ತ್ರಿಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೭ ನೇ ಸಾಲು:
೨೦೧೨ ರ ಹಿಂದೆ ತ್ರಿಪುರಾದಲ್ಲಿ ಧಲಾಯ್, ಉತ್ತರ ತ್ರಿಪುರ, ದಕ್ಷಿಣ ತ್ರಿಪುರ, ಮತ್ತು ಪಶ್ಚಿಮ ತ್ರಿಪುರ ಎಂಬ ನಾಲ್ಕು ಜಿಲ್ಲೆಗಳಿದ್ದವು. ಜನವರಿ, ೨೦೧೨ ರಲ್ಲಿ ಖೊವಾಯ್, ಉನಾಕೋಟಿ, ಸಿಪಾಹಿ ಜಾಲಾ, ಮತ್ತು ಗೋಮತಿ ಎಂಬ ೪ ಹೊಸ ರಾಜ್ಯಗಳು ಅಸ್ತಿತ್ವಕ್ಕೆ ಬಂದವು. ಅಗರ್ತಲಾ ರಾಜಧಾನಿ ಹಾಗೂ ಅತಿದೊಡ್ಡಪಟ್ಟಣ. ಬಧಾರ್ ಘಾಟ್, ಧರ್ಮನಗರ್, ಜೋಗೇಂದ್ರ ನಗರ್, ಕೈಲಾಶ್ ಶಹರ್, ಪ್ರತಾಪ್ ಘಡ್, ಉದಯ್ ಪುರ್, ಅಮರ್ ಪುರ್, ಭೇಲೋನಿಯಾ, ಗಾಂಧಿ ಗ್ರಾಮ್, ಇಂದ್ರ ನಗರ್, ಕುಮಾರ್ ಘಾಟ್, ರಾಣಿರ್ ಬಜಾರ್, ಸೋನಾಮುರಾ, ತೇಲಿಯಾಮುರಾ.
==ಭೂಗೋಳ ಹಾಗೂ ಹವಾಮಾನ==
ಈಶಾನ್ಯ ಭಾರತದ ಅಸ್ಸಾಮ್, ಅರುಣಾಚಲಪ್ರದೇಶ್, ಮಣಿಪುರ್,ಮೇಘಾಲಯ್, ಮಿಜೊರಂ, ನಾಗಾಲ್ಯಂಡ್, ಮತ್ತು ತ್ರಿಪುರ ರಾಜ್ಯಗಳನ್ನು ಜೊತೆಜೊತೆಯಾಗಿ ಸಪ್ತ ಸೋದರಿಯರು ಎನ್ನುತ್ತಾರೆ. ತ್ರಿಪುರದ ಒಟ್ಟು ವಿಸ್ತೀರ್ಣ ೪,೦೫೦.೮೬ ಚದರ ಮೈಲಿಗಳು. ಉತ್ತರದಿಂದ ದಕ್ಷಿಣಕ್ಕೆ ಗರಿಶ್ಠ ದೂರ ೭೦ ಮೈಲಿಗಳು. ಪೂರ್ವದಿಂದ ಪಶ್ಚಿಮಕ್ಕೆ ೧೧೪ ಮೈಲಿಗಳು. ಅಸ್ಸಾಮ್ ನ ಕರೀಮ್ ಗಂಜ್ ಜಿಲ್ಲೆ ಮತ್ತು ಮಿಜೊರಂನ ಐಜ್ವಾಲ್ ಜಿಲ್ಲೆಗಳಿಂದ ತ್ರಿಪುರಾಕ್ಕೆ ಹೋಗಲು ದಾರಿಗಳಿವೆ. ಐದು ಬೆಟ್ಟಗಳ ಸಾಲುಗಳು ರಾಜ್ಯದಲ್ಲಿ ಉತ್ತರದಿಂದ ಕಕ್ಷಿಣಕ್ಕೆ ಸಾಗುತ್ತವೆ. ಈ ಬೆಟ್ಟಗಳ ಹೆಸರು : (ಪಶ್ಚಿಮದಿಂದ ಪೂರ್ವಕ್ಕೆ)-ಬೋರೋಮುರಾ, ಅಶ್ರಾಮುರಾ ಅಥರಾಮುರಾ, ಲೋಂಗ್, ಥರೈ, ಶಾಖಾನ್, ಜಾಮ್ ಪ್ಯು. ಇವುಗಳ ಮಧ್ಯೆ ಅಗರ್ತಲಾ-ಉದಯಪುರ್, ಖೋವಾಇ-ತೆಲಿಯಾಮುರಾ, ಕಮಾಲ್ ಪುರಾ, ಅಂಬಾಸಾ, ಕೈಲಾಸ್ ಶಹರ್-ಮಾನು ಧರ್ಮನಗರ್-ಕಾಂಚನ್ಪುರ್ ಕಣಿವೆಗಳಿವೆ. ಜಾಮ್ ಪ್ಯು ಶ್ರೇಣಿಯಲ್ಲಿರುವ ೯೩೯ ಮೀಟರ್ (೩,೦೮೧ ಅಡಿ) ಎತ್ತರದ 'ಬೆಟ್ಲಿಂಗ್ ಶಿಬ್' ತ್ರಿಪುರದ ಅತಿ ಎತ್ತರದ ಬೆಟ್ಟ. ರಾಜ್ಯದ ತುಂಬಾ ಈಶ್ರೇಣಿಗೆ ಸೇರದ ಒಂಟಿಯಾಗಿರುವ ಹಲವಾರು ಬೆಟ್ಟಗಳೂ ಇವೆ. ಇವುಗಳಿಗೆ 'ತಿಲ್ಲಾ ' ಎಂದು ಹೆಸರು. ಕಣಿವೆಗಳ ನಡುವೆ ಇರುವ ಸಮೃದ್ಧ ಕೃಷಿ ಭೂಮಿಗೆ 'ಲುಂಗಾ' ಎಂಬ ಹೆಸರಿದೆ. ಕಣಿವೆಗಳ ನಡುವೆ ಹರಿಯುವ ಹಲವಾರು ನದಿಗಳು ಬಾಂಗ್ಲಾದೇಶಕ್ಕೆ ಸಾಗುತ್ತವೆ. ಗುಮ್ತಿ ಪಶ್ಚಿಮಕ್ಕೆ ಹರಿದರೆ, ಕೊವ್ರಾ, ಧಾಲೃ, ಮಾನು, ಜುರಿ, ಲಾಂಗಾಯುಲಾಂಗಾಯಿ, ಉತ್ತರಕ್ಕೆ ಹರಿಯುತ್ತವೆ. ಮುಹುರಿ, ಮತ್ತು ಮತ್ತಿ ಫೆನಿ, ನೈಋತ್ಯ ದಿಕ್ಕಿಗೆ ಹರಿಯುತ್ತವೆ.
ಚಳಿಗಾಲ : ಡಿಸೆಂಬರ್ ನಿಂದ ಫೆಬ್ರವರಿ ತಿಂಗಳ ನಡುವೆ.
ಬೇಸಗೆ : ಮಾರ್ಚ್-ಏಪ್ರಿಲ್.
ಮಳೆಗಾಲ : ಮೇ-ಸೆಪ್ಟೆಂಬರ್, ಮಾನ್ಸೂನ್ ಕಾಲದಲ್ಲಿ ನೈಋತ್ಯ ಮಾನ್ಸೂನ್ ಭಾರಿ ಮಳೆ ಸುರಿಸುತ್ತದೆ. ವರ್ಷಕ್ಕೆ ಸರಾಸರಿ ೨,೧೯೪ ಮಿ.ಮೀ. ಮಳೆ ಬೀಳುತ್ತದೆ. ಆಗ ರಾಜ್ಯದುದ್ದಕ್ಕೂ ನೆರೆಯ ಹಾವಳಿ ಆಗುವುದು ಸರ್ವೇ ಸಾಮಾನ್ಯ. ಚಳಿಗಾಲದಲ್ಲಿ ೧೩ ಡಿಗ್ರಿ ಸೆಲ್ಸಿಯಸ್ ಇದ್ದರೆ, ಬೇಸಿಗೆಯಲ್ಲಿ ೩೬ ಡಿಗ್ರಿ ಉಷ್ಣತೆ ಇರುತ್ತದೆ.
ಅಕ್ಟೋಬರ್ ನವೆಂಬರ್ ನಡುವೆ ತೇವಭರಿತ ಹವಾಮಾನ ಇರುತ್ತದೆ.
 
==ತ್ರಿಪುರ ಸುಂದರಿ ದೇವಾಲಯ ==
ಉದಯಪುರದಲ್ಲಿರುವ 'ತ್ರಿಪುರಸುಂದರಿ ದೇವಾಲಯ' ಭಾರತೀಯ ೫೧ ಶಕ್ತಿಪೀಠಗಳಲ್ಲೊಂದು. ಪುರಾಣಗಳ ಪ್ರಕಾರ, ದಕ್ಷನ ಯಜ್ಞಕುಂಡದಲ್ಲಿ ದಹಿಸಿಹೋದ ಸತಿಯ ಕಳೇಬರವನ್ನು ಎತ್ತಿಕೊಂಡು ಮಹಾದೇವನು ತಾಂಡವ ನೃತ್ಯವನ್ನು ಆರಂಭಿಸಿದ್ದ ಝಳದಲ್ಲಿ ಮೂರು ಲೋಕಗಳೂ ಸುಟ್ಟುಹೋಗುವ ಸ್ಥಿತಿಯಲ್ಲಿದ್ದವು. ಶಿವನ ಆಕ್ರೋಶಕ್ಕೆ ತಡೆಹಾಕಲು ಮಹಾವಿಷ್ಣು ತನ್ನ ಸುದರ್ಶನ ಚಕ್ರದಿಂದ ಸತಿಯ ಕಳೇಬರವನ್ನು ೫೧ ತುಂಡುಗಳಾಗಿ ಕತ್ತರಿಸಿದ ಈ ತುಂಡುಗಳುಕೆಳಗೆ ಬಿದ್ದ ಸ್ಥಳಗಳೇ ಶಕ್ತಿಪೀಠಗಳೆಂದು ಹೆಸರಾದವು. ಹಾಗೆ ಬಿದ್ದ ಸತೀದೇವಿಯ ಬಲಗಾಲು, [[ಮಾತಾಬಾರಿ]] ಎಂದು ಹೆಸರುಪಡೆಯಿತು. ದಕ್ಷಿಣ ತ್ರಿಪುರಾ ಜಿಲ್ಲೆಯ ಉದಯಪುರದಲ್ಲಿರುವ ಈ ಕ್ಷೇತ್ರದಲ್ಲಿ ಮಾತಾ ತ್ರಿಪುರಸುಂದರಿ ದೇವಾಲಯ ನಿರ್ಮಾಣವಾಗಿದೆ. ಉದಯಪುರ ಜಿಲ್ಲಾ ಕೇಂದ್ರ. ಪ್ರತಿವರ್ಷವೂ ದೀಪಾವಳಿ ಹಬ್ಬದ ದಿನದಂದು, ಇಲ್ಲಿನ ಜಾತ್ರೆ(ಮೇಳಾ) ಯಲ್ಲಿ ಲಕ್ಷಾಂತರ ಯಾತ್ರಾರ್ಥಿಗಳು ಬಂದು ಸೇರುತ್ತಾರೆ.೧೫೧೦ ರಲ್ಲಿ ಮಹಾರಾಜ ಧನ್ಯಮಾಣಿಕ್ಯ ಈ ದೇವಾಲಯವನ್ನು ಕಟ್ಟಿಸಿದನು. ಬಂಗಾಲಿ ಶೈಲಿಯಲ್ಲಿ ಕಟ್ಟಿರುವ ಈ ದೇವಸ್ಥಾನ ಚೌಕಾಕೃತಿಯ ಗರ್ಭಗುಡಿಯನ್ನು ಹೊಂದಿದೆ. ಅದರ ಮೇಲಿನ ಗೋಪುರ ಶಂಕುವಿನ ಆಕಾರವಿದೆ. ತ್ರಿಪುರಸುಂದರಿಯ ೨ ವಿಗ್ರಹಗಳಿವೆ. ಒಂದು ವಿಗ್ರಹಕ್ಕೆ 'ಛೋಟಿಮಾ' ಎಂದೂ ಮತ್ತೊಂದಕ್ಕೆ 'ತ್ರಿಪುರಸುಂದರೀದೇವಿ' ಎಂದೂ ಹೆಸರಿದೆ. ತ್ರಿಪುರಾದ ರಾಜರು, ಹಿಂದೆ ಮೃಗಯಾ ವಿಹಾರ, ಮತ್ತು ಯುದ್ಧಗಳ ವೇಳೆಯಲ್ಲಿ 'ಛೋಟಿಮಾ' ಮೂರ್ತಿಯನ್ನು ತಮ್ಮೊಂದಿಗೆ ಒಯ್ಯುತ್ತಿದ್ದರು. ದೇವಾಲಯದ ವಾಸ್ತು ರಚನೆ ಆಮೆಯಾಕಾರವಾಗಿರುವುದರಿಂದ ಇದಕ್ಕೆ 'ಕೂರ್ಮಪೀಠ'ವೆಂದೂ ಕರೆಯುತ್ತಾರೆ. ಕೆಂಪು-ಕಪ್ಪು ಕಾಷ್ಠಿ ಶಿಲೆಯ ಮಹಾಕಾಳೀ ವಿಗ್ರಹವನ್ನು 'ಸೋರೋಶೋ' ಎಂಬ ರೂಪದಲ್ಲಿ ಅರ್ಚಿಸಲಾಗುತ್ತದೆ. 'ಕಲ್ಯಾಣ ಸಾಗರ' ಎಂಬ ಸುಪ್ರಸಿದ್ಧ ಕೆರೆ ದೇವಾಲಯದ ಪೂರ್ವ ಭಾಗದಲ್ಲಿದೆ. ಈ ಕೆರೆಯಲ್ಲಿ ಬೃಹದ್ ಗಾತ್ರ ಮೀನುಗಳು ಹಾಗೂ ಆಮೆಗಳನ್ನು ನೋಡಬಹುದು. ಇಲ್ಲಿ ಮೀನುಗಾರಿಕೆಗೆ ಅನುಮತಿ ಇಲ್ಲ. ಭಕ್ತರು ಮಂಡಕ್ಕಿ ಮತ್ತು ಬಿಸ್ಕತ್ ಚೂರುಗಳನ್ನು ಎಸೆಯುತ್ತಾರೆ. ತ್ರಿಪುರ ಸುಂದರಿ ದೇವಾಲಯ, ಉದಯಪುರದಿಂದ ೩ ಕಿ.ಮೀ ಮತ್ತು ಅಗರ್ತಲಾದಿಂದ ೫೫ ಕಿ.ಮೀ. ದೂರದಲ್ಲಿದೆ. ಅಲ್ಲಿಗೆ ತಲುಪಲು, ಬಸ್ಸು ಮತ್ತು ರಿಕ್ಷಾಗಳು ಸಿಕ್ಕುತ್ತವೆ. ಉದಯಪುರದಲ್ಲಿ 'ಭುವನೇಶ್ವರಿ ದೇವಸ್ಥಾನ', 'ಗುಣಬಾಟಿ ದೇವಾಲಯ',ಹಾಗೂ ಸುಂದರ ಕೆರೆಗಳು ಇವೆ.
"https://kn.wikipedia.org/wiki/ತ್ರಿಪುರ" ಇಂದ ಪಡೆಯಲ್ಪಟ್ಟಿದೆ