ಎಂ. ಎ. ಹೆಗಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೭ ನೇ ಸಾಲು:
*ಪ್ರೊ. ಎಮ್.ಎ.ಹೆಗಡೆಯವರ ಪ್ರೌಢಶಾಲಾ ವಿದ್ಯಾಭ್ಯಾಸ ,ಎಸ್ ಪಿ, ಹೈಸ್ಕೂಲ್ ಹೆಗ್ಗರಣೆಯಲ್ಲಿಯಿತು, ಬಿ.ಎ.ಪದವಿ ಎಂ.ಎಂ. ಆರ್ಟ್ಸ್ ಕಾಲೇಜು ಶಿರಸಿಯಲ್ಲಿ ಮತ್ತು ಅವರ ಎಮ್.ಎ. ಉನ್ನತ ಪದವಿ ಶಿಕ್ಷಣವು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ೧೯೭೧ ರಲ್ಲಿ ಆಯಿತು. ಬಿ.ಎ. ಪದವಿಯಲ್ಲಿ ಪ್ರಥಮ ಸ್ಥಾನ ಪಡೆದುದಕ್ಕೆ ಶ್ರೀ ಬಿ.ವಿ.ಬೇವೂರ ಅವರ ಬಹುಮಾನ ಲಭಿಸಿದೆ. ಎಮ್.ಎ.ಯಲ್ಲಿ ಪ್ರಥಮ ಸ್ಥಾನ ಪಡೆದುದಕ್ಕೆ ಸಿ.ಡಿ. ದೇಶಮುಖ್ ಬಹುಮಾನ ಲಭಿಸಿದೆ.
*ಇವರು ಹುಬ್ಬಳ್ಳಿಯ ಕಾಡಸಿದ್ದೇಶ್ವರ ಆರ್ಟ್ಸಕಾಲೇಜು ಮತ್ತು ಪಿ.ಸಿ.ಜಾಬಿನ್ ಸೈನ್ಸ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ೧೯೭೧ರಿಂದ ೧೯೭೩ರ ವರೆಗೆ ಸೇವೆಸಲ್ಲಿಸಿದ್ದಾರೆ. ಸಿದ್ದಾಪುರದ ಮಹಾತ್ಮಾ ಗಾಂಧಿ ಶತಾಬ್ಧಿ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಸಕರಾಗಿ,ಆವಿಭಾಗದ ಮುಖ್ಯಸ್ಥರಾಗಿ ೧೯೭೩ ರಿಂದ ೨೦೦೪ ರ ವರೆಗೆ ಸೇವೆಸಲ್ಲಿಸಿದ್ದಾರೆ. ಅದೇ ಕಾಲೇಜಿನಲ್ಲಿ ೨೦೦೪ ರಿಂದ ೨೦೦೬ ರವರೆಗೆ ಪ್ರಾಂಶುಪಾಲರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ.
*'''ಹವ್ಯಾಸ :''' [[ಯಕ್ಷಗಾನ]] ಇವರ ಪ್ರಿಯವಾದ ಹವ್ಯಾಸ. ಯಕ್ಷಗಾನದಲ್ಲಿ ವೇಷಧಾರಿ, ತಾಳಮದ್ದಲೆಯ[[ತಾಳಮದ್ದಲೆ]]ಯ ಅರ್ಥಧಾರಿ, ಸಂಶೋಧಕ, ವಿಮರ್ಶಕ, ಮತ್ತು ಪ್ರಸಂಗ ಕರ್ತರಾಗಿ ಕೆಲಸಮಾಡಿದ್ದಾರೆ. ಇವರು, ಸೀತಾ ವಿಯೋಗ, ತ್ರಿಶಂಕು ಚರಿತ್ರೆ, ರಾಜಾಕರಂಧಮ, ಮುಂತಾದ ಸುಮಾರು ಹದಿನೈದಕ್ಕೂ ಮಿಕ್ಕ ಪ್ರಸಂಗಗಳನ್ನು ರಚಿಸಿದ್ದಾರೆ. ಅವು ಜನಪ್ರಿಯವಾಗಿದ್ದು ಸಾಕಷ್ಟು ಪ್ರಯೋಗಗಳನ್ನು ಕಾಣುತ್ತಿವೆ.
*'''ಸಾಹಿತ್ಯ ಚಟುವಟಿಕೆ''' - ಈಕೆಳಗಿನ ಕೃತಿಗಳನ್ನು ರಚಿಸಿದ್ದಾರೆ :
* ೧, ಬ್ರಹ್ಮ ಸೂತ್ರ ಚತುಃಸೂತ್ರೀ - [[ಶ್ರೀ ಶಂಕರಾಚಾರ್ಯರಶಂಕರಾಚಾರ್ಯ]]ರ [[ಬ್ರಹ್ಮಸೂತ್ರ]] ಭಾಷ್ಯದ ಚತುಃಸೂತ್ರೀ ಭಾಗದ ಅನುವಾದ ಮತ್ತು ಟಿಪ್ಪಣಿ.
* ೨, ಅಲಂಕಾರ ತತ್ವ, :- ಭಾರತೀಯ [[ಕಾವ್ಯ ಮೀಮಾಂಸೆಯಮೀಮಾಂಸೆ]]ಯ ಸಂಕ್ಷಿಪ್ತ ಪರಿಚಯದೊಂದಿಗೆ ಸುಮಾರು ೪೫ ಅರ್ಥಾಲಂಕಾರಗಳ ವಿಸ್ತೃತ ವಿವೇಚನೆ. ಕನ್ನಡದ ಪ್ರಾಚೀನ ಹಾಗೂ ಆಧುನಿಕ ಕಾವ್ಯಗಳಿಂದ ಉದಾಹರಣೆ. ಕನ್ನಡದಲ್ಲಿ ಈ ಬಗೆಯ ಗ್ರಂಥ ಇದೊಂದೇ. ಇದು ಸಮಾಜ ಪುಸ್ತಕಾಲಯ ಧಾರವಾಡದಿಂದ ಪ್ರಕಟಗೊಂಡಿದೆ.
* ೩, ಭಗವದ್ಭಕ್ತಿ ರಸಾಯನಮ್ :-[[ಮಧುಸೂದನ ಸರಸ್ವತಿಗಳಸರಸ್ವತಿ]]ಗಳ ಮೂಲಕೃತಿ , ಅನುವಾದ, ವಿವರಣೆ ;
* ೪, ಸಿದ್ಧಾಂತ ಬಿಂದು :- ಮಧುಸೂದನ ಸರಸ್ವತಿಗಳ ಮೂಲಕೃತಿ , ಅನುವಾದ, ಮತ್ತು ವಿಸ್ತೃತ ಟಿಪ್ಪಣಿ. ಅದ್ವೈತ ವೇದಾಂತಕ್ಕೆ ಸಂಬಂಧಿಸಿದ ಮಹತ್ದದ ಕೃತಿ.
* ೫, ಪರಮಾನಂದ ಸುಧಾ : -- ಶ್ರೀ ಶಂಕರಾಚಾರ್ಯರ ಬ್ರಹ್ಮಸೂತ್ರ ಭಾಷ್ಯದ ಮೊದಲ ನಾಲ್ಕು ಸೂತ್ರಭಾಷ್ಯದ ಅನುವಾದ ಮತ್ತು ವಿವರವಾದ ವ್ಯಾಖ್ಯಾನ. (ಈ ಮೇಲಿನ ಮೂರೂ ಗ್ರಂಥಗಳು -ಉದಯ ಪ್ರಕಾಶನ ಬೆಂಗಳೂರು ಇಲ್ಲಂದ ಪ್ರಕಟವಾಗಿದೆ.)
೨೧ ನೇ ಸಾಲು:
===== ನೋಡಿ : =====
----------------------------
ವರ್ಗ : [[ಹವ್ಯಕ]] | [[ವೇದಾಂತ ಸಾಹಿತ್ಯ]] | [[ದರ್ಶನಶಾಸ್ತ್ರ}}
"https://kn.wikipedia.org/wiki/ಎಂ._ಎ._ಹೆಗಡೆ" ಇಂದ ಪಡೆಯಲ್ಪಟ್ಟಿದೆ