"ಹೃಷಿಕೇಶ್ ಮುಖರ್ಜಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
===ಚಿತ್ರಗಳು===
 
[[ರಾಜೇಶ್ ಖನ್ನ]] ಮತ್ತು [[ಅಮಿತಾಬ್ಅಮಿತಾಭ್ ಬಚ್ಚನ್]] ನಟಿಸಿದ್ದ ' ಆನಂದ್', ಅಮಿತಾಬ್, [[ಸಂಜೀವ್ ಕುಮಾರ್]] ಮತ್ತು [[ಜಯ ಬಚ್ಚನ್| ಜಯಾ ಬಾದುರಿ]] ನಟಿಸಿದ ಅಭಿಮಾನ್ , ಅಮಿತಾಬ್, ಜಯಾ ಬಾದುರಿ ಮತ್ತು [[ಧರ್ಮೇಂದ್ರ]] ನಟಿಸಿದ `ಚುಪ್ಕೆ ಚುಪ್ಕೆ' ಹಾಗೂ[[ ರೇಖಾ ]]ನಟಿಸಿದ್ದ [[ ಖೂಬ್ ಸೂರತ್ ]] ಸೇರಿದಂತೆ ಅನೇಕ ಯಶಸ್ವಿ ಚಲನಚಿತ್ರಗಳನ್ನು ನಿರ್ದೇಶಿದ್ದಾರೆ.
 
ಹೃಷಿದಾ ಎಂದೇ ಚಿತ್ರ ಜಗತ್ತಿನಲ್ಲಿ ಖ್ಯಾತರಾಗಿದ್ದ ಹೃಷಿಕೇಶ್ ಮುಖರ್ಜಿ ಹುಟ್ಟಿದ್ದು [[ ೧೯೨೨]] ರ [[ಸೆ ೩೦]]ರಂದು, [[ಕಲ್ಕತ್ತ|ಕೊಲ್ಕತ್ತಾದಲ್ಲಿ]]. ತಮ್ಮ ಗುರು ಬಿಮಲ್ ರಾಯ್ ಅವರ ಸಹಾಯಕರಾಗುವ ಮೂಲಕ[[ ೧೯೫೧]]ರಲ್ಲಿ ಚಿತ್ರಲೋಕಕ್ಕೆ ಅಡಿಯಿರಿಸಿದರು. [[೧೯೫೭]]ರಲ್ಲಿ ನಿರ್ದೇಶಿಸಿದ 'ಮುಸಾಫಿರ್' ಹೃಷಿಕೇಶ್ ಅವರ ಮೊದಲ ಚಿತ್ರ.
[[೧೯೬೦]]ರಲ್ಲಿ ನಿರ್ಮಾಣಗೊಂಡ 'ಅನುರಾಧ' ಚಿತ್ರದೊಂದಿಗೆ ಮುಖರ್ಜಿ ಯಶಸ್ಸಿನ ದಾರಿಯಿಡಿದರು. ಕರ್ತವ್ಯವನ್ನೇ ದೇವರು ಎಂದು ಭಾವಿಸುವ ವೈದ್ಯನೊನ್ನ ತನ್ನ ಕುಟುಂಬವನ್ನೇ ಕಡೆಗಣಿಸುವ ಕತೆ 'ಅನುರಾಧ'ದಲ್ಲಿತ್ತು. ಈ ಚಿತ್ರಕ್ಕೆ ರಾಷ್ಟ್ರಪತಿಗಳ ಚಿನ್ನದ ಪದಕವೂ ಲಭಿಸಿತು.
 
ಆನಂತರ ಮುಖರ್ಜಿ 'ಅನುಪಮ' 'ಆಶೀರ್ವಾದ್' ಹಾಗೂ 'ಸತ್ಯಕಾಮ್' ಮುಂತಾದ ಹಲವಾರು ಉತ್ತಮ ಚಿತ್ರಗಳನ್ನು ನಿರ್ದೇಶಿಸಿದರು. ಆಕ್ಷನ್ ಹೀರೋ ಆಗಿದ್ದ ಧರ್ಮೇಂದ್ರರಿಗೆ ಸಂಪೂರ್ಣ ವಿಭಿನ್ನ ಪಾತ್ರಗಳು ಸಿಕ್ಕಿದ್ದು ಮುಖರ್ಜಿ ಅವರ ಚಿತ್ರಗಳಿಂದಲೇ. ಇವತ್ತು ಮಿಂಚುತ್ತಿರುವ [[ಅಮಿತಾಬ್ಅಮಿತಾಭ್ ಬಚ್ಚನ್]] ಪ್ರಸಿದ್ಧಿ ಪಡೆದಿದ್ದು ಹೃಷಿಕೇಶ್ ಅವರ 'ಆನಂದ್' ಚಿತ್ರದ ಮೂಲಕ. ಜಯಾ ಬಚ್ಚನ್ ಬೆಳಕಿಗೆ ಬಂದದ್ದು ಗುಡ್ಡಿ ಚಿತ್ರದ ಮೂಲಕ.
 
ಚುಪ್ಕೆ ಚುಪ್ಕೆ, ಬಾವರ್ಚಿ, ಗುಡ್ಡಿ ಹಾಗೂ ರಜನಿಗಂಧ್ ಮೊದಲಾದ ಈ ಎಲ್ಲ ಚಿತ್ರಗಳು [[ಭಾರತ| ಭಾರತೀಯ]] ಸಿನಿಮಾ ಲೋಕದ ಮೈಲಿಗಲ್ಲುಗಳೆಂದು ಕರೆಸಿಕೊಳ್ಳಲ್ಪಟ್ಟಿವೆ.
೨,೫೯೯

edits

"https://kn.wikipedia.org/wiki/ವಿಶೇಷ:MobileDiff/28309" ಇಂದ ಪಡೆಯಲ್ಪಟ್ಟಿದೆ