"ಹಾಲ್ದೊಡ್ಡೇರಿ ಸುಧೀಂದ್ರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

[[ಚಿತ್ರ:Sudhindra.jpg]]
==ವಿದ್ಯಾಭ್ಯಾಸ==
 
ಮನೆಯಲ್ಲಿನ ಸಾಹಿತ್ಯಿಕ ವಾತಾವರಣ ಕನ್ನಡ ಭಾಷೆಯನ್ನು ಆಸಕ್ತಿಯಿಂದ ಕಲಿಯಲು ಅನುವು ಮಾಡಿಕೊಟ್ಟಿತ್ತು. ಕಾಲೇಜು ಕಲಿತ ನಂತರ ಹಾಸ್ಯ ಬರಹಗಳಿಗಷ್ಟೇ ಸೀಮಿತವಾಗಿದ್ದ ಸಾಹಿತ್ಯಾಸಕ್ತಿ ತಂದೆಯವರ ಒತ್ತಾಸೆಯಿಂದ ವಿಜ್ಞಾನ ಪ್ರಸರಣೆಯತ್ತ ವಿಸ್ತರಿಸಿತು. ಕನ್ನಡದ ಬಹುತೇಕ ಎಲ್ಲ ಪತ್ರಿಕೆಗಳಲ್ಲೂ ಸುಧೀಂದ್ರ ಅವರ ವಿಜ್ಞಾನ ಬರಹಗಳು ಪ್ರಕಟವಾಗಿವೆ.
 
ಪ್ರಸ್ತುತ [[ಹಾಲ್ದೊಡ್ಡೇರಿ ಸುಧೀಂದ್ರ|ಸುಧೀಂದ್ರ ಹಾಲ್ದೊಡ್ಡೇರಿ]] ಅವರು [[ಬೆಂಗಳೂರು|ಬೆಂಗಳೂರಿ]]ನ ‘[[ಅಲಯನ್ಸ್ ವಿಶ್ವವಿದ್ಯಾಲಯ]]ದ’ ದ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಹಾಗೂ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಆಗಿದ್ದಾರೆ. ಈ ಹಿಂದೆ ‘[[ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ]]’ಯ ([[DRDO]]) ಪ್ರಮುಖ ಕೇಂದ್ರವಾದ ‘[[ಸೆಂಟರ್ ಫಾರ್ ಮಿಲಿಟರಿ ಏರ್‌ವರ್ಥಿನೆಸ್ ಅಂಡ್ ಸರ್ಟಿಫಿಕೇಶನ್]]’ ([[CEMILAC]])ನಲ್ಲಿ ವಿಜ್ಞಾನಿ ಹಾಗೂ ಜಂಟಿ ನಿರ್ದೇಶಕರಾಗಿದ್ದರು. ಮಿಲಿಟರಿ ವಿಮಾನ ಎಂಜಿನ್‍ಗಳ ಹಾರಾಟ-ಯೋಗ್ಯತೆ ಹಾಗೂ ದೃಢೀಕರಣ ಕ್ಷೇತ್ರದಲ್ಲಿ ಇಪ್ಪತ್ತೆರಡು ವರ್ಷಗಳ ಕಾಲ ಕೆಲಸ ಮಾಡಿದ್ದರು. ನಂತರ ಎರಡು ವರ್ಶಗಳ ಕಾಲ [[ಹೆಚ್.ಎ.ಎಲ್.]]ನ ವಿನ್ಯಾಸ ವಿಭಾಗದ ಡೆಪ್ಯೂಟಿ ಜನರಲ್ ಮ್ಯಾನೇಜರ್ ಹುದ್ದೆಯನ್ನು ನಿರ್ವಹಿಸಿದ್ದರು. ಬೆಂಗಳೂರಿನ ‘[[ವಿಶ್ವೇಶ್ವರಯ್ಯ ಎಂಜಿನೀರಿಂಗ್ ಕಾಲೇಜು]]ನಲ್ಲಿ’ ([[UVCE]]) ಬಿ.ಇ. ಪದವಿ, ಮದ್ರಾಸ್‍ನ [[ಐ.ಐ.ಟಿ.]]ಯ ಎಂ.ಟೆಕ್. ಪದವಿ ಪಡೆದಿರುವ ಸುಧೀಂದ್ರ ಎರಡು ವರ್ಷಗಳ ಕಾಲ ಬೆಂಗಳೂರಿನ ‘[[ಭಾರತೀಯ ವಿಜ್ಞಾನ ಮಂದಿರ]]’ದಲ್ಲಿ ([[IISc]]) ಸಂಶೋಧನಾ ಸಹಾಯಕರಾಗಿಯೂ ಕೆಲಸ ಮಾಡಿದ್ದಾರೆ.
 
ವೃತ್ತಿ ಸಂಬಂಧಿತ ವಿಷಯಗಳ ಬಗ್ಗೆ ತಂತ್ರಜ್ಞಾನ ಸಮ್ಮೇಳನಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸುವುದರ ಜತೆಗೆ, ಭಾರತೀಯ ವಾಯುಪಡೆಯ ಉನ್ನತ ಮಟ್ಟದ ಕಾರ್ಯಪಡೆಗಳ ಪರಿಣತ ಸದಸ್ಯರಾಗಿ ಅತ್ಯಮೂಲ್ಯ ತಾಂತ್ರಿಕ ವರದಿಗಳನ್ನು ಸಿದ್ಧಪಡಿಸಿದ್ದಾರೆ. ಕಾರ್ಯ ನಿಮಿತ್ತ ದೇಶದ ಆಯಕಟ್ಟಿನ ಮಿಲಿಟರಿ ನೆಲೆಗಳನ್ನು ಸಂದರ್ಶಿಸಿದ್ದಾರೆ. ಹಾಗೆಯೇ ಅತ್ಯಗತ್ಯ ತಂತ್ರಜ್ಞಾನವೊಂದರ ಅಳವಡಿಕೆಗಾಗಿ ಎರಡು ಬಾರಿ [[ಅಮೆರಿಕ]] ಮತ್ತು ಒಮ್ಮೆ [[ಬ್ರಿಟನ್]], [[ಬ್ರೆಝಿಲ್]] ಹಾಗೂ [[ರಶಿಯ|ರಷ್ಯಾ]] ದೇಶಗಳನ್ನು ಸಂದರ್ಶಿಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರತಿಷ್ಠಿತ ‘[[ಮೆಸಾಶ್ಯುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ]] - [[ಎಂ.ಐ.ಟಿ]]’, ‘[[ಹಾರ್ವರ್ಡ್]]’ ಹಾಗೂ ‘[[ಸ್ಟಾನ್‍ಫರ್ಡ್]]’ ವಿಶ್ವವಿದ್ಯಾಲಯಗಳಿಗೂ ಭೇಟಿ ನೀಡಿದ್ದಾರೆ. ಉತ್ತಮ ಕಾರ್ಯಕ್ಷಮತೆಗಾಗಿ [[1997]]ರಲ್ಲಿ [[ಡಿ.ಆರ್.ಡಿ.ಓ. ಪುರಸ್ಕಾರ]], ಉನ್ನತ ತಂತ್ರಜ್ಞಾನದಲ್ಲಿನ ಸಾಧನೆಗಾಗಿ ರಕ್ಷಣಾಮಂತ್ರಿಗಳ ವೈಜ್ಞಾನಿಕ ಸಲಹಾಕಾರರಿಂದ 2002ರ ‘[[ರಾಷ್ಟ್ರೀಯ ವಿಜ್ಞಾನ ದಿನ]]’ದ ಪ್ರಶಂಸಾ ಪತ್ರ ಹಾಗೂ ಪದಕ ಮತ್ತು ‘[[ಉತ್ತಮ ತಂತ್ರಜ್ಞಾನ ಕಾರ್ಯಪಡೆ ಪ್ರಶಸ್ತಿ]]’ಗಳನ್ನು ಸತತವಾಗಿ 2004ರಲ್ಲಿ ಹಾಗೂ 2005ರಲ್ಲಿ ಪಡೆದಿದ್ದಾರೆ.
 
ಜನಪ್ರಿಯ ಶೈಲಿಯಲ್ಲಿ ವಿಜ್ಞಾನ ವಿಷಯಗಳನ್ನು ನಿರೂಪಿಸುತ್ತಿರುವ ಸುಧೀಂದ್ರ, ಅಂಕಣಕಾರರಾಗಿ ಕನ್ನಡ ಓದುಗರಿಗೆ ಪರಿಚಿತರು. ಅವರು ‘[[ವಿಜಯ ಕರ್ನಾಟಕ]]’ ಪತ್ರಿಕೆಗೆ ‘[[ನೆಟ್ ನೋಟ]]’ ಅಂಕಣವನ್ನು ಕಳೆದ ಹನ್ನೊಂದು ವರ್ಷಗಳಿಂದ ಬರೆಯುತ್ತಿದ್ದಾರೆ. ಕನ್ನಡದ ಬಹುತೇಕ ದಿನ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಬಗ್ಗೆ ಒಂದು ಸಹಸ್ರಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ‘ಇಂಟರ್‌ನೆಟ್ ಎಂಬ ಮಾಯಾಜಾಲ’ ಎಂಬ ಕೈಪಿಡಿ, ‘ಕಂಪ್ಯೂಟರ್ ಎಲ್ಲಿಂದ ಎಲ್ಲಿಯವರೆಗೆ’, ‘ಕಂಪ್ಯೂಟರ್-ಮಕ್ಕಳಿಗೊಂದು ಕೈಪಿಡಿ’ ಮತ್ತು ‘ಬೆಳಕಿಂಡಿ’ ಪುಸ್ತಕಗಳು ಈಗಾಗಲೇ ಬಿಡುಗಡೆಯಾಗಿವೆ. ಮತ್ತೊಂದು ಬಿಡಿಲೇಖನಗಳ ಪ್ರಾತಿನಿಧಿಕ ಸಂಕಲನ ‘ಸದ್ದು! ಸಂಶೋಧನೆ ನಡೆಯುತ್ತಿದೆ!!’ ಸದ್ಯದಲ್ಲೇ ಪ್ರಕಟವಾಗಲಿದೆ. ‘ಆಕಾಶವಾಣಿ’, ‘ಎಫ್.ಎಂ.ರೇಡಿಯೊ ಚಾನೆಲ್‌ಗಳು’, ‘ದೂರದರ್ಶನ’ ಹಾಗೂ ‘ಖಾಸಗಿ ಟೀವಿ ಚಾನೆಲ್‍ಗಳಲ್ಲಿ’ ವಿಜ್ಞಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಿರ್ವಹಿಸಿದ್ದಾರೆ. ಶಾಲಾ-ಕಾಲೇಜುಗಳು ಸೇರಿದಂತೆ ಎಂಜಿನೀರಿಂಗ್ ಸಂಸ್ಥೆಗಳಲ್ಲಿ ಪ್ರಚಲಿತ ವಿಜ್ಞಾನ-ತಂತ್ರಜ್ಞಾನ ವಿಷಯಗಳ ಬಗ್ಗೆ ಹಲವಾರು ಉಪನ್ಯಾಸಗಳನ್ನೂ ಅವರು ನೀಡಿದ್ದಾರೆ.
 
[[ಬೆಂಗಳೂರು|ಬೆಂಗಳೂರಿನಲ್ಲಿ]] ನೆಡೆದ [[ಪ್ರಥಮ ಕನ್ನಡ ವಿಜ್ಞಾನ ಸಮ್ಮೇಳನ]], [[ಪ್ರಥಮ ಕನ್ನಡ ಗಣಕ ಸಮ್ಮೇಳನ]] ಮತ್ತು [[ಶಿವಮೊಗ್ಗ]]ದಲ್ಲಿ ನೆಡೆದ [[ಕನ್ನಡ ಮಾಹಿತಿ ತಂತ್ರಜ್ಞಾನ ಸಮ್ಮೇಳನ]]ಗಳಲ್ಲಿ ಇವರು ಮಾಹಿತಿ ತಂತ್ರಜ್ಞಾನ ಕುರಿತು ಕನ್ನಡದಲ್ಲಿ ಉಪನ್ಯಾಸ ನೀಡಿದ್ದಾರೆ.
 
==ಅಂಕಣಗಳು==
 
೫೯೯

edits

"https://kn.wikipedia.org/wiki/ವಿಶೇಷ:MobileDiff/325661" ಇಂದ ಪಡೆಯಲ್ಪಟ್ಟಿದೆ