ಮಾಧ್ಯಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಮಾಧ್ಯಮ '''ಮಾಧ್ಯಮ''' ಅಥವಾ '''ಸಮೂಹ ಮಾಧ್ಯಮ''' ಎಂದು ಸಾಮಾನ್ಯವಾಗಿ ಪತ್ರಿಕೆ, ಬಾನ...
( ಯಾವುದೇ ವ್ಯತ್ಯಾಸವಿಲ್ಲ )

೧೮:೦೬, ೨೪ ಡಿಸೆಂಬರ್ ೨೦೧೨ ನಂತೆ ಪರಿಷ್ಕರಣೆ

ಮಾಧ್ಯಮ ಮಾಧ್ಯಮ ಅಥವಾ ಸಮೂಹ ಮಾಧ್ಯಮ ಎಂದು ಸಾಮಾನ್ಯವಾಗಿ ಪತ್ರಿಕೆ, ಬಾನುಲಿ ಮತ್ತು ದೂರದರ್ಶನಗಳನ್ನು ಸೇರಿಸಿ ಹೇಳುತ್ತಾರೆ. ಸಂಗೀತ, ನೃತ್ಯ, ನಾಟಕ, ಅಂತರ್ಜಾಲ ಕ್ಷೇತ್ರ, ಭಿತ್ತಿ ಚಿತ್ರ-ಪತ್ರ, ಜಾಹೀರಾತು, ಡಂಗುರ, ಸಿನಿಮಾ – ಇವುಗಳನ್ನೂ ಕೂಡ ಮಾಧ್ಯಮವನ್ನಾಗಿ ಪರಿಗಣಿಸಬಹುದು.

ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳಂತೆ, ಪ್ರಜಾಪ್ರಭುತ್ವದ ಒಂದು ಪ್ರಮುಖ ಅಂಗವಾಗಿ ಮಾಧ್ಯಮವು ಕಾರ್ಯನಿರ್ವಹಿಸುತ್ತದೆ. ಅಂತೆಯೇ ಮಾಧ್ಯಮವನ್ನು “ನಾಲ್ಕನೇ ಅಂಗ” (Fourth Estate) ಎಂದೂ ಕರೆಯುತ್ತಾರೆ.

ಮುದ್ರಣ ಮಾಧ್ಯಮ

ಪತ್ರಿಕೆಗಳನ್ನು ಮುದ್ರಣ ಮಾಧ್ಯಮವೆನ್ನಬಹುದು. ಕ್ರಿ.ಶ. ೧೮೪೩ರಲ್ಲಿ ಪ್ರಾರಂಭವಾದ ””ಮಂಗಳೂರು ಸಮಾಚಾರ”” ಕನ್ನಡದ ಮೊದಲ ಪತ್ರಿಕೆ. ಈಗ ಕನ್ನಡ ಮುದ್ರಣ ಮಾಧ್ಯಮ ಅಗಾಧವಾಗಿ ಬೆಳೆದು, ಒಂದು ಒಳ್ಳೆಯ ಮಟ್ಟಕ್ಕೆ ಬಂದು ನಿಂತಿದೆ.

ಸುದ್ದಿ ಪ್ರಧಾನ

ಸುದ್ದಿ-ಸಮಾಚಾರಗಳನ್ನು ತಿಳಿಸುವ ಪತ್ರಿಕೆಗಳನ್ನು ಸುದ್ದಿಪ್ರಧಾನ ಪತ್ರಿಕೆಗಳೆನ್ನಬಹುದು. ಇವುಗಳು ಸಾಮನ್ಯವಾಗಿ ದೈನಿಕ, ಸಾಪ್ತಾಹಿಕ ಮತ್ತು ಪಾಕ್ಷಿಕವಾಗಿ ಪ್ರಕಟಣೆಗೊಳ್ಳುತ್ತವೆ.

ವಿಷಯ ಪ್ರಧಾನ

ಸಿನಿಮಾ, ಕೃಷಿ, ಆಟೋಟ, ಆಧ್ಯಾತ್ಮ – ಹೀಗೆ ವಿವಿಧ ವಿಷಯಪ್ರಧಾನ ಸುದ್ದಿಗಳನ್ನು ಪ್ರಕಟಿಸುವ ಹಲವು ಪತ್ರಿಕೆಗಳು ಸಾಮಾನ್ಯವಾಗಿ ಸಾಪ್ತಾಹಿಕ, ಪಾಕ್ಷಿಕ ಅಥವಾ ಇನ್ನೂ ವಿರಳವಾಗಿ ಪ್ರಕಟಣೆಗೊಳ್ಳುತ್ತವೆ.

ಸಾಹಿತ್ಯ ಪ್ರಧಾನ

ಈ ಪ್ರಕಾರದ ಪತ್ರಿಕೆಗಳನ್ನು ವಿಷಯ ಪ್ರಧಾನ ಗುಂಪಿಗೆ ಸೇರಿಸಬಹುದಾದರೂ, ಕನ್ನಡದಲ್ಲಿ ಸಾಹಿತ್ಯಕ್ಕೆ ಒತ್ತು ಕೊಡುವ ದೊಡ್ಡ ಪತ್ರಿಕೆಗಳ ಗುಂಪೇ ಇದೆ. ಸಾಮಾನ್ಯವಾಗಿ ಸಾಪ್ತಾಹಿಕ ಅಥವಾ ವಿರಳವಾಗಿ ಪ್ರಖಟಣೆಗೊಳ್ಳುತ್ತವೆ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡಿರುವ ಲೇಖಕರೂ ಸೇರಿದಂತೆ ಇವತ್ತಿನ ಅನೇಕ ಪ್ರಮುಖ ಲೇಖಕರು ಈ ಪ್ರಕಾರದ ಪತ್ರಿಕೆಗಳಿಂದಲೇ ಜನಮನ ಗೆದ್ದಿದ್ದು. ಅವುಗಳಲ್ಲಿ ಪ್ರಜಾವಾಣಿ ದೀಪಾವಳಿ ವಿಷೇಶಾಂಕ, ಮಯೂರ, ಕಸ್ತೂರಿ, ತುಷಾರ, ಪ್ರಜಾಮತ ಇತ್ಯಾದಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅತ್ಯಮೂಲ್ಯ ಕೊಡುಗೆಯನ್ನು ನೀಡಿವೆ.

ಬಾನುಲಿ

ಮೈಸೂರಿನಲ್ಲಿ ಕ್ರಿ.ಶ.೧೯೨೩ರಲ್ಲಿ ಭಾರತದ ಮೊದಲ ರೇಡಿಯೋ ಕೇಂದ್ರ ಹಾಗೂ ಕ್ರಿ.ಶ.೧೯೩೫ರಲ್ಲಿ ಕನ್ನಡದ ಮೊದಲ ಬಾನುಲಿ ಅಥವಾ ಆಕಾಶವಾಣಿ ಕೇಂದ್ರವು ಪ್ರಾರಂಭವಾದವು. ಈ ಮಾಧ್ಯಮವು ಸ್ವಾತಂತ್ರ್ಯಾನಂತರದ ಭಾರತದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರವನ್ನು ವಹಿಸಿದೆಯೆನ್ನಬಹುದು. ಸುದ್ದಿ, ಮನರಂಜನೆ, ಜನಪರ ಮಾಹಿತಿಯನ್ನಲ್ಲದೇ ಬಹಳಷ್ಟು ತುರ್ತುಪರಿಸ್ಥಿತಿಗಳಲ್ಲಿ ಮತ್ತು ಅವಘಡಗಳಲ್ಲಿ ಬಾನುಲಿಯು ಸೇವೆ ಸಲ್ಲಿಸಿದೆ. ಕ್ರಿ.ಶ.೧೯೯೦ರ ಈಚೆಗೆ ಖಾಸಗಿ ದೂರದರ್ಶನ ಸೇವೆಗಳ ಪ್ರಸಾರ ಜನಪ್ರಿಯಗೊಳ್ಲುತ್ತ ಬಂದಂತೆ ಈ ಸೇವೆಯು ತನ್ನ ಹೊಳಪನ್ನು ಕಳೆದುಕೊಳ್ಳುತ್ತ ಬಂದಿದೆ. ಇತ್ತೀಚೆಗೆ ಮನರಂಜನೆಗೆ ಮೀಸಲಾಗಿರುವ ಕೆಲವು ಖಾಸಗಿ ಬಾನುಲಿ ಸೇವೆಗಳು ಜನಪ್ರಿಯಗೊಳ್ಳುತ್ತ ಬಂದರೂ ಅವು ಕೇವಲ ವ್ಯಾವಹಾರಿಕವಾಗಿವೆ.

ಕ್ರಿ.ಶ ೧೯೩೫ರಲ್ಲಿಯೇ ಕನ್ನಡ ಆಕಾಶವಾಣಿ ಪ್ರಾರಂಭಗೊಂಡಿದ್ದರೂ ಇಲ್ಲಿಯವರೆಗೂ ಕನ್ನಡದಲ್ಲಿ ಒಂದೇ ಒಂದು short wave ಬಾನುಲಿ ಕೇಂದ್ರವಿಲ್ಲ.

ಹವ್ಯಾಸಿ ರೇಡಿಯೋ

ಕರ್ನಾಟಕದಲ್ಲಿ ಹವ್ಯಾಸಿ ರೇಡಿಯೋ ಉಪಯೋಗಿಸುವ ಸಾಕಷ್ಟು ಆಸಕ್ತರಿದ್ದಾರೆ. ಇದು ತರಬೇತಿ ಹಾಗೂ ಪರವಾನಿಗೆ ಪಡೆದ ಹವ್ಯಾಸಿಗಳು ರೇಡಿಯೋ ತರಂಗಗಳ ಮೂಲಕ ಒಂದು ಜಾಲವನ್ನು ಏರ್ಪಡಿಸಿಕೊಂಡು ಮಾಹಿತಿ ವಿನಿಮಯ ಮಾಡಿಕೊಳ್ಳುವ ಒಂದು ಹವ್ಯಾಸ. ಕೆಲವು ನೈಸರ್ಗಿಕ ವಿಕೋಪಗಳಲ್ಲಿ ಈ ಹವ್ಯಾಸಿಗಳು ಪರಿಹಾರ ತಂಡಗಳಿಗೆ ಉತ್ತಮ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದ್ದಾರೆ.

ದೂರದರ್ಶನ

ಇತರೆ ಮಾಧ್ಯಮಗಳು

"https://kn.wikipedia.org/w/index.php?title=ಮಾಧ್ಯಮ&oldid=303897" ಇಂದ ಪಡೆಯಲ್ಪಟ್ಟಿದೆ