ಅಣು ತಂತ್ರಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೩೦ ನೇ ಸಾಲು:
ಮಂದಕಾರಕವನ್ನಾಗಿ ಆರಿಸಿಕೊಂಡ ವಸ್ತುವು ಇನ್-ಎಲ್ಯಾಸ್ಟಿಕ್ ಸ್ಕ್ಯಾಟರಿಂಗ್ ಮೂಲಕ ನ್ಯೂಟ್ರಾನ್ ಚೈತನ್ಯವನ್ನು ಕಡಿಮೆ ಮಾಡುವುದಾಗಿ ಈ ಮೊದಲೇ ತಿಳಿದುಕೊಂಡಾಗಿದೆ. ಕೆಲವೊಂದು ಸಾರಿ ಕಡಿಮೆ ಚೈತನ್ಯದ ನ್ಯೂಟ್ರಾನ್‍ನ್ನು ಹೊರಬಿಡುವ ಬದಲು, ಮಂದಕಾರಕವು ಆ ನ್ಯೂಟ್ರಾನ್‍ನ್ನು ವಿಕಿರಣಶೀಲ ಗ್ರಹಣ ಮಾಡಿಕೊಂಡುಬಿಡಬಹುದು. ಹೀಗೆ ಗ್ರಹಿಸಲ್ಪಟ್ಟ ನ್ಯೂಟ್ರಾನ್ ಮುಂದಿನ ಸರಣಿಯ ವಿದಳನ ಕ್ರಿಯೆಗೆ ಲಭ್ಯವಿರುವದಿಲ್ಲ. ಸರಣಿ ಪ್ರಕ್ರಿಯಯಲ್ಲಿ, ಪ್ರತಿ ಪೀಳಿಗೆಯ ವಿದಳನದಲ್ಲಿರುವ ನ್ಯೂಟ್ರಾನ್‍ಗಳ ಸಂಖ್ಯೆಯಷ್ಟೇ ಸಂಖ್ಯೆಯ ನ್ಯೂಟ್ರಾನ್‍ಗಳು ಮುಂದಿನ ಪೀಳಿಗೆಯ ವಿದಳನದಲ್ಲೂ ಲಭ್ಯವಿರದಿದ್ದರೆ, ಸರಣಿ ಪೂರ್ಣವಾಗುವದಿಲ್ಲ. ಹಾಗಾಗಿ ಮಂದಕಾರಕದ ಆಯ್ಕೆ ಒಂದು ಅತ್ಯಂತ ಪ್ರಮುಖ ಸವಾಲನ್ನು ಒಡ್ಡು ತ್ತದೆ.
 
ಮಂದಗೊಳಿಸುವಿಕೆ ಹಾಗೂ ಗ್ರಹಣ ಕ್ರಿಯೆಯ ಅನುಪಾತ ಮಂದಕಾರದ ಪ್ರಕಾರದ ಮೇಲೆ ನಿಶ್ಚಿತಗೊಳ್ಳುತ್ತದೆ. ಸಾಮಾನ್ಯವಾಗಿ ನೀರು, ಭಾರಜಲ (ಜಲಜನಕದ ಬೇರೆ ಐಸೋಟೋಪ್‍ನ ಜೊತೆಗೆ ಆಮ್ಲಜನಕ ಸೇರಿ ಉಂಟಾದ ನೀರು) ಮತ್ತು ಗ್ರಾಫೈಟ್‍ನ್ನು ಮಂದಕಾರಕಗಳನ್ನಾಗಿ ಉಪಯೋಗಿಸುತ್ತಾರೆ. ನೀರು ಅತ್ಯಂತ ಸುಲಭವಾಗಿ ಸಿಗುವ ಮತ್ತು ಅತ್ಯುತ್ತಮ ಮಂದಕಾರಕ. ಆದರೆ, ನೀರಿನ ನ್ಯೂಟ್ರಾನ್ ಗ್ರಹಣದ ಅನುಪಾತ ತುಂಬಾ ಜಾಸ್ತಿ. ನೈಸರ್ಗಿಕವಾಗಿ ಸಿಗುವ ಯುರೇನಿಯಮ್‍ ವಿದಳನದಲ್ಲಿ ನ್ಯೂಟ್ರಾನ್‍ಗಳ ಸಾಂದ್ರತೆ (Neutran density) ಕಡಿಮೆಯಾಗಿರುತ್ತದೆ. ಹೀಗಾಗಿ ಸಾಮಾನ್ಯ ಜಲ-ನೈಸರ್ಗಿಕ ಯುರೇನಿಯಮ್‍ಗಳ ರಿಯಾಕ್ಟರುಗಳಲ್ಲಿ ಸರಣಿ ಪ್ರಕ್ರಿಯೆ ಸಾಧ್ಯವಾಗುವದಿಲ್ಲ. ಆಗ ಯುರೇನಿಯಮ್‍ನ ಪುಷ್ಟೀಕರಣವನ್ನು ಮಾಡಬೇಕಾಗುತ್ತದೆ. ಈ ಮೊದಲೆ ತಿಳಿದುಕೊಂಡಂತೆ, ನೈಸರ್ಗಿಕ ಯುರೇನಿಯಮ್‍ನಲ್ಲಿ <sup>235</sup>Uನ ಪ್ರಮಾಣ ಸುಮಾರು ೦.೭೧%. ಕೆಲವು ಉನ್ನತ ತಂತ್ರಜ್ಞಾನದ ನೆರವಿನಿಂದ <sup>235</sup>Uನ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ. ಈ ಕ್ರಿಯೆಗೆ ಪುಷ್ಟೀಕರಣ ಎನ್ನುತ್ತಾರೆ. ಹೀಗೆ ಪುಷ್ಟೀಕರಿಸಿದ ಯುರೇನಿಯಮ್‍ನ್ನು ಸಾಮಾನ್ಯ ಜಲದೊಂದಿಗೆ ಉಪಯೋಗಿಸಿ ರಿಯಾಕ್ಟರುಗಳನ್ನು ನಡೆಸುತ್ತಾರೆ. ಆದರೆ ಪುಷ್ಟೀಕರಣದ ತಂತ್ರಜ್ಞಾನವು ಬಹಳ ಕ್ಲಿಷ್ಟವಾಗಿದ್ದು ಕೆಲವೇ ಕೆಲವು ದೇಶಗಳು ಇದರಲ್ಲಿ ಪರಿಣಿತಿಯನ್ನು ಸಾಧಿಸಿವೆ. ಗ್ರಾಫೈಟ್‍ನ್ನು ಮಂದಕಾರಕವನ್ನಾಗಿ ಬಳಸಿದಾಗಲೂ ಪುಷ್ಟೀಕರಣವನ್ನು ಮಾಡಬೇಕಾಗುತ್ತದೆ.
ಮಂದಗೊಳಿಸುವಿಕೆ ಹಾಗೂ ಗ್ರಹಣ ಕ್ರಿಯೆಯ ಅನುಪಾತ ಮಂದಕಾರದ ಮೇಲೆ ನಿಶ್ಚಿತಗೊಳ್ಳುತ್ತದೆ.
 
ಆದರೆ ನೈಸರ್ಗಿಕ ಯುರೇನಿಯಮ್‍ನ್ನು ಭಾರಜಲದೊಂದಿಗೆ ಬಳಸಿ ರಿಯಾಕ್ಟರುಗಳನ್ನು ನಡೆಸಬಹುದು. ಇಲ್ಲಿ ಕೂಡ ಭಾರಜಲವು ಒಂದು ದುಬಾರಿ ಹಾಗು ಕ್ಲಿಷ್ಟ ತಂತ್ರಜ್ಞಾನ. ಅಲ್ಲದೇ, ಭಾರಜಲದಿಂದಾಗಿ ವಿಕಿರಣದ ಪ್ರಮಾಣವೂ ಸ್ವಲ್ಪಮಟ್ಟಿಗೆ ಹೆಚ್ಚಾಗುತ್ತದೆ.
 
===ಪ್ಲುಟೋನಿಯಮ್===
"https://kn.wikipedia.org/wiki/ಅಣು_ತಂತ್ರಜ್ಞಾನ" ಇಂದ ಪಡೆಯಲ್ಪಟ್ಟಿದೆ