ಇಂದ್ರಕುಮಾರ್ ಗುಜ್ರಾಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪೩ ನೇ ಸಾಲು:
ಒಬ್ಬ ಪ್ರತಿಭಾನ್ವಿತ ವ್ಯಕ್ತಿ. ಅತ್ಯುತ್ತಮ ಓದುಗ, ಬರಹಗಾರ, ವಿದೇಶಾಂಗ ವ್ಯವಹಾರ ಖಾತೆಯ ಸಚಿವರಾಗಿ ಭಾರತವನ್ನು ವಿಶ್ವಮಟ್ಟದಲ್ಲಿ ಸಮರ್ಥವಾಗಿ ಗುರುತಿಸುವಂತೆ ನಡೆದುಕೊಂಡರು. ಅಪ್ಪಟ ದೇಶಪ್ರೇಮಿ, ಮಾಸ್ಕೋದಲ್ಲಿ ಪ್ರತ್ಯೇಕವಾದ ವಿದೇಶಾಂಗ ವ್ಯವಹಾರಗಳ ಸಚಿವರ ಅಗತ್ಯವಿರಲಿಲ್ಲ. ಗುಜ್ರಾಲ್ ನೆಹರೂ ತತ್ವಗಳ ಆಧಾರದಮೇಲೆ ಅಪಾರ ವಿಶ್ವಾಸ ಪ್ರೀತಿ ಇಟ್ಟುಕೊಂಡಿದ್ದರು. ಸಮ್ಮಿಶ್ರ ಸರ್ಕಾರವನ್ನು ನಿಭಾಯಿಸುವ ಕ್ಲಿಷ್ಟ ಘಟ್ಟದಲ್ಲೂ ಅವರು ಹಲವಾರು ಸಂಕೀರ್ಣ ವಿಚಾರಗಳನ್ನೂ ಬಹಳ ಯಶಸ್ವಿಯಾಗಿ ನಿಭಾಯಿಸಿದ್ದರು. ಗುಜ್ರಾಲ್ ತಮ್ಮ ಬಿಡುವಿನ ಸಮಯದಲ್ಲಿ ಉರ್ದು ಕವನಗಳನ್ನು ಸಹ ಬರೆಯುತ್ತಿದ್ದರು.
==ರಾಜಕೀಯ ಜೀವನ==
೫೦ ರ ದಶಕದಲ್ಲಿ 'ಎನ್.ಡಿ.ಎಂಸಿಯ ಉಪಾಧ್ಯಕ್ಷರಾಗಿ ಅಧಿಕಾರ ಪರ್ವ' ಆರಂಭಿಸಿದರು. ಶ್ರೀಮತಿ. ಇಂದಿರಾ ಗಾಂಧಿಯವರ ಸರಕಾರದಲ್ಲಿ ಕೇಂದ್ರ ಸಚಿವರಾಗಿದ್ದರು. ೧೯೮೦ ರಲ್ಲಿ ಕಾಂಗ್ರೆಸ್ ತೊರೆದು, ಜನತಾದಳಕ್ಕೆ ಸೇರಿದರು. ೧೯೮೯ ರಲ್ಲಿ ವಿ.ಪಿ.ಸಿಂಗ್ ನೇತೃತ್ವದ ನ್ಯಾಷನಲ್ ಪ್ರಂಟ್ ಸರಕಾರದ ವಿದೇಶಾಂಗ ಸಚಿವರಾದರು. ಕುವೈಟ್ ನ್ನು ಇರಾಕ್ ಆಕ್ರಮಿಸಿದಾಗ, ಅತಂತ್ರ ಸ್ಥಿತಿಯಲ್ಲಿದ್ದ ಸಾವಿರಾರು ಭಾರತೀಯರ ಸಮಸ್ಯೆಗಳನ್ನು ಬಗೆಹರಿಸಿ ಮೆಚ್ಚುಗೆಗೆ ಪಾತ್ರರಾದರು. ದೇವೇಗೌಡರ ಯುನೈಟೆಡ್ ಫ್ರಂಟ್ ಸರಕಾರ ಸನ್ ೧೯೯೭ ರಲ್ಲಿ ಪತನವಾದಮೇಲೆ ಅಸ್ತಿತ್ವಕ್ಕೆ ಬಂದ ಸರಕಾರದಲ್ಲಿ 'ಗುಜ್ರಾಲರೇ ಪ್ರಧಾನಿ'. ಯುಎಫ್ ನಾಯಕ ಲಾಲೂ ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್ ಮತ್ತಿತರ ನಡುವೆ ಗಂಭೀರ ಸ್ವರೂಪದ ಭಿನ್ನಾಭಿಪ್ರಾಯ ತಲೆದೋರಿದಾಗ, ಗುಜ್ರಾಲ್, ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆಯಾಗಿ ಪ್ರಧಾನಿ'ಯಾದ ಅದೃಷ್ಟವಂತರರುಅದೃಷ್ಟವಂತರು. '''ಐ.ಜಿ.ಗುಜ್ರಾಲ್ ರವರ ರಾಜಕೀಯ ಜೀವನದ ಮೆಟ್ಟಿಲುಗಳು :'''
* ೧೯೬೪ ರಲ್ಲಿ ರಾಜ್ಯ ಸಭಾ ಸದಸ್ಯ
* ೧೯೬೬ ರಲ್ಲಿ ಇಂದಿರಾಜಿಯವರು ಪಟ್ಟಕ್ಕೇರಲು ಕಾರಣವಾದ ಕೂಟದಲ್ಲಿ ಗುರುತಿಸಿಕೊಂಡಿದ್ದರು.
* ತುರ್ತು ಪರಿಸ್ಥಿತಿ ಹೇರಿದಾಗಲೂ ವರ್ತಾ ಸಚಿವರಾಗಿದ್ದರು. ಪತ್ರಿಕೆಗಳನ್ನು ಸೆನ್ಸಾರ್ ಮಾಡಿದರು.
* ೧೯೬೪ ಹಾಗೂ ೧೯೭೬ ರ ನಡುವೆ, ೨ ಬಾರಿ, ರಾಜ್ಯಸಭಾ ಸದಸ್ಯ..
*. ೧೯೮೯ ರಿಂದ ೧೯೯೧ ರ ತನಕ ಲೋಕಸಭೆಯ ಸದಸ್ಯ.
 
==ಎರಡನೆಯ ಬಾರಿಗೆ ಪ್ರಧಾನಿ==
ಈ ಬಾರಿ ಪ್ರಧಾನಿಯಾಗಿ ಇದ್ದದ್ದು ೨ ತಂಗಳು ಮಾತ್ರ. ರಾಜೀವ್ ಗಾಂಧಿಯವರ ಹತ್ಯೆ ತನಿಖೆ ನಡೆಸಿದ ಜೈನ್ ಆಯೋಗದ ವರದಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಸರಕಾರಕ್ಕೆ ನೀಡಿದ ಬೆಂಬಲವನ್ನು ಹಿಂದೆಗೆದುಕೊಂಡಾಗ, ಗುಜ್ರಾಲ್ ಸರಕಾರ ಮತ್ತೊಮ್ಮೆ ಪತನಗೊಂಡಿತು.