ಸಿಲಂಬಾಟ್ಟಮ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು added Category:ಕಲೆ using HotCat
ಚು r2.7.3) (Robot: Adding cs:Silambam; cosmetic changes
೨೦ ನೇ ಸಾಲು:
ಸಿಲಂಬಮ್‌ನಲ್ಲಿ ಹಲವಾರು ಉಪ-ವಿಭಾಗಗಳಿವೆ - ''ನಾಗಮ್-16'' (ನಾಗರಹಾವು-16), ''ಕಳ್ಳಪತ್ತು'' (ಕಳ್ಳರು ಹತ್ತು), ''ಕಿಡಮುಟ್ಟು'' (ಆಡಿನ ತಲೆಯ ಭಾಗ), ''ಕುರವಂಚಿ'' , ''ಕಲ್ಯಾಣವರಿಸೈ'' (ಕ್ವಾರ್ಟರ್‌ಸ್ಟಾಫ್‌ನಂತಹ), ''ತುಳುಕ್ಕನಮ್'' ಮತ್ತು ಇತ್ಯಾದಿ. ಪ್ರತಿಯೊಂದು ಅನನ್ಯವಾಗಿದೆ ಹಾಗೂ ಹಿಡಿತ, ಭಂಗಿ, ಕಾಲ್ಚಳಕ, ದಾಳಿಯ ರೀತಿ, ಕೋಲಿನ ಉದ್ದ ಮತ್ತು ಕೋಲಿನ ಚಲನೆ ಇತ್ಯಾದಿಗಳಲ್ಲಿ ಪರಸ್ಪರ ಭಿನ್ನವಾಗಿರುತ್ತವೆ.
 
== ಇತಿಹಾಸ ==
ಸಿಲಂಬಮ್‌ ಬಹುಶಃ ಕುರಿಂಜಿ ಬೆಟ್ಟಗಳಲ್ಲಿ ಹುಟ್ಟಿಕೊಂಡಿರಬಹುದು. ಇದು ಈಗಿನ ದಕ್ಷಿಣ ಭಾರತದ [[ಕೇರಳ]]ದಲ್ಲಿದೆ. ಸುಮಾರು 5000 ವರ್ಷಗಳ ಹಿಂದೆ ಅದು ನಿಜವಾಗಿ ತಮಿಳು ಪ್ರದೇಶವಾಗಿತ್ತು. ಆ ಪ್ರದೇಶದ [[ನರಿಕುರಾವರ್]], ಯುದ್ಧದಲ್ಲಿ ಮತ್ತು ಕಾಡು ಪ್ರಾಣಿಗಳ ವಿರುದ್ಧ ರಕ್ಷಿಸಿಕೊಳ್ಳಲು ''ಚಿಲಂಬಂಬೂ'' ಎನ್ನುವ ಬಾಗುಹಲಗೆ(ಸ್ಟೇವ್)ಗಳನ್ನು ಬಳಸುತ್ತಿದ್ದರೆಂದು ಹೇಳಲಾಗಿದೆ. ಅವರು [[ಹಿಂದು]] ಧಾರ್ಮಿಕ ಹಬ್ಬಗಳ ಸಂದರ್ಭಗಳಲ್ಲಿ ಏಕ ಕೋಲಿನ-ಕಾದಾಟ ಪ್ರದರ್ಶನಗಳನ್ನೂ ನಿರ್ವಹಿಸುತ್ತಿದ್ದರು. ಈ ಕಲೆಯು [[ಸಂಗಮ್ ಅವಧಿ]]ಯಲ್ಲಿ [[ದಕ್ಷಿಣ ಭಾರತ]]ದ ಪ್ರಾಚೀನ [[ಚೋಳ]], [[ಚೇರ]] ಮತ್ತು [[ಪಾಂಡ್ಯ]] ರಾಜರುಗಳಿಂದ ಪ್ರೋತ್ಸಾಹಿಸಲ್ಪಟ್ಟಿತು. [[ಟ್ರಾವನ್ಕೋರ್]] ರಾಜರ ''ಮರಾವರ್ ಪಾಡ'' , ಸಿಲಂಬಮ್‌ಅನ್ನು ಶತ್ರುಗಳ ವಿರುದ್ಧದ ಯುದ್ಧದಲ್ಲಿ ಬಳಸಿದರು.
 
೨೭ ನೇ ಸಾಲು:
[[ತಮಿಳು]] [[ಸಂಗಮ್ ಸಾಹಿತ್ಯ]]ದಲ್ಲಿ ''ಸಿಲಪ್ಪಾಡಿಕ್ಕರಮ್'' ಸೂಚನೆಯು 2ನೇ ಶತಮಾನದಷ್ಟು ಹಿಂದಿನದಾಗಿದೆ. ಇದು ವಿದೇಶಿ ವ್ಯಾಪಾರಿಗಳಿಗೆ ಸಿಲಂಬಮ್ ಕೋಲುಗಳು, ಖಡ್ಗಗಳು, ಮುತ್ತುಗಳು ಮತ್ತು ಯುದ್ಧ ಕವಚಗಳ ಮಾರಾಟವನ್ನು ಸೂಚಿಸುತ್ತದೆ. [[ಮಧುರೈ]] ನಗರದ ಪುರಾತನ ವ್ಯಾಪಾರ ಕೇಂದ್ರವು ಜಾಗತಿಕವಾಗಿ ಬಹುಪ್ರಸಿದ್ಧಿಯನ್ನು ಗಳಿಸಿತು ಹಾಗೂ ಅಲ್ಲಿಗೆ [[ರೋಮನ್ನರು]], [[ಗ್ರೀಕರು]] ಮತ್ತು [[ಈಜಿಪ್ಟರು]] ಗುಂಪುಗುಂಪಾಗಿ ಬರುತ್ತಿದ್ದರೆಂದು ಹೇಳಲಾಗಿದೆ. ಅವರು ತಮಿಳು ಪ್ರದೇಶಗಳೊಂದಿಗೆ ನಿಯಮಿತವಾಗಿ ಸಮುದ್ರ ವ್ಯಾಪಾರವನ್ನು ಹೊಂದಿದ್ದರು. [[ಭಾರತದ ಕದನ-ಕಲೆ]]ಗಳಲ್ಲಿ ಬಳಸಲಾದ ಮೊದಲ ಆಯುಧವಾದ [[ಬಿದಿರಿನ]] ಕೋಲು ಪ್ರವಾಸಿಗರಲ್ಲಿ ಅಧಿಕ ಬೇಡಿಕೆಯನ್ನು ಪಡೆದಿತ್ತು.<ref name="Raj">{{cite book |last=Raj|first=J. David Manuel |title=The Origin and the Historical Developlment of Silambam Fencing: An Ancient Self-Defence Sport of India |year=1977 |publisher=College of Health, Physical Education and Recreation, Univ. of Oregon |location=Oregon |pages=44, 50, & 83}}</ref><ref name="Sports">{{cite book |last=Sports Authority of India|first= |title=Indigenous Games and Martial Arts of India |year=1987 |publisher=Sports Authority of India |location=New Delhi|pages=91 & 94}}</ref>
 
ರಾಜ [[ವೀರಪಾಂಡ್ಯ ಕಟ್ಟಾಬೊಮ್ಮನ್]] (1760–1799)ನ ಸೈನಿಕರು ಮುಖ್ಯವಾಗಿ [[ಬ್ರಿಟಿಷ್ ಸೈನ್ಯ]]ದ ವಿರುದ್ಧದ ಯುದ್ಧದಲ್ಲಿ ಅವರ ಸಿಲಂಬಮ್‌ ಕೌಶಲಗಳನ್ನು ಅವಲಂಬಿಸಿದ್ದರು.<ref name="Raj"></ref> ಬ್ರಿಟಿಷ್ ವಸಾಹತುಗಾರರು ಇತರ ಅನೇಕ ವ್ಯವಸ್ಥೆಗಳೊಂದಿಗೆ ಸಿಲಂಬಮ್‌ಅನ್ನೂ ನಿಷೇಧಿಸಿದ ನಂತರ [[ಭಾರತದ ಕದನ-ಕಲೆಗಳು]] ಅವನತಿಯತ್ತ ಸಾಗಿದವು. ಅವರು ಆಧುನಿಕ ಪಾಶ್ಚಿಮಾತ್ಯ ಮಿಲಿಟರಿ ತರಬೇತಿ ವಿಧಾನವನ್ನೂ ಬಳಕೆಗೆ ತಂದರು. ಅದು ಸಾಂಪ್ರದಾಯಿಕ ಆಯುಧ ಸಮುದಾಯಕ್ಕೆ ವಿರುದ್ಧವಾಗಿ ಫಿರಂಗಿ, ಬಂದೂಕಗಳು ಚಾಲ್ತಿಗೆ ಬರುವಂತೆ ಮಾಡಿತು. ಕೋಲು ಅದರ ಕದನದ-ಶ್ರೇಷ್ಠತೆಯನ್ನು ಕಳೆದುಕೊಂಡಿತು ಹಾಗೂ ಸಿಲಂಬಮ್‌ನ ಕೆಲವು ವ್ಯಾಪಕ ತಂತ್ರಗಳು ಮತ್ತು ಶೈಲಿಗಳು ನಾಶವಾದವು. ಆ ಸಂದರ್ಭದಲ್ಲಿ, ಸಿಲಂಬಮ್‌ [[ಭಾರತ]]ಕ್ಕಿಂತ [[ಆಗ್ನೇಯ ಏಷ್ಯಾ]]ದಲ್ಲಿ ಹೆಚ್ಚು ವ್ಯಾಪಕವಾಗಿ ಹರಡಿತು. ಇದನ್ನೂ ಇಂದೂ ಸಹ [[ಮಲೇಷಿಯಾ]]ದಲ್ಲಿ ಅಭ್ಯಾಸ ಮಾಡಲಾಗುತ್ತದೆ. ಉದಾ. [[ಸೆಲಾಂಗರ್‌]]ನಲ್ಲಿರುವ ಮಲೇಷಿಯನ್ ಸಿಲಂಬಮ್‌ ಸೊಸೈಟಿಯ ಸಂಸ್ಥಾಪಕನಾದ ಮಹಾಗುರು ಶ್ರೀ S. ಅರುಮುಗಮ್; ಅಥವಾ ಪೆನಾಂಗ್‌ನಲ್ಲಿರುವ ಪೆನ್ಸಿಲನ್ ಸಂಸ್ಥೆಯ ಸ್ಥಾಪಕನಾದ ಮಾಸ್ಟರ್ ಅನ್ಬನಾತಮ್.
 
== ತಂತ್ರಗಳು ==
ನೆಗೆಯುವ ತಂತ್ರಗಳು ಮತ್ತು ಕ್ರಮಗಳನ್ನು ಕಲಿಯುವುದಕ್ಕಿಂತ ಮೊದಲು ಆರಂಭದಲ್ಲಿ ಕಾಲ್ಚಳಕವನ್ನು (''ಕಾಲಡಿ'' ) ಕಲಿಸಿಕೊಡಲಾಗುತ್ತದೆ. ಅವರು ಆನಂತರ ಕೋಲಿನ ಚಲನೆಯನ್ನು ನಿಲ್ಲಿಸದೆ ನೆಗೆತಗಳನ್ನು ಬದಲಾಯಿಸುವ ವಿಧಾನಗಳನ್ನು ಕಲಿಯುತ್ತಾರೆ. ಹದಿನಾರು ವಿಧಾನಗಳಿವೆ, ಅವುಗಳಲ್ಲಿ ನಾಲ್ಕು ಅತಿ ಮುಖ್ಯವಾದವು. ಕಾಲ್ಚಳಕ ಕ್ರಮಗಳು ಸಿಲಂಬಮ್‌ ಮತ್ತು [[ಕುಟ್ಟು ವರಿಸೈ]] (ಖಾಲಿ ಕೈಯ ಕಲೆ)ಯ ಪ್ರಮುಖ ಅಂಶಗಳಾಗಿವೆ. ಸಾಂಪ್ರದಾಯಿಕವಾಗಿ, ತರಬೇತಿದಾರರು ಮೊದಲು ದೀರ್ಘಕಾಲದವರೆಗೆ ಕಾಲಡಿಯನ್ನು ಕಲಿಸುತ್ತಾರೆ, ನಂತರ [[ಕುಟ್ಟು ವರಿಸೈ]]ಗೆ ಮುಂದುವರಿಯುತ್ತಾರೆ. [[ಕುಟ್ಟು ವರಿಸೈ]]ಯಲ್ಲಿನ ತರಬೇತಿಯು, ಭಾಗವಹಿಸುವವರಿಗೆ ಖಾಲಿ ಕೈಗಳನ್ನು ಬಳಸುವಾಗ ಸಿಲಂಬಮ್‌ ಕೋಲಿನ ಚಲನೆಗಳ ಬಗ್ಗೆ ನೆನೆಯುವಂತೆ ಮಾಡುತ್ತದೆ. ಆದ್ದರಿಂದ ಕಾಳಗದಾಳುಗಳಿಗೆ ಕೋಲಿನ ತರಬೇತಿಗಿಂತ ಮೊದಲು ಬರಿಯ ಕೈಗಳ ತರಬೇತಿಯನ್ನು ನೀಡಲಾಗುತ್ತದೆ.
 
೪೬ ನೇ ಸಾಲು:
ಸಿಲಂಬಮ್‌ ಶೈಲಿಯ ಚತುರನು [[ವರ್ಮ ಕಲೈ]]ಯಲ್ಲಿ ಪಳಗಿರುತ್ತಾನೆ ಹಾಗೂ ಕಡಿಮೆ ಶಕ್ತಿಯನ್ನು ಬಳಸಿಕೊಂಡು ಹಾನಿಕಾರಿ ಅಥವಾ ಶಕ್ತಿಗುಂದಿಸುವ ಪರಿಣಾಮಗಳನ್ನು ಉಂಟುಮಾಡಲು ದೇಹದ ಮೇಲೆ ಎಲ್ಲಿ ಹೊಡೆಯಬೇಕೆಂಬುದನ್ನು ತಿಳಿದಿರುತ್ತಾನೆ. ಏಕ-ವ್ಯಕ್ತಿಗಳ ಕಾಳಗದಲ್ಲಿ, ಚತುರನು ಕಾದಾಟದ ಸಂದರ್ಭದಲ್ಲಿ ಅನೇಕ ಬಾರಿ ಅವನ ಕೋಲನ್ನು ವಿರೋಧಿಯ ಮಣಿಕಟ್ಟಿಗೆ ಸರಿಸುತ್ತಿರುತ್ತಾನೆ. ಇದನ್ನು ವಿರೋಧಿಯು ಕಾಳಗದ ತೀವ್ರತೆಯಲ್ಲಿ ಗಮನಿಸುವುದಿಲ್ಲ. ಆದರೆ ಒಮ್ಮೆಗೆ ಮಣಿಕಟ್ಟಿನಲ್ಲಿ ತಕ್ಷಣದ ನೋವು ಕಾಣಿಸಿಕೊಂಡಾಗ ವಿರೋಧಿಯು ಯಾವುದು ಹೊಡೆದಿದೆಯೆಂದು ತಿಳಿಯದೆ ತನ್ನಷ್ಟಕ್ಕೇ ಕೋಲನ್ನು ಬಿಸಾಡಿ ಬಿಡುತ್ತಾನೆ. ಇಬ್ಬರು ನಿಪುಣರು ಪರಸ್ಪರ ಕಾದಾಡುವಾಗ, ಒಬ್ಬರು ಮತ್ತೊಬ್ಬರ ಕಾಲಿನ ಹೆಬ್ಬೆರಳಿಗೆ ಹೊಡೆತ ನೀಡುವ ಸವಾಲನ್ನು ಹೊಂದಿರುತ್ತಾರೆ. ಕಾಲಿನ ಹೆಬ್ಬೆರಳಿಗೆ ಹೊಡೆಯುವುದು ಕಾಳಗದಾಳಿಗೆ ಶಕ್ತಿಗುಂದಿಸುವ ಪರಿಣಾಮವನ್ನು ಉಂಟುಮಾಡಿ, ಕಾದಾಟವು ಕೊನೆಗೊಳ್ಳುವಂತೆ ಮಾಡುತ್ತದೆ. ಇದನ್ನು ''ಸೊಲ್ಲಿ ಅದಿತಾಲ್'' ಎಂದು ಕರೆಯಲಾಗುತ್ತದೆ, ಅಂದರೆ "ಸವಾಲೊಡ್ಡುವುದು ಮತ್ತು ಯಶಸ್ವಿಯಾಗಿ ಹೊಡೆಯುವುದು".
 
== ಇವನ್ನೂ ಗಮನಿಸಿ ==
*[[ದ್ರಾವಿಡ ಕದನ-ಕಲೆಗಳು]]
*[[ಭಾರತದ ಕದನ-ಕಲೆಗಳು]]
೫೬ ನೇ ಸಾಲು:
*[[ಸಿಲಾಟ್]]
 
== ಉಲ್ಲೇಖಗಳು ==
{{reflist}}
 
== ಬಾಹ್ಯ ಕೊಂಡಿಗಳು ==
* [http://www.sangam.org/taraki/articles/2006/02-10_Thamizhar_Martial_Arts.php?uid=1510 ]
* [http://www.silambamindia.com/ Silambamindia.com - ಅಫೀಶಿಯಲ್ ಸಿಲಂಬಮ್ ಫೆಡರೇಶನ್ ಆಫ್ ಇಂಡಿಯಾ]
೭೩ ನೇ ಸಾಲು:
}}
 
[[Categoryವರ್ಗ:ದ್ರಾವಿಡ ಕದನ-ಕಲೆಗಳು]]
[[Categoryವರ್ಗ:ತಮಿಳು ಕದನ-ಕಲೆಗಳು]]
[[Categoryವರ್ಗ:ಕೋಲಿನ ಕದನ]]
[[Categoryವರ್ಗ:ಕಾದಾಟ ಕ್ರೀಡೆಗಳು]]
[[ವರ್ಗ:ಕಲೆ]]
 
[[cs:Silambam]]
[[da:Silambam]]
[[en:Silambam]]
"https://kn.wikipedia.org/wiki/ಸಿಲಂಬಾಟ್ಟಮ್‌" ಇಂದ ಪಡೆಯಲ್ಪಟ್ಟಿದೆ