ಅಣು ತಂತ್ರಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭ ನೇ ಸಾಲು:
===ಇನ್-ಎಲ್ಯಾಸ್ಟಿಕ್ ಸ್ಕ್ಯಾಟರಿಂಗ್ (inelastic Scattering)===
ಈ ವಹಿವಾಟಿನಲ್ಲಿ ಒಂದು ನಿರ್ದಿಷ್ಟ ಚೈತನ್ಯವುಳ್ಳ ನ್ಯೂಟ್ರಾನ್ ನಾಭಿಯನ್ನು ಪ್ರವೇಶಿಸುತ್ತದೆ ಆಗ ಆ ನಾಭಿಯ ಚೈತನ್ಯ ಹೆಚ್ಚಾಗುತ್ತದೆ. ಯಾವುದೇ ಪರಮಾಣುವಿನ ನಾಭಿಯು ತಟಸ್ಥ ಮಟ್ಟಿಗಿಂತಾ ತನ್ನ ಚೈತನ್ಯವನ್ನು ಹೆಚ್ಚಾಗಲು ಬಿಡುವುದಿಲ್ಲ. ಇದು ನಿಸರ್ಗದ ಒಂದು ನಿಯಮ. ಹೀಗಾಗ ಕಡಿಮೆ ಚೈತನ್ಯದ ಒಂದು ನ್ಯೂಟ್ರಾನ್ ನಾಭಿಯಿಂದ ಹೊರಬೀಳುತ್ತದೆ. ಉಳಿದ ಹೆಚ್ಚಿನ ಚೈತನ್ಯ ಗ್ಯಾಮಾ-ವಿಕಿರಣದ ಮೂಲಕ ಹೋರಬೀಳುತ್ತದೆ.
ಈ ಪರಿಣಾಮವನ್ನು ನ್ಯೂಟ್ರಾನಿನ ಚೈತನ್ಯವನ್ನು ಕಡಿಮೆ ಮಾಡಲು ಉಪಯೋಗಿಸಿಕೊಳ್ಳುತ್ತಾರೆ. ಕೆಲವೊಂದು ಪರಮಾಣು ರಿಯಾಕ್ಟರ್‍‍ಗಳಲ್ಲಿ ನ್ಯೂಟ್ರಾನಿನ ಚೈತನ್ಯವನ್ನು ಕಡಿಮೆ ಮಾಡುವದು ಅತ್ಯವಶ್ಯ. ಈ ಪ್ರಕ್ರಿಯೆಗೆ ನ್ಯೂಟ್ರಾನ್ ಮಾಡರೇಷನ್ಮಂದಕರಿಸುವಿಕೆ (Neutron moderation)ಎಂದು ಕರೆಯುತ್ತಾರೆ. ಈ ರೀತಿ ಚೈತನ್ಯವನ್ನು ಕಡಿಮೆ ಮಾಡುವ ವಸ್ತುವನ್ನು ಮಂದಕಾರಕ (Moderator) ಎಂದು ಕರೆಯುತ್ತಾರೆ.
 
===ವಿಕಿರಣಯುಕ್ತ ಗ್ರಹಣ (Radiative capture)===
ಈ ವಹಿವಾಟಿನಲ್ಲಿ ನ್ಯೂಟ್ರಾನ್ ನಾಭಿಯನ್ನು ಪ್ರವೇಶಿಸಿ ನಾಭಿಯ ಚೈತನ್ಯವನ್ನು ಹೆಚ್ಚಿಸುತ್ತದೆ. ಹೀಗೆ ಹೆಚ್ಚಾದ ಚೈತನ್ಯವು ಗ್ಯಾಮಾ ವಿಕಿರಣದ ಮೂಲಕ ಹೊರಬೀಳುತ್ತದೆ. ಗ್ರಹಿಸಲ್ಪಟ್ಟ ನ್ಯೂಟ್ರಾನಿನಿಂದಾಗಿ, ಪರಮಾಣು ತೂಕ ಹೆಚ್ಚಾಗುತ್ತದೆ, ಹಾಗಾಗಿ ಆ ನಾಭಿಯು ಆ ಮೂಲವಸ್ತುವಿನ ಒಂದು ಐಸೋಟೋಪ್ ಆಗಿ ಪರಿವರ್ತನೆಗೊಳ್ಳುತ್ತದೆ. ಪರಮಾಣು ರಿಯಾಕ್ಟರಿನ ಕಾರ್ಯನಿರ್ವಹಣೆಯಲ್ಲಿ ಈ ಪ್ರಕ್ರಿಯೆಯು ಅತಿಮುಖ್ಯ ಪಾಲನ್ನು ಹೊಂದಿದೆ. ಅವುಗಳಲ್ಲಿ ನ್ಯೂಟ್ರಾನ್ ಗಳ ಸಂಖ್ಯೆಯನ್ನು ಕಡಿಮೆ ಮಾಡುವದು ಒಂದು ಮುಖ್ಯ ಪಾತ್ರ. ಉಳಿದ ವಿವರಣೆಗಳು ಈ ಲೇಖನದ ಪರಿಮಿತಿಯಲ್ಲಿಲ್ಲ.
"https://kn.wikipedia.org/wiki/ಅಣು_ತಂತ್ರಜ್ಞಾನ" ಇಂದ ಪಡೆಯಲ್ಪಟ್ಟಿದೆ