ಪ್ರಾಣ್ (ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'ಪ್ರಾಣ್ ಸಿಕಂದ್' ಎಂದು ಬಾಲ್ಯದಲ್ಲಿ ಹೆಸರಿಡಲ್ಪಟ್ಟ ಹಿಂದಿ ಚಿತ್ರರಂಗದ ಖಳನಾಯಕ '[[ಪ್ರಾಣ್]]' ಒಬ್ಬ ದಿಟ್ಟ ನಿಲುವಿನ ಅತ್ಯಂತ ಪ್ರಭುದ್ಧ ವ್ಯಕ್ತಿತ್ವದ ಪಾತ್ರಗಳಿಗೆ ಹೆಸರಾದವರು. ಅವರಂತೆ ಖಳನಾಯಕನ ಪಾತ್ರವನ್ನು ನಿರ್ವಹಿಸುವ ಮೊತ್ತೊಬ್ಬ ವ್ಯಕ್ತಿ ಚಿತ್ರರಂಗದಲ್ಲಿ ಬಹಳಕಾಲ ಬರಲಿಲ್ಲ. ಖಳನಾಯಕನ ಪಾತ್ರವನ್ನು ತಮ್ಮದೇ ಆದ ರೀತಿಯಲ್ಲಿ ಪ್ರದರ್ಶಿಸಿ, ಅದಕ್ಕೆ ಮೆರುಗನ್ನು ತಂದರು. ೯೩ ವರ್ಷ ಪ್ರಾಯದ ಪ್ರಾಣ್, ಪ್ರತಿಷ್ಟಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸುಮಾರು ೪೦೦ ಕ್ಕೂ ಮಿಕ್ಕ ಸಿನಿಮಾಗಳಲ್ಲಿ ನಟಿಸಿದ ವೃತ್ತಿರಂಗದಲ್ಲಿ ೬ ದಶಕದಷ್ಟು ಅನುಭವವನ್ನು ಹೊಂದಿದ್ದಾರೆ. ೧೯೯೮ ರಲ್ಲಿ ತಮ್ಮ ನಟನಾ ವೃತ್ತಿಗೆ ವಿದಾಯ ಹೇಳಿ, ಕೇವಲ 'ಅತಿಥಿ ನಟನ ಪಾತ್ರ'ಗಳನ್ನು ಒಪ್ಪಿಕೊಳ್ಳುತ್ತಿದ್ದರು.
==ಜನನ ಹಾಗೂ ಪರಿವಾರ==
ಸನ್. ೧೯೨೦ ರ ಫೆಬ್ರವರಿ ೧೨ ರಂದು, ಹಳೆಯ ದೆಹಲಿಯದೆಹಲಿಯಲ್ಲಿ ಜನನ. ಕಪುರ್ತಲ. ಉನ್ನವ್ ಮೀರತ್, ಡೆಹ್ರಾಡುನ್ ಹಾಗೂ ರಾಮಪುರದಲ್ಲಿ ಕ್ರಮವಾಗಿ ಶಿಕ್ಷ್ನಣ ಪಡೆದರು. ತಂದೆ,'ಲಾಲಾ ಕೇವಲ್ ಕೃಷ್ಣಾ'. ಸರಕಾರೀ ಕೆಲಸ. ಅವರಿಗೆ ವರ್ಗವಾದಾಗ ಊರೂರು ಅಲೆದಾಟಅಲೆದಾಟವಿತ್ತು. ಮೊದಲಿನಿಂದಲು ಛಾಯಾಗ್ರಾಹಕರಾಗಲು ಬಯಕೆ.ಚಿತ್ರನಿರ್ಮಾಪಕರೊಬ್ಬರ ಆದೇಶದ ಮೇಲೆ ಚಿತ್ರರಂಗಕ್ಕೆ ಧುಮುಕಿದರು. ೧೯೯೧ ರಲ್ಲಿ ಕನ್ನಡದ 'ಹೊಸರಾಗ' ಎಂಬ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಸುನಿಲ್,ಮಗ. ಪ್ರಿಯಾಂಕ, ಮಗಳು.
'''ಪ್ರಾಣ್ ನಟಿಸಿದ ಹಲವಾರು ಚಲನಚಿತ್ರಗಳಲ್ಲಿ ಪ್ರಮುಖವಾದವುಗಳು :'''
* ಮಿಲನ್,
೮ ನೇ ಸಾಲು:
* ಡಾನ್,
* ಜಂಜೀರ್,
* ಉಪ್ಕಾರ್,
 
==ಪ್ರಾಣ್ ವೃತ್ತಿಜೀವನ==
ಸನ್.೧೯೪೦ ರಲ್ಲಿ 'ಯಮ್ಲಾ ಜಟ್' ಎಂಬ ಪಂಜಾಬಿ ಚಿತ್ರದ ಖಳನಾಯಕನ ಪಾತ್ರದ ಮೂಲಕ ಪಾದಾರ್ಪಣೆಯಾಯಿತು. ಸನ್.೧೯೪೨ ರಲ್ಲಿ ಖಾಂದಾನ್,ಎಂಬ ಚಿತ್ರದಲ್ಲಿ ರೋಮ್ಯಾಂಟಿಕ್ ಹೀರೋ ಆಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಸ್ವಾತಂತ್ರ್ಯಾನಂತರ ನಮ್ಮ ದೇಶ ವಿಭಜನೆಯಾದಾಗ 'ಲಾಹೋರ್'ನಿಂದ ಬೊಂಬಾಯಿಗೆ ಪರಿವಾರವೆಲ್ಲ ಬಂದರು. 'ಬಾಂಬೆ ಟಾಕೀಸ್', 'ಜಿದ್ದಿ', ಮೊದಲಾದ ಚಿತ್ರಗಳಲ್ಲಿ ನಟಿಸಿದರು. ನಟ ದಿಲೀಪ್ ಕುಮಾರ್ ನಟಿಸಿದ ಆಜಾದ್, ಮಧುಮತಿ, ದೇವದಾಸ್, ದಿಲ್ ದಿಯ ದರ್ದ್ ಲಿಯಾ, ರಾಮ್ ಆರ್ ಶ್ಯಾಮ್, ಆದ್ಮಿ ಮೊದಲಾದ ಹಿಂದಿ ಚಲನ ಚಿತ್ರಗಳಲ್ಲಿ ತಮಗೆ ಸಿಕ್ಕ ಖಳನಾಯಕನ ಪಾತ್ರದಲ್ಲಿ ಅಭಿನಯಿಸಿ ಒಳ್ಳೆಯ ಹೆಸರುಗಳಿಸಿದರು. ಸನ್. ೧೯೯೭ ರಲ್ಲಿ 'ಮೃತ್ಯುದಾತಾ' ಎಂಬ ಚಲನಚಿತ್ರದಲ್ಲಿ ನಟಿಸುವಾಗಲೇ 'ಕಾಲು ನೋವು' ಹೆಕ್ಚಾಗಿ ಬಹಳವಾಗಿ ನರಳಿದರು. ಸನ್. ೨೦೦೦ ದ, ಬಳಿಕ ಅತಿಥಿ ಪಾತ್ರಗಳನ್ನಷ್ಟೇ ಒಪ್ಪಿಕೊಳ್ಳುತ್ತಿದ್ದರು. ನೆಗೆಟೀವ್ ಪಾತ್ರಗಳಲ್ಲೇ ಅತ್ಯಂತ ಪ್ರಭಾವಶಾಲಿಯಾಗಿ ದಶಕಗಳ ನಟಿಸಿ ತಮ್ಮದೇ ಆದ ವಿಶಿಷ್ಠ ಛಾಪು ಮೂಡಿಸಿದ 'ಪ್ರಾಣ್' ಹೆಚ್ಚು ಪ್ರಚಾರ ಬಯಸಲಿಲ್ಲ. ಪುನಃ ಮನೋಜ್ ಕುಮಾರ್ ರವರ 'ಉಪ್ಕಾರ್' ಚಿತ್ರದಲ್ಲಿ ಪ್ರಾಣ್ ಅವಕಾಶ ಸಿಕ್ಕಾಗ,ತಮ್ಮ ವಿಶಿಷ್ಠ ಮತ್ತು ವೈವಿಧ್ಯಮಯ ನಟನಾ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ. ಬಹಳ ಸಮಯದಿಂದ ಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆಗೆ ಸೇರಿದ್ದ ಪ್ರಾಣ್ ಈಗತಾನೇ ಆಸ್ಪತ್ರೆಯಿಂದ ಹೊರಬಂದಿದ್ದಾರೆ.
"https://kn.wikipedia.org/wiki/ಪ್ರಾಣ್_(ನಟ)" ಇಂದ ಪಡೆಯಲ್ಪಟ್ಟಿದೆ