ಸರಸ್ವತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೦ ನೇ ಸಾಲು:
==ಒಟ್ಟು ಭಾರತೀಯ ಸಂಸ್ಕೃತಿಯಲ್ಲಿ==
 
ಬೌದ್ಧಧರ್ಮದಲ್ಲಿ ಸರಸ್ವತಿಯು ಆದಿಬುದ್ಧನ ಹಲ್ಲುಗಳಿಂದಲೂ, [[ಜೈನ ಧರ್ಮ]]ದಲ್ಲಿ ಆದಿಜಿನರ ಮುಖದಿಂದಲೂ, ]][[ಹಿಂದೂ ಧರ್ಮ]]ದಲ್ಲಿ ಆದಿಬ್ರಹ್ಮನ ನಾಲಗೆ[[ನಾಲಿಗೆ]] ಅಥವಾ ಮುಖದಿಂದಲೂ[[ಮುಖ]]ದಿಂದಲೂ ಸೃಷ್ಟಿಯಾದಳು ಎಂದಿರುವುದನ್ನು ಗಮನಿಸಿದರೆ, ಸರಸ್ವತಿಯ ಜನನಸ್ಥಾನ ವಾಕ್ ಅಂದರೆ ಮಾತು ಜನಿಸುವ ಸ್ಥಳವೇ ಆಗಿದೆ. ಆದ್ದರಿಂದ ಸರಸ್ವತಿಯ ವಾಗ್ದೇವಿಯ ಸ್ವರೂಪ ಮೂರೂ ಧರ್ಮಗಳಿಗೂ ಸ್ವೀಕೃತ ಆಗಿದೆ ಎನ್ನಬಹುದು. ಮೂರೂ ಧರ್ಮಗಳಲ್ಲಿ ಸರಸ್ವತಿಗಿರುವ ಇನ್ನೊಂದು ಸಮಾನ ವಿಚಾರವೆಂದರೆ ವಿದ್ಯಾದೇವತೆ ಮತ್ತು ಜ್ಞಾನದೇವತೆ ಎಂಬ ಅಂಶಗಳು.
ಹಾಗೆಯೇ ಆಯಾಯ ಧರ್ಮದ ಧಾರ್ಮಿಕ ಗ್ರಂಥಗಳೇ ಸರಸ್ವತಿ ಎಂಬ ವಿಚಾರದಲ್ಲೂ ಸಾಮ್ಯತೆಯಿದೆ. [[ಬೌದ್ಧ ಧರ್ಮ]]ದಲ್ಲಿ ಮಂಜುಶ್ರೀಯ ಕೈಯಲ್ಲಿರುವ ‘ಪ್ರಜ್ಷಾಪಾರಮಿತ’ (ಬೌದ್ಧಧರ್ಮದ ಶಾಸ್ತ್ರಗ್ರಂಥ) ಗ್ರಂಥವೇ ಸರಸ್ವತಿಯಾಗಿದ್ದರೆ, ಜೈನಧರ್ಮದಲ್ಲಿ ಆದಿಜಿನೇಶ್ವರರ ವಾಣಿ ಮತ್ತು ಅದರಿಂದ ಉತ್ಪನ್ನವಾದ ‘ಜೈನವೇದ’ಗಳಾದ ‘ಶ್ರುತ’ಗಳೇ ಸರಸ್ವತಿಯಾಗಿವೆ. ವೈದಿಕಪರಂಪರೆಯಲ್ಲೂ ಬ್ರಹ್ಮನ ಸೃಷ್ಟಿಯಾದ ‘ವೇದ’ಗಳ ಅಧಿದೇವತೆ ಸರಸ್ವತಿಯೇ ಆಗಿದ್ದಾಳೆ. ಮೂರೂ ಧರ್ಮಗಳಲ್ಲೂ ಸರಸ್ವತಿಯನ್ನು ಒಳ್ಳೆಯ ವಾಕ್ಕಿಗೆ, ವಿದ್ಯೆಗೆ, ಜ್ಞಾನಕ್ಕೆ, ಕಾವ್ಯಾವೇಶಕ್ಕೆ ಪ್ರಾರ್ಥಿಸಲಾಗುತ್ತದೆ. ಧರ್ಮಗಳ ಒಳಪಂಗಡಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳು, ತಾಂತ್ರಿಕ ಆಚರಣೆಯಲ್ಲಿ ಕಂಡುಬರುವ ಪ್ರಾದೇಶಿಕ ವೈವಿಧ್ಯತೆಗಳು ಇವುಗಳನ್ನು ಬಿಟ್ಟರೆ, ಒಟ್ಟಾರೆ ಭಾರತೀಯ ಸಂದರ್ಭದಲ್ಲಿ ಸರಸ್ವತಿಯ ಸ್ವರೂಪ ‘ಒಂದೇ’ ಆಗಿದೆ. ಗ್ರೀಕ್ ಸಂಸ್ಕೃತಿಯಲ್ಲಿ ಅಥೀನಾ ದೇವತೆ ಕೂಡಾ ಸ್ಯೂಸದೇವನ ತಲೆಯಿಂದಲೇ ಜನಿಸುತ್ತಾಳೆ.
[[ಈಜಿಪ್ಟ್ ]]ಮತ್ತು ಗ್ರೀಕ್ ನಾಗರಿಕತೆಗಳನ್ನು ಅತ್ಯಂತ ಪ್ರಾಚೀನ ನಾಗರಿಕತೆಗಳೆಂದು ಗುರುತಿಸುತ್ತಾರೆ. ಈಜಿಪ್ಟ್‌ನಲ್ಲಿ ಈಸಿಸ್ (Isis) ದೇವತೆ ಸರಸ್ವತಿಯ ಲಕ್ಷಣಗಳನ್ನು ಸ್ವಲ್ಪಮಟ್ಟಿಗೆ ಹೆಂದಿದ್ದರೆ, ಗ್ರೀಕ್ ನಾಗರಿಕತೆಯಲ್ಲಿ ಅಥೀನಾ ದೇವತೆ ಹಾಗೂ ರೋಮನ್ ಸಂಸ್ಕೃತಿಯಲ್ಲಿ ಮಿನರ್ವಾ ಸರಸ್ವತಿಗೆ ಸಂವಾದಿಯಾದ ದೇವತೆಯಾಗಿದ್ದಾರೆ.
"https://kn.wikipedia.org/wiki/ಸರಸ್ವತಿ" ಇಂದ ಪಡೆಯಲ್ಪಟ್ಟಿದೆ