ಖಾದ್ರಿ ಶಾಮಣ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭ ನೇ ಸಾಲು:
 
==ಪತ್ರಿಕೋದ್ಯಮ==
[[ಪ್ರಜಾವಾಣಿ]] ದಿನಪತ್ರಿಕೆಯ ಆರಂಭದ ದಿನಗಳಲ್ಲಿ ಸುದ್ದಿ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣ, [[ಬಿ.ಪುಟ್ಟಸ್ವಾಮಯ್ಯ]]ನವರ ರಾಜೀನಾಮೆಯ ನಂತರ ತೆರವಾದ ಸಂಪಾದಕ ಸ್ಥಾನವನ್ನು ತುಂಬಿದರು. ಆದರೆ [[ಸಿ.ಜಿ.ಕೆ.ರೆಡ್ಡಿ]]ಯವರೊಂದಿಗೆ ಕಾರ್ಮಿಕ ಚಳುವಳಿಯಲ್ಲಿ ನೇರವಾಗಿ ಭಾಗಿಯಾದರೆಂಬ ಕಾರಣ, ಶಾಮಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕಾಯಿತು. ಕೆಲಕಾಲ ಉಸ್ತುವಾರಿ ಸಂಪಾದಕರಾಗಿ ಕೆಲಸ ಮಾಡಿದ [[ಟೀಯೆಸ್ಸಾರ್ಟಿ.ಎಸ್.ರಾಮಚಂದ್ರರಾವ್]] ನಂತರದ ದಿನಗಳಲ್ಲಿ [[ಪ್ರಜಾವಾಣಿ]] ಸಂಪಾದಕರಾಗಿ ಅತಿ ದೀರ್ಘ ಕಾಲ ಆ ಪತ್ರಿಕೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು. [[ಪ್ರಜಾವಾಣಿ]]ಯಿಂದ ಹೊರ ನಡೆದ ಶಾಮಣ್ಣ , [[ಎಂ.ಎಸ್.ರಾಮಯ್ಯ]] ಅವರು [[ತಾಯಿನಾಡು]] ಪತ್ರಿಕೆಯ ಮಾಲಿಕತ್ವವನ್ನು ವಹಿಸಿಕೊಂಡ ನಂತರ ಆರಂಭಿಸಿದ [[ಗೋಕುಲ]] ವಾರಪತ್ರಿಕೆಯ ಸಂಪಾದಕರಾಗಿಯೂ ಕೆಲ ವರ್ಷಗಳ ಕಾಲ ಕೆಲಸ ಮಾಡಿದರು.
 
ಹುಬ್ಬಳ್ಳಿಯ [[ಸಂಯುಕ್ತ ಕರ್ನಾಟಕ]] ತನ್ನ ಬೆಂಗಳೂರು ಆವೃತ್ತಿಯನ್ನು ಆರಂಭಿಸಿದ ಸಮಯದಲ್ಲಿ ಸುದ್ದಿ ಸಂಪಾದಕರಾಗಿ ಸೇರ್ಪಡೆಯಾದ ಖಾದ್ರಿ ಶಾಮಣ್ಣ, ಕೆಲ ವರ್ಷಗಳ ನಂತರ [[ಪ್ರಜಾವಾಣಿ]] ಪತ್ರಿಕೆಯ ಸುದ್ದಿ ಸಂಪಾದಕರಾಗಿ ನೇಮಕಗೊಂಡರು.
"https://kn.wikipedia.org/wiki/ಖಾದ್ರಿ_ಶಾಮಣ್ಣ" ಇಂದ ಪಡೆಯಲ್ಪಟ್ಟಿದೆ