ನಾಗರಹೊಳೆ ರಾಷ್ಟ್ರೀಯ ಉದ್ಯಾನವನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
<center><i> [[:Category:ವರ್ಷ-೧೯೭೭ ಕನ್ನಡಚಿತ್ರಗಳು|೧೯೭೭ರಲ್ಲಿ]] ಬಿಡುಗಡೆಯಾದ ಕನ್ನಡ ಚಲನಚಿತ್ರ '''ನಾಗರಹೊಳೆ''' ಮಾಹಿತಿಗೆ [[ನಾಗರಹೊಳೆ (ಚಲನಚಿತ್ರ)|ಈ ಲೇಖನ]] ನೋಡಿ. </i></center>
[[Image:ChitalPair Nagarahole WLS.jpg|thumb|ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಜಿಂಕೆ]]
[[ಬೆಂಗಳೂರು|ಬೆಂಗಳೂರಿನಿಂದ]] ೨೩೬ ಕಿಲೋಮೀಟರ್ ಹಾಗೂ [[ಮೈಸೂರು|ಮೈಸೂರಿನಿಂದ]] ೯೬ ಕಿಲೋಮೀಟರ್ ದೂರವಿರುವ '''ನಾಗರಹೊಳೆ ರಾಷ್ಟ್ರೀಯ ಉದ್ಯಾನವನ''' [[ಕರ್ನಾಟಕ]]ದ ಅತ್ಯಂತ ಸುಂದರ ಮತ್ತು ದಟ್ಟವಾದ ಅರಣ್ಯಗಳಲ್ಲಿ ಒಂದಾಗಿದೆ. ದಟ್ಟ ಹಸಿರು ವರ್ಣದಿಂದ ಕಂಗೊಳಿಸುವ ಬೆಟ್ಟ, ಗುಡ್ಡ, ಕಣಿವೆಗಳಿಂದ ಮತ್ತು ತೇಗ, ಗಂಧ, ಬೀಟೆ, ಸಿಲ್ವರ್ ಓಕ್ ಮುಂತಾದ ಅಮೂಲ್ಯ ವೃಕ್ಷಗಳಿಂದ ಈ ಅರಣ್ಯ ನಳನಳಿಸುತ್ತಿದೆ. ವಿನಾಶದ ಅಂಚಿನಲ್ಲಿರುವ ಅನೇಕ ಪ್ರಾಣಿ, ಪಕ್ಷಿ ಮತ್ತು ಸಸ್ಯ ಪ್ರಭೇದಗಳನ್ನು ಈ ಕಾಡುಗಳು ಪೋಷಿಸುತ್ತಿವೆ. ಭಾರತದ ರಾಷ್ಟ್ರೀಯ ಪ್ರಾಣಿಯಾದ [[ಹುಲಿ]] ಮತ್ತು ರಾಷ್ಟ್ರಪಕ್ಷಿ [[ನವಿಲು]]ಗಳು ಇಲ್ಲಿ ಸುರಕ್ಷಿತವಾಗಿವೆ. ೫೧೧ ಚದರ ಕಿ.ಮೀ.ವಿಸ್ತೀರ್ಣದಲ್ಲಿ ಹರಡಿರುವ ಈ ಕಾಡು [[ಜಿಂಕೆ]], [[ಕಾಡು ಕುರಿ ]]([[Barking deer]]) [[ಕರಡಿ]], [[ಚಿರತೆ]], [[ಆನೆ]], [[ಕಾಡುಪಾಪ]], ನೀರುನಾಯಿ, [[ಮೊಸಳೆ]], ಹೆಬ್ಬಾವು, [[ಮರಕುಟುಕ]], ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್, [[ಗಿಡುಗ]], [[ಹದ್ದು]], ಡೇಗೆ, ಪ್ಯಾಂಗೋಲಿನ್, ಹಾರುವ ಅಳಿಲುಗಳಿಗೆ ತಾಣವಾಗಿದೆ. ಜೇನು ಕುರುಬರು,ಬೆಟ್ಟ ಕುರುಬರು ಹಾಗೂ ಹಕ್ಕಿಪಿಕ್ಕಿಗಳ ನೆಲೆವೀಡು ಕೂಡಾ ಆಗಿದೆ. [[ಮೈಸೂರು]] ಮತ್ತು [[ಕೊಡಗು]] ಜಿಲ್ಲೆಗಳಲ್ಲಿ ವಿಶಾಲವಾಗಿ ಹಬ್ಬಿರುವ ಈ ಕಾಡುಗಳು ಕರ್ನಾಟಕ,ಭಾರತವೇ ಅಲ್ಲದೆ ಇಡೀ ವಿಶ್ವದಲ್ಲೇ ಅತ್ಯಂತ ವಿಶೇಷ ಜೀವಿ ವೈವಿಧ್ಯಗಳನ್ನು ಪೋಷಿಸುತ್ತಿವೆ. ನಾಗರಹೊಳೆ, ವೈನಾಡು, ಬಂಡೀಪುರ ಮತ್ತು ಮುದುಮಲೈ ಕಾಡುಗಳನ್ನು ಒಂದು ಸಂರಕ್ಷಿತ ವಲಯವನ್ನಾಗಿ ಗುರುತಿಸಲಾಗಿದೆ.
 
[[ಕಬಿನಿ]], ಲಕ್ಷ್ಮಣ ತೀರ್ಥ, ಮತ್ತು ನಾಗರಹೊಳೆಗಳು ಇಲ್ಲಿಯ ಪ್ರಮುಖ ನದಿಗಳು. 'ನಾಗರ' ಎಂದರೆ ಹಾವಿನ ರೀತಿಯಲ್ಲಿ ಹರಿಯುವ ನದಿ, ತೊರೆಗಳು ಇಲ್ಲಿ ಹರಿಯುವುದರಿಂದ ನಮ್ಮ ಜನಪದರು ಈ ಕಾಡುಗಳನ್ನು 'ನಾಗರಹೊಳೆ' ಎಂದರು. ಈ ನದಿಗಳು ಹಲವಾರು ಸುಂದರ ಜಲಪಾತಗಳನ್ನೂ ಸೃಷ್ಟಿಸಿವೆ.