ವಿಮಾನಯಾನದ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಹಾರುವ ಆಸೆ ಮಾನವನ ಅತಿ ಪುರಾತನ ಕನಸುಗಳಲ್ಲೊಂದು. ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಹಕ್ಕಿಗಳನ್ನು ಕಂಡಂದಿನಿಂದಲೇ ಮಾನವನ ಮನಸ್ಸಿನಲ್ಲಿ ಹಾರುವ ಆಸೆ ಕುಡಿಯೊಡೆದಿರಬೇಕು. ಹಾರಾಡುವ ಕನಸನ್ನು ಸುಲಭವಾಗಿ ನನಸಾಗಿಸುವ ಯಾವ ದಾರಿಯೂ ತೋಚದಾದಾಗ ದಂತಕತೆಗಳಲ್ಲಿ, ಪುರಾಣಗಳಲ್ಲಿ ಹಾರಾಟದ ಕಾಲ್ಪನಿಕ ಚಿತ್ರಗಳು ಮೂಡಿಬಂದವು. ತಮ್ಮ ಇಚ್ಛಾಶಕ್ತಿಯಿಂದಲೇ ಆಕಾಶದಲ್ಲಿ ಹಾರಾಡುವ ದೇವಾನುದೇವತೆಗಳ ಕತೆಗಳು, "ತ್ರಿಲೋಕಸಂಚಾರಿ" ನಾರದನ ಪಾತ್ರ, ರಾಮಾಯಣದಲ್ಲಿ ಬರುವ ಪುಷ್ಪಕ ವಿಮಾನದ ಉಲ್ಲೇಖ, ಹನುಮಂತನ ಸಾಗರೋಲ್ಲಂಘನ ಹಾಗೂ ರಾಮಾಯಣ - ಮಹಾಭಾರತ ಎರಡರಲ್ಲೂ ಯುದ್ಧಗಳ ಸಂದರ್ಭದಲ್ಲಿ ಕಂಡುಬರುವ "ಹಾರಾಡುವ ರಥ"ಗಳ ಕಲ್ಪನೆಗಳು ಈ ತರ್ಕಕ್ಕೆ ಅತ್ಯುತ್ತಮ ನಿದರ್ಶನಗಳು. ಭಾರತವಷ್ಟೇ ಅಲ್ಲದೆ ಪುರಾತನ ಗ್ರೀಸ್, ಈಜಿಪ್ಟ್, ಫಿನ್‌ಲ್ಯಾಂಡ್ ಹಾಗೂ ಪೆರು ದೇಶಗಳ ಪುರಾಣ-ದಂತಕತೆಗಳಲ್ಲೂ ಹಾರಾಡುವ ಮಾನವರ ಹಾಗೂ ಗೂಳಿ, ಕುದುರೆಗಳಂತಹ ಪ್ರಾಣಿಗಳ ಉಲ್ಲೇಖಗಳಿವೆ.
 
==ಲಿಯೊನಾರ್ಡೊ ಡ ವಿನ್ಸಿ==
ಹಾರಾಡುವ ಕನಸನ್ನು ಸುಲಭವಾಗಿ ನನಸಾಗಿಸುವ ಯಾವ ದಾರಿಯೂ ತೋಚದಾದಾಗ ದಂತಕತೆಗಳಲ್ಲಿ, ಪುರಾಣಗಳಲ್ಲಿ ಹಾರಾಟದ ಕಾಲ್ಪನಿಕ ಚಿತ್ರಗಳು ಮೂಡಿಬಂದವು. ತಮ್ಮ ಇಚ್ಛಾಶಕ್ತಿಯಿಂದಲೇ ಆಕಾಶದಲ್ಲಿ ಹಾರಾಡುವ ದೇವಾನುದೇವತೆಗಳ ಕತೆಗಳು, "ತ್ರಿಲೋಕಸಂಚಾರಿ" ನಾರದನ ಪಾತ್ರ, ರಾಮಾಯಣದಲ್ಲಿ ಬರುವ ಪುಷ್ಪಕ ವಿಮಾನದ ಉಲ್ಲೇಖ, ಹನುಮಂತನ ಸಾಗರೋಲ್ಲಂಘನ ಹಾಗೂ ರಾಮಾಯಣ - ಮಹಾಭಾರತ ಎರಡರಲ್ಲೂ ಯುದ್ಧಗಳ ಸಂದರ್ಭದಲ್ಲಿ ಕಂಡುಬರುವ "ಹಾರಾಡುವ ರಥ"ಗಳ ಕಲ್ಪನೆಗಳು ಈ ತರ್ಕಕ್ಕೆ ಅತ್ಯುತ್ತಮ ನಿದರ್ಶನಗಳು.
 
ಭಾರತವಷ್ಟೇ ಅಲ್ಲದೆ ಪುರಾತನ ಗ್ರೀಸ್, ಈಜಿಪ್ಟ್, ಫಿನ್‌ಲ್ಯಾಂಡ್ ಹಾಗೂ ಪೆರು ದೇಶಗಳ ಪುರಾಣ-ದಂತಕತೆಗಳಲ್ಲೂ ಹಾರಾಡುವ ಮಾನವರ ಹಾಗೂ ಗೂಳಿ, ಕುದುರೆಗಳಂತಹ ಪ್ರಾಣಿಗಳ ಉಲ್ಲೇಖಗಳಿವೆ.
 
ಪುರಾತನ ಇಂಕಾ ಹಾಗೂ ಆಜ಼್ಟೆಕ್ ನಾಗರಿಕತೆಗಳಲ್ಲೂ ಇಂತಹ ಕತೆಗಳಿವೆ. ಒಂದು ಕಥೆಯ ಪ್ರಕಾರ ಅವರ ಅರಸನೊಬ್ಬ ತನ್ನ ಪತ್ನಿಯ ಜೊತೆಯಲ್ಲಿ ಸೂರ್ಯನವರೆಗೂ ಹಾರಿಹೋಗಿ ಭೂಮಿಗೆ ಕ್ಷೇಮವಾಗಿ ಮರಳಿ ಬಂದಿದ್ದನಂತೆ!
 
ಮಾನವನ ಇತಿಹಾಸದ ಅತ್ಯಂತ ರೋಚಕ ರಹಸ್ಯಗಳಲ್ಲೊಂದು ಎಂದು ಪರಿಗಣಿಸಲ್ಪಟ್ಟಿರುವ ಮುಳುಗಿಹೋದ ಭೂಖಂಡ ಅಟ್ಲಾಂಟಿಸ್‌ನ ಕತೆಯಲ್ಲೂ ವಿಮಾನದ ಬಗೆಗೆ ಉಲ್ಲೇಖವಿದೆ. ಅಟ್ಲಾಂಟಿಸ್‌ನ ಬಹುಬುದ್ಧಿವಂತ ಜನರು ವಿಮಾನದಂತಹ ಯಂತ್ರಗಳನ್ನು ಯಶಸ್ವಿಯಾಗಿ ರೂಪಿಸಿ ಬಳಸುತ್ತಿದ್ದರಂತೆ. ಯಾವುದೇ ಇಂಧನವನ್ನು ಬಳಸದ ಈ ವಿಮಾನಗಳು ಅವರ ಮಾನಸಿಕ ಶಕ್ತಿಯಿಂದಲೇ ಕೆಲಸಮಾಡುತ್ತಿದ್ದವೆಂದು ಅಟ್ಲಾಂಟಿಸ್ ಬಗೆಗೆ ಅಧ್ಯಯನ ನಡೆಸಿರುವ ವಿಜ್ಞಾನಿಗಳು ಹೇಳುತ್ತಾರೆ. ಅಟ್ಲಾಂಟಿಸ್‌ನಲ್ಲಿದ್ದ ವಿಮಾನಗಳು ಇಂದಿನ ಅತ್ಯಾಧುನಿಕ ಯುದ್ಧವಿಮಾನಗಳಂತೆ ದಿಢೀರನೆ ಮೇಲೇರುವ ಶಕ್ತಿಯನ್ನೂ (ವರ್ಟಿಕಲ್ ಟೇಕ್-ಆಫ್) ಹೊಂದಿದ್ದವೆಂದೂ ಹೇಳಲಾಗುತ್ತದೆ.
 
ಮಾನವನ ಇತಿಹಾಸದಲ್ಲಿ ಹಾರಾಟದ ಮೊದಲ ಯಶಸ್ವಿ ಪ್ರಯತ್ನ ನಡೆದದ್ದು ಕ್ರಿಸ್ತಪೂರ್ವ ನಾಲ್ಕನೆಯ ಶತಮಾನದಲ್ಲಿ ಎಂಬ ವಾದವೊಂದಿದೆ. ಇದರ ಪ್ರಕಾರ ಆಗ ಜೀವಿಸಿದ್ದ "ಆರ್ಕಿಟಾಸ್" ಎಂಬಾತ ಮರದ ಪಕ್ಷಿಯೊಂದನ್ನು ನಿರ್ಮಿಸಿ ಹಾರಿಸುವುದರಲ್ಲಿ ಸಫಲನಾಗಿದ್ದನಂತೆ. ಆದರೆ ಈ ವಾದದ ಸತ್ಯಾಸತ್ಯತೆಗಳು ಇನ್ನೂ ಪ್ರಶ್ನಾರ್ಹವಾಗಿಯೇ ಉಳಿದಿವೆ.
 
ಹಾರುವ ಕನಸನ್ನು ಕಂಡು, ತಮ್ಮ ಸಂಶೋಧನೆ - ಪ್ರಯತ್ನಗಳಿಂದ ಅದನ್ನು ನನಸಾಗಿಸಲು ಶ್ರಮಿಸಿದ ಅನೇಕ ಕನಸುಗಾರನ್ನು ನಾವು ಆಧುನಿಕ ಇತಿಹಾಸದಲ್ಲಿ ಕಾಣಬಹುದು. ಇಂತಹ ಕನಸುಗಾರರ ಪಟ್ಟಿಯ ಮೊದಲನೆಯ ಸಾಲಿನಲ್ಲಿ ನಿಲ್ಲುವ ಹೆಸರು ಲಿಯೊನಾರ್ಡೊ ಡ ವಿನ್ಸಿಯದು.
"https://kn.wikipedia.org/wiki/ವಿಮಾನಯಾನದ_ಇತಿಹಾಸ" ಇಂದ ಪಡೆಯಲ್ಪಟ್ಟಿದೆ