ಮೈಕ್ರೋಸಾಫ್ಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩೨ ನೇ ಸಾಲು:
ಫೆಬ್ರವರಿ ೧, ೨೦೦೮ ರಂದು ಮೈಕ್ರೋಸಾಫ್ಟ್ ಅಂತರ್ಜಾಲ ಸಂಸ್ಥೆ [[ಯಾಹೂ]] ಅನ್ನು ೪೪.೬ ಶತಕೋಟಿ ಡಾಲರ್ ಕೊಟ್ಟು ಕೊಳ್ಳಲು ಮುಂದಾಯಿತು. ಆದರೆ ಈ ಪ್ರಸ್ತಾಪವನ್ನು ಯಾಹೂ ತಿರಸ್ಕರಿಸಿತು. ನಂತರ ಮೈಕ್ರೋಸಾಫ್ಟ್ ತನ್ನ ಪ್ರಸ್ತಾಪವನ್ನು ಹಿಂತೆಗೆದುಕೊಂಡಿತು.
 
==ಮೈಕ್ರೋಸಾಫ್ಟ್‌ನಲ್ಲಿ ಕನ್ನಡ==
ಮೈಕ್ರೋಸಾಫ್ಟ್‌ ತನ್ನ ವಿಂಡೋಸ್ ಎಕ್ಸ್‌ಪಿ ಕಾರ್ಯಾಚರಣ ವ್ಯವಸ್ಥೆಯಲ್ಲಿ ಪ್ರಥಮ ಬಾರಿಗೆ ಕನ್ನಡವನ್ನು ಅಳವಡಿಸಿತು. ಈ ಅಳವಡಿಕೆಯಲ್ಲಿ ಯುನಿಕೋಡ್ ಕನ್ನಡ ಪಠ್ಯದ ತೋರುವಿಕೆ (ರೆಂಡರಿಂಗ್), ಇನ್‌ಸ್ಕ್ರಿಪ್ಟ್ ಕೀಲಿಮಣೆ, ಕನ್ನಡದಲ್ಲಿ ಫೈಲ್‌ಗಳಿಗೆ ಹೆಸರು ನೀಡುವ ಸೌಲಭ್ಯ, ಕನ್ನಡದ ಅಕಾರಾದಿ ವಿಂಗಡಣೆ, ಎಲ್ಲ ಇದ್ದವು. ಕನ್ನಡ ಪಠ್ಯವನ್ನು ಪರದೆಯಲ್ಲಿ ತೋರಲು ಬಳಸಿದ ಕನ್ನಡ ಯುನಿಕೋಡ್ ಆಧಾರಿತ ಓಪನ್‌ಟೈಪ್ ಫಾಂಟ್ ತುಂಗ. ಅದರಲ್ಲಿ ಕನ್ನಡದ ಕೆಲವು ಅಕ್ಷರಗಳಲ್ಲಿ, ಉದಾ "ಮೋ", ದೋಷಗಳಿದ್ದವು. ಮೈಕ್ರೋಸಾಫ್ಟ್ ಈ ದೋಷಗಳನ್ನು ೨೦೦೩ರಲ್ಲಿ ವಿಂಡೋಸ್ ಸರ್ವರ‍್ ೨೦೦೩ ಆವೃತ್ತಿಯಲ್ಲಿ ಸರಿಪಡಿಸಿತು. ನಂತರದ ವಿಸ್ತ, ವಿಂಡೋಸ್ ೭ ಮತ್ತು ೮ ಆವೃತ್ತಿಗಳಲ್ಲಿ ಕನ್ನಡದ ಅಳವಡಿಕೆಯಲ್ಲಿ ಯಾವ ದೋಷವೂ ಇಲ್ಲ. ಮೈಕ್ರೋಸಾಫ್ಟ್ ಕಂಪೆನಿ ತನ್ನ ಭಾಷಾಇಂಡಿಯ ತಾಣದ ಮೂಲಕ ಇನ್ನಷ್ಟು ಕೀಲಿಮಣೆ ವಿನ್ಯಾಸಗಳನ್ನು ನೀಡಿದೆ.
 
 
{{ಚುಟುಕು}}
 
 
"https://kn.wikipedia.org/wiki/ಮೈಕ್ರೋಸಾಫ್ಟ್" ಇಂದ ಪಡೆಯಲ್ಪಟ್ಟಿದೆ