ದಸರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೬ ನೇ ಸಾಲು:
ತೊಣಚಿಕೊಪ್ಪಲು ಮಾರುಕಟ್ಟೆಯಲ್ಲಿ ಸೊಪ್ಪು ವ್ಯಾಪಾರ ಮಾಡುತ್ತಿರುವ ಕುಮಾರ್ ದೃಷ್ಟಿಯಲ್ಲಿ ‘ಅಂದಿನ ದಸರಾ ಎಂದರೆ ಅಂಬಾರಿ, ಮೆರವಣಿಗೆಯಲ್ಲಿ ಬರುವ ಜನಪದ ಕಲಾ ತಂಡಗಳ ಪ್ರದರ್ಶನ, ಆನೆಗಳು ನೆನಪಾಗುತ್ತವೆ. ಆದರೆ, ಈಗಿನ ದಸರಾ ಸರ್ಕಾರವನ್ನು ಅವಲಂಬಿಸಿದೆ. ದಸರಾದಲ್ಲಿ ಏನು ಇರಬೇಕು, ಇರಬಾರದು ಅನ್ನುವುದನ್ನು ಅಧಿಕಾರದಲ್ಲಿ ಇರುವವರು ನಿರ್ಧರಿಸುತ್ತಾರೆ. ಆ ಕಾಲಕ್ಕೆ ಅದೇ ಚೆಂದ, ಈ ಕಾಲಕ್ಕೆ ಇದೇ ಚೆಂದ ಅನಿಸುತ್ತದೆ..’
 
‘ಈಗಿನ ದಸರಾ ಆಚರಣೆ ಬರೀ ಹಣದ ಖರ್ಚು, ನಾಜೂಕು, ಥಳುಕಿನಿಂದ ಕೂಡಿದೆ. ಮಹಾರಾಜರ ಕಾಲದ ದಸರಾ ನೋಡಿದ್ದೇನೆ. ಆಗಿನ ವೈಭವ, ಅಂದ-ಚೆಂದವೇ ಬೇರೆ. ಅದನ್ನು ಈಗ ಎಲ್ಲಿ ನೋಡಲು ಸಾಧ್ಯ? ಈ ಬಾರಿಯ ದಸರಾ ಸಂದರ್ಭದಲ್ಲಿ ಹೋಗುವುದು, ಬೇಡವೋ ಅಂಥ ಯೋಚಿಸುತ್ತಿದ್ದೇನೆ; ಇನ್ನೂ ನಿರ್ಧರಿಸಿಲ್ಲ. ಒಂದು ವೇಳೆ ಹೋದರೆ ಸಿನಿಮಾ ನೋಡಿಕೊಂಡು ಅಲ್ಲಿ ಇಲ್ಲಿ ಸುತ್ತಾಡಿ ಬರುತ್ತೇನೆ. ಯಾವ ಕಾರ್ಯಕ್ರಮಕ್ಕೂ ಹೋಗುವುದಿಲ್ಲ. ಹಿಂದೊಮ್ಮೆ ಜಂಬೂ ಸವಾರಿಯನ್ನು ಸುಮಾರು 30 ಅಡಿಗಳ ಅಂತರದಿಂದ ಚಿಕ್ಕ ಗಡಿಯಾರದ ಸಮೀಪ ನೋಡಿದ್ದೆ..’ ಎನ್ನುತ್ತಾರೆ ನಂಜನಗೂಡು ತಾಲ್ಲೂಕಿನ ಹರತಲೆ ಗ್ರಾಮದ ರೈತ ಗೋಪಾಲಶೆಟ್ಟಿ.
 
ಅದೇ ಊರಿನ ಚಿಕ್ಕಣ್ಣನವರಿಗೆ ದಸರಾ ಎಂದಾಕ್ಷಣ ‘ಜಂಬೂ ಸವಾರಿ ಹಾಗೂ ಅದರ ಜೊತೆ ಬರುವ ಆನೆಗಳು, ಕುದುರೆಗಳು, ಒಂಟೆಗಳು, ಗೊಂಬೆಗಳು ನೆನಪಾಗುತ್ತವೆ’ ‘ಕಳೆದ ಎಂಟು ವರ್ಷಗಳಿಂದ ಹೋಗುತ್ತಲೇ ಇದ್ದೇನೆ. ಅರಮನೆ, ಮೃಗಾಲಯ, ಜಂಬೂ ಸವಾರಿ ನೋಡುತ್ತೇನೆ. ಸಂಗೀತ ಕಾರ್ಯಕ್ರಮಗಳನ್ನು ನೋಡುತ್ತೇನೆ.. ಇವೆಲ್ಲ ಹಳ್ಳಿಯ ನಮಗೊಂದು ಅವಕಾಶ ಎಂಬ ಮೆಚ್ಚುಗೆ.
"https://kn.wikipedia.org/wiki/ದಸರ" ಇಂದ ಪಡೆಯಲ್ಪಟ್ಟಿದೆ