"ಎಸ್.ಆರ್.ಕೃಷ್ಣಮೂರ್ತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

==ಪತ್ರಿಕೋದ್ಯಮ==
 
ಕನ್ನಡ ಪತ್ರಿಕೋದ್ಯಮಕ್ಕೆ ಮಿಂಚಿನಂತೆ ಪ್ರವೇಶಿಸಿದ ಎಸ್ಸಾರ್ಕೆ ವೃತಿಇಯಲ್ಲೂವೃತ್ತಿಯಲ್ಲೂ, ಲೇಖನ ವ್ಯವಸಾಯದಲ್ಲೂ ಅಷ್ಟೇ ಮಿಂಚಿನಂತಹ ಸಾಧನೆ ಮಾಡಿದವರು. [[ತಾಯಿನಾಡು]] ಪತ್ರಿಕೆಯ ಉಪಸಂಪಾದಕಕರಾಗಿ ಬರವಣಿಗೆ ಪ್ರಾರಂಭಿಸಿದ ಅವರು, [[ಚಿತ್ರಗುಪ್ತ]], [[ಜನಪ್ರಗತಿ]] ಮುಂತಾದ ಪತ್ರಿಕೆಗಳಲ್ಲಿನ ತಮ್ಮ ಲೇಖನಗಳಿಂದ ಜನಮನ್ನಣೆ ಗಳಿಸಿದ್ದರು. ಪ್ರತಿಭೆ, ಆದರ್ಶಪ್ರಿಯತೆ, ಸಂಶೋಧಕ ಬುದ್ಧಿ ಮತ್ತು ಶ್ರದ್ಧೋತ್ಸಾಹಗಳಿಂದ ಕೂಡಿದ ಅವರು ಪ್ರಭಾವಶಾಲಿಯಾಗಿ ಬರೆಯುತ್ತಿದ್ದರು. ನಿರ್ವಿಕಾರತೆಯಿಂದ ವಿಮರ್ಶೆ ಮಾಡುತ್ತಿದ್ದರು; ಮಾನವೀಯ ಹೃದಯದಿಂದ ಮತ್ತು ಚಿಕಿತ್ಸಕ ಬುದ್ಧಿಯಿಂದ ಸುತ್ತಣ ಪ್ರಪಂಚವನ್ನು ನಿರುಕಿಸಿ, ಪ್ರಚಲಿತ ಸಮಸ್ಯೆಗಳನ್ನು ವಿವೇಚಿಸಿ, ಪರಿಶೀಲಿಸಿ, ಪರಿಹರಿಸಬಲ್ಲವರಾಗಿದ್ದರು. ಮುಂದೆ ‘[[ಪ್ರಜಾವಾಣಿ]]’ ಪತ್ರಿಕೆಯಲ್ಲಿ ಹದಿಮೂರು ವರ್ಷಗಳ ಕಾಲ ಹಿರಿಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. ‘[[ಕನ್ನಡಪ್ರಭ]]’ ಪತ್ರಿಕೆ ರೂಪುಗೊಳ್ಳುತ್ತಿದ್ದ ದಿನಗಳಿಂದಲೇ ನೇಮಕಗೊಂಡು, ನಂತರ ಸುದ್ದಿ ಸಂಪಾದಕರಾಗಿ ಪತ್ರಿಕೆಯ ಮುನ್ನಡೆಗೆ ವಿಶೇಷ ಕಾಣಿಕೆ ನೀಡಿದ್ದರು. [[ಮದರಾಸ್]]ನ [[ಅಮೆರಿಕ ದೂತವಾಸ]]ದಲ್ಲಿ ಕನ್ನಡ ಸಂಚಿಕೆಯ ಸಂಪಾದಕನಾಗಿ ಮೂರು ವರ್ಷ ದುಡಿದ ನಂತರ ‘[[ಪ್ರಜಾಮತ]]’ ವಾರಪತ್ರಿಕೆಯ ‘ಫಿಚರ್ಸ್ ಎಡಿಟರ್’ ಆಗಿಯೂ ಕಾರ್ಯನಿರ್ವಹಿಸಿದ್ದರು. ಪತ್ರಿಕೆಗಳಿಗೆ ಆಗಿಂದಾಗ್ಗೆ ಬರೆಯುತ್ತಿದ್ದ ವಿಶೇಷ ಲೇಖನಗಳು, ಪುಸ್ತಕ ವಿಮರ್ಶೆ, ಚಿತ್ರ ವಿಮರ್ಶೆ ಮತ್ತು ಕಲಾರಂಗದ ವಿಮರ್ಶೆಯ ಬರಹಗಳೂ ಅವರ ಪ್ರಗತಿಶೀಲ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ.
 
==ಆರಂಭದ ದಿನಗಳು==
೫೯೯

edits

"https://kn.wikipedia.org/wiki/ವಿಶೇಷ:MobileDiff/325453" ಇಂದ ಪಡೆಯಲ್ಪಟ್ಟಿದೆ