ಪ್ರಾಣ್ (ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧ ನೇ ಸಾಲು:
 
==ಪ್ರಾಣ್ ವೃತ್ತಿಜೀವನ==
ಸನ್.೧೯೪೦ ರಲ್ಲಿ 'ಯಮ್ಲಾ ಜಟ್' ಎಂಬ ಪಂಜಾಬಿ ಚಿತ್ರದ ಖಳನಾಯಕನ ಪಾತ್ರದ ಮೂಲಕ ನಟ ಪ್ರಾಣ್ ರ, ಪಾದಾರ್ಪಣೆಯಾಯಿತು. ಸನ್.೧೯೪೨ ರಲ್ಲಿ 'ಖಾಂದಾನ್',ಎಂಬ ಚಿತ್ರದಲ್ಲಿ 'ರೋಮ್ಯಾಂಟಿಕ್ ಹೀರೋ' ಆಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಸ್ವಾತಂತ್ರ್ಯಾನಂತರ ನಮ್ಮ ದೇಶ ವಿಭಜನೆಯಾದಾಗ 'ಲಾಹೋರ್'ನಿಂದ ಬೊಂಬಾಯಿಗೆ ಪರಿವಾರವೆಲ್ಲ ಬಂದರು. ಸನ್.೧೯೪೫ ರ ಹೊತ್ತಿಗೆ ಅರವಿಂದ್, ಸುನಿಲ್, ಮತ್ತು ಪಿಂಕಿ ಮಕ್ಕಳಿದ್ದರು. ಪ್ರಾಣ್ ರಿಗೆ ಒಟ್ಟು ೪ ಗಂಡುಮಕ್ಕಳು, ಮತ್ತು ೩ ಹೆಣ್ಣುಮಕ್ಕಳು. ಬೊಂಬಾಯಿಗೆ ಬಂದಮೇಲೆ, 'ಬಾಂಬೆ ಟಾಕೀಸ್','ಜಿದ್ದಿ', ಮೊದಲಾದ ಚಿತ್ರಗಳಲ್ಲಿ ನಟಿಸಿದರು. ನಟ ದಿಲೀಪ್ ಕುಮಾರ್ ನಟಿಸಿದ ಆಜಾದ್, ಮಧುಮತಿ, ದೇವದಾಸ್, ದಿಲ್ ದಿಯ ದರ್ದ್ ಲಿಯಾ, ರಾಮ್ ಆರ್ ಶ್ಯಾಮ್, ಆದ್ಮಿ ಮೊದಲಾದ ಹಿಂದಿ ಚಲನ ಚಿತ್ರಗಳಲ್ಲಿ ತಮಗೆ ಸಿಕ್ಕ ಖಳನಾಯಕನ ಪಾತ್ರದಲ್ಲಿ ಅಭಿನಯಿಸಿ ಒಳ್ಳೆಯ ಹೆಸರುಗಳಿಸಿದರು. ಸನ್. ೧೯೬೯-೮೨ ರ ಸಮಯದಲ್ಲಿ ಚಿತ್ರರಂಗದಲ್ಲಿ ಪ್ರಾಣ್ ಗಳಿಸುತ್ತಿದ್ದ ಸಂಭಾವನೆ, ಆವರ ಕಾಲದ ನಾಯಕ ನಟರಿಗಿಂತ ಅಧಿಕವಾಗಿತ್ತು.
==ಸನ್.೧೯೯೭ ರ ಬಳಿಕ==
ಸನ್. ೧೯೯೭ ರಲ್ಲಿ 'ಮೃತ್ಯುದಾತಾ' ಎಂಬ ಚಲನಚಿತ್ರದಲ್ಲಿ ನಟಿಸುವಾಗಲೇ 'ಕಾಲು ನೋವು,' 'ಮಂಡಿ ನೋವು' ಹೆಚ್ಚಾಗಿ ಬಹಳವಾಗಿ ನರಳಿದರು. ಸನ್. ೨೦೦೦ ದ, ಬಳಿಕ ಅತಿಥಿ ಪಾತ್ರಗಳನ್ನಷ್ಟೇ ಒಪ್ಪಿಕೊಳ್ಳುತ್ತಿದ್ದರು. ನೆಗೆಟೀವ್ ಪಾತ್ರಗಳಲ್ಲೇ ಅತ್ಯಂತ ಪ್ರಭಾವಶಾಲಿಯಾಗಿ ದಶಕಗಳ ಕಾಲ ನಟಿಸಿ ತಮ್ಮದೇ ಆದ ವಿಶಿಷ್ಠ ಛಾಪು ಮೂಡಿಸಿದ 'ಪ್ರಾಣ್' ಹೆಚ್ಚು ಪ್ರಚಾರ ಬಯಸಲಿಲ್ಲ. ಪುನಃ 'ಮನೋಜ್ ಕುಮಾರ್' ರವರ 'ಉಪ್ಕಾರ್' ಚಿತ್ರದಲ್ಲಿ ಪ್ರಾಣ್ ಅವಕಾಶ ಸಿಕ್ಕಾಗ,ತಮ್ಮ ವಿಶಿಷ್ಠ ಮತ್ತು ವೈವಿಧ್ಯಮಯ ನಟನಾ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ. ಬಹಳ ಸಮಯದಿಂದ ಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆಗೆ ಸೇರಿದ್ದ ಪ್ರಾಣ್, ಈಗತಾನೇ ಆಸ್ಪತ್ರೆಯಿಂದ ಹೊರಬಂದಿದ್ದಾರೆ. 'ಪ್ರಾಣ್' ರನ್ನು 'ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ'ಗೆ ಆಯ್ಕೆಮಾಡಿದ್ದಾರೆ. ೨೦೧೩ ರ ಮೇ ೩೧ ತಿಂಗಳಿನಲ್ಲಿ ನವದೆಹಲಿಯಲ್ಲಿ ರಾಷ್ಟ್ರಪತಿಗಳ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಗುವುದು. 'ಭಾರತೀಯ ಚಲನ ಚಿತ್ರರಂಗ ಶತಮಾನೋತ್ಸವದ ಸಂಭ್ರಮದಲ್ಲಿದೆ'. ನಟ ಪ್ರಾಣ್, ದೆಹಲಿಗೆ ಹೋಗುವುದು ಬಹಳ ಕಷ್ಟದ ಕೆಲಸ.
 
==ಪ್ರಶಸ್ತಿ ಗೌರವಗಳು==
* ೪ ಫಿಲ್ಮ್ ಫೇರ್, ಪ್ರಶಸ್ತಿಗಳು
"https://kn.wikipedia.org/wiki/ಪ್ರಾಣ್_(ನಟ)" ಇಂದ ಪಡೆಯಲ್ಪಟ್ಟಿದೆ