ಕಾರ್ಲ್ ಸಗಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 62 interwiki links, now provided by Wikidata on d:q410 (translate me)
೨೬ ನೇ ಸಾಲು:
ಆತನಿಗೆ ಕರೋಲ್ ಎಂಬ ಒಬ್ಬ ತಂಗಿ. ಈ ಇಡೀ ಕುಟುಂಬ ಬ್ರೂಕ್ಲಿನ್ ನ ನೆರೆನಗರ ಬೆನ್ಸೋಹರ್ಸ್ಟ್ ನ ಅಟ್ಲಾಂಟಿಕ್ ಮಹಾಸಾಗರದ ಹತ್ತಿರದಲ್ಲಿ ಸುಸಜ್ಜಿತ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿರುತ್ತದೆ. ಸಗಾನ್ ನ ಪ್ರಕಾರ ಆತನ ಕುಟುಂಬದವರು ರಿಫಾರ್ಮ್ ಯಹೂದಿಗಳು. ಯಹೂದಿಗಳಲ್ಲಿರುವ ಮೂರು ಗುಂಪುಗಳಲ್ಲಿ ಇದು ಅತ್ಯಂತ ಪ್ರಮುಖ ಪಂಗಡ ಎಂಬುದು ಆತನ ಭಾವನೆಯಾಗಿತ್ತು. ಸಗಾನ್ ಮತ್ತು ಆತನ ತಂಗಿ ಹೇಳಿಕೊಳ್ಳುವ ಹಾಗೆ ಅವರ ತಂದೆ ಅಷ್ಟೇನೂ ದೈವಭಕ್ತ ವ್ಯಕ್ತಿಯಾಗಿರಲಿಲ್ಲ. ಆದರೆ ತಾಯಿ ಮಾತ್ರ ದೇವರಲ್ಲಿ ಸಂಪೂರ್ಣ ನಂಬಿಕೆ ಇಟ್ಟಿದ್ದ ಮತ್ತು ಚರ್ಚುಗಳಿಗೆ ಹೋಗುವ ಅಭ್ಯಾಸವಿದ್ದ ಮಹಿಳೆ. ಅಲ್ಲದೆ, ಮನೆಯಲ್ಲಿ ಆಕೆ ತಯಾರಿಸುತ್ತಿದ್ದುದು ಕೋಶರ್ ಮಾಂಸದಡುಗೆಯನ್ನು ಮಾತ್ರ.<ref name="Keay"></ref>{{rp|12}} ಡಿಪ್ರೆಶನ್(ಆರ್ಥಿಕ ಕುಸಿತದ) ಪರಮಾವಧಿಯಲ್ಲಿ ಆತನ ತಂದೆ ಥಿಯೇಟರ್ ಗೇಟ್ ಕೀಪರ್ ಆಗಿಯೂ ದುಡಿಯಬೇಕಾಗಿ ಬರುತ್ತದೆ.
 
ಆತ್ಮ ಚರಿತ್ರಕಾರ ಕೀ ಡೇವಿಡ್ಸನ್ ನ ಪ್ರಕಾರ, ಸಗಾನ್ ನ 'ಅಂತರ್ಯುದ್ಧ'ಕ್ಕೆ ಕಾರಣವಾಗಿದ್ದುದು, ಆತನಿಗೆ ಎಲ್ಲ ದಿಕ್ಕಿನಲ್ಲೂ 'ವಿರುದ್ಧ ಸ್ವಭಾವ' ಹೊಂದಿದ್ದ ಆತನ ಇಬ್ಬರೂ ಪಾಲಕರದ್ದು. ಎಷ್ಟೋ ದಿನಗಳ ನಂತರ ಸಗಾನ್ ನಿಗೆ ತನ್ನ ತಾಯಿಯ ಕುರಿತಾಗಿ ತನ್ನ ಮಾನಸಿಕ ಒತ್ತಡಗಳು ಏನಿದ್ದವು ಎಂಬುದು ಅರ್ಥವಾಗುತ್ತಾದೆಫ಼ೂಛ್ಖ್ ಕೊರೆಅನ್ ಥಿಸ್ ಶಿತ್ ಇಸ್ ವೊರ್ಥ್ಲೆಸ್ಸ್. ತನ್ನ ಬಾಲ್ಯದಲ್ಲಿ ಅತ್ಯಂತ ಕ್ರೂರ ಬಡತನದ ಬದುಕಿನ ಹಿನ್ನೆಲೆಯಿದ್ದ ಆಕೆ 1920ರ ದಶಕದಲ್ಲಿ, WWI ಹೊತ್ತಿಗೆ ಹೆಚ್ಚೂ ಕಡಿಮೆ ನಿರ್ಗತಿಕಳಾಗಿ ಬದುಕು ಸಾಗಿಸಿರುತ್ತಾಳೆ.<ref name="Keay"></ref>{{rp|2}} ಒಬ್ಬ ತರುಣಿಯಾಗಿ ಆಕೆಯಲ್ಲಿ ಬದುಕಿನ ಬಗ್ಗೆ ಬೌದ್ಧಿಕವಾಗಿ ಅಪಾರವಾದ ಭರವಸೆಗಳು, ಕನಸುಗಳು ಇದ್ದರೂ, ಆಗಿನ ಸಾಮಾಜಿಕ ಕಟ್ಟಳೆಗಳು, ಆಕೆಯ ಕಡು ಬಡತನದ ಜೀವನ, ಒಬ್ಬ ಪತ್ನಿಯಾಗಿ, ಹೆಣ್ಣಾಗಿ, ಆಕೆ ಅನುಭವಿಸುತ್ತಿದ್ದ ಕೌಟುಂಬಿಕ ಒತ್ತಡಗಳು ಮತ್ತು ಎಲ್ಲಕ್ಕೂ ಹೆಚ್ಚಾಗಿ ಆಕೆಯ ಯಹೂದಿಯಾಗಿದ್ದದ್ದು, ಆಕೆಯ ಎಲ್ಲ ಆಶಯಗಳನ್ನು ಹೊಸಕಿ ಹಾಕಿ ಬಿಟ್ಟಿರುತ್ತವೆ. ಡೇವಿಡ್ಸನ್ ಹೇಳುವ ಪ್ರಕಾರ, "ಈ ಎಲ್ಲ ಕಾರಣಗಳಿಗಾಗಿಯೇ ಆಕೆ ತನ್ನ ಒಬ್ಬನೇ ಮಗ ಕಾರ್ಲ್ ನನ್ನು ಅಪಾರವಾಗಿ ಆರಾಧಿಸುತ್ತಿರುತ್ತಾಳೆ. ಆತನೊಬ್ಬನೇ ತನ್ನೆಲ್ಲ ಕನಸುಗಳನ್ನು ಈಡೇರಿಸಬಲ್ಲ ಆಶಾಕಿರಣವಾಗಿ ಆಕೆಗೆ ಕಾಣುತ್ತಾನೆ".<ref name="Keay"></ref>{{rp|2}}
 
ಇಷ್ಟೆಲ್ಲದರ ನಡುವೆಯೂ ಕಾರ್ಲ್ ನಿಗೆ ಇದ್ದ 'ಅದ್ಭುತ ಆಲೋಚನಾ ಕ್ರಮ' ಆತನಿಗೆ ಒಲಿದು ಬಂದದ್ದು ತುಂಬಾ "ಸಮಾಧಾನಿಯೂ, ಮೃದು ಹೃದಯಿಯೂ ಆಗಿದ್ದ ಮತ್ತು ಝಾರ್ ನಿಂದ ತಪ್ಪಿಸಿಕೊಂಡು ಬದುಕಿ ಬಂದಿದ್ದ ಆತನ ತಂದೆಯಿಂದ". ನ್ಯೂಯಾರ್ಕಿನಲ್ಲಿದ್ದ ಟ್ಯೂಮಲ್ಟ್ಯುಅಸ್ ಗಾರ್ಮೆoಟ್ ಕೈಗಾರಿಕಾ ಆವರಣದಲ್ಲಿ, ಬಡ ಮಕ್ಕಳಿಗೆ ಸೇಬು ಹಂಚುತ್ತಲೋ, ಕಾರ್ಮಿಕರ ವೃತ್ತಿಪರ ಸಮಸ್ಯೆಗಳನ್ನು ನಿವಾರಿಸುತ್ತಲೋ ಆತ ತನ್ನ ಬಿಡುವಿನ ವೇಳೆಯನ್ನು ಕಳೆಯುವ ವ್ಯಕ್ತಿಯಾಗಿದ್ದ.<ref name="Keay"></ref>{{rp|2}} ಇದೆಲ್ಲದರ ಮಧ್ಯೆಯೂ ಆತನಿಗೆ ಕಾರ್ಲ್ ನ ಅದ್ಭುತ ಜಾಣ್ಮೆಯ ಬಗ್ಗೆ ಅಪಾರವಾದ ಅಭಿಮಾನವಿತ್ತು. ಹಾಗೆಂದೇ ಆತ ಮಗನನ್ನು ಕೂರಿಸಿಕೊಂಡು ತಾರೆಗಳ ಬಗ್ಗೆ, ಡೈನೋಸಾರುಗಳ ಬಗ್ಗೆ ಗಂಟೆಗಟ್ಟಲೆ ಮಾತಾಡುತ್ತಿದ್ದ ಮತ್ತು ಮಗನ ಜಾಣ್ಮೆಯನ್ನು ಕೆದಕುವ, ಆಲೋಚನೆಗೆ ಹಚ್ಚುವ ಹಲವಾರು ಕೆಲಸಗಳನ್ನು ಮಾಡುತ್ತಿದ್ದ. ಕಾರ್ಲನ ಬೌದ್ಧಿಕ ಬೆಳವಣಿಗೆ ದಾಪುಗಾಲಿಟ್ಟು ನಡೆಯುವುದಕ್ಕೆ ಇದು ಸಹಾಯಕಾರಿಯೂ ಆಗಿತ್ತು.<ref name="Keay"></ref>{{rp|2}} ಒಬ್ಬ ಬರಹಗಾರನಾಗಿ, ವಿಜ್ಞಾನಿಯಾಗಿ, ಕಾರ್ಲ್ ರೂಪುಗೊಂಡಾಗ, ಆತನಿಗೆ ಇವೆಲ್ಲ ಅಂಶಗಳು ನೆನಪಾಗುತ್ತಿದ್ದವು ಹಾಗೂ ತನ್ನ ವೈಜಾನಿಕ ಆಲೋಚನೆಗಳನ್ನು ಖಚಿತಪಡಿಸಿಕೊಳ್ಳಲು ಇವೇ ನೆನಪುಗಳು ಆತನಿಗೆ ನೆರವಾದ ಕ್ಷಣಗಳೂ ಇವೆ. ಇದನ್ನೇ ಆತ ತನ್ನ '''ಶ್ಯಾಡೋಸ್ ಆಫ್ ಫಾರ್ಗಾಟನ್ ಅನ್ಸೆಸ್ಟರ್ಸ್'' ' ಪುಸ್ತಕದಲ್ಲಿ ಉಲ್ಲೇಖಿಸಿಕೊಂಡಿದ್ದಾನೆ.<ref name="Keay"></ref>{{rp|9}} ತನ್ನ ಪಾಲಕರು ತನ್ನ ಆಮೇಲಿನ ಆಲೋಚನಾ ಸರಣಿಯ ಮೇಲೆ ಬೀರಿದ ಪ್ರಭಾವದ ಕುರಿತೂ ಆತ ಹೇಳಿಕೊಳ್ಳುತ್ತಾನೆ:
೪೩ ನೇ ಸಾಲು:
 
===ಪ್ರಕೃತಿಯನ್ನು ಅರಿಯುವ ಕುತೂಹಲ
 
===
ಪೂರ್ವ ಪ್ರಾಥಮಿಕ ಶಾಲೆಯನ್ನು ಸೇರಿದೊಡನೆ ಸಗಾನ್ ಪ್ರಕೃತಿಯೆಡೆಗೆ ಗಾಢವಾದ ಮತ್ತು ವಿಶೇಷವಾದ ಕುತೂಹಲ ತಳೆಯುತ್ತಾನೆ. ಐದು ವರ್ಷದವನಿದ್ದಾಗ, ತನ್ನ ತಾಯಿ ತಂದುಕೊಟ್ಟಿದ್ದ ಲೈಬ್ರರಿ ಕಾರ್ಡನ್ನು ತೆಗೆದುಕೊಂಡು ತನ್ನ ಶಾಲೆಯ ಪಬ್ಲಿಕ್ ಲೈಬ್ರರಿಗೆ ತಾನೊಬ್ಬನೇ ಮೊದಲ ಸಲ ಹೋಗಿದ್ದನ್ನು ಸಗಾನ್ ನೆನಪಿಸಿಕೊಳ್ಳುತ್ತಾನೆ. ತನ್ನ ಗೆಳೆಯರಾಗಲಿ, ಅವರ ತಂದೆ ತಾಯಿಗಳಾಗಲಿ ಯಾರೊಬ್ಬರೂ ನಕ್ಷತ್ರಗಳೆಂದರೆ ಏನು ಎಂಬುದನ್ನು ಸರಿಯಾಗಿ ವಿವರಿಸಿರುವುದಿಲ್ಲವಾದ್ದರಿಂದ, ತಾನೊಬ್ಬನೇ ಸ್ವತಃ ಅವುಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಸಗಾನ್ ಗೆ ಬಾಲ್ಯದಲ್ಲಿಯೇ ಇತ್ತು:
"https://kn.wikipedia.org/wiki/ಕಾರ್ಲ್_ಸಗಾನ್" ಇಂದ ಪಡೆಯಲ್ಪಟ್ಟಿದೆ