"ಹಾಲ್ದೊಡ್ಡೇರಿ ಸುಧೀಂದ್ರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

[[ಚಿತ್ರ:Sudhindra.jpg]]
==ಬಾಲ್ಯ==
 
[[ಚಿತ್ರ:HNS02.jpg|Thumb|ನಾಲ್ಕು ವರ್ಷದ ಬಾಲಕ]]ಹಿರಿಯ ಕನ್ನಡ ಪತ್ರಕರ್ತ ‘ಸುದ್ದಿಜೀವಿ’ [[ಹೆಚ್.ಆರ್.ನಾಗೇಶರಾವ್]] ಹಾಗೂ [[ಹೆಚ್.ಎನ್.ಪ್ರೇಮಾ]] ದಂಪತಿಗಳ ಹಿರಿಯ ಮಗ ಸುಧೀಂದ್ರ ಜನಿಸಿದ್ದು [[ಮೈಸೂರು]] ಜಿಲ್ಲೆ, [[ಹುಣಸೂರು]] ತಾಲ್ಲೂಕು, [[ಬಿಳಿಕೆರೆ]] ಗ್ರಾಮದಲ್ಲಿ (03-12-[[1961]]). ಅಪ್ಪ-ಅಮ್ಮಂದಿರ ಜತೆ ಸೋದರತ್ತೆ ಮತ್ತವರ ಮಗ, ಚಿಕ್ಕಪ್ಪ - ಇವರೆಲ್ಲರ ಪ್ರೀತಿ-ವಾತ್ಸಲ್ಯ, ಅಕ್ಕ, ತಮ್ಮ, ತಂಗಿಯರ ಒಡನಾಟದಲ್ಲಿ ಬಾಲ್ಯದ ದಿನಗಳು ಸೊಗಸಾಗಿದ್ದವು. ಹತ್ತಿರದಲ್ಲೇ ಇದ್ದ [[ಭಾರತ್]], [[ಮಿನರ್ವ]] ಚಿತ್ರಮಂದಿರಗಳು, [[ಟೌನ್‌ಹಾಲ್]] ಹಾಗೂ [[ರವೀಂದ್ರ ಕಲಾಕ್ಷೇತ್ರ]] ರಂಗಮಂದಿರಗಳು, [[ಎಂ.ಎನ್.ಕೃಷ್ಣರಾವ್ ಪಾರ್ಕ್]] ಹಾಗೂ [[ಲಾಲ್‍ಬಾಗ್]] ತೋಟಗಳು ಅಲ್ಲಿ ಜರುಗುತ್ತಿದ್ದ ವಾದ್ಯಗೋಷ್ಟಿ ಕಾರ್ಯಕ್ರಮಗಳು, [[ಬಸವನಗುಡಿ]], [[ಜಯನಗರ]]ದ ನೆಂಟರ ಮನೆಗಳು, [[ವಿದ್ಯಾರ್ಥಿ ಭವನ]]ದ ಮಸಾಲೆ ದೋಸೆ, ಪೇಪರ್ ಮಸಾಲೆ ದೋಸೆ, [[ನ್ಯೂ ಮಾಡರ್ನ್ ಹೋಟೆಲ್ | ಎನ್.ಎಂ.ಹೆಚ್.]]ನ ಮಸಾಲೆ ದೋಸೆ, [[ಎಂ.ಟಿ.ಆರ್.]]ನ ಖಾರಾಬಾತ್ ಮತ್ತು ರವೆ ಇಡ್ಲಿಗಳು ಖಂಡಿತವಾಗಿಯೂ ಮರೆಯಲಾಗದ ನೆನಪುಗಳನ್ನು ಒದಗಿಸಿದ್ದವು.
 
==ವಿದ್ಯಾಭ್ಯಾಸ==
 
೫೯೯

edits

"https://kn.wikipedia.org/wiki/ವಿಶೇಷ:MobileDiff/325659" ಇಂದ ಪಡೆಯಲ್ಪಟ್ಟಿದೆ