ಮೈಸೂರು ಸಹೋದರರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
[[ಚಿತ್ರ:MysuruBrothers.jpg|thumb|right|250px]]
 
ಭಾರತೀಯ [[ಶಾಸ್ತ್ರೀಯ ಸಂಗೀತ|ಶಾಸ್ತ್ರೀಯ]] [[ವಯೊಲಿನ್]] ಪ್ರತಿಭೆಗಳಲ್ಲಿ '''ಮೈಸೂರು ನಾಗರಾಜ್ ಮತ್ತು ಡಾ.ಮೈಸೂರು ಮಂಜುನಾಥ್ ಜೋಡಿ'''ಯದು ದೊಡ್ಡ ಹೆಸರು. ದಕ್ಷಿಣಾದಿ ಪಿಟೀಲನ್ನು ಅಧ್ಬುತ ವಾಗಿ,ಅತ್ಯಂತ ಅಚ್ಚುಕಟ್ಟಾಗಿ, ಭಾವನಾಪೂರ್ಣವಾಗಿ ಮತ್ತು ಕರ್ಣಮಧುರವಾಗಿ ನುಡಿಸುವ ಇವರುಗಳು '''ಮೈಸೂರು ಸಹೋದರರು''' ಎಂದು ಪ್ರಪಂಚದೆಲ್ಲೆಡೆ ಶಾಸ್ತ್ರೀಯ ಸಂಗೀತ ವಲಯಗಳಲ್ಲಿ ಪ್ರಖ್ಯಾತರಾಗಿದ್ದಾರೆ. ಇಂದು ಜಾಗತಿಕ ಸಂಗೀತ ಜಗತ್ತಿನಲ್ಲಿ ಮೈಸೂರು ಸಹೋದರರು, ಕರ್ನಾಟಕದ ಪ್ರಾತಿನಿಧಿಕಶ್ರೇಷ್ಟ ಪ್ರಾತಿನಿದಿಕ ವಿದ್ವಾಂಸರಾಗಿದ್ದಾರೆ. ವಿಶ್ವದ ಎಲ್ಲೆಡೆ ಕರ್ನಾಟಕದ ಬಾವುಟ ವನ್ನು ಹಿಡಿದ ಕೀರ್ತಿ ವ್ಯಕ್ತಿಗಳಾಗಿದ್ದಾರೆಇವರದ್ದು.
 
 
೧೧ ನೇ ಸಾಲು:
== ಎಳವೆಯಲ್ಲಿ ಮಿಂಚಿದ ಬಾಲಪ್ರತಿಭೆಗಳು ==
 
ತಂದೆಯ ಶಿಸ್ತಿನ ಶಿಕ್ಷಣದಿಂದ ರೂಪುಗೊಂಡು ನಾಗರಾಜ್ ಮತ್ತು ಡ್ಮಾ.ಮಂಜುನಾಥ್, ಕ್ರಮವಾಗಿ ಹತ್ತು ಮತ್ತು ಒಂಭತ್ತನೆಯ ವಯಸ್ಸಿನಲ್ಲಿ ಮೊದಲ ಕಛೇರಿಯನ್ನು ನಡೆಸಿಕೊಟ್ಟರು.ಹಾಗೂ ಬಾಲ್ಯದಿಂದಲೇ ಎಲ್ಲಾ ವಿದ್ವಾಂಸರು ಹಾಗೂ ವಿಮರ್ಶಕರಿಂದ ಅದ್ಭುತ ಬಾಲ ಕಲಾವಿದರೆಂದು ಮೆಚ್ಛುಗೆ ಪಡೆದರು. ನಾಗರಾಜ್, ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲಿ ಪ್ರತಿಷ್ಠಿತ 'ಮದರಾಸು ಮ್ಯೂಸಿಕ್ ಅಕಾಡಮಿ' ಯ 'ಅತ್ಯುತ್ತಮ ವಯಲಿನಿಸ್ಟ್' ಪ್ರಶಸ್ತಿ ಯನ್ನು ತಮ್ಮದಾಗಿಸಿಕೊಂಡರು. 1986 ರಲ್ಲಿ ಅಕಾಡೆಮಿ ಅವರಿಗೆ 'ಚಿನ್ನದ ಪದಕ'ವನ್ನು ಕೊಟ್ಟು ಸನ್ಮಾನಿಸಿತು. ಇವರನ್ನು ನಿಕಟವಾಗಿ ಹಿಂಬಾಲಿಸಿದ ಮಂಜುನಾಥ್, ತಾವೂ 'ಮದ್ರಾಸ್ ಮ್ಯೂಸಿಕ್ ಅಕಾಡೆಮಿ'ಯ 'ಅತ್ಯುತ್ತಮ ವಯೊಲಿನಿಸ್ಟ್' ಪ್ರಶಸ್ತಿಯನ್ನು ಪಡೆದುಕೊಂಡರು. ಮುಂದೆ ಮೈಸೂರು ಯುನಿವರ್ಸಿಟಿಯಲ್ಲಿ 'ಮಾಸ್ಟರ್ ಆಫ್ ಮ್ಯೂಸಿಕ್' ಪದವಿಯನ್ನು ಪ್ರಥಮ ರ್ಯಾಂಕ್ ಮತ್ತು ಮೂರು ಚಿನ್ನದ ಪದಕಗಳೊಂದಿಗೆ ಪೂರೈಸಿದರು. ಅಲ್ಲಿಗೆ ವಿಶ್ರಮಿಸದೆ, ಸಂಗೀತದ ಬಗ್ಗೆ ಪ್ರೌಢ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿಯನ್ನು ಗಳಿಸಿದರು. ಸಹೋದರರಿಬ್ಬರೂ ಆಕಾಶವಾಣಿಯ 'ಎ ಟಾಪ್' ಶ್ರೇಣಿಯ ಕಲಾವಿದರಾಗಿದ್ದಾರೆ. ಡಾ|ಮಂಜುನಾಥ್, ಮೈಸೂರು ಯುನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸುತ್ತಿದ್ದು ಹಲವಾರು ಮಂದಿಗೆ ಪಿ ಎಛ್ ಡಿ ಪದವಿಗೆ ಮಾರ್ಗಧರ್ಶಕರಾಗಿದ್ಧಾರೆ.
 
== ನುಡಿಸುವಿಕೆ ಮತ್ತು ಶೈಲಿ ==
 
ಮೈಸೂರು ಸಹೋದರರು ತಮ್ಮ ಅಪ್ರತಿಮ ಶಿಸ್ತಿನ ಗಂಭೀರ ಶೈಲಿಯಿಂದ ಇತರೆಲ್ಲರಿಗಿಂತ ಪ್ರತ್ಯೇಕವಾಗಿ ನಿಲ್ಲುತ್ತಾರೆ. ಇವರ ನುಡಿಸಾಣಿಕೆಯು ಭಾವನಾಪ್ರಧಾನವಾಗಿ ಗಮಕಗಳಿಂದ ಶ್ರೀಮಂತವಾಗಿದೆ. ಲೆಕ್ಕಾಚಾರಗಳಿಂದ ಕೂಡಿದ ಕ್ಲಿಷ್ಟ ಮತ್ತು ಅತಿವೇಗದ ಚಲನೆಗಳಲ್ಲಿಯೂ ಸಮತೋಲನವನ್ನು ಎಳ್ಳಷ್ಟೂ ಬಿಟ್ಟುಕೊಡದೆ, ನುಡಿಸುವುದು ಇವರ ವಿಶೇಷತೆ. ಹಿಂದುಸ್ಥಾನಿ ಮತ್ತು ದಕ್ಷಿಣಾದಿಗಳೆರಡರಲ್ಲಿಯೂ ಪ್ರಭುತ್ವವಿದ್ದು, (ಹೆಚ್ಚಾಗಿ) ನಾಗರಾಜ್ ದಕ್ಷಿಣಾದಿಯಲ್ಲಿ, ಮತ್ತು ಮಂಜುನಾಥ್ ಹಿಂದುಸ್ಥಾನಿಯಲ್ಲಿ ನಿರ್ವಹಿಸಿ ಜುಗಲ್ ಬಂದಿಗಳನ್ನೂ ಅದ್ಭುತವಾಗಿ ನಡೆಸಿಕೊಡುತ್ತಾರೆ. ತಮ್ಮ ಅನನುಕರಣೀಯ ಶೈಲಿಯಿಂದ ಅಸಂಖ್ಯ ಅಭಿಮಾನಿಗಳನ್ನು ಪಡೆದಿದ್ದು 'ಮೈಸೂರು ಸಹೋದರರ ಶೈಲಿ' ಎಂದು ಗುರುತಿಸಿ ಆಸ್ವಾದಿಸುವ ದೊಡ್ಡ ಕಲಾರಸಿಕರ ಬಳಗವನ್ನು ವಿಶ್ವದಾದ್ಯಂತ ಪಡೆದಿದ್ದಾರೆ.
 
 
"https://kn.wikipedia.org/wiki/ಮೈಸೂರು_ಸಹೋದರರು" ಇಂದ ಪಡೆಯಲ್ಪಟ್ಟಿದೆ