"ಚಿ.ಸದಾಶಿವಯ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚು
'''ಚಿ.ಸದಾಶಿವಯ್ಯ''' -([[೧೯೦೮]],[[ಫೆಬ್ರುವರಿ ೨೩- ೧೯೮೨ರ ಜನವರಿ ೧೪]]) [[:ವರ್ಗ:ಕನ್ನಡ ಸಿನೆಮಾ|ಕನ್ನಡ ಚಿತ್ರರಂಗದ]] ಪ್ರಮುಖ ಚಿತ್ರಸಾಹಿತಿಗಳಲ್ಲಿ ಒಬ್ಬರು. ಕನ್ನಡದ ಮತ್ತೊಬ್ಬ ಚಿತ್ರಸಾಹಿತಿ [[ಚಿ.ಉದಯಶಂಕರ್]], ಮತ್ತು ಚಿತ್ರ ನಿರ್ದೇಶಕ [[ಚಿ.ದತ್ತುರಾಜ್]] ಸದಾಶಿವಯ್ಯನವರ ಮಕ್ಕಳು.
 
ಸದಾಶಿವಯ್ಯ ಬಾಲ್ಯದಿಂದಲೇ ಸಾಹಿತ್ಯ ಮತ್ತು ರಂಗಭೂಮಿಯತ್ತ ಆಸಕ್ತಿ ಹೊಂದಿದ್ದರು . ೪೦ರ ದಶಕದಲ್ಲಿ ಇವರು ರಚಿಸಿದ '''ಮಾಂಗಲ್ಯ''' ನಾಟಕ ರಾಜ್ಯದ ಅನೇಕ ಕಡೆ ಯಶಸ್ವಿ ಪ್ರದರ್ಶನ ಕಂಡಿತು. ಬಿ.ಎ.. ಅಯ್ಯಂಗಾರರ ಅಮೆಚೂರ್ ಡ್ರಮಾಟಿಕ್ ಅಸೋಸಿಯೇಷನ್ ಸಂಸ್ಥೆಯ ಒಡನಾಟ ಹೊಂದಿದ್ದರು. ಸದಾಶಿವಯ್ಯ ತೆನಾಲಿ ರಾಮಕೃಷ್ಣ ನಾಟಕದಲ್ಲಿ ಕೃಷ್ಣದೇವರಾಯನ ಪಾತ್ರಕ್ಕೆ ಪ್ರಸಿದ್ಧರಾಗಿದ್ದರು. '''ಕಲಾ ಕುಸುಮ''' ಸ್ವಂತ ನಾಟಕ ಸಂಸ್ಥೆ ಸ್ಥಾಪಿಸಿಕೊಂಡಿದ್ದರು. ಜೀವನ ನಿರ್ವಹಣೆಗಾಗಿ [[ಬೆಂಗಳೂರು|ಬೆಂಗಳೂರಿನ]] ದೇಶೀಯ ವಿದ್ಯಾಶಾಲೆಯಲ್ಲಿ ಅಧ್ಯಾಪಕರಾಗಿದ್ದರು. [[ಗಣಿತ]] ಮತ್ತು [[ಕನ್ನಡ]] ಅಧ್ಯಾಪನದಲ್ಲಿ ಹೆಸರು ಮಾಡಿದ್ದರು. ಶಾಲೆಯಲ್ಲಿಯೂ ಕನ್ನಡ ರಂಗಭೂಮಿಯ ವಾತಾವರಣ ನಿರ್ಮಿಸಿದರು. '''ಕನ್ನಡ ರಂಗಮಂದಿರ '''ಎಂಬ ಹವ್ಯಾಸಿ ತಂಡ ಕಟ್ಟಿದರು. ಮಕ್ಕಳೇ ದೇವರು, ಶಿವಾಜಿಯ ಬಾಲ್ಯ, ಶಿವಮಂಗಳ ಮೊದಲಾದ ಅವರ ನಾಟಕಗಳು ಪ್ರಸಿದ್ಧವಾದವು.
೧,೦೦೭

edits

"https://kn.wikipedia.org/wiki/ವಿಶೇಷ:MobileDiff/315862" ಇಂದ ಪಡೆಯಲ್ಪಟ್ಟಿದೆ