ತಾಳ್ಯದ ಆಂಜನೇಯಸ್ವಾಮಿ ದೇವಸ್ಥಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:1-Shimoga visit (2012-13) HP 156.JPG||thumb|right|300px|'ತಾಳ್ಯದ ಆಂಜನೇಯಸ್ವಾಮಿ ದೇವಸ್ಥಾನ' (೨೦೧೩)]]
[[ಚಿತ್ರ:1-Shimoga visit (2012-13) HP 142.JPG|thumb|right|300px|'ತಾಳ್ಯದ ಆಂಜನೇಯಸ್ವಾಮಿ']]
ತಾಳ್ಯ, ಚಿತ್ರದುರ್ಗ ಜಿಲ್ಲೆಯ ಇತರ ಹಳ್ಳಿಗಳಂತೆ, ಕುಡಿಯುವ ನೀರಿನವ್ಯವಸ್ಥೆಯೂ ಇಲ್ಲದ ಒಂದು ಅತ್ಯಂತ ಚಿಕ್ಕಹಳ್ಳಿಯಾಗದೆ ಇರಲು ಕಾರಣ, ಇಲ್ಲಿಯ ವಿಶಾಲವಾದ ಕೆರೆಯ ಅಸ್ತಿತ್ವದಿಂದ. ಹೋಬಳಿ ಕೇಂದ್ರವಾದ ತಾಳ್ಯದ ಸುತ್ತಮುತ್ತಲೂ ಅನೇಕ ಬೆಟ್ಟ ಗುಡ್ಡಗಳಿಂದ ಆವೃತವಾಗಿದ್ದು ಅರ್ಥಚಂದ್ರಾಕೃತಿಯ ಮಾದರಿಯ ಭೂಭಾಗದಲ್ಲಿ ಗ್ರಾಮದ ಪೂರ್ವದಿಕ್ಕಿನಲ್ಲಿ ಸುಂದರವಾದ ಹಾಗೂ ವಿಶಾಲವಾದ ಕೆರೆಯನ್ನು ಹೊಂದಿದೆ. ಈ ಕೆರೆಯು ೧೮೦ ಎಕರೆ ೨೩ ಗುಂಟೆ ವಿಸ್ತೀರ್ಣವನ್ನು ಹೊಂದಿದ್ದು ಇದರ ಅಂಕು-ಡೊಂಕಾದ ಏರಿ ೭೦೦-೮೦೦ ಮೀಟರ್ ವ್ಯಾಪ್ತಿ ಹೊಂದಿದೆ. ಈ ಕೆರೆ ಬತ್ತಿದ ದಿನಗಳೇ ಅಪರೂಪವೆಂದು ಗ್ರಾಮದ ಜನ ನೆನೆಸಿಕೊಳ್ಳುತ್ತಾರೆ. ಇಂಥ ತಾಣದಲ್ಲಿ ಹನುಮಪ್ಪ ಅಥವಾ ಆಂಜನೇಯಸ್ವಾಮಿಯ ದೇವಸ್ಥಾನವಿದ್ದು ಜಿಲ್ಲೆಯಲ್ಲಿ ಪ್ರಸಿದ್ಧಿಯಾಗಿದೆ. ತಾಳ್ಯದ ತೇರು ಸಾಮಾನ್ಯವಾಗಿ ಎಪ್ರಿಲ್ ತಿಂಗಳಿನಲ್ಲಿ ಅಂದರೆ, ಬೆಂಗಳೂರಿನಲ್ಲಿ ಕರಗವಾಗುವ ಸಮಯದಲ್ಲಿ ನಡೆಯುತ್ತದೆ.ಹೊಳಲ್ಕೆರೆ ಚಿತ್ರದುರ್ಗ ಬಸ್ ಮಾರ್ಗದಲ್ಲಿ ಸಿಗುವ ಶಿವಗಂಗ ಗ್ರಾಮದಿಂದ ೮ ಕಿ.ಮೀ.ದೂರದಲ್ಲಿದೆ. ತಾಳ್ಯ ಗ್ರಾಮದ ಆರಂಭದಲ್ಲೇ ಆಂಜನೇಯ ಸ್ವಾಮಿಯ ಗುಡಿಯಿದೆ.