ಜಿ.ಎನ್.ರಂಗನಾಥರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ರಂಗನಾಥರಾಯರಿಗೆ ಖಾದ್ರಿ ಪ್ರಶಸ್ತಿ ಹಿರಿಯ ಪತ್ರಕರ್ತರಾದ [[ಜಿ.ಎನ್.ರಂಗನಾಥ ...
 
No edit summary
೧ ನೇ ಸಾಲು:
ರಂಗನಾಥರಾಯರಿಗೆ ಖಾದ್ರಿ ಪ್ರಶಸ್ತಿ
 
ಹಿರಿಯ ಪತ್ರಕರ್ತರಾದ [[ಜಿ.ಎನ್.ರಂಗನಾಥ ರಾವ್]] ಅವರಿಗೆ ಈ ವರ್ಷದ (೨೦೦೯) [[ಖಾದ್ರಿ ಶಾಮಣ್ಣ ]] ಪ್ರಶಸ್ತಿಯ ಗೌರವ ಸಂದಿದೆ. ‘[[ಸಂಯುಕ್ತ ಕರ್ನಾಟಕ]]’ ಬೆಂಗಳೂರು ಆವೃತ್ತಿಯಲ್ಲಿ ೧೯೬೨ರಲ್ಲಿ ಉಪಸಂಪಾದಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ಜಿ.ಎನ್.ಆರ್. ಮುಂದೆ ‘[[ಪ್ರಜಾವಾಣಿ]]’ ಪತ್ರಿಕೆಗೆ ಸೇರ್ಪಡೆಯಾದರು. ಹಂತ ಹಂತವಾಗಿ ಔನ್ನತ್ಯ ಸಾಧಿಸಿದ ಜಿ.ಎನ್.ಆರ್. ಆ ಪತ್ರಿಕಾ ಸಮೂಹದ ‘ಕಾರ್ಯನಿರ್ವಾಹಕ ಸಂಪಾದಕ’ ಹುದ್ದೆಗೇರಿ ನಿವೃತ್ತರಾದರು. ಅವರು ‘ಪ್ರಜಾವಾಣಿ’ಯ [[ಸಾಪ್ತಾಹಿಕ ಪುರವಣಿ]]ಯ ಉಸ್ತುವಾರಿ ವಹಿಸಿಕೊಂಡ ಸಮಯದಲ್ಲಿ, [[ಸುಧಾ]] ವಾರ ಪತ್ರಿಕೆಯ ನೇತೃತ್ವ ವಹಿಸಿದ್ದ ಸಂದರ್ಭದಲ್ಲಿ ನೂರಾರು ಹೊಸ ಬರಹಗಾರರಿಗೆ ಉತ್ತೇಜನ ನೀಡಿದ್ದರು. ಅವರ ಒತ್ತಾಸೆಯಿಂದಲೇ ನಾನು ([[ಹಾಲ್ದೊಡ್ಡೇರಿ ಸುಧೀಂದ್ರ]]) ‘ಸುಧಾ’ ಯುಗಾದಿ ವಿಶೇಷಾಂಕಕ್ಕೆ (೨೦೦೦) ‘ಇಂಟರ್‌ನೆಟ್ ಎಂಬ ಮಾಯಾಜಾಲ’ ಎಂಬ ಅಂತರ್ಜಾಲ ಕೈಪಿಡಿಯನ್ನು ರಚಿಸಿದ್ದು. ಹಾಗೆಯೇ ‘ವಿಜ್ಞಾನಕ್ಕೊಂದು ಬೆಳಕಿಂಡಿ’ಯ ಮೂಲಕ ಅವರು ನನ್ನನ್ನು ಕನ್ನಡ ಸಾರಸ್ವತ ಲೋಕಕ್ಕೆ ಅಂಕಣಕಾರನಾಗಿ ಪರಿಚಯಿಸಿದರು.
 
ಜಿ.ಎನ್.ಆರ್. ಅವರದು ಬಹುಮುಖ ಪ್ರತಿಭೆ. ‘ನವರಂಗ’ ಎಂಬ ಕಾವ್ಯನಾಮದಲ್ಲಿ ಕಾದಂಬರಿ, ವಿಡಂಬನಾ ಬರಹ, ಕತೆಗಳನ್ನು ರಚಿಸಿದ್ದಾರೆ. ನಾಟಕಗಳನ್ನು ಬರೆದಿದ್ದಾರೆ, ವಿಮರ್ಶೆಗಳನ್ನು ಮಂಡಿಸಿದ್ದಾರೆ. ಕಾವ್ಯಪ್ರೇಮಿಯಾದ ಜಿ.ಎನ್.ಆರ್. ಕವಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಪತ್ರಕರ್ತರ ಕಾಲೇಜುಗಳಲ್ಲಿ ಬೋಧಿಸುವುದರ ಜತೆಗೆ ಅವರ ಅನುಕೂಲಕ್ಕೆ ಪಠ್ಯ ಪುಸ್ತಕಗಳನ್ನು ರಚಿಸಿದ್ದಾರೆ. ಇಂದಿಗೂ ಕನ್ನಡ ಸಾಂಸ್ಕೃತಿಕ ಸಮಾರಂಭಗಳಿಗೆ ತಪ್ಪದೇ ಹಾಜರಿ ಹಾಕುವ ಜಿ.ಎನ್.ಆರ್. ತಮ್ಮ ಆಪ್ತ ಲೇಖಕ ಬಳಗಕ್ಕೆ ಸ್ಫೂರ್ತಿ ತುಂಬುವ ಸಹೃದಯಿ.
"https://kn.wikipedia.org/wiki/ಜಿ.ಎನ್.ರಂಗನಾಥರಾವ್" ಇಂದ ಪಡೆಯಲ್ಪಟ್ಟಿದೆ