ಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
== ಪರಿಚಯ ==
 
ಭೂಮಿಯ [[:en:Crust (geology)|ಚಿಪ್ಪು]] ಹಲವು [[:en:tectonte|ಫಲಕ]]ಗಳಾಗಿ ಒಡೆದಿದೆ. ಈ ಭೂಫಲಕಗಳು ನಿಧಾನವಾಗಿ ಭೂಮಿಯ ಮೇಲ್ಮೈಅತ್ತಿಂದಿತ್ತ ಅಸ್ತೆನೋ ಗೋಳದ ಮೇಲೆ ಚಲಿಸುತ್ತವೆ. ಭೂಮಿಯ ಒಳಭಾಗವು ಇನ್ನೂ ಸಾಕಷ್ಟು ಚಟುವಟಿಕೆಗಳಿಂದ ಕೂಡಿದೆ. ಭೂಮಿಯ ಅತ್ಯಂತ ಮೇಲಿನ ಪದರ ಚಿಪ್ಪು. ಇದು ಸಿಲಿಕ -ಅಲ್ಯುಮಿನಿಯಂನಿಂದಾದ ಹೊರಭಾಗವನ್ನೂ, ಸಿಲಿಕ-ಮೆಗ್ಮೀನಿಸಿಯಂನಿಂದಾದ ಕೆಳಪದರದಿಂದ ಕೂಡಿದೆ. ಖಂಡದ ಕೆಳಗೆ ಚಿಪ್ಪು ಹೆಚ್ಚು ಮಂದವಿದೆ, ಆದರೆ ಸಾಗರದಡಿಯಲ್ಲಿ ತೆಳುವಾಗಿದೆ. [[:en:Mantle (geology)|ಕವಚ]]ವು ದಪ್ಪನಾದ ಒಂದು ಘನರೂಪಿ ಸಂವಾಹಕದಿಂದ ಕೂಡಿದ್ದರೆ, ಭೂಗರ್ಭವು ಕಬ್ಬಿಣ ಮತ್ತು ನಿಕ್ಕಲ್ ನಿಂದ ನಿರ್ಮಿತವಾಗಿದೆ. ಭೂಮಿಯ [[:en:magnetic field|ಕಾಂತಕ್ಷೇತ್ರದ ನೆಲೆ ಇದು. ]] ಜೀವಸಂಕುಲಗಳ ಅಸ್ತಿತ್ವದ ಕಾರಣದಿಂದ ಭೂಮಿಯ [[:en:Earth's atmosphere|ವಾಯುಮಂಡಲದ]] ಗುಣಲಕ್ಷಣಗಳು ಗಮನಾರ್ಹವಾಗಿ ಬದಲಾಗಿವೆ. ಈ ಜೀವ ಸಂಕುಲಗಳು ಉಂಟುಮಾಡುವ ಪರಿಸರ ಅಸಮತೋಲನವು ಭೂಮಿಯ ಮೇಲ್ಮೈಯನ್ನು ಗಮನಾರ್ಹವಾಗಿ ಬದಲಾಯಿಸಿದೆ. ಮೇಲ್ಮೈನ ಸುಮಾರು ೭೧% ಭಾಗವು ಉಪ್ಪು ನೀರಿನ [[ಸಾಗರ]]ಗಳಿಂದ ಆವೃತವಾಗಿದ್ದು, ಉಳಿದ ಮೇಲ್ಮೈಯು ಭೂಖಂಡಗಳು ಮತ್ತು ದ್ವೀಪಗಳಿಂದ ಕೂಡಿದೆ.
 
ಭೂಮಿ ಮತ್ತು ಅದರ ಸುತ್ತುಮುತ್ತಲಿನ ಅಂತರಿಕ್ಷದ ನಡುವೆ ಬಹಳಷ್ಟು ವಿನಿಮಯ ಕ್ರಿಯೆಗಳು ಜರಗುತ್ತವೆ. ಸ್ವಲ್ಪ ದೊಡ್ಡದೆಂದೇ ಹೇಳಬಹುದಾದ ಚಂದ್ರನ ಕಾರಣದಿಂದ ಸಾಗರಗಳಲ್ಲಿ [[:en:tide|ಉಬ್ಬರವಿಳಿತ]]ಗಳು ಉಂಟಾಗುತ್ತವೆ. ಹಲವಾರು ಕೋಟಿ ವರ್ಷಗಳ ಅವಧಿಯಲ್ಲಿ ಈ ಉಬ್ಬರವಿಳಿತಗಳು ಭೂಮಿಯ ಅಕ್ಷೀಯ ಪರಿಭ್ರಮಣ ವೇಗವನ್ನು ನಿಧಾನವಾಗಿ ಕಡಿಮೆಗೊಳಿಸಿವೆ. ಭೂ ಇತಿಹಾಸದ ಮೊದಲ ಭಾಗದಲ್ಲಿ [[ಧೂಮಕೇತು]] ಅಪ್ಪಳಿಸಿದ್ದರಿಂದ ಸಾಗರಗಳು ಉದ್ಭವವಾದವು ಎಂಬುದು ಒಂದು ಸಿದ್ಧಾಂತ.. ನಂತರದ [[ಕ್ಷುದ್ರಗ್ರಹಗಳ]] ತಾಡನೆಯಿಂದ ಮೇಲ್ಮೈ ಸಾಕಷ್ಬ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಉಂಟುಮಾಡಿರಬಹುದು. ಓರೆಗೊಂಡ ಭೂ ಕಕ್ಷೆ ದೀರ್ಘಾವಧಿ ಯಲ್ಲಿ [:en:Milankovitch cycle ಭೂ ಮೇಲ್ಮೈನ ಬಹಳಷ್ಟು ಭಾಗಗಳನ್ನು ಹಿಮದಲ್ಲಿ ಹೊದಿಸಿದ [[ಹಿಮಯುಗ]]ಗಳಿಗೂ ಕಾರಣವಾಗಿದ್ದಿರಬಹುದು.
"https://kn.wikipedia.org/wiki/ಭೂಮಿ" ಇಂದ ಪಡೆಯಲ್ಪಟ್ಟಿದೆ