ಐ. ಕೆ. ಗುಜ್ರಾಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧ ನೇ ಸಾಲು:
'''ಇಂದ್ರಕುಮಾರ ಗುಜ್ರಾಲ'''ರವರು [[ಭಾರತ]]ದ ಹನ್ನೆರಡನೆಯ ಪ್ರಧಾನಿಯಾಗಿ ಎಪ್ರಿಲ್ ೧೯೯೭ರಿಂದ ಮಾರ್ ೧೯೯೮ರವರೆಗೆ ಸೇವೆಸಲ್ಲಿಸಿದ ಒಬ್ಬ ರಾಜಕಾರಣಿ. [[ಹೆಚ್.ಡಿ.ದೇವೇಗೌಡ]]ರನಂತರ [[ರಾಜ್ಯಸಭೆ]]ಯಿಂದ ನೇಮಕಗೊಂಡ ಎರಡನೇ ಪ್ರಧಾನಿಯಾಗಿದ್ದಾರೆ.
 
ಗುಜ್ರಾಲರವರು ಡಿಸೆಂಬರ್ ೪, ೧೯೧೯ರಂದು [[ಝೇಲಂ]]ನಲ್ಲಿ, ಅವತಾರ್ ನಾರಾಯಣ್ ಹಾಗೂ ಪುಷ್ಪಾ ಗುಜ್ರಾಲರಿಗೆ ಜನಿಸಿದರು. ಅವರ ಪ್ರಮಖ ವಿದ್ಯಾಭ್ಯಾಸವು [[ಲಾಹೋರ್]] ನಲ್ಲಿ‍ನಲ್ಲಿ ನಡೆಯಿತು. [[ಭಾರತದ ಸ್ವಾತಂತ್ರ್ಯ ಸಂಗ್ರಾಮ]]ದಲ್ಲಿ ಭಾಗವಹಿಸಿದ್ದ ಅವರು ೧೯೪೨ರ [[ಭಾರತ ಬಿಟ್ಟು ತೊಲಗಿ ಚಳುವಳಿ]]ಯಲ್ಲಿ ಜೈಲುವಾಸವನ್ನು ಕಂಡರು. ವಿದ್ಯಾರ್ಥಿ ಜೀವನದಲ್ಲಿ ಅವರು [[ಭಾರತೀಯ ಕಮ್ಯುನಿಷ್ಟ್ ಪಕ್ಷದ]] ಸದಸ್ಯರಾದರು. ಅವರಿಗೆ ಇಬ್ಬರುಗಂಡುಮಕ್ಕಳು ಹಾಗೂ ಮೂವರು ಮೊಮ್ಮಕ್ಕಳಿದ್ದಾರೆ. ಅವರ ಪತ್ನಿ ೧೧ನೇ ಜುಲೈ ೨೦೧೧ರಂದು ಕಾಲವಾದರು
 
೧೯೬೪ರಲ್ಲಿ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಪಕ್ಷವನ್ನು ಸೇರುವ ಪೂರ್ವದಲ್ಲಿ ಗುಜ್ರಾಲರು ೧೯೫೮ರಲ್ಲಿ [[ನವದೆಹಲಿ]]ಯ [[ಪೌರ ಸಮಿತಿ]]ಯ ಉಪಾಧ್ಯಕ್ಷರಾದರು. ಅವರು ೧೯೬೪ರಲ್ಲಿ ರಾಜ್ಯಸಭಾ ಸದಸ್ಯರಾದರು. ೧೯೭೫ರ [[ತುರ್ತು ಪರಿಸ್ಥಿತಿ]]ಯಲ್ಲಿ ಸೂಚನಾ ಮತ್ತು ಪ್ರಸಾರಣ ಮಂತ್ರಿಯಾಗಿದ್ದರು. ಆ ಸಮಯದಲ್ಲಿ [[ದೂರದರ್ಶನ]]ದ ಮೇಲ್ಚಿಚಾರಣೆಯನ್ನಲ್ಲದೇ, [[ಮಾಧ್ಯಮ]] ನಿಯಂತ್ರಕರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರು [[ಜಲಸಂಪನ್ಮೂಲ]] [[ಖಾತೆ]]ಯನ್ನೂ ಕೂಡ ಸಂಭಾಳಿಸಿದ್ದಾರೆ. ನಂತರ [[ಇಂದಿರಾ ಗಾಂಧಿ]]ಯವರಿಂದ [[ಸೊವಿಯೆಟ್ ಒಕ್ಕೂಟ]]ದ [[ರಾಯಭಾರಿ]]ಯಾಗಿ ನೇಮಿಸಲ್ಪಟ್ಟು, [[ಮೊರಾರ್ಜಿ ದೇಸಾಯಿ]] ಹಾಗೂ [[ಚೌಧುರಿ ಚರಣ್ ಸಿಂಗ್]]‍ರ ಅಧಿಕಾರಾವಧಿಯಲ್ಲಿಯೂ ಕೂಡ ಮುಂದುವರೆದರು.
"https://kn.wikipedia.org/wiki/ಐ._ಕೆ._ಗುಜ್ರಾಲ್" ಇಂದ ಪಡೆಯಲ್ಪಟ್ಟಿದೆ