ಹಾಲ್ದೊಡ್ಡೇರಿ ಸುಧೀಂದ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
[[ಚಿತ್ರ:Sudhindra.jpg]]
==ವಿದ್ಯಾಭ್ಯಾಸ==
 
ಬೆಂಗಳೂರಿನ [[ಮಾವಳ್ಳಿ]] ಕೆರೆಯಂಗಳದ ಜರ್ನಲಿಸ್ಟ್ಸ್ ಕಾಲನಿಯಲ್ಲಿಯೇ ಇದ್ದ ಮನೆ ಸಮೀಪದ `ವಾರ್ತಾನಗರ ನಿವಾಸಿಗಳ ಸಂಘ'ದ ನರ್ಸರಿ ಹಾಗೂ ಪ್ರೈಮರಿ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭವಾಯಿತು. ಚಿತ್ರನಟ [[ಶಿವರಾಂ]] ಅವರ ಅಣ್ಣ [[ಶ್ರೀಕಂಠೇಶ್ವರ ಅಯ್ಯರ್]] ಕಾಲನಿಯಲ್ಲಿ [[ವಾಣಿ ಇನ್‌ಸ್ಟಿಟ್ಯೂಟ್]] ಎಂಬ ಟೈಪ್‍ರೈಟಿಂಗ್ ಶಾಲೆಯನ್ನು ನಡೆಸುತ್ತಿದ್ದರು. ಅದೇ ಆವರಣದಲ್ಲಿ ವಾರ್ತಾನಗರದ ಶಾಲೆಯೂ ಇತ್ತು. ಐದನೆಯ ತರಗತಿಯ ನಂತರದ ಕ್ಲಾಸುಗಳು ಈ ಶಾಲೆಯಲ್ಲಿ ಇರದಿದ್ದ ಕಾರಣ ಜರ್ನಲಿಸ್ಟ್ಸ್ ಕಾಲನಿಯಲ್ಲಿಯೇ ಮನೆಯ ಹಿಂದಿನ ರಸ್ತೆಯಲ್ಲಿ ಇದ್ದ [[ದಯಾನಂದಸಾಗರ್ ಪ್ರೈಮರಿ ಸ್ಕೂಲ್]]ನಲ್ಲಿ ವಿದ್ಯಾಭ್ಯಾಸ ಮುಂದುವರಿಯಿತು. ಈ ಶಾಲೆಗೆ [[ಮಹಾತ್ಮ ಗಾಂಧಿ ವಿದ್ಯಾಪೀಠ]] ಎಂಬ ಹೆಸರೂ ಇತ್ತು. ಏಳನೆಯ ತರಗತಿಯವರಿಗೆ ಕನ್ನಡ ಮಾಧ್ಯಮದಲ್ಲಿಯೇ ಕಲಿಕೆ. ದೊಡ್ಡಪ್ಪನ ಮಕ್ಕಳು ಹೈಸ್ಕೂಲಿಗೆಂದು ಚಾಮರಾಜಪೇಟೆಯ [[ಬೆಂಗಳೂರು ಹೈಯರ್ ಸೆಕೆಂಡರಿ ಸ್ಕೂಲ್]] ಗೆ ಸೇರಿದ್ದ ಕಾರಣ ಸುಧೀಂದ್ರನಿಗೂ ಅದೇ ಶಾಲೆಯಲ್ಲಿ ಕನ್ನಡ ಮಾಧ್ಯಮದ ವ್ಯಾಸಂಗ. ಕೆಲದಿನಗಳ ನಂತರ ಮಿತ್ರರು ಇಂಗ್ಲಿಷ್ ಮಾಧ್ಯಮಕ್ಕೆ ಬದಲಿಸಿಕೊಂಡರೆಂದು ಹುಡುಗ ತಾನೂ ಬದಲಿಸಿಕೊಂಡ. ಇಂಗ್ಲಿಷ್ ಮಾಧ್ಯಮದ ಕಾಠಿಣ್ಯವನ್ನು ಅನುಭವಿಸತೊಡಗಿದ. ಕನ್ನಡ ಅಧ್ಯಾಪಕರಿಗೆ ಅಚ್ಚುಮೆಚ್ಚಿನವನಾಗಲು ಸುಧೀಂದ್ರನಿಗೆ ಮನೆಯಲ್ಲಿನ ಸಾಹಿತ್ಯಿಕ ವಾತಾವರಣ ಇಂಬು ಕೊಟ್ಟಿತು. ಅಧ್ಯಾಪಕರುಗಳಾಗಿದ್ದ [[ರಾಮೇಶ್ವರ ಅವಧಾನಿ]], [[ಬಿ.ಎಸ್.ಶಂಕರಲಿಂಗೇಗೌಡ]], [[ಎನ್.ನಾಗರಾಜ]] ಸುಧೀಂದ್ರನನ್ನು ಅಂತರಶಾಲಾ ಕನ್ನಡ ಪ್ರಬಂಧ ಸ್ಫರ್ಧೆ, ಚರ್ಚಾ ಸ್ಫರ್ಧೆಗಳಿಗೆ ಕಳುಹಿಸುತ್ತಿದ್ದರು. ಆಗಲೇ ವಿಜ್ಞಾನ ವಿಷಯಗಳ ಕುರಿತು ತುಣುಕು ಸುದ್ದಿಗಳನ್ನು [[ಕರ್ಮವೀರ]], [[ಸುಧಾ]], [[ಪ್ರಜಾಮತ]], [[ಕಸ್ತೂರಿ]], [[ಜನಪ್ರಿಯ ವಿಜ್ಞಾನ]] ಪತ್ರಿಕೆಗಳಿಗೆ ಪ್ರಕಟಣೆಗಾಗಿ ಕಳುಹಿಸುವ ಹವ್ಯಾಸ ಆರಂಭವಾಯಿತು. 1977ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ಪಾಸಾದ ನಂತರ ಸೇರಿದ್ದು [[ಬಸವನಗುಡಿ]]ಯ [[ವಿಜಯಾ ಕಾಲೇಜು]].
 
==ವಿದ್ಯಾಭ್ಯಾಸ==