ಅಣು ತಂತ್ರಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೨ ನೇ ಸಾಲು:
 
==ದ್ರವ್ಯ ಮತ್ತು ನ್ಯೂಟ್ರಾನ್ ವಹಿವಾಟು (Neutron Interaction with Matter)==
[[ನ್ಯೂಟ್ರಾನ್]] ಒಂದು [[ದ್ರವ್ಯ]]ಕ್ಕೆ ಢಿಕ್ಕಿ ಹೊಡೆದಾಗ, ನ್ಯೂಟ್ರಾನ್ ಆ ದ್ರವ್ಯದ ಪರಮಾಣುವಿನ ನಾಭಿಯೊಂದಿಗೆ ವಹಿವಾಟು ನಡೆಸುತ್ತದೆ. ನ್ಯೂಟ್ರಾನ್ ಹಾಗೂ ನಾಭಿಗಳಿಗೆ ಅವುಗಳದೇ ಆದ ಒಂದು ಚೈತನ್ಯವಿರುತ್ತದೆ (energy level). ಈ ವಹಿವಾಟುಗಳಿಂದ, ಚೈತನ್ಯದ ಮಟ್ಟ ಏರುಪೇರಾಗಿ ಕೆಲವು ಇತರೆ ಪರಿಣಾಮಗಳು ಉಂಟಾಗುತ್ತವೆ. ಆಣುತಂತ್ರಜ್ಞಾನದಲ್ಲಿ ಈ ಪರಿಣಾಮಗಳನ್ನು ಬಳಸಿಕೊಳ್ಳಲಾಗುತ್ತದೆ. ಈ ವಹಿವಾಟುಗಳನ್ನು ಕೆಳಗಿನಂತೆ ಸ್ಥೂಲವಾಗಿ ವಿವರಿಸಬಹುದು.
===ಎಲ್ಯಾಸ್ಟಿಕ್ ಸ್ಕ್ಯಾಟರಿಂಗ್ (Elastic Scattering)===
ಇದು ಒಂದು ಸರಳ ವಹಿವಾಟು. ಇಲ್ಲಿ ಚೆಂಡು [[ಗೋಡೆ | ಗೋಡೆಗೆ]] ಬಡೆದು ತಿರುಗಿ ಬರುವಂತೆ, ನ್ಯೂಟ್ರಾನ್ ನಾಭಿಗೆ ಬಡೆದು ಪುಟಿದು ಹೋಗುತ್ತದೆ. ಇಲ್ಲಿ ಯಾವುದೇ ವಿಶೇಷ ಪರಿಣಾಮಗಳಾಗುವುದಿಲ್ಲ
===ಇನ್-ಎಲ್ಯಾಸ್ಟಿಕ್ ಸ್ಕ್ಯಾಟರಿಂಗ್ (inelastic Scattering)===
ಈ ವಹಿವಾಟಿನಲ್ಲಿ ಒಂದು ನಿರ್ದಿಷ್ಟ ಚೈತನ್ಯವುಳ್ಳ ನ್ಯೂಟ್ರಾನ್ ನಾಭಿಯನ್ನು ಪ್ರವೇಶಿಸುತ್ತದೆ ಆಗ ಆ ನಾಭಿಯ ಚೈತನ್ಯ ಹೆಚ್ಚಾಗುತ್ತದೆ. ಯಾವುದೇ ಪರಮಾಣುವಿನ ನಾಭಿಯು ತಟಸ್ಥ ಮಟ್ಟಿಗಿಂತಾ ತನ್ನ ಚೈತನ್ಯವನ್ನು ಹೆಚ್ಚಾಗಲು ಬಿಡುವುದಿಲ್ಲ. ಇದು ನಿಸರ್ಗದ ಒಂದು ನಿಯಮ. ಹೀಗಾಗ ಕಡಿಮೆ ಚೈತನ್ಯದ ಒಂದು ನ್ಯೂಟ್ರಾನ್ ನಾಭಿಯಿಂದ ಹೊರಬೀಳುತ್ತದೆ. ಉಳಿದ ಹೆಚ್ಚಿನ ಚೈತನ್ಯ ಗ್ಯಾಮಾ-[[ವಿಕಿರಣ | ವಿಕಿರಣದ]] ಮೂಲಕ ಹೋರಬೀಳುತ್ತದೆ.
ಈ ಪರಿಣಾಮವನ್ನು ನ್ಯೂಟ್ರಾನಿನ ಚೈತನ್ಯವನ್ನು ಕಡಿಮೆ ಮಾಡಲು ಉಪಯೋಗಿಸಿಕೊಳ್ಳುತ್ತಾರೆ. ಕೆಲವೊಂದು ಪರಮಾಣು ರಿಯಾಕ್ಟರ್‍‍ಗಳಲ್ಲಿ ನ್ಯೂಟ್ರಾನಿನ ಚೈತನ್ಯವನ್ನು ಕಡಿಮೆ ಮಾಡುವದು ಅತ್ಯವಶ್ಯ. ಈ ಪ್ರಕ್ರಿಯೆಗೆ ನ್ಯೂಟ್ರಾನ್ ಮಂದಕರಿಸುವಿಕೆ (Neutron moderation)ಎಂದು ಕರೆಯುತ್ತಾರೆ. ಈ ರೀತಿ ಚೈತನ್ಯವನ್ನು ಕಡಿಮೆ ಮಾಡುವ ವಸ್ತುವನ್ನು ಮಂದಕಾರಕ (Moderator) ಎಂದು ಕರೆಯುತ್ತಾರೆ.
 
===ವಿಕಿರಣಶೀಲ ಗ್ರಹಣ (Radiative capture)===
ಈ ವಹಿವಾಟಿನಲ್ಲಿ ನ್ಯೂಟ್ರಾನ್ ನಾಭಿಯನ್ನು ಪ್ರವೇಶಿಸಿ ನಾಭಿಯ ಚೈತನ್ಯವನ್ನು ಹೆಚ್ಚಿಸುತ್ತದೆ. ಹೀಗೆ ಹೆಚ್ಚಾದ ಚೈತನ್ಯವು ಗ್ಯಾಮಾ ವಿಕಿರಣದ ಮೂಲಕ ಹೊರಬೀಳುತ್ತದೆ. ಗ್ರಹಿಸಲ್ಪಟ್ಟ ನ್ಯೂಟ್ರಾನಿನಿಂದಾಗಿ, ಪರಮಾಣು ತೂಕ ಹೆಚ್ಚಾಗುತ್ತದೆ, ಹಾಗಾಗಿ ಆ ನಾಭಿಯು ಆ ಮೂಲವಸ್ತುವಿನ[[ಮೂಲಧಾತು | ಮೂಲಧಾತುವಿನ]] ಒಂದು [[ಐಸೋಟೋಪ್]] ಆಗಿ ಪರಿವರ್ತನೆಗೊಳ್ಳುತ್ತದೆ. ಪರಮಾಣು ರಿಯಾಕ್ಟರಿನ ಕಾರ್ಯನಿರ್ವಹಣೆಯಲ್ಲಿ ಈ ಪ್ರಕ್ರಿಯೆಯು ಅತಿಮುಖ್ಯ ಪಾಲನ್ನು ಹೊಂದಿದೆ. ಅವುಗಳಲ್ಲಿ ನ್ಯೂಟ್ರಾನ್ ಗಳ ಸಂಖ್ಯೆಯನ್ನು ಕಡಿಮೆ ಮಾಡುವದು ಒಂದು ಮುಖ್ಯ ಪಾತ್ರ. ಉಳಿದ ವಿವರಣೆಗಳು ಈ ಲೇಖನದ ಪರಿಮಿತಿಯಲ್ಲಿಲ್ಲ.
 
===ಪರಮಾಣು ರೂಪಾಂತರ (Nuclear Transmutation)===
ಇಲ್ಲಿ ನ್ಯೂಟ್ರಾನ್ ನಾಭಿಯನ್ನು ಸೇರಿದಾಗ ಉಂಟಾಗುವ ಚೈತನ್ಯದ ಏರುಪೇರಿನಿಂದ, ನಾಭಿಯು ಒಂದು [[ಎಲೆಕ್ಟ್ರಾನ್ (electron)]] ಅಥವಾ ಪೊಸಿಟ್ರಾನ್ ನ್ನು (positron) ಹೊರಹಾಕುತ್ತದೆ. ಆವಾಗ ಆ ದ್ರವ್ಯದ ಪರಮಾಣು ಸಂಖ್ಯೆ ಬದಲಾಗುತ್ತದೆ. ಪರಮಾಣು ಸಂಖ್ಯೆ ಬದಲಾದಾಗ ಅದು ಬೇರೆಯೇ ಮೂಲವಸ್ತುವಾಗುತ್ತದೆಮೂಲಧಾತುವಾಗುತ್ತದೆ. ಹೀಗೆ ಒಂದು ಮೂಲವಸ್ತುಮೂಲಧಾತು ಇನ್ನೊಂದಾಗಿ ರೂಪಾಂತರವಾಗುತ್ತದೆ. ಇಂದು ನಾವು ವಿಶ್ವದಲ್ಲಿ ನೋಡುವ ಪ್ರತಿಯೊಂದು ನೈಸರ್ಗಿಕ ಮೂಲವಸ್ತುವೂಮೂಲಧಾತುವೂ ಕೂಡ ಈ ರೀತಿ ರೂಪಾಂತರಗೊಂಡಿದ್ದೆ ಆಗಿದೆ.
ಯುರೇನಿಯಮ್ ಲೋಹವು ಸೈಸರ್ಗಿಕವಾಗಿ ದೊರೆಯುವ ಆವರ್ತಕ ಕೋಷ್ಟಕದ (periodic table) ಕೊನೆಯ ಮೂಲವಸ್ತು. ಯುರೇನಿಯಮ್ ನ ನಂತರ ಬರುವ ಇತರೆ ಮೂಲವಸ್ತುಗಳನ್ನು (ನೆಪ್ಚ್ಯೂನಿಯಮ್, ಪ್ಲುಟೋನಿಯಮ್, ಇತ್ಯಾದಿ) ಪರಮಾಣು ರಿಯಾಕ್ಟರುಗಳಲ್ಲಿ ಹುಟ್ಟಿಸಬಹುದು. ಈ ರೀತಿ ಹುಟ್ಟಿಸಿದ ಪ್ಲುಟೋನಿಯಮ್ ಅನ್ನು ಬೇರೆ ರಿಯಾಕ್ಟರುಗಳಲ್ಲಿ ಇಂಧನವಾಗಿ ಬಳಸುತ್ತಾರೆ. ಈ ರೀತಿ ಇಂಧನವನ್ನು ಹುಟ್ಟಿಸುವ ಕ್ರಿಯೆಗೆ breeding ಎಂಬುದಾಗಿ ಹೇಳುತ್ತಾರೆ.
 
===[[ವಿದಳನ ಕ್ರಿಯೆ]] (Fission) ===
ಇದು ಒಂದು ಅತ್ಯಂತ ಮುಖ್ಯ ವಹಿವಾಟು. ನ್ಯೂಟ್ರಾನ್ ಪ್ರವೇಶದ ನಂತರ, ಹೆಚ್ಚಿದ ಚೈತನ್ಯವನ್ನು ತಾಳದೇ ನಾಭಿಯು ಒಡೆದು ಹೋಗಿ, ಎರಡು ಚಿಕ್ಕ ಪರಮಾಣುಗಳು ಉಂಟಾಗುತ್ತವೆ. ಪರಿಣಾಮವಾಗಿ ಅಗಾಧ ಶಕ್ತಿ ಹಾಗೂ ಕೆಲ ಮುಕ್ತ ನ್ಯೂಟ್ರಾನ್ ಗಳು ಬಿಡುಗದೆಯಾಗುತ್ತವೆ. ಈ ರೀತಿ ಬಿಡುಗಡೆಯಾದ ಶಕ್ತಿಯನ್ನು ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳುತ್ತಾರೆ. ಮುಕ್ತ ನ್ಯೂಟ್ರಾನ್ ಗಳು ಮತ್ತೆ ಮುಂದಿನ ವಿದಳನ ಕ್ರಿಯೆಯನ್ನು ನಡೆಸುತ್ತವೆ. ಇದೊಂದು ಸರಣಿ ಪ್ರಕ್ರಿಯೆ (chain reaction). ಇಂತಹ ಸರಣಿ ಪ್ರಕ್ರಿಯೆಯಲ್ಲಿ ಪ್ರತಿ ಸರಣಿಗೆ ಒಂದು ಪೀಳಿಗೆ ಎಂದು ಕರೆಯಲಾಗುತ್ತದೆ.
 
"https://kn.wikipedia.org/wiki/ಅಣು_ತಂತ್ರಜ್ಞಾನ" ಇಂದ ಪಡೆಯಲ್ಪಟ್ಟಿದೆ