಗವಾಗುತ್ತಿದ್ದುದರಿಂದ ಹಲವಾರು ಊರುಗಳಲ್ಲಿ ಅವರ ಶಿಕ್ಷಣ ನಡೆದು 'ರಾಂಪುರದಲ್ಲಿನ ರಝಾ ಹೈಸ್ಕೂಲಿ'ನಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಮುಂದೆ ಅವರು ಛಾಯಾಗ್ರಾಹಕನಾಗಬೇಕೆಂಬ ಆಶಯದಿಂದ ದೆಹಲಿಯಲ್ಲಿ 'ಎ. ದಾಸ್ ಅಂಡ್ ಕಂಪೆನಿ'ಯಲ್ಲಿ ತರಬೇತಿ ಅಭ್ಯರ್ಥಿಯಾಗಿ ಸೇರಿಕೊಂಡರು. ಆದರೆ ಅವರು ರೂಪುಗೊಂಡಿದ್ದು ಕಲಾವಿದನಾಗಿ. ತಮ್ಮ ಕೆಲಸದ ನಿಮಿತ್ತ ಸಿಮ್ಲಾಗೆ ಹೋದಾಗ ಪ್ರಾಣ್, ನಟ ಮದನ್ ಪುರಿ ಅವರು ರಾಮನಾಗಿ ಅಭಿನಯಿಸಿದ್ದ ರಾಮಲೀಲಾ ನಾಟಕದಲ್ಲಿ ಸೀತೆಯ ಪಾತ್ರಧಾರಿಯಾಗಿ ಅಭಿನಯಿಸಿದರು.
"https://kn.wikipedia.org/wiki/ಪ್ರಾಣ್_(ನಟ)" ಇಂದ ಪಡೆಯಲ್ಪಟ್ಟಿದೆ