ಅಂತರ್ಜಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೬ ನೇ ಸಾಲು:
===ನಿಮ್ನ ಕೋನ===
ಅಂತರ್ಜಲದ ಆಕರದಿಂದ ಉದಾ : ಬಾವಿಯಿಂದ ನೀರನ್ನು ಪಂಪು ಮಾಡಿದಾಗ ನೀರಿನ ಮಟ್ಟ ಕಡಿಮೆಯಾಗುತ್ತ ಹೋಗುತ್ತದೆ. ಆಗ ಜಲಮಟ್ಟ ಕೋನಾಕಾರವನ್ನು ತಾಳುತ್ತದೆ. ಇದೇ ನಿಮ್ನ ಕೋನ. ಶಿಲೆಯ ಸ್ರವಣಗುಣ ಕಡಿಮೆಯಾದಷ್ಟೂ ನಿಮ್ನ ಕೋನ ಹೆಚ್ಚಾಗುತ್ತ ಹೋಗುತ್ತದೆ. ಅಂದರೆ ತಗ್ಗು ಕಡಿದಾಗುತ್ತದೆ.
 
==ಅಂತರ್ಜಲದ ರೂಪಗಳು ಮತ್ತು ಸಮಸ್ಯೆ==
 
ಅಂತರ್ಜಲ ಚಿಲುಮೆ ರೂಪದಲ್ಲಿ ಪ್ರಕಟವಾಗಬಹುದು. ಎರಡು ಅವ್ಯಾಪ್ಯ ಪದರಗಳ ನಡುವೆ ವ್ಯಾಪ್ಯಶೀಲ ಪದರವಿದ್ದು ಅದರಲ್ಲಿನ ನೀರು ಆರ್ಟೀಸಿಯನ್ ಚಿಲುಮೆಯಾಗಿ ಉಕ್ಕಬಹುದು. ಈ ಬಗೆಯ ಚಿಲುಮೆಗಳು ತಮಿಳುನಾಡಿನ ನೈವೇಲಿಯ ಸುತ್ತಮುತ್ತ ಹೆಚ್ಚು ಕಂಡುಬರುತ್ತದೆ. ಕುಡಿಯುವ ನೀರಿನ ಆಕರವಾಗಿ ತೆಗೆಯುವ ಸೇದು ಬಾವಿಗಳು ಹೆಚ್ಚಿನ ಕೃಷಿಗಾಗಿ ತೆಗೆಯುವ ತೋಡು ಬಾವಿಗಳು, ಕೊಳವೆ ಬಾವಿಗಳು, ಕಲ್ಯಾಣಿಗಳು, ಕೊಳಗಳು, ತಲಪರಿಗೆಗಳು ಇವೆಲ್ಲವೂ ಅಂತರ್ಜಲದ ಆಸರೆಯನ್ನೇ ಹೊಂದಿವೆ. ಅಂತರ್ಜಲದ ಬಳಕೆ ಕೆಲವು ಪ್ರದೇಶಗಳಲ್ಲಿ ಮಿತಿಮೀರಿರುವುದರಿಂದ ಅಂತರ್ಜಲದ ಮಟ್ಟವೂ ಕಡಿಮೆಯಾಗುತ್ತಿದೆ. ವಿಶೇಷವಾಗಿ ಹೆಚ್ಚು ನೀರು ಬೇಡುವ ಕಬ್ಬು ಮತ್ತು ಬತ್ತ ಮುಂತಾದ ಬೆಳೆಗಳಿಗೆ ಅಂತರ್ಜಲ ಹೆಚ್ಚು ಬಳಕೆಯಾಗುತ್ತದೆ. ನಗರಗಳಲ್ಲಿ ಬಹುಮಹಡಿ ಕಟ್ಟಡಗಳ ನೀರಿನ ಪೂರೈಕೆಯನ್ನು ಮಾಡಲು ನೂರಾರು ಮೀಟರ್ ಆಳಕ್ಕೆ ಬೈರಿಗೆ ಕೊರೆಯುವುದುಂಟು. ಉದಾ : ಬೆಂಗಳೂರು ನಗರದಲ್ಲೇ ಸರ್ಕಾರಿ ಮತ್ತು ಖಾಸಗಿ ಕೊಳವೆ ಬಾವಿಗಳು ಸಾವಿರಾರು ಇವೆ. ನಿರಂತರ ನೀರೆತ್ತುವುದರಿಂದಾಗಿ ಅಂತರ್ಜಲ ಮಟ್ಟ ಕುಸಿದು ಈಗ ಸುಮಾರು ಮುನ್ನೂರು ಮೀಟರುವರೆಗೆ ಕೊಳವೆ ಬಾವಿಯನ್ನು ಕೊರೆಯುವ ಸಂದರ್ಭ ಎದುರಾಗಿದೆ. ಇದಲ್ಲದೆ ಕೈಗಾರಿಕೆಗಳಿಗೆ ವ್ಯಾಪಕವಾಗಿ ಅಂತರ್ಜಲ ಬಳಸುವುದು ಬಹು ದೊಡ್ಡ ಸಮಸ್ಯೆಯಾಗಿ ಅಮೂಲ್ಯವಾದ ಅಂತರ್ಜಲ ಭಂಡಾರ ಕರಗುತ್ತಿದೆ. ಇದರ ಜೊತೆಗೆ ನೀರಿನ ಮರುಪೂರಣೆ ಸಮರ್ಪಕವಾಗಿ ಆಗುತ್ತಿಲ್ಲ. ವಿಶೇಷವಾಗಿ ನಗರಗಳಲ್ಲೆವೂ ಕಾಂಕ್ರೀಟ್ ಕಾಡುಗಳಾಗಿರುವುದರಿಂದ ಟಾರು ರಸ್ತೆಗಳು ಮಳೆ ನೀರನ್ನು ಒಳಕ್ಕೆ ಇಳಿದು ಅಂತರ್ಜಲ ಭಂಡಾರವಾಗದಂತೆ ಪ್ರತಿಬಂಧಿಸುತ್ತಿವೆ. ಹಿಂದೆ ಯಥೇಚ್ಛವಾಗಿದ್ದ ಕೆರೆಗಳು ನಗರೀಕರಣದಿಂದಾಗಿ ಕಣ್ಮರೆಯಾಗುತ್ತಿವೆ. ಇದರ ಪರಿಣಾಮವಾಗಿ ಅಂತರ್ಜಲ ಭಂಡಾರಕ್ಕೆ ಸೇರುತ್ತಿದ್ದ ನೀರೂ ಕೂಡ ಅಲಭ್ಯವಾಗಿದೆ. ಇತ್ತೀಚೆಗೆ ಮಳೆ ನೀರು ಕೊಯ್ಲು ಎಂಬ ಪರಿಕಲ್ಪನೆ ಹೆಚ್ಚು ಪ್ರಜ್ಞಾವಂತರನ್ನು ಆಕರ್ಷಿಸಿದೆ. ಪ್ರತಿ ಮನೆಯಲ್ಲೂ ಇಂಗು ಬಾವಿಗಳನ್ನು ತೋಡಿ ನೀರನ್ನು ಇಂಗಿಸಿ ಅಂತರ್ಜಲ ಭಂಡಾರವನ್ನು ವೃದ್ಧಿಸುವ ಕೆಲಸ ಹೆಚ್ಚು ಚಾಲನೆ ಪಡೆಯುತ್ತಿದೆ.
 
===ಅಂತರ್ಜಲ ಮಾಲಿನ್ಯ===
 
ಅಂತರ್ಜಲ ಭಂಡಾರವೂ ಕೂಡ ಮಾಲಿನ್ಯದಿಂದ ಮುಕ್ತವಾಗಿಲ್ಲ. ವಿಶೇಷವಾಗಿ ಕೈಗಾರಿಕೆಗಳಿಂದ ಹೊರಬೀಳುವ ತ್ಯಾಜ್ಯ ಹೆಚ್ಚು ವಿಷಯುಕ್ತ ರಾಸಾಯನಿಕಗಳಿಂದ ಕೂಡಿದ್ದರೆ, ನಿಧಾನ ಗತಿಯಲ್ಲಿ ಅದು ಅಂತರ್ಜಲ ಭಂಡಾರವನ್ನು ಸೇರಬಲ್ಲದು. ನೀರನ್ನು ಮೀರೆಳೆದರೆ ಹೆಚ್ಚಿನ ಪ್ರಮಾಣದ ಲವಣಗಳು ಸಾರೀಕರಣವಾಗುವುದುಂಟು. ಗ್ರನೈಟ್ ಪ್ರಧಾನವಾಗಿರುವ ಪ್ರದೇಶಗಳಲ್ಲಿ ಅದರಲ್ಲಿ ಸಹಜವಾಗಿರುವ ಫ್ಲೂರೈಡ್ ಖನಿಜ ನೀರಿನಲ್ಲಿ ವಿಲೀನವಾಗಿ ಅದನ್ನು ಬಳಸಿದವರಿಗೆ ಪ್ಲೂರೋಸಿಸ್ ಎಂಬ ಕಾಯಿಲೆ ಬಂದಿರುವ ಉದಾಹರಣೆಗಳು ಸಾಕಷ್ಟಿವೆ. ಪಶ್ಚಿಮ ಬಂಗಾಳ, ಬಾಂಗ್ಲಾದೇಶ ಮುಂತಾದ ಕಡೆಗಳಲ್ಲಿ ಮೆಕ್ಕಲು ಮಣ್ಣಿನಲ್ಲಿ ಆರ್ಸೆನಿಕ್ ಬೆರೆತು ತೀರ ವಿಷಕಾರಿಯಾಗಿ ಅನೇಕ ಚರ್ಮ ಕಾಯಿಲೆಗೆ ಕಾರಣವಾಗಿರುವುದುಂಟು. ಸೀಸ, ಪಾದರಸ ಮತ್ತು ಆರ್ಸೆನಿಕ್ ಖನಿಜಗಳು ಸುಲಭವಾಗಿ ನೀರಿನಲ್ಲಿ ವಿಲೀನವಾಗುವುದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ
 
 
 
 
"https://kn.wikipedia.org/wiki/ಅಂತರ್ಜಲ" ಇಂದ ಪಡೆಯಲ್ಪಟ್ಟಿದೆ