ಅಣು ತಂತ್ರಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯ ನೇ ಸಾಲು:
ಈ ಪರಿಣಾಮವನ್ನು ನ್ಯೂಟ್ರಾನಿನ ಚೈತನ್ಯವನ್ನು ಕಡಿಮೆ ಮಾಡಲು ಉಪಯೋಗಿಸಿಕೊಳ್ಳುತ್ತಾರೆ. ಕೆಲವೊಂದು ಪರಮಾಣು ರಿಯಾಕ್ಟರ್‍‍ಗಳಲ್ಲಿ ನ್ಯೂಟ್ರಾನಿನ ಚೈತನ್ಯವನ್ನು ಕಡಿಮೆ ಮಾಡುವದು ಅತ್ಯವಶ್ಯ. ಈ ಪ್ರಕ್ರಿಯೆಗೆ ನ್ಯೂಟ್ರಾನ್ ಮಂದಕರಿಸುವಿಕೆ (Neutron moderation)ಎಂದು ಕರೆಯುತ್ತಾರೆ. ಈ ರೀತಿ ಚೈತನ್ಯವನ್ನು ಕಡಿಮೆ ಮಾಡುವ ವಸ್ತುವನ್ನು ಮಂದಕಾರಕ (Moderator) ಎಂದು ಕರೆಯುತ್ತಾರೆ.
 
===ವಿಕಿರಣಯುಕ್ತವಿಕಿರಣಶೀಲ ಗ್ರಹಣ (Radiative capture)===
ಈ ವಹಿವಾಟಿನಲ್ಲಿ ನ್ಯೂಟ್ರಾನ್ ನಾಭಿಯನ್ನು ಪ್ರವೇಶಿಸಿ ನಾಭಿಯ ಚೈತನ್ಯವನ್ನು ಹೆಚ್ಚಿಸುತ್ತದೆ. ಹೀಗೆ ಹೆಚ್ಚಾದ ಚೈತನ್ಯವು ಗ್ಯಾಮಾ ವಿಕಿರಣದ ಮೂಲಕ ಹೊರಬೀಳುತ್ತದೆ. ಗ್ರಹಿಸಲ್ಪಟ್ಟ ನ್ಯೂಟ್ರಾನಿನಿಂದಾಗಿ, ಪರಮಾಣು ತೂಕ ಹೆಚ್ಚಾಗುತ್ತದೆ, ಹಾಗಾಗಿ ಆ ನಾಭಿಯು ಆ ಮೂಲವಸ್ತುವಿನ ಒಂದು ಐಸೋಟೋಪ್ ಆಗಿ ಪರಿವರ್ತನೆಗೊಳ್ಳುತ್ತದೆ. ಪರಮಾಣು ರಿಯಾಕ್ಟರಿನ ಕಾರ್ಯನಿರ್ವಹಣೆಯಲ್ಲಿ ಈ ಪ್ರಕ್ರಿಯೆಯು ಅತಿಮುಖ್ಯ ಪಾಲನ್ನು ಹೊಂದಿದೆ. ಅವುಗಳಲ್ಲಿ ನ್ಯೂಟ್ರಾನ್ ಗಳ ಸಂಖ್ಯೆಯನ್ನು ಕಡಿಮೆ ಮಾಡುವದು ಒಂದು ಮುಖ್ಯ ಪಾತ್ರ. ಉಳಿದ ವಿವರಣೆಗಳು ಈ ಲೇಖನದ ಪರಿಮಿತಿಯಲ್ಲಿಲ್ಲ.
 
===ಪರಮಾಣು ರೂಪಾಂತರ (Nuclear Transmutation)===
ಇಲ್ಲಿ ನ್ಯೂಟ್ರಾನ್ ನಾಭಿಯನ್ನು ಸೇರಿದಾಗ ಉಂಟಾಗುವ ಚೈತನ್ಯದ ಏರುಪೇರಿನಿಂದ, ನಾಭಿಯು ಒಂದು ಎಲೆಕ್ಟ್ರಾನ್ (electron) ಅಥವಾ ಪೊಸಿಟ್ರಾನ್ ನ್ನು (positron) ಹೊರಹಾಕುತ್ತದೆ. ಆವಾಗ ಆ ದ್ರವ್ಯದ ಪರಮಾಣು ಸಂಖ್ಯೆ ಬದಲಾಗುತ್ತದೆ. ಪರಮಾಣು ಸಂಖ್ಯೆ ಬದಲಾದಾಗ ಅದು ಬೇರೆಯೇ ಮೂಲವಸ್ತುವಾಗುತ್ತದೆ. ಹೀಗೆ ಒಂದು ಮೂಲವಸ್ತು ಇನ್ನೊಂದಾಗಿ ರೂಪಾಂತರವಾಗುತ್ತದೆ. ಇಂದು ನಾವು ವಿಶ್ವದಲ್ಲಿ ನೋಡುವ ಪ್ರತಿಯೊಂದು ನೈಸರ್ಗಿಕ ಮೂಲವಸ್ತುವೂ ಕೂಡ ಈ ರೀತಿ ರೂಪಾಂತರಗೊಂಡಿದ್ದೆ ಆಗಿದೆ.
"https://kn.wikipedia.org/wiki/ಅಣು_ತಂತ್ರಜ್ಞಾನ" ಇಂದ ಪಡೆಯಲ್ಪಟ್ಟಿದೆ