ತ್ರಿಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(~~~~)
No edit summary
೨೭ ನೇ ಸಾಲು:
೨೦೧೨ ರ ಹಿಂದೆ ತ್ರಿಪುರಾದಲ್ಲಿ ಧಲಾಯ್, ಉತ್ತರ ತ್ರಿಪುರ, ದಕ್ಷಿಣ ತ್ರಿಪುರ, ಮತ್ತು ಪಶ್ಚಿಮ ತ್ರಿಪುರ ಎಂಬ ನಾಲ್ಕು ಜಿಲ್ಲೆಗಳಿದ್ದವು. ಜನವರಿ, ೨೦೧೨ ರಲ್ಲಿ ಖೊವಾಯ್, ಉನಾಕೋಟಿ, ಸಿಪಾಹಿ ಜಾಲಾ, ಮತ್ತು ಗೋಮತಿ ಎಂಬ ೪ ಹೊಸ ರಾಜ್ಯಗಳು ಅಸ್ತಿತ್ವಕ್ಕೆ ಬಂದವು. ಅಗರ್ತಲಾ ರಾಜಧಾನಿ ಹಾಗೂ ಅತಿದೊಡ್ಡಪಟ್ಟಣ. ಬಧಾರ್ ಘಾಟ್, ಧರ್ಮನಗರ್, ಜೋಗೇಂದ್ರ ನಗರ್, ಕೈಲಾಶ್ ಶಹರ್, ಪ್ರತಾಪ್ ಘಡ್, ಉದಯ್ ಪುರ್, ಅಮರ್ ಪುರ್, ಬೇಲೋನಿಯಾ, ಗಾಂಧಿ ಗ್ರಾಮ್, ಇಂದ್ರ ನಗರ್, ಕುಮಾರ್ ಘಾಟ್, ರಾಣಿರ್ ಬಜಾರ್, ಸೋನಾಮುರಾ, ತೇಲಿಯಾಮುರಾ.
==ತ್ರಿಪುರ ಸುಂದರಿ ದೇವಾಲಯ ==
ಉದಯಪುರದಲ್ಲಿರುವ 'ತ್ರಿಪುರಸುಂದರಿ ದೇವಾಲಯ' ಭಾರತೀಯ ೫೧ ಶಕ್ತಿಪೀಠಗಳಲ್ಲೊಂದು. ಪುರಾಣಗಳ ಪ್ರಕಾರ, ದಕ್ಷನ ಯಜ್ಞಕುಂಡದಲ್ಲಿ ದಹಿಸಿಹೋದ ಸತಿಯ ಕಳೇಬರವನ್ನು ಎತ್ತಿಕೊಂಡು ಮಹಾದೇವನು ತಾಂಡವ ನೃತ್ಯವನ್ನು ಆರಂಭಿಸಿದ್ದ ಝಳದಲ್ಲಿ ಮೂರು ಲೋಕಗಳೂ ಸುಟ್ಟುಹೋಗುವ ಸ್ಥಿತಿಯಲ್ಲಿದ್ದವು. ಶಿವನ ಆಕ್ರೋಶಕ್ಕೆ ತಡೆಹಾಕಲು ಮಹಾವಿಷ್ಣು ತನ್ನ ಸುದರ್ಶನ ಚಕ್ರದಿಂದ ಸತಿಯ ಕಳೇಬರವನ್ನು ೫೧ ತುಂಡುಗಳಾಗಿ ಕತ್ತರಿಸಿದ ಈ ತುಂಡುಗಳುಕೆಳಗೆ ಬಿದ್ದ ಸ್ಥಳಗಳೇ ಶಕ್ತಿಪೀಠಗಳೆಂದು ಹೆಸರಾದವು. ಹಾಗೆ ಬಿದ್ದ ಸತೀದೇವಿಯ ಬಲಗಾಲು, [[ಮಾತಾಬಾರಿ]] ಎಂದು ಹೆಸರುಪಡೆಯಿತು. ದಕ್ಷಿಣ ತ್ರಿಪುರಾ ಜಿಲ್ಲೆಯಲ್ಲಿ ಜಿಲ್ಲೆಯ ಉದಯಪುರದಲ್ಲಿರುವ ಈ ಕ್ಷೇತ್ರದಲ್ಲಿ ಮಾತಾ ತ್ರಿಪುರಸುಂದರಿ ದೇವಾಲಯ ನಿರ್ಮಾಣವಾಗಿದೆ. ಉದಯಪುರ ಜಿಲ್ಲಾ ಕೇಂದ್ರ. ಪ್ರತಿವರ್ಷವೂ ದೀಪಾವಳಿ ಹಬ್ಬದ ದಿನದಂದು, ಇಲ್ಲಿನ ಜಾತ್ರೆ(ಮೇಳಾ) ಯಲ್ಲಿ ಲಕ್ಷಾಂತರ ಯಾತ್ರಾರ್ಥಿಗಳು ಬಂದು ಸೇರುತ್ತಾರೆ.೧೫೧೦ ರಲ್ಲಿ ಮಹಾರಾಜ ಧನ್ಯಮಾಣಿಕ್ಯ ಈ ದೇವಾಲಯವನ್ನು ಕಟ್ಟಿಸಿದನು. ಬಂಗಾಲಿ ಶೈಲಿಯಲ್ಲಿ ಕಟ್ಟಿರುವ ಈ ದೆವಸ್ಥಾನ ಚೌಕಾಕೃತಿಯ ಗರ್ಭಗುಡಿಯನ್ನು ಹೊಂದಿದೆ. ಅದರ ಮೇಲಿನ ಗೋಪುರ ಶಂಕುವಿನ ಆಕಾರವಿದೆ. ತ್ರಿಪುರಸುಂದರಿಯ ೨ ವಿಗ್ರಹಗಳಿವೆ. ಒಂದು ವಿಗ್ರಹಕ್ಕೆ 'ಛೋಟಿಮಾ' ಎಂದೂ ಮತ್ತೊಂದಕ್ಕೆ 'ತ್ರಿಪುರಸುಂದರೀದೇವಿ' ಎಂದೂ ಹೆಸರಿದೆ. ತ್ರಿಪುರಾದ ರಾಜರು, ಹಿಂದೆ ಮೃಗಯಾ ವಿಹಾರ, ಮತ್ತು ಯುದ್ಧಗಳ ವೇಳೆಯಲ್ಲಿ 'ಛೋಟಿಮಾ' ಮೂರ್ತಿಯನ್ನು ತಮ್ಮೊಂದಿಗೆ ಒಯ್ಯುತ್ತಿದ್ದರು. ದೇವಾಲಯದ ವಾಸ್ತು ರಚನೆ ಆಮೆಯಾಕಾರವಾಗಿರುವುದರಿಂದ ಇದಕ್ಕೆ 'ಕೂರ್ಮಪೀಠ'ವೆಂದೂ ಕರೆಯುತ್ತಾರೆ. ಕೆಂಪು-ಕಪ್ಪು ಕಾಷ್ಠಿ ಶಿಲೆಯ ಮಹಾಕಾಳೀ ವಿಗ್ರಹವನ್ನು 'ಸೋರೋಶೋ' ಎಂಬ ರೂಪದಲ್ಲಿ ಅರ್ಚಿಸಲಾಗುತ್ತದೆ. 'ಕಲ್ಯಾಣ ಸಾಗರ' ಎಂಬ ಸುಪ್ರಸಿದ್ಧ ಕೆರೆ ದೇವಾಲಯದ ಪೂರ್ವ ಭಾಗದಲ್ಲಿದೆ. ಈ ಕೆರೆಯಲ್ಲಿ ಬೃಹದ್ ಗಾತ್ರ ಮೀನುಗಳು ಹಾಗೂ ಆಮೆಗಳನ್ನು ನೋಡಬಹುದು. ಇಲ್ಲಿ ಮೀನುಗಾರಿಕೆಗೆ ಅನುಮತಿ ಇಲ್ಲ. ಭಕ್ತರು ಮಂಡಕ್ಕಿ ಮತ್ತು ಬಿಸ್ಕತ್ ಚೂರುಗಳನ್ನು ಎಸೆಯುತ್ತಾರೆ. ತ್ರಿಪುರ ಸುಂದರಿ ದೇವಾಲಯ, ಉದಯಪುರದಿಂದ ೩ ಕಿ.ಮೀ ಮತ್ತು ಅಗರ್ತಲಾದಿಂದ ೫೫ ಕಿ.ಮೀ. ದೂರದಲ್ಲಿದೆ. ಅಲ್ಲಿಗೆ ತಲುಪಲು, ಬಸ್ಸು ಮತ್ತು ರಿಕ್ಷಾಗಳು ಸಿಕ್ಕುತ್ತವೆ. ಉದಯಪುರದಲ್ಲಿ 'ಭುವನೇಶ್ವರಿ ದೇವಸ್ಥಾನ', 'ಗುಣಬಾಟಿ ದೇವಾಲಯ',ಹಾಗೂ ಸುಂದರ ಕೆರೆಗಳು ಇವೆ.
ಉದಯಪುರದಿಂದ ೩ ಕಿ.ಮೀ ಮತ್ತು ಅಗರ್ತಲಾದಿಂದ ೫೫ ಕಿ.ಮೀ. ಬಸ್ಸು ಮತ್ತು ರಿಕ್ಷಾಗಳು ಸಿಕ್ಕುತ್ತವೆ. ಉದಯಪುರದಲ್ಲಿ 'ಭುವನೇಶ್ವರಿ ದೇವಸ್ಥಾನ', 'ಗುಣಬಾಟಿ ದೇವಾಲಯ',ಹಾಗೂ ಸುಂದರ ಕೆರೆಗಳು ಇವೆ.
 
 
"https://kn.wikipedia.org/wiki/ತ್ರಿಪುರ" ಇಂದ ಪಡೆಯಲ್ಪಟ್ಟಿದೆ