"ಸೂರ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
SpaceEdit ಉಪಯೋಗಿಸಿ ಲೇಖನವನ್ನು ಒಪ್ಪವಾಗಿಸಿದೆ
ಚು (r2.7.2) (Robot: Adding got:𐍃𐌰𐌿𐌹𐌻)
ಚು (SpaceEdit ಉಪಯೋಗಿಸಿ ಲೇಖನವನ್ನು ಒಪ್ಪವಾಗಿಸಿದೆ)
{{ದ್ವಂದ್ವ|ಈ ಲೇಖನವು [[ಸೌರಮಂಡಲ|ಸೌರಮಂಡಲದ]] ಕೇಂದ್ರ ಬಿಂದು '''ಸೂರ್ಯ'''ನ ಬಗ್ಗೆ.| ಸೂರ್ಯ ಹೆಸರಿನ [[ಕನ್ನಡ]] ಚಲನಚಿತ್ರದ ಬಗ್ಗೆ ಮಾಹಿತಿಗೆ [[ಸೂರ್ಯ (ಚಲನಚಿತ್ರ)|ಈ ಲೇಖನ]] ನೋಡಿ.| ಸೂರ್ಯ ಹೆಸರಿನ ದೇವತೆಗೆ [[ಸೂರ್ಯ (ದೇವತೆ)]] ನೋಡಿ}}
 
{{ಟೆಂಪ್ಲೇಟು:ಸೌರಮಂಡಲ Infobox/ಸೂರ್ಯ}}
'''ಸೂರ್ಯ'''ನು [[ಸೌರಮಂಡಲ|ಸೌರಮಂಡಲದ]] ಮಧ್ಯದಲ್ಲಿರುವ [[ನಕ್ಷತ್ರ]]. [[ಭೂಮಿ]] ಮತ್ತು ಬೇರೆ ಕಾಯಗಳು ([[ಗ್ರಹ|ಗ್ರಹಗಳು]]ಗಳು, [[ಉಲ್ಕೆ|ಉಲ್ಕೆಗಳು]]ಗಳು, [[ಧೂಮಕೇತು|ಧೂಮಕೇತುಗಳು]]ಗಳು ಮತ್ತು [[ಧೂಳು]] ಸೇರಿದಂತೆ) ಸೂರ್ಯನನ್ನು ಪರಿಭ್ರಮಿಸುತ್ತವೆ. ಸೂರ್ಯವೊಂದೇ ಸೌರಮಂಡಲದ ೯೯% [[ದ್ರವ್ಯರಾಶಿ|ದ್ರವ್ಯರಾಶಿಯನ್ನು]]ಯನ್ನು ಹೊಂದಿದೆ. ಸೂರ್ಯನ ಬೆಳಕು [[ದ್ಯುತಿಸಂಶ್ಲೇಷಣೆ|ದ್ಯುತಿಸಂಶ್ಲೇಷಣೆಯ]] ಮೂಲಕ ಭೂಮಿಯ ಬಹುತೇಕ ಎಲ್ಲಾ ಜೀವಿಗಳಿಗೂ ಆಧಾರವಾಗಿದ್ದು, ಭೂಮಿಯ [[ಹವಾಮಾನ|ಹವಾಮಾನದ]] ಮೇಲೂ ಪ್ರಭಾವ ಬೀರುತ್ತದೆ.
 
== ಪರಿಚಯ ==
[[ಚಿತ್ರ:The sun1.jpg|thumb|left|ಭೂಮಿಯ ಮೇಲಿನ ಕ್ಯಾಮೆರ [[:en:Photographic lens|ಮಸೂರ]]ಕ್ಕೆ ಕಂಡಂತೆ ಸೂರ್ಯ.]]
ಸೂರ್ಯನ ೭೪% ದ್ರವ್ಯರಾಶಿಯು [[ಜಲಜನಕ|ಜಲಜನಕದಿಂದ]]ದಿಂದ, ೨೫% [[ಹೀಲಿಯಂ|ಹೀಲಿಯಂನಿಂದ]]ನಿಂದ ಮತ್ತು ಉಳಿದ ದ್ರವ್ಯರಾಶಿಯು ಅಲ್ಪ-ಸ್ವಲ್ಪ ಭಾರಿ ವಸ್ತುಗಳಿಂದ ಕೂಡಿದೆ. ಸೂರ್ಯನ [[:en:Stellar classification|ವರ್ಣಪಟಲ ವಿಂಗಡಣೆ]]ಯು G2V. ಸೂರ್ಯನ ಮೇಲ್ಮೈ ತಾಪಮಾನವು ಸುಮಾರು ೫,೦೦೦-ಕೆ. ಗಳಿರುವುದನ್ನು "G2" ಸೂಚಿಸುತ್ತದೆ. ಈ ತಾಪಮಾನವು ಮೇಲ್ಮೈಗೆ ಬಿಳಿ ಬಣ್ಣವನ್ನು ಕೊಟ್ಟರೂ, ವಾಯುಮಂಡಲವು ಬೆಳಕನ್ನು ಚದುರಿಸುವುದರಿಂದ, ಹಳದಿಯಾಗಿ ಕಾಣುತ್ತದೆ. ಇದರ ವರ್ಣಪಟಲವು ಅಯಾನುಗೊಳಿತ ಮತ್ತು ತಟಸ್ಥ ಲೋಹಗಳ ಮತ್ತು ಬಹಳ ದುರ್ಬಲವಾದ ಜಲಜನಕದ [[:en:spectral lines|ವರ್ಣರೇಖೆ]]ಗಳನ್ನು ತೋರಿಸುತ್ತದೆ. ಸೂರ್ಯನು ಬಹುತೇಕ ಇತರೆ ನಕ್ಷತ್ರಗಳಂತೆ [[:en:main sequence|ಪ್ರಮುಖಾನುಕ್ರಮ]] ನಕ್ಷತ್ರವೆಂದು "V" ಪ್ರತ್ಯಯವು ಸೂಚಿಸುತ್ತದೆ. ಇದರರ್ಥ, ಸೂರ್ಯವು [[ಪರಮಾಣು ಬೆಸುಗೆ|ಪರಮಾಣು ಬೆಸುಗೆಯಿಂದ]]ಯಿಂದ [[ಜಲಜನಕ|ಜಲಜನಕವನ್ನು]]ವನ್ನು [[ಹೀಲಿಯಂ]] ಆಗಿ ಪರಿವರ್ತಿಸಿ ಶಕ್ತಿಯನ್ನು ಉತ್ಪಾದಿಸುತ್ತದೆ, ಮತ್ತು ಇದು ಸಮತೋಲನ ಸ್ಥಿತಿಯಲ್ಲಿದ್ದು, ಅದರ ಗಾತ್ರವು ಬದಲಾಗುವುದಿಲ್ಲ ಎಂದು. ನಮ್ಮ ತಾರಾಗಣದಲ್ಲಿ ೧೦ ಕೋಟಿಗಿಂತ ಹೆಚ್ಚು G2 ವರ್ಗದ ನಕ್ಷತ್ರಗಳಿವೆ. ತಾರಾಗಣದಲ್ಲಿರುವ ೮೫% ನಕ್ಷತ್ರಗಳಿಗಿಂತ ಸೂರ್ಯವು ಹೆಚ್ಚು ಪ್ರಕಾಶಮಾನವಾಗಿದೆ. ಈ ೮೫% ನಕ್ಷತ್ರಗಳು [[ಕೆಂಪು ಕುಬ್ಜ]] ರೂಪದಲ್ಲಿವೆ.<ref> http://www.space.com/scienceastronomy/060130_mm_single_stars.html</ref>
 
 
[[ಕ್ಷೀರ ಪಥ]] [[:en:galactic center|ತಾರಾಗಣ ಕೇಂದ್ರ]]ದಿಂದ ಸುಮಾರು ೨೫,೦೦೦-೨೮೦೦೦ [[ಜ್ಯೋತಿರ್ವರ್ಷ|ಜ್ಯೋತಿರ್ವರ್ಷಗಳ]]ಗಳ ದೂರದಲ್ಲಿ ಸೂರ್ಯವು ಪರಿಭ್ರಮಿಸುತ್ತದೆ. ಇದರ ಒಂದು ಪರಿಭ್ರಮಣಕ್ಕೆ ಸುಮಾರು ೨೨೫೨೫ ಕೋಟಿ ವರ್ಷಗಳು ಬೇಕಾಗುತ್ತವೆ. ಇದರ ೨೧೭&nbsp;ಕಿ.ಮೀ./ಕ್ಷಣದ [[ಪರಿಭ್ರಮಣ ವೇಗ|ಪರಿಭ್ರಮಣ ವೇಗವು]]ವು, ಪ್ರತಿ ೧,೪೦೦ ವರ್ಷಗಳಿಗೊಂದು ಜ್ಯೋತಿರ್ವರ್ಷ, ಮತ್ತು ಪ್ರತಿ ೮ ದಿನಗಳಿಗೊಮ್ಮೆ ಒಂದು [[ಖಗೋಳ ಮಾನ|ಖಗೋಳ ಮಾನದ]] ಪ್ರಮಾಣಗಳಿಗೆ ಸಮಾನವಾಗಿದೆ.<ref name="Kerr">{{cite journal |last=Kerr |first=F. J. |coauthors=Lynden-Bell D. |year=1986 |url=http://articles.adsabs.harvard.edu/cgi-bin/nph-iarticle_query?1986MNRAS.221.1023K&amp;data_type=PDF_HIGH&amp;type=PRINTER&amp;filetype=.pdf |title=Review of galactic constants |journal=Monthly Notices of the Royal Astronomical Society |volume=221 |pages=1023-1038}}</ref>
 
ಸೂರ್ಯನು [[:en:Stellar population|ಮೂರನೇ ಪೀಳಿಗೆ]]ಯ ಒಂದು ನಕ್ಷತ್ರ. ಹತ್ತಿರದಲ್ಲುಂಟಾದ [[ತಾರಾಸ್ಫೋಟ|ತಾರಾಸ್ಫೋಟದಿಂದ]]ದಿಂದ ([[:en:supernova|supernova]]) ಹೊರಬಂದ ಆಘಾತತರಂಗಗಳು ಸೂರ್ಯನ ಉದ್ಭವಕ್ಕೆ ಚಾಲನೆಯನ್ನು ಕೊಟ್ಟಿದ್ದಿರಬಹುದು. ಸೌರಮಂಡಲದಲ್ಲಿ ಹೇರಳವಾಗಿ ಕಂಡುಬರುವ [[ಚಿನ್ನ]], [[ಯುರೇನಿಯಂ|ಯುರೇನಿಯಂಗಳಂಥ]]ಗಳಂಥ ಭಾರವಸ್ತುಗಳ ಅಸ್ತಿತ್ವವು ಈ ರೀತಿಯ ಉದ್ಭವವನ್ನು ಸೂಚಿಸುತ್ತವೆ; ಈ ಮೂಲವಸ್ತುಗಳು, ತಾರಾಸ್ಫೋಟದ ಸಮಯದಲ್ಲಿ ಉಂಟಾದ ಪರಮಾಣು ಕ್ರಿಯೆಯಿಂದ, ಅಥವಾ ಒಂದು ಬೃಹತ್ ಎರಡನೇ ಪೀಳಿಗೆಯ ನಕ್ಷತ್ರದಲ್ಲಿ [[ನ್ಯೂಟ್ರಾನ್]] ಹೀರುವಿಕೆಯಿಂದ ಉಂಟಾದ [[ರೂಪ ಬದಲಾವಣೆ|ರೂಪ ಬದಲಾವಣೆಯಿಂದ]]ಯಿಂದ ([[:en:transmutation|transmutation]]) ಸೃಷ್ಟಿಯಾಗಿದ್ದಿರಬಹುದು.
 
[[ಭೂಮಿ|ಭೂಮಿಯ]] ಮೇಲ್ಮೈನ ಹತ್ತಿರ ಸೂರ್ಯನ ಬೆಳಕೇ ಶಕ್ತಿಯ ಮುಖ್ಯ ಮೂಲ. ಸೂರ್ಯನತ್ತ ನೇರವಾಗಿ ಮುಖಮಾಡಿರುವ ಏಕಮಾನ ವಿಸ್ತೀರ್ಣದ ಮೇಲೆ ಬೀಳುವ ಸೌರಶಕ್ತಿಯನ್ನು [[:en:solar constant|ಸೌರ ಸ್ಥಿರ]]ವೆಂದು ಕರೆಯಲಾಗುತ್ತದೆ. ಈ ಪ್ರಮಾಣವು ೧ [[:en:astronomical uni|ಖಗೋಳ ಮಾನ]] ಅಥವಾ ಸೂರ್ಯನಿಂದ ಭೂಮಿಯಿರುವ ದೂರದಲ್ಲಿ ಸುಮಾರು ೧,೩೭೦-[[:en:watt|ವ್ಯಾಟ್]]/ಚ.ಮೀ. ನಷ್ಟಿದೆ. ವಿವಿಧ ನೈಸರ್ಗಿಕ ಮತ್ತು ಸಂಶ್ಲಿಷ್ಟ ಪ್ರಕ್ರಿಯೆಗಳಿಂದ ಈ ಶಕ್ತಿಯನ್ನು ಉಪಯೋಗಿಸಿಕೊಳ್ಳಬಹುದು. ಮರ-ಗಿಡಗಳಲ್ಲಿ ನಡೆಯುವ [[ದ್ಯುತಿಸಂಶ್ಲೇಷಣೆ|ದ್ಯುತಿಸಂಶ್ಲೇಷಣೆಯು]]ಯು ಈ ಶಕ್ತಿಯನ್ನು ಹಿಡಿದು ಆಮ್ಲಜನಕ ಮತ್ತು ಇಂಗಾಲದ ಸಂಯುಕ್ತಗಳ ರಸಾಯನಿಕ ರೂಪಕ್ಕೆ ಪರಿವರ್ತಿಸುತ್ತದೆ. [[:en:solar cells|ಸೌರ ಕೋಶ]]ಗಳು ಸೌರಶಕ್ತಿಯನ್ನು [[ವಿದ್ಯುಚ್ಛಕ್ತಿ|ವಿದ್ಯುಚ್ಛಕ್ತಿಯನ್ನಾಗಿ]]ಯನ್ನಾಗಿ ಪರಿವರ್ತಿಸುತ್ತವೆ. ಹಿಂದಿನ ಕಾಲದಲ್ಲಿ [[ದ್ಯುತಿಸಂಶ್ಲೇಷಣೆ|ದ್ಯುತಿಸಂಶ್ಲೇಷಣೆಯು]]ಯು ಸೌರಶಕ್ತಿಯನ್ನು ಪರಿವರ್ತಿಸಿ, [[:en:petroleum|ಕಲ್ಲೆಣ್ಣೆ]] ಮತ್ತು ಇತರ [[ಇಂಧನ|ಇಂಧನಗಳಲ್ಲಿ]]ಗಳಲ್ಲಿ ಶೇಖರಿಸಿತು.
 
ಸೂರ್ಯಪ್ರಕಾಶವು ಹಲವು ಆಸಕ್ತಿಕರ ಜೈವಿಕ ಗುಣಗಳನ್ನು ಹೊಂದಿದೆ. ಸೂರ್ಯನ [[ಅತಿನೇರಳೆ]] ಕಿರಣಗಳು [[:en:antiseptic|ನಂಜು ನಿವಾರಕ]] ಗುಣಗಳನ್ನು ಹೊಂದಿದ್ದು, ಇದನ್ನು ಕ್ರಿಮಿನಿವಾರಣೆಗೆ ಬಳಸಬಹುದು. ಇದು ಚರ್ಮದ ಮೇಲೆ ಕೆಂಪು ಸುಡುಗಾಯಗಳನ್ನು ಮಾಡುವುದಲ್ಲದೆ, [[:en:Vitamin D|ವಿಟಮಿನ್ ಡಿ]] ಉತ್ಪಾದನೆಯಂತಹ ಕೆಲವು ವೈದ್ಯಕೀಯ ಗುಣಗಳನ್ನೂ ಹೊಂದಿದೆ. ಭೂಮಿಯ ವಾಯುಮಂಡಲವು ಅತಿನೇರಳೆ ಬೆಳಕನ್ನು ಹೀರಿಕೊಂಡು ದುರ್ಬಲಗೊಳಿಸುವುದರಿಂದ, ಬೆಳಕಿನ ಶಕ್ತಿಯು [[ಅಕ್ಷಾಂಶ|ಅಕ್ಷಾಂಶದೊಂದಿಗೆ]]ದೊಂದಿಗೆ ಬದಲಾಗುತ್ತದೆ. ಹೆಚ್ಚು ಅಕ್ಷಾಂಶದ ಜಾಗಗಳಲ್ಲಿ ಬೆಳಕು ವಾಯುಮಂಡಲದ ಮೂಲಕ ಹೆಚ್ಚು ದೂರವನ್ನು ಕ್ರಮಿಸುವುದರಿಂದ, ಹೆಚ್ಚು ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಅತಿನೇರಳೆ ಬೆಳಕಿನ ತೀವ್ರತೆಯಲ್ಲಿ ಉಂಟಾಗುವ ಈ ವ್ಯತ್ಯಾಸಗಳಿಂದ, ಮನುಷ್ಯರಲ್ಲಿ ವರ್ಣಭಿನ್ನತೆಯೂ ಸೇರಿದಂತೆ ಹಲವು ಜೈವಿಕ ಹೊಂದಾಣಿಕೆಗಳು ಉಂಟಾಗಿವೆ.
 
ಸೂರ್ಯವು ಕಾಂತೀಯವಾಗಿ ಚಟುವಟಿಕೆಯಿಂದಿರುವ ನಕ್ಷತ್ರ; ಇದು ಪ್ರತಿ ೧೧ ವರ್ಷಗಳಿಗೊಮ್ಮೆ ತಿರುಗುಮುರುಗಾಗುವ ಪ್ರಬಲವಾದ [[ಕಾಂತಕ್ಷೇತ್ರ|ಕಾಂತಕ್ಷೇತ್ರವನ್ನು]]ವನ್ನು ಹೊಂದಿದೆ. ಸೂರ್ಯನ ಕಾಂತಕ್ಷೇತ್ರವು ಉಂಟುಮಾಡುವ ಹಲವು ಪರಿಣಾಮಗಳನ್ನು ಒಟ್ಟಾಗಿ [[:en:Solar variation|ಸೌರ ಚಟುವಟಿಕೆಗಳು]] ಎಂದು ಕರೆಯಲಾಗುತ್ತದೆ. ಇದರಲ್ಲಿ ಸೂರ್ಯನ ಮೇಲ್ಮೈ ಮೇಲಿರುವ [[:en:sunspot|ಸೌರಕಲೆ]]ಗಳು, [[:en:solar flares|ಸೌರ ಜ್ವಾಲೆ]]ಗಳು, ಮತ್ತು ಸೌರಮಂಡಲದೊಳಗೆ ಪದಾರ್ಥಗಳನ್ನು ಸಾಗಿಸುವ [[ಸೌರಮಾರುತ|ಸೌರಮಾರುತಗಳ]]ಗಳ ಬದಲಾವಣೆಗಳು ಸೇರಿವೆ. ಸೂರ್ಯನ ಚಟುವಟಿಕೆಗಳು ಭೂಮಿಯ ಮೇಲೂ ಪರಿಣಾಮಗಳನ್ನು ಉಂಟುಮಾಡುತ್ತವೆ. ಉದಾಹರಣೆಗೆ, [[ಧ್ರುವಾರುಣ ಜ್ಯೋತಿ]] ಮತ್ತು ರೇಡಿಯೊ-ಸಂಪರ್ಕ/ವಿದ್ಯುತ್-ಪ್ರವಾಹಗಳಲ್ಲಿ ಅಡಚಣೆಗಳು. [[ಸೌರಮಂಡಲ|ಸೌರಮಂಡಲದ]] [[:en:solar nebula|ರೂಪಿಸುವಿಕೆ]] ಮತ್ತು ವಿಕಾಸದಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆಯೆಂದು ನಂಬಲಾಗಿರುವ ಸೌರ ಚಟುವಟಿಕೆಗಳು ಭೂಮಿಯ [[:en:thermosphere|ಹೊರ ವಾಯುಮಂಡಲ]]ದ ವಿನ್ಯಾಸದ ಮೇಲೂ ಆಳವಾದ ಪ್ರಭಾವವನ್ನು ಬೀರುತ್ತದೆ.
 
ಸೂರ್ಯನು ಭೂಮಿಯ ಅತ್ಯಂತ ನಿಕಟದಲ್ಲಿರುವ ನಕ್ಷತ್ರವಾದ್ದರಿಂದ, ವಿಜ್ಞಾನಿಗಳು ಸೂರ್ಯನನ್ನು ವ್ಯಾಪಕವಾಗಿ ಅಧ್ಯಯನ ಮಾಡಿದ್ದಾರೆ. ಆದರೂ, ಸೂರ್ಯನ ಬಗ್ಗೆ ಹಲವಾರು ಪ್ರಶ್ನೆಗಳಿಗೆ ಇನ್ನೂ ಉತ್ತರಗಳು ದೊರಕಿಲ್ಲ. ಹತ್ತು ಲಕ್ಷ [[:en:Kelvin|ಕೆ.]]ಗಿಂತಲೂ ಹೆಚ್ಚು ಬಿಸಿಯಾಗಿರುವ ಹೊರ ವಾಯುಮಂಡಲವನ್ನು ಹೊಂದಿದ್ದರೂ, ಅದರ ಗೋಚರ ಮೇಲ್ಮೈ ([[:en:photosphere|ದ್ಯುತಿಗೋಳ]]) ಕೇವಲ ೬,೦೦೦ ಕೆ.ಗಳ ತಾಪಮಾನದಲ್ಲಿ ಹೇಗಿದೆ? ಎಂಬುದೂ ಈ ಪ್ರಶ್ನೆಗಳಲ್ಲೊಂದು. [[:en:sunspot|ಸೌರಕಲೆ]]ಗಳ ಕ್ರಮಬದ್ಧ ಚಟುವಟಿಕೆಗಳು, [[:en:solar flare|ಸೌರ ಜ್ವಾಲೆ]]ಗಳ ಉದ್ಭವದ ಕಾರಣ, [[:en:chromosphere|ವರ್ಣಗೋಳ]] ಮತ್ತು [[:en:corona|ಪ್ರಭಾವಲಯ]]ಗಳ ನಡುವೆ ಕಾಂತೀಯ ಒಡನಾಟ, [[:en:solar wind|ಸೌರಮಾರುತ]]ದ ಉದ್ಭವ - ಇವುಗಳು ಪ್ರಸ್ತುತದಲ್ಲಿ ಸಂಶೋಧನೆಗೆ ಒಳಪಟ್ಟಿರುವ ವಿಷಯಗಳು.
[[:en:Stellar nucleosynthesis|ಪರಮಾಣು ಬೆಸುಗೆಯಿಂದ]] ಜಲಜನಕವು ಹೀಲಿಯಂ ಆಗಿ ಪರಿವರ್ತಿತವಾಗುವ ಸೂರ್ಯನ [[:en:main sequence|ಪ್ರಮುಖಾನುಕ್ರಮ]] [[:en:stellar evolution|ವಿಕಸನ]] ಕಾಲದಲ್ಲಿ ಅರ್ಧ ಕಾಲವು ಈಗಾಗಲೇ ಮುಗಿದಿದೆ. ಸೂರ್ಯನ ಒಳಭಾಗದಲ್ಲಿ ಪ್ರತಿ ಕ್ಷಣವೂ ಸುಮಾರು ೪೦ ಲಕ್ಷ [[:en:tonne|ಟನ್ನು]]ಗಳಷ್ಟು ದ್ರವ್ಯರಾಶಿಯು ಶಕ್ತಿಯಾಗಿ ಪರಿವರ್ತಿತವಾಗಿ, [[:en:neutrino|ನ್ಯೂಟ್ರಿನೊ]] ಮತ್ತು [[:en:solar radiation|ಸೌರ ವಿಕಿರಣ]]ಗಳು ಉದ್ಭವವಾಗುತ್ತವೆ. ತನ್ನ ಜೀವಾವಧಿಯಲ್ಲಿ ಸೂರ್ಯವು ಸುಮಾರು ಒಟ್ಟಾರೆ ೧೦೦೦ ಕೋಟಿ ವರ್ಷಗಳ ಕಾಲ ಪ್ರಮುಖಾನುಕ್ರಮ ನಕ್ಷತ್ರವಾಗಿರುತ್ತದೆ.
 
[[ತಾರಾಸ್ಫೋಟ|ತಾರಾಸ್ಫೋಟದಂತೆ]]ದಂತೆ ಕೊನೆಗಾಣಲು ಸಾಕಷ್ಟು ದ್ರವ್ಯರಾಶಿಯನ್ನು ಸೂರ್ಯವು ಹೊಂದಿಲ್ಲ. ಬದಲಿಗೆ, ಇನ್ನು ಸುಮಾರು ೪-೫ ಶತಕೋಟಿ ವರ್ಷಗಳಲ್ಲಿ ಸೂರ್ಯವು [[ಕೆಂಪು ದೈತ್ಯ|ಕೆಂಪು ದೈತ್ಯದ]] ಹಂತವನ್ನು ತಲುಪುತ್ತದೆ. ಅದರ ಒಳಭಾಗದಲ್ಲಿರುವ ಜಲಜನಕ ಇಂಧನವು ಬಳಸಲಾಗಿ, ಒಳಭಾಗವು ಸಂಕುಚಿಸಿ ಬಿಸಿಯಾಗಿ, ಹೊರಪದರಗಳು ಹಿಗ್ಗುತ್ತವೆ. ಒಳಭಾಗದ ತಾಪಮಾನವು ೧೦ ಕೋಟಿ ಕೆ. ತಲುಪಿದಾಗ ಹೀಲಿಯಂ ಬೆಸುಗೆಯು ಶುರುವಾಗಿ, ಇಂಗಾಲ ಮತ್ತು ಆಮ್ಲಜನಕಗಳು ಸೃಷ್ಟಿಯಾಗುತ್ತವೆ. ಭೂಮಿಯು ಪ್ರಸ್ತುತದಲ್ಲಿರುವ ದೂರದವರೆಗೂ ಸೂರ್ಯನ ಹೊರಪದರಾಗಳು ಹಿಗ್ಗಿದರೂ, ಸೂರ್ಯನು ತನ್ನ ಕೆಂಪು ದೈತ್ಯ ಹಂತದಲ್ಲಿ ದ್ರವ್ಯರಾಶಿಯನ್ನು ಕಳೆದುಕೊಳ್ಳುವುದರಿಂದ, ಭೂಮಿಯ ಕಕ್ಷೆಯು ಇನ್ನೂ ದೂರವಾಗುತ್ತದೆ ಎಂದು ಇತ್ತೀಚೆಗಿನ ಸಂಶೋಧನೆಗಳು ತೋರಿಸುತ್ತವೆ. ಆದರೆ, ಭೂಮಿಯ ಮೇಲಿನ ನೀರು ಮತ್ತು ಬಹುತೇಕ ವಾಯುಮಂಡಲವು ಅಪಾರ ಶಾಖದಿಂದ ಇಂಗಿ ಹೋಗುತ್ತವೆ.
ಕೆಂಪು ದೈತ್ಯ ಹಂತದ ನಂತರ, ಉಷ್ಣತೆಯ ತೀವ್ರವಾದ ಮಿಡಿತಗಳಿಂದ, ಸೂರ್ಯವು ತನ್ನ ಹೊರ ಪದರಗಳನ್ನು ಕಳೆದುಕೊಂದು [[:en:planetary nebula|ಗ್ರಹ ಜ್ಯೋತಿಪಟಲ]]ವಾಗಿ ಮಾರ್ಪಡುತ್ತದೆ. ಹೊರ ಪದರಗಳನ್ನು ಕಳೆದುಕೊಂಡ ಮೇಲೆ ಉಳಿದ ಅತ್ಯಂತ ಬಿಸಿಯಾದ ನಾಕ್ಷತ್ರಿಕ ಒಳಭಾಗವು ನೂರಾರು ಕೋಟಿ ವರ್ಷಗಳ ಕಾಲಾವಧಿಯಲ್ಲಿ ನಿಧಾನವಾಗಿ ತಣ್ಣಗಾಗಿ [[:en:white dwarf|ಶ್ವೇತ ಕುಬ್ಜ]]ದಂತೆ ನಂದಿಹೋಗುತ್ತದೆ. [[:en:stellar evolution|ನಾಕ್ಷತ್ರಿಕ ವಿಕಸನ]]ದಲ್ಲಿ ಈ ರೀತಿಯ ಘಟನಾವಳಿಗಳು ಸಣ್ಣ ಮತ್ತು ಮಧ್ಯ ಪ್ರಮಾಣದ ನಕ್ಷತ್ರಗಳಲ್ಲಿ ಸಾಮಾನ್ಯವಾಗಿ ನಡೆಯುತ್ತವೆ.<ref name="future-sun">[http://www-astronomy.mps.ohio-state.edu/~pogge/Lectures/vistas97.html The Once & Future Sun</ref><ref name="Sackmann">[http://adsabs.harvard.edu/cgi-bin/nph-bib_query?1993ApJ%2E%2E%2E418%2E%2E457S&db_key=AST&high=24809&nosetcookie=1 Our Sun. III. Present and Future]</ref>
 
== ರಚನೆ ==
[[ಚಿತ್ರ:Sun,_Earth_size_comparison_labeled.jpg|thumb|left|270px|ಸೂರ್ಯನ ವ್ಯಾಸವು ಭೂಮಿಯ ವ್ಯಾಸದ ಸುಮಾರು ೧೧೦ ಪಟ್ಟು ಇದೆ.]]
ಸೂರ್ಯನು ಸಾಮಾನ್ಯ-ಗಾತ್ರದ ನಕ್ಷತ್ರವಾದರೂ, ಅದು ಸೌರಮಂಡಲದ ೯೯% ದ್ರವ್ಯರಾಶಿಯನ್ನು ಹೊಂದಿದೆ. ಸೂರ್ಯನ ಆಕಾರವು ಶುದ್ಧ [ಗೋಳಾಕಾರ]]ಕ್ಕೆ ಬಹಳ ಹತ್ತಿರದಲ್ಲಿದೆ.<ref name="Godier">{{cite journal |last=Godier |first=S. |coauthors=Rozelot J.-P. |year=2000 |url=http://aa.springer.de/papers/0355001/2300365.pdf |title=The solar oblateness and its relationship with the structure of the tachocline and of the Sun's subsurface |journal=Astronomy and Astrophysics |volume=355 |pages=365-374}}</ref> ಸೂರ್ಯನ ಸಮಭಾಜಕ ಮತ್ತು ಧ್ರುವಗಳ ಮೂಲಕ ವ್ಯಾಸಗಳಲ್ಲಿ ಕೇವಲ ೧೦ ಕಿ.ಮೀ. ಗಳ ವ್ಯತ್ಯಾಸವಿದೆ. ಸೂರ್ಯನು ಒಂದು ಘನ ಕಾಯದಂತೆ ಪರಿಭ್ರಮಿಸುವುದಿಲ್ಲ (ಪರಿಭ್ರಮಣ ಕಾಲಗಳು: [[ಸಮಭಾಜಕ|ಸಮಭಾಜಕದಲ್ಲಿ]]ದಲ್ಲಿ ೨೫ ದಿನಗಳು ಮತ್ತು [[ಧ್ರುವ|ಧ್ರುವಗಳಲ್ಲಿ]]ಗಳಲ್ಲಿ ೨೮ ದಿನಗಳು). ಇದು ಒಟ್ಟಾರೆ ಪರಿಭ್ರಮಣಕ್ಕೆ ಸುಮಾರು ೨೮ ದಿನಗಳನ್ನು ತೆಗೆದುಕೊಳ್ಳುತ್ತದೆ; ಈ ನಿಧಾನವಾದ [[:en:Solar rotation|ಸೌರ ಪರಿಭ್ರಮಣ]]ದಿಂದ ಉಂಟಾಗುವ ಕೇಂದ್ರಾಪಗಾಮಿ ಬಲಕಿಇಂತ ಸೂರ್ಯನ ಸಮಭಾಜಕದಲ್ಲಿರುವ ಗುರುತ್ವ ಬಲವು ೧.೮ ಕೋಟಿ ಪಟ್ಟು ಹೆಚ್ಚು ಶಕ್ತಿಯುತವಾಗಿದೆ. ಗ್ರಹಗಳು ಉಂಟುಮಾಡುವ ಉಬ್ಬರವಿಳಿತಗಳು ಸೂರ್ಯನ ಆಕಾರದ ಮೇಲೆ ಗಮನಾರ್ಹವಾದ ಪರಿಣಾಮವನ್ನು ಬೀರುವುದಿಲ್ಲ.
 
ಘನರೂಪಿ ಗ್ರಹಗಳಲ್ಲಿ ಕಾಣುವ ಸ್ಫುಟವಾಗಿ ಗುರುತಿಸಲ್ಪಟ್ಟ ಸೀಮಾರೇಖೆಯು ಸೂರ್ಯನಲ್ಲಿ ಕಾಣುವುದಿಲ್ಲ; ಸೂರ್ಯನಲ್ಲಿ ಅನಿಲದ ಸಾಂದ್ರತೆಯು ಕೇಂದ್ರದಿಂದ ಇರುವ ದೂರದ ಪ್ರಮಾಣದ ಸುಮಾರು [[:en:Exponential distribution|ಘಾತಾನುಸಾರ]]ದ ಅನುಪಾತದಲ್ಲಿ ಕಡಿಮೆಯಾಗುತ್ತದೆ. ಆದರೂ, ಈ ಕೆಳಗೆ ವಿವರಿಸಿದಂತೆ, ಸೂರ್ಯವು ಚೆನ್ನಾಗಿ ಗುರುತಿಸಬಹುದಾದ ಆಂತರಿಕ ರಚನೆಯನ್ನು ಹೊಂದಿದೆ. ಸೂರ್ಯನ ಕೇಂದ್ರದಿಂದ [[:en:photosphere|ದ್ಯುತಿಗೋಳ]]ದ ತುದಿಯವರೆಗಿರುವ ದೂರವನ್ನು ತ್ರಿಜ್ಯವೆಂದು ಪರಿಗಣಿಸಲಾಗುತ್ತದೆ. ಈ ತುದಿಯ ಹೊರಗಡೆ ಅನಿಲಗಳೌ [[:en:Transparency (optics)|ಪಾರದರ್ಶಕ]]ವಾಗಿದ್ದು, ತುದಿಯ ಒಳಭಾಗದಲ್ಲಿ ಅನಿಲಗಳು [[:en:opacity|ಅಪಾರದರ್ಶಕ]]ವಾಗಿರುತ್ತವೆ; ದ್ಯುತಿಗೋಳವು ಬರಿಗಣ್ಣಿಗೆ ಅತಿ ಸುಲಭವಾಗಿ ಕಾಣುತ್ತದೆ. ಸೂರ್ಯನ ಬಹುತೇಕ ದ್ರವ್ಯರಾಶಿಯು ಕೇಂದ್ರದಿಂದ ೦.೭ ತ್ರಿಜ್ಯಗಳ ಒಳಗೆ ಸ್ಥಿತವಾಗಿದೆ.
 
ಸೌರ-ಒಳಭಾಗವನ್ನು ನೇರವಾಗಿ ವೀಕ್ಷಿಸಲಾಗುವುದಿಲ್ಲ, ಮತ್ತು ಸೂರ್ಯವು [[ವಿದ್ಯುತ್ಕಾಂತೀಯ ವಿಕಿರಣ|ವಿದ್ಯುತ್ಕಾಂತೀಯ ವಿಕಿರಣಕ್ಕೆ]]ಕ್ಕೆ ಅಪಾರದರ್ಶಕವಾಗಿದೆ. [[ಭೂಕಂಪ ವಿಜ್ಞಾನ|ಭೂಕಂಪ ವಿಜ್ಞಾನವು]]ವು [[ಭೂಕಂಪ|ಭೂಕಂಪದಿಂದ]]ದಿಂದ ಉಂಟಾಗುವ ಅಲೆಗಳಿಂದ ಭೂಮಿಯ ಆಂತರಿಕ ರಚನೆಯನ್ನು ತರ್ಕಿಸುವಂತೆ, [[ಸೌರಕಂಪ ವಿಜ್ಞಾನ|ಸೌರಕಂಪ ವಿಜ್ಞಾನವು]]ವು ಸೂರ್ಯನ ಒಳಭಾಗದಲ್ಲಿ ಉಂಟಾಗುವ ಒತ್ತಡದ ಅಲೆಗಳನ್ನು ಮಾಪಿಸಿ ಅದರ ಆಂತರಿಕ ರಚನೆಯನ್ನು ತಿಳಿದುಕೊಳ್ಳುತ್ತದೆ. ಸೂರ್ಯನ ಒಳ ಪದರಗಳನ್ನು ಪರಿಶೀಲಿಸಲು ಅದರ [[:en:Computer modeling|ಗಣಕೀಕೃತ ಮಾದರಿ]]ಗಳನ್ನೂ ಬಳಸಲಾಗುತ್ತದೆ.
 
=== ಒಳಭಾಗ ===
ಕೇಂದ್ರದಿಂದ ಸುಮಾರು ೦.೨ ಸೌರ ತ್ರಿಜ್ಯಗಳವರೆಗೆ ವ್ಯಾಪಿಸಿರುವ ವಲಯವನ್ನು ಸೂರ್ಯನ ಒಳಭಾಗ ಎಂದು ಪರಿಗಣಿಸಲಾಗಿದೆ. ಈ ಭಾಗವು ೧೫೦,೦೦೦ ಕಿ.ಗ್ರಾಂ/ಮೀ<sup>೩</sup> ಗಳವರೆಗೂ ಸಾಂದ್ರತೆಯನ್ನು ಹೊಂದಿದ್ದು (ಭೂಮಿಯ ಮೇಲೆ ನೀರಿನ ಸಾಂದ್ರತೆಯ ೧೫೦ ಪಟ್ಟು) ಸುಮಾರು ೧೩,೬೦೦,೦೦೦ ಕೆ. ಗಳಷ್ಟು ತಾಪಮಾನದಲ್ಲಿದೆ (ಹೋಲಿಕೆಯಲ್ಲಿ, ಸೂರ್ಯನ ಮೇಲ್ಮೈ ತಾಪಮಾನವು ಕೇವಲ ೫,೭೮೫ ಕೆ. ಗಳು (ಒಳಭಾಗದ ೧/೨೩೫೦ ರಷ್ಟು). ಸೂರ್ಯನ ಬಹುತೇಕ ಆಯುಷ್ಯದಲ್ಲಿ, p-p (ಪ್ರೋಟಾನ್-ಪ್ರೋಟಾನ್) ಸರಣಿಯೆಂದು ಕರೆಯಲಾಗುವ ಸರಣಿ ಹಂತದ [[ಪರಮಾಣು ಬೆಸುಗೆ|ಪರಮಾಣು ಬೆಸುಗೆಯಿಂದ]]ಯಿಂದ ಶಕ್ತಿಯು ಉತ್ಪತ್ತಿಯಾಗುತ್ತದೆ; ಈ ಪ್ರಕ್ರಿಯೆಯು [[ಜಲಜನಕ|ಜಲಜನಕವನ್ನು]]ವನ್ನು [[ಹೀಲಿಯಂ]] ಆಗಿ ಪರಿವರ್ತಿಸುತ್ತದೆ. ಈ ಬೆಸುಗೆಯಿಂದ ಗಮನಾರ್ಹವಾದ [[ಶಾಖ|ಶಾಖವನ್ನು]]ವನ್ನು ಉತ್ಪತ್ತಿಸುವುದು ಸೂರ್ಯನ ಒಳಭಾಗ ಮಾತ್ರ; ಸೂರ್ಯನ ಉಳಿದ ಭಾಗಗಳು ಒಳಭಾಗದಿಂದ ಹೊರಬರುವ ಶಕ್ತಿಯಿಂದ ಬಿಸಿಯಾಗುತ್ತವೆ. ಶಕ್ತಿಯು [[ಸೂರ್ಯನ ಬೆಳಕು]] ಅಥವಾ [[ಚಲನ ಶಕ್ತಿ|ಚಲನ ಶಕ್ತಿಯಾಗಿ]]ಯಾಗಿ ಬಾಹ್ಯಾಕಾಶಕ್ಕೆ ಹೋಗುವ ಮುನ್ನ ಸೂರ್ಯನ ವಿವಿಧ ಪದರಗಳ ಮೂಲಕ ಹಾದುಹೋಗಬೇಕು.
 
ಪ್ರತಿ ಕ್ಷಣವೂ ಸುಮಾರು ೮.೯{{e|೩೭}} [[ಪ್ರೋಟಾನ್|ಪ್ರೋಟಾನ್‌ಗಳು]]ಗಳು (ಜಲಜನಕದ ಪರಮಾಣುವಿನ ಕೇಂದ್ರ) ಹೀಲಿಯಂ ಪರಮಾಣುವಿನ ಕೇಂದ್ರವಾಗಿ ಪರಿವರ್ತಿತವಾಗುತ್ತವೆ. ಇದು ೩೮೩{{e|೨೪}} ವ್ಯಾಟ್‌ಗಳು, ಅಥವಾ ಪ್ರತಿ ಕ್ಷಣ ೯.೧೫{{e|೯}} ಕೋಟಿ ಟನ್ನುಗಳ [[:en:Trinitrotoluene|ಟಿ ಎನ್ ಟಿ]] ಸ್ಫೋಟದಷ್ಟು ಸರಿಸುಮಾರು ಶಕ್ತಿ. ಪರಮಾಣು ಬೆಸುಗೆಯ ವೇಗವು ಅನಿಲದ ಸಾಂದ್ರತೆಯ ಮೇಲೆ ಅವಲಂಬಿತವಾಗಿರುವುದರಿಂದ, ಸೂರ್ಯನ ಒಳಭಾಗದಲ್ಲಿ ಬೆಸುಗೆಯು ಸ್ವಯಂ-ತಿದ್ದಿಕೊಳ್ಳುವ ಒಂದು ಸಮತೋಲನ ಸ್ಥಿತಿಯಲ್ಲಿದೆ: ಈ ವೇಗವು ಸ್ವಲ್ಪ ಹೆಚ್ಚಾದರೆ ಒಳಭಾಗವು ಬಿಸಿಯಾಗಿ [[:en:thermal expansion|ಹಿಗ್ಗಿ]], ಬೆಸುಗೆಯನ್ನು ನಿಧಾನಗೊಳಿಸುತ್ತದೆ; ಇದೇ ರೀತಿ, ಬೆಸುಗೆಯು ನಿಧಾನವಾದಾಗ ಒಳಭಾಗವು ಸಂಕುಚಿಸಿ, ಲಭ್ಯವಿರುವ ಕಡಿಮೆ ಪ್ರದೇಶದಲ್ಲಿ ಬೆಸುಗೆಯು ಮತ್ತೆ ವೇಗವಾಗಿ ಆಗಲು ಶುರುವಾಗುತ್ತದೆ.
 
[[:en:nuclear fusion|ಪರಮಾಣು ಬೆಸುಗೆ]]ಯಿಂದ ಹೊರಬರುವ ಶಕ್ತಿಯುತ [[:en:photon|ಫೋಟಾನು]]ಗಳು (ಗಾಮಾ ಮತ್ತು ಕ್ಷ-ಕಿರಣ) ಸೂರ್ಯನ ಮೇಲ್ಮೈ ತಲುಪಲು ವರ್ಷಗಳೇ ಬೇಕಾಗುತ್ತವೆ. ಈ "ಫೋಟಾನ್ ಯಾತ್ರಾಸಮಯ"ದ ಅಂದಾಜುಗಳು ೫ ಕೋಟಿ ವರ್ಷಗಳಿಂದ<ref name="Lewis">{{cite book |last=Lewis |first=Richard |year=1983 |title=The Illustrated Encyclopedia of the Universe |publisher=Harmony Books, New York |pages=65}}</ref> ೧೭,೦೦೦ ವರ್ಷಗಳವರೆಗೂ<ref name="Bad Astronomy">[http://www.badastronomy.com/bitesize/solar_system/sun.html Bitesize Tour of the Solar System: The Long Climb from the Sun's Core]</ref> ಇವೆ. ಒಮ್ಮೆ ದ್ಯುತಿಗೋಳದ ಪಾರದರ್ಶಕ "ಮೇಲ್ಮೈ"ಯನ್ನು ತಲುಪಿದ ಮೇಲೆ ಫೋಟಾನುಗಳು [[visible light|ಗೋಚರ ಬೆಳಕಿನಂತೆ]] ಹೊರಬರುತ್ತವೆ. ಬಾಹ್ಯಾಕಾಶಕ್ಕೆ ಹೋಗುವ ಮುನ್ನ, ಸೂರ್ಯನ ಒಳಭಾಗದಲ್ಲಿರುವ ಪ್ರತಿ ಗಾಮಾ ಕಿರಣವೂ ಲಕ್ಷಾಂತರ ಫೋಟಾನುಗಳಾಗಿ ಮಾರ್ಪಡುತ್ತದೆ. ಪರಮಾಣು ಬೆಸುಗೆಯಿಂದ [[:en:Neutrino|ನ್ಯೂಟ್ರಿನೊ]]ಗಳೂ ಉದ್ಭವವಾಗುತ್ತವೆ. ಆದರೆ ಇವು ಬೇರೆ ಪದಾರ್ಥಗಳ ಜೊತೆ ಪ್ರತಿಕ್ರಿಯಿಸುವುದಿಲ್ಲವಾದ್ದರಿಂದ, ಇವು ಹುಟ್ಟಿದ ತಕ್ಷಣವೇ ಸೂರ್ಯನಿಂದ ಹೊರಬರುತ್ತವೆ. ಹಲವು ವರ್ಷಗಳವರೆಗೆ, [[:en:Solar neutrino problem|ಸಿದ್ಧಾಂತಗಳು ಸೂಚಿಸಿದ್ದಕ್ಕಿಂತ ಬಹಳ ಕಡಿಮೆ]] ಪ್ರಮಾಣವನ್ನು ನ್ಯೂಟ್ರಿನೊ ಮಾಪನಗಳು ತೋರಿಸಿದವು. ಇತ್ತೀಚೆಗೆ [[:en:neutrino oscillation|ನ್ಯೂಟ್ರಿನೊ ಓಲಾಟ]]ದ ಪರಿಣಾಮವು ಚೆನ್ನಾಗಿ ಅರ್ಥವಾದ ನಂತರ ಈ ಸಮಸ್ಯೆಯು ಬಗೆಹರಿಯಿತು.
 
=== ವಿಕಿರಣ ವಲಯ ===
ಕೆಂದ್ರದಿಂದ ೦.೨ ರಿಂದ ೦.೭ ಸೌರ ತ್ರಿಜ್ಯಗಳ ದೂರದಲ್ಲಿ ಸೌರ ಅನಿಲಗಳು ಬಹಳ ಬಿಸಿಯಾಗಿ ಮತ್ತು ಸಾಂದ್ರವಾಗಿರುವುದರಿಂದ, ಒಳಭಾಗದ ಶಾಖವನ್ನು ಹೊರಗೆ ಸಾಗಿಸಲು [[:en:thermal radiation|ಉಷ್ಣ ವಿಕಿರಣ]]ವೊಂದೇ ಸಾಕು. ಈ ವಲಯದಲ್ಲಿ ಉಷ್ಣ [[:en:convection|ಸಂವಹನೆ]]ಯು ಉಂಟಾಗುವುದಿಲ್ಲ; ಕೇಂದ್ರದಿಂದ ದೂರ ಹೆಚ್ಚಿದಂತೆ ತಾಪಮಾನವು ಕಡಿಮೆಯಾದರೂ, ತಾಪಮಾನದ ಬದಲಾವಣೆಯ ಗತಿಯು [[:en:adiabatic lapse rate|ಸ್ಥಿರೋಷ್ಣ ಮರುಕಳಿಕೆ]]ಗಿಂತ ಕಡಿಮೆಯಿರುವುದರಿಂದ, ಸಂವಹನೆ ಉಂಟಾಗಲು ಸಾಧ್ಯವಿಲ್ಲ. [[ಜಲಜನಕ]] ಮತ್ತು [[ಹೀಲಿಯಂ|ಹೀಲಿಯಂಗಳ]]ಗಳ ಅಯಾನುಗಳು ಹೊರಸೂಸಿದ [[:en:photon|ಫೋಟಾನ್]]ಗಳು ಸ್ವಲ್ಪ ದೂರ ಕ್ರಮಿಸಿದ ನಂತರ, ಬೇರೆ ಅಯಾನುಗಳು ಫೋಟಾನುಗಳನ್ನು ಮತ್ತೆ ಹೀರಿಕೊಳ್ಳುತ್ತವೆ-ಈ ರೀತಿಯಲ್ಲಿ [[ವಿಕಿರಣ|ವಿಕಿರಣವು]]ವು ಶಾಖವನ್ನು ಸಾಗಿಸುತ್ತದೆ. ಬೆಳಕು ಈ ಪದರದಿಂದ ಹೊರಹೋಗಲು ಲಕ್ಷಾಂತರ ವರ್ಷಗಳೇ ಹಿಡಿಯುತ್ತದೆ. ಬೆಳಕು ಸೂರ್ಯನ ಮೇಲ್ಮೈವರೆಗೂ ಬಂದ ಮೇಲೆ ಭೂಮಿಯನ್ನು ತಲುಪಲು ಕೇವಲ ೮ ನಿಮಿಷಗಳು ಬೇಕಾಗುತ್ತವೆ.
 
=== ಸಂವಹನ ವಲಯ ===
[[ಚಿತ್ರ:Solar eclips 1999 4 NR.jpg|thumb|right|200px|ಸೂರ್ಯನ ಪೂರ್ಣ [[ಸೂರ್ಯ ಗ್ರಹಣ|ಗ್ರಹಣ]]ವಾದಾಗ, ಸೂರ್ಯನ ವಾಯುಮಂಡಲವು ಕಣ್ಣಿಗೆ ಬಹಳ ಸುಲಭವಾಗಿ ಕಾಣಿಸುತ್ತದೆ.]]
 
ದ್ಯುತಿಗೋಳದ ಹೊರಗಿರುವ ಸೂರ್ಯನ ಭಾಗಗಳನ್ನು ಒಟ್ಟಿಗೆ ''ಸೌರ ವಾಯುಮಂಡಲ'' ಎಂದು ಕರೆಯಲಾಗುತ್ತದೆ. ದೂರದರ್ಶಕದಲ್ಲಿ ಕಾಣುವ ಈ ವಾಯುಮಂಡಲವು ೫ ಮುಖ್ಯ ವಲಯಗಳನ್ನು ಒಳಗೊಂಡಿದೆ: ''ಕನಿಷ್ಠ ತಾಪ ವಲಯ'', [[:en:chromosphere|ವರ್ಣಗೋಳ]], [[:en:solar transition region|ಪರಿವರ್ತನಾ ವಲಯ]], [[:en:corona|ಪ್ರಭಾವಲಯ]], ಮತ್ತು [[:en:heliosphere|ಸೌರಗೋಳ]]. ವಿರಳವಾದ ಹೊರ ವಾಯುಮಂಡಲವಾದ ಸೌರಗೋಳವು [[ಪ್ಲುಟೊ|ಪ್ಲುಟೊನ]] ಕಕ್ಷೆಯಿಂದಾಚೆ [[:en:heliosphere|ಸೌರವಿರಾಮ]]ದವರೆಗೂ ವ್ಯಾಪಿಸುತ್ತದೆ. ಸೌರವಿರಾಮದಲ್ಲಿ ಇದರಿಂದ ಒಂದು ಸ್ಫುಟವಾದ [[:en:shock wave|ಅಘಾತ ತರಂಗ]]ವು ರೂಪುಗೊಳ್ಳುತ್ತದೆ. ವರ್ಣಗೋಳ, ಪರಿವರ್ತನಾ ವಲಯ ಮತ್ತು ಪ್ರಭಾವಲಯಗಳು ಮೇಲ್ಮೈಗಿಂತ ಬಹಳಷ್ಟು ಹೆಚ್ಚು ಬಿಸಿಯಾಗಿವೆ; ಇದರ ಕಾರಣ ಇನ್ನೂ ತಿಳಿದುಬಂದಿಲ್ಲ.
 
ದ್ಯುತಿಗೋಳದ ಸುಮಾರು ೫೦೦ ಕಿ.ಮೀ. ಮೇಲೆ ಇದ್ದು ಸುಮಾರು ೪,೦೦೦&nbsp;[[:en:Kelvin|ಕೆ.]] ತಾಪಮಾನದಲ್ಲಿರುವ ಪದರವು ಸೂರ್ಯನ ಅತಿ ತಣ್ಣಗಿರುವ ವಲಯ. ಕನಿಷ್ಠ ತಾಪ ವಲಯವೆಂದು ಕರೆಯಲ್ಪಡುವ ಸೂರ್ಯನ ಈ ಪದರವು [[:en:carbon monoxide|ಇಂಗಾಲದ ಮಾನಾಕ್ಸೈಡ್]] ಮತ್ತು ನೀರಿನಂಥ ಸರಳ ಸಂಯುಕ್ತ ವಸ್ತುಗಳನ್ನು ಇಟ್ಟುಕೊಳ್ಳುವಷ್ಟು ತಣ್ಣಗಿದೆ. ಈ ವಸ್ತುಗಳನ್ನು ಈ ಪದರದ ವರ್ಣಪಟಲದಲ್ಲಿ ಕಂಡುಹಿಡಿಯಬಹುದು.
[[ಚಿತ್ರ:Heliospheric-current-sheet.gif|thumb|right|220px|[[:en:interplanetary medium|ಅಂತರಗ್ರಹ ಮಾಧ್ಯಮ]]ದಲ್ಲಿ [[:en:Plasma (physics)|ಪ್ಲಾಸ್ಮಾ]]ದ ಮೇಲೆ ಸೂರ್ಯನ ಪರಿಭ್ರಮಿಸುವ ಕಾಂತಕ್ಷೇತ್ರದ ಪ್ರಭಾವದಿಂದ ಉಂಟಾಗುವ [[:en:heliospheric current sheet|ಸೌರಗೋಳ ಪ್ರವಾಹ ತೆರೆ]]ಯು ಸೌರಮಂಡಲದ ಹೊರಭಾಗಗಳವರೆಗೂ ವ್ಯಾಪಿಸುತ್ತದೆ [http://quake.stanford.edu/~wso/gifs/HCS.html] ]]
 
ಅದರ ವಿಪರೀತ ತಾಪಮಾನದ ಕಾರಣದಿಂದ, ಸೂರ್ಯನಲ್ಲಿರುವ ಎಲ್ಲಾ ವಸ್ತುಗಳೂ ಅನಿಲ ರೂಪದಲ್ಲಿ ಅಥವಾ [[:en:Plasma (physics)|ಪ್ಲಾಸ್ಮಾ]] ರೂಪದಲ್ಲಿವೆ. ಇದರಿಂದ, ಸೂರ್ಯನ ಸಮಭಾಜಕದ ಬಳಿ ಪರಿಭ್ರಮಣವು (ಸುಮಾರು ೨೫ ದಿನಗಳು) ಅದರ ಧ್ರುವಗಳ ಬಳಿಯ ಪರಿಭ್ರಮಣ (ಸುಮಾರು ೩೫ ದಿನಗಳು) ಕಾಲಕ್ಕಿಂತ ಭಿನ್ನವಾಗಿದೆ. ಸೂರ್ಯನ ಅಕ್ಷಾಂಶಗಳ ಭೇದಾತ್ಮಕ ಪರಿಭ್ರಮಣದಿಂದ ಅದರ [[ಕಾಂತಕ್ಷೇತ್ರ|ಕಾಂತಕ್ಷೇತ್ರದ]] ರೇಖೆಗಳು ತಿರುಚಿಕೊಳ್ಳುತ್ತವೆ. ಈ ತಿರುಚಿಕೊಂಡ ಕಾಂತ ರೇಖೆಗಳು ಸೂರ್ಯನ ಮೇಲ್ಮೈಯಿಂದ ಕುಣಿಕೆಯಾಕಾರದಲ್ಲಿ ಹೊರಚಿಮ್ಮಿ, [[:en:sunspot|ಸೌರಕಲೆ]]ಗಳನ್ನು ನಿರ್ಮಿಸುತ್ತವೆ. ಈ ತಿರುಚುವಿಕೆಯಿಂದ [[:en:solar dynamo|ಸೌರ ಉತ್ಪಾದಕ]]ವು ಉಂಟಾಗುವುದಲ್ಲದೆ, ಸೂರ್ಯನ ಕಾಂತಕ್ಷೇತ್ರವು ಸುಮಾರು ೧೧ ವರ್ಷಗಳಿಗೊಮ್ಮೆ ದಿಕ್ಕು ಬದಲಾಯಿಸುವುದರಿಂದ, ೧೧-ವರ್ಷಗಳ [[:en:sunspot cycle|ಸೌರಾವರ್ತ]]ವೂ ಉಂಟಾಗುತ್ತದೆ.
 
[[:en:interplanetary medium|ಅಂತರಗ್ರಹ ಮಾಧ್ಯಮ]]ದಲ್ಲಿ ಪ್ಲಾಸ್ಮಾದ ಮೇಲೆ ಸೂರ್ಯನ [[:en:rotating magnetic field|ಪರಿಭ್ರಮಿಸುವ ಕಾಂತಕ್ಷೇತ್ರ]]ದ ಪ್ರಭಾವವು [[:en:heliospheric current sheet|ಸೌರಗೋಳದ ಪ್ರವಾಹ ತೆರೆ]]ಯನ್ನು ಉಂಟುಮಾಡುತ್ತದೆ. ಈ ತೆರೆಯು ಬೇರೆ ಬೇರೆ ದಿಕ್ಕುಗಳಲ್ಲಿ ಹೊರಟಿರುವ ಕಾಂತಕ್ಷೇತ್ರಗಳನ್ನು ಬೇರ್ಪಡಿಸುತ್ತದೆ. ಭೂಮಿಯ ಬಳಿ ಸೂರ್ಯನ ಕಾಂತಕ್ಷೇತ್ರಕ್ಕಿರುವ ಶಕ್ತಿಗೂ ಅಂತರಗ್ರಹ ಮಾಧ್ಯಮದಲ್ಲಿರುವ ಪ್ಲಾಸ್ಮಾವೇ ಕಾರಣ. ಅಂತರಿಕ್ಷವು ಸಂಪೂರ್ಣ ನಿರ್ವಾತವಾಗಿದ್ದಿದ್ದರೆ, ಸೂರ್ಯನ ೧೦<sup>-೪</sup> [[:en:tesla (unit)|ಟೆಸ್ಲ]] ಕಾಂತಕ್ಷೇತ್ರವು ದೂರದ ಘನಕ್ಕೆ ವಿಲೋಮಾನುಪಾತದಲ್ಲಿ ಕಡಿಮೆಯಾಗಿ, ಸುಮಾರು ೧೦<sup>-೧೧</sup> ಟೆಸ್ಲಗಳಷ್ಟು ಇರುತ್ತಿತ್ತು. ಆದರೆ ವಾಸ್ತವದಲ್ಲಿ, ಇದು ಸುಮಾರು ೧೦<sup>-೯</sup> ಟೆಸ್ಲಗಳಿರುವಂತೆ ಉಪಗ್ರಹ ಅವಲೋಕನೆಗಳಿಂದ ಕಂಡುಬರುತ್ತದೆ. ಕಾಂತಕ್ಷೇತ್ರದಲ್ಲಿ ಯಾವುದೇ ವಾಹಕ ದ್ರವದ (ಉದಾ: ಅಂತರಗ್ರಹ ಮಾಧ್ಯಮ) ಚಲನೆಯು ವಿದ್ಯುತ್ ಪ್ರವಾಹವನ್ನು ಉಂಟುಮಾಡುತ್ತದೆ. ಈ ಪ್ರವಾಹವು ಇನ್ನಷ್ಟು ಕಾಂತಕ್ಷೇತ್ರವನ್ನು ಉತ್ಪತ್ತಿ ಮಾಡುತ್ತದೆ.
[[ಚಿತ್ರ:Solvogn.jpg|thumb|200px|left|[[:en:Trundholm Sun chariot|ಟ್ರಂಡ್ ಹೋಮ್]] ಸೂರ್ಯ ರಥವನ್ನು ಕುದುರೆಯೊಂದು ಎಳೆಯುತ್ತಿರುವ ಈ ಮೂರ್ತಿಯು [[:en:Nordic Bronze Age|ಉತ್ತರ ಯೂರೋಪ್‌ನ ಕಂಚು ಯುಗ]]ದ ಪುರಾಣದಲ್ಲಿ ಮಹತ್ವದ ಸ್ಥಾನವನ್ನು ಹೊಂದಿತ್ತು ಎಂದು ಹೇಳಲಾಗಿದೆ.]]
 
ತನ್ನ ಉಪಸ್ಥಿತಿಯಿಂದ ದಿನವನ್ನೂ ಮತ್ತು ತನ್ನ ಅನುಪಸ್ಥಿತಿಯಿಂದ ರಾತ್ರಿಯನ್ನೂ ಉಂಟುಮಾಡುವ ಒಂದು ಹೊಳಪಿನ ತಟ್ಟೆಯೆಂದು ಸೂರ್ಯನನ್ನು ಮಾನವರು ಮೂಲಭೂತವಾಗಿ ಅರ್ಥಮಾಡಿಕೊಂಡಿದ್ದರು. ಹಲವು ಪ್ರಾಚೀನ ಮತ್ತು ಇತಿಹಾಸಪೂರ್ವ ಸಂಸ್ಕೃತಿಗಳಲ್ಲಿ ಸೂರ್ಯನನ್ನು ಒಂದು ದೇವತೆ ಅಥವಾ ಅಲೌಕಿಕ ಸಂಗತಿಯೆಂದು ಭಾವಿಸಲಾಗಿತ್ತು. [[ದಕ್ಷಿಣ ಅಮೆರಿಕ|ದಕ್ಷಿಣ ಅಮೆರಿಕದ]] [[:en:Inca|ಇಂಕಾ]] ಮತ್ತು [[:en:Aztec|ಆಜ್‌ಟೆಕ್]] ನಾಗರಿಕತೆಗಳಲ್ಲಿ ಸೂರ್ಯನ ಪೂಜೆಯು ಪ್ರಮುಖ ಸ್ಥಾನವನ್ನು ಪಡೆದಿತ್ತು. ಪ್ರಾಚೀನ ಕಾಲದಲ್ಲಿ ಹಲವು ಸ್ಮಾರಕಗಳು ಸೂರ್ಯನಿಗಾಗಿ ನಿರ್ಮಿತವಾಗಿದ್ದವು. ಉದಾಹರಣೆಗೆ, ದೊಡ್ಡ ಕಲ್ಲಿನ ಕಟ್ಟಡಗಳು [[:en:solstice|ಕರ್ಕಾಟಕ ಸಂಕ್ರಾಂತಿ]]ಯನ್ನು ನಿಖರವಾಗಿ ಗುರುತಿಸುತ್ತಿದ್ದವು (ಇಂತಹ ಕಟ್ಟಡಗಳು [[ಈಜಿಪ್ಟ್|ಈಜಿಪ್ಟ್‌ನ]] [[:en:Nabta Playa|ನಬ್ತ ಪ್ಲಯ]] ಮತ್ತು [[ಇಂಗ್ಲೆಂಡ್|ಇಂಗ್ಲೆಂಡ್‌ನ]] [[:en:Stonehenge|ಸ್ಟೋನ್ ಹೆಂಜ್]]ನಲ್ಲಿ ಕಾಣಬರುತ್ತವೆ); ಮೆಕ್ಸಿಕೊನ [[:en:El Castillo, Chichen Itza|ಎಲ್ ಕ್ಯಾಸ್ಟಿಲೊ]] ಪಿರಮಿಡ್, ತುಲಾ ಮತ್ತು ಮಕರ [[:en:equinox|ಸಂಕ್ರಾಂತಿ]]ಯಂದು ಸರ್ಪಗಳ ಆಕಾರದ ನೆರಳನ್ನು ಉಂಟುಮಾಡುವಂತೆ ರಚಿತವಾಗಿದೆ.
 
=== ಆಧುನಿಕ ಕಾಲದಲ್ಲಿ ಸೂರ್ಯಾಧ್ಯಯನದ ಪ್ರಗತಿ ===
ಪಾಶ್ಚಿಮಾತ್ಯ ದೇಶಗಳಲ್ಲಿ ಸೂರ್ಯನ ಬಗ್ಗೆ ವೈಜ್ಞಾನಿಕವಾಗಿ ವಿವರವನ್ನು ಕೊಟ್ಟ ಮೊದಲಿಗರಲ್ಲಿ [[:en:Ancient Greece|ಗ್ರೀಕ್]] [[:en:philosopher|ತತ್ವಜ್ಞಾನಿ]] [[:en:Anaxagoras|ಅನಕ್ಸಾಗೊರಸ್]]ನೂ ಸೇರಿದ್ದನು. ಸೂರ್ಯನು ಬೆಂಕಿಯ ಒಂದು ದೊಡ್ಡ ಗೋಳವೇ ಹೊರತು, [[:en:Helios|ಹೀಲಿಯೋಸ್]]ನ ರಥವಲ್ಲವೆಂದು ಅವನು ತರ್ಕಿಸಿದನು. ಈ ರೀತಿಯ ಪಾಷಂಡ ಅಭಿಪ್ರಾಯವನ್ನು ಹೊಂದಿದ್ದಕ್ಕಾಗಿ ಅವನನ್ನು ಸೆರೆಹಿಡಿದು ಮರಣ ದಂಡನೆ ವಿಧಿಸಲಾಯಿತು. ಆದರೆ ಇದರ ನಂತರ, [[:en:Pericles|ಪೆರಿಕ್ಲಸ್]]ನ ಹಸ್ತಕ್ಷೇಪದಿಂದ ಅವನನ್ನು ಬಿಡುಗಡೆಗೊಳಿಸಲಾಯಿತು.
 
ಸಾಮಾನ್ಯ ಒಮ್ಮತಕ್ಕೆ ಸವಾಲು ಹಾಕಿದ ಇನ್ನೊಬ್ಬ ವಿಜ್ಞಾನಿಯೆಂದರೆ [[:en:Nicolaus Copernicus|ನಿಕೊಲಾಸ್ ಕೋಪರ್ನಿಕಸ್]]. ಇವನು ೧೬ನೇ ಶತಮಾನದಲ್ಲಿ ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ ಎಂಬ ವಾದವನ್ನು ಪ್ರತಿಪಾದಿಸಿದನು. ಇದಕ್ಕೆ ಮುಂಚೆ, ಸೂರ್ಯನೇ ಭೂಮಿಯ ಸುತ್ತ ಸುತ್ತುತ್ತಾನೆಂದು ನಂಬಲಾಗಿತ್ತು. ೧೭ನೇ ಶತಮಾನದಲ್ಲಿ [[:en:Galileo|ಗೆಲಿಲಿಯೋ]] [[ದೂರದರ್ಶಕ|ದೂರದರ್ಶಕವನ್ನು]]ವನ್ನು ಪ್ರಸಿದ್ಧಿ ಮಾಡಿ, ಮೊಟ್ಟ ಮೊದಲಬಾರಿಗೆ ಸೌರಕಲೆಗಳನ್ನು ಭೂಮಿಯಿಂದ ಅವಲೋಕಿಸಿದನು. ಈ ಕಲೆಗಳು ಸೂರ್ಯ ಮತ್ತು ಭೂಮಿಯ ನಡುವೆ ಇರುವ ವಸ್ತುಗಳಾಗಿರದೆ, ಸೂರ್ಯನ ಮೇಲ್ಮೈ ಮೇಲಿರುವ ವೈಶಿಷ್ಟ್ಯತೆಗಳೆಂದು ಅವನು ಕಂಡುಹಿಡಿದನು.<ref>{{cite web |url=http://www.bbc.co.uk/history/historic_figures/galilei_galileo.shtml |title=Galileo Galilei (1564 - 1642) |publisher=BBC |accessdate=2006-03-22}}</ref>
[[:en:prism|ಪಟ್ಟಕ]]ವನ್ನು ಬಳಸಿ ಬೆಳಕನ್ನು ಅವಲೋಕಿಸಿದ [[:en:Isaac Newton|ಐಸಾಕ್ ನ್ಯೂಟನ್]]ನು, ಬಿಳಿ ಬೆಳಕು ಹಲವು ಬಣ್ಣಗಳ ಬೆಳಕುಗಳಿಂದ ಕೂಡಿದೆಯೆಂದು ತೋರಿಸಿದನು.<ref>{{cite web |url=http://www.bbc.co.uk/history/historic_figures/newton_isaac.shtml |title=Sir Isaac Newton (1643 - 1727) |publisher=BBC |accessdate=2006-03-22}}</ref>
ಸೌರ ವರ್ಣಪಟಲದ ಕೆಂಪು ಭಾಗದ ಹೊರಗಿರುವ [[:en:Infrared|ನಸುಗೆಂಪು]] ಕಿರಣಗಳನ್ನು ೧೮೦೦ರಲ್ಲಿ [[:en:William Herschel|ವಿಲಿಯಂ ಹರ್ಷೆಲ್]] ಕಂಡುಹಿಡಿದನು.<ref>{{cite web |url=http://coolcosmos.ipac.caltech.edu/cosmic_classroom/classroom_activities/herschel_bio.html |title=Herschel Discovers Infrared Light |publisher=Cool Cosmos |accessdate=2006-03-22}}</ref> ೧೮೦೦ರ ದಶಕದಲ್ಲಿ ಸೌರ ವರ್ಣಪಟಲದ ಅಧ್ಯಯನಗಳು ವಿಕಸಿಸಿದವು. [[:en:Joseph von Fraunhofer|ಜೋಸೆಫ್ ವಾನ್ ಫ್ರಾನ್ಹೋಫರ್]]ನು ಮೊದಲಬಾರಿಗೆ ವರ್ಣಪಟಲದಲ್ಲಿ ವರ್ಣರೇಖೆಗಳನ್ನು ಕಂಡುಹಿಡಿದನು.
 
== ಸೂರ್ಯನ ವೀಕ್ಷಣೆ ಮತ್ತು ಕಣ್ಣಿಗೆ ಹಾನಿ ==
[[ಚಿತ್ರ:SOHO solar flare sun large 20031026 0119 eit 304.png|thumb|right|೩೦.೪ [[:en:nanometer|nm]] [[ತರಂಗಾಂತರ|ತರಂಗಾಂತರದಲ್ಲಿ]]ದಲ್ಲಿ [[:en:helium|He<sup>+</sup>]] [[:en:emission line|ವರ್ಣರೇಖೆ]]ಯ [[ಅತಿನೇರಳೆ]] ಬೆಳಕನ್ನು ಬಳಸಿ [[:en:Solar and Heliospheric Observatory|SOHO]]/EIT [[ದೂರದರ್ಶಕ|ದೂರದರ್ಶಕವು]]ವು ದಾಖಲಿಸಿದ ಒಂದು ದೊಡ್ಡ ಸೌರ ಜ್ವಾಲೆ.]]
 
ಸೂರ್ಯನ ಬೆಳಕು ಬಹಳ ಪ್ರಕಾಶಮಾನವಾಗಿರುತ್ತದೆ. ಬರಿಗಣ್ಣಿನಿಂದ ಸ್ವಲ್ಪ ಕಾಲದವರೆಗೆ ಸೂರ್ಯನತ್ತ ನೇರವಾಗಿ ನೋಡುವುದು ಹಿತವಾಗಿಲ್ಲದಿದ್ದರೂ, ಸಾಮಾನ್ಯವಾಗಿ ಅಪಾಯಕಾರಿಯಲ್ಲ. ಸೂರ್ಯನತ್ತ ನೇರವಾಗಿ ನೋಡಿದಾಗ ಕಣ್ಣು ಕುಕ್ಕಿದಂತಾಗಿ, ತಾತ್ಕಾಲಿಕ ಮತ್ತು ಭಾಗಶಃ ಕುರುಡು ಉಂಟಾಗಬಹುದು. ಇದಲ್ಲದೆ, ಅಕ್ಷಿಪಟಲದ ಮೇಲೆ ಬೀಳುವ ಸುಮಾರು ೪-ಮಿಲಿವ್ಯಾಟ್ ಗಳ ಸೌರಶಕ್ತಿಯು ಅಕ್ಷಿಪಟಲವನ್ನು ಬಿಸಿಮಾಡಿ, ಒಮ್ಮೊಮ್ಮೆ ಅದಕ್ಕೆ ಹಾನಿಯನ್ನೂ ಉಂಟುಮಾಡಬಹುದು. [[ಅತಿನೇರಳೆ]] ಬೆಳಕು ಹಲವು ವರ್ಷಗಳ ಅವಧಿಯಲ್ಲಿ ಕಣ್ಣಿನ ಮಸೂರವನ್ನು ಹಳದಿ ಬಣ್ಣಕ್ಕೆ ತಿರುಗಿಸಿ, [[:en:cataract|ಕಣ್ಣಿನ ಪೊರೆ]]ಗಳನ್ನೂ ಉಂಟುಮಾಡುತ್ತದೆ. ಇದು ಸೂರ್ಯನತ್ತ ನೇರವಾಗಿ ನೋಡದಿದ್ದರೂ ಆಗಬಹುದು.
ಕಣ್ಣಿನ [[:en:pupil|ಪಾಪೆ]]ಯು ಕಾಂತಿಯ ಅಸಾಮಾನ್ಯವಾದ ವೈದೃಶ್ಯತೆಗೆ ಹೊಂದಿಕೊಳ್ಳದರಿಂದ, [[:en:solar eclipse|ಸೂರ್ಯನ ಖಂಡ ಗ್ರಹಣ]]ವನ್ನು ಬರಿಗಣ್ಣಿನಿಂದ ನೋಡುವುದು ಅಪಾಯಕರ: ಪಾಪೆಯು ದೃಷ್ಟಿ ವಲಯದಲ್ಲಿ ಕಾಣುವ ಒಟ್ಟು ಬೆಳಕಿನ ಆಧಾರದ ಮೇಲೆ ಹಿಗ್ಗುತ್ತದೆ - ದೃಷ್ಟಿವಲಯದಲ್ಲಿ ಕಾಣುವ ಅತಿ ಪ್ರಕಾಶಮಾನವಾದ ವಸ್ತುವಿನ ಆಧಾರದ ಮೇಲಲ್ಲ. ಖಂಡ ಗ್ರಹಣದ ಸಮಯದಲ್ಲಿ ಬಹುತೇಕ ಸೂರ್ಯರಶ್ಮಿಯನ್ನು ಚಂದ್ರನು ತಡೆಹಿಡಿದರೂ, ದ್ಯುತಿಗೋಳದ ಕಾಣುವ ಭಾಗಗಳು ಸಾಮಾನ್ಯ ದಿನದಲ್ಲಿರುವಷ್ಟೇ ಕಾಂತಿಯುತವಾಗಿರುತ್ತವೆ. ಗ್ರಹಣದ ಒಟ್ಟು ಅಂಧಕಾರದಲ್ಲಿ ಪಾಪೆಯು ~೨-ಮಿ.ಮೀ. ಇಂದ ~೬-ಮಿ.ಮೀ.ವರೆಗೆ ಹಿಗ್ಗಿ, ಸಾಮಾನ್ಯ ದಿನದಂದು ಸೂರ್ಯನನ್ನು ನೋಡಿದಾಗ ಬೀಳುವುದಕ್ಕಿಂತ ೧೦ ಪಟ್ಟು ಹೆಚ್ಚು ಬೆಳಕು ಅಕ್ಷಿಪಟಲದ ಮೇಲೆ ಬೀಳುತ್ತದೆ. ಇದು ಅಕ್ಷಿಪಟಲದ ಜೀವಕೋಶಗಳಿಗೆ ಹಾನಿಯುಂಟುಮಾಡಿ ಅಥವ ಅವುಗಳನ್ನು ನಾಶಗೊಳಿಸಿ, ವೀಕ್ಷಕನ ದೃಷ್ಟಿವಲಯದಲ್ಲಿ ಶಾಶ್ವತವಾದ ಕುರುಡು ಚುಕ್ಕೆಗಳನ್ನು ಉಂಟುಮಾಡಬಹುದು.<ref name="Espenak">{{cite web |last=Espenak |first=F. |title=Eye Safety During Solar Eclipses - adapted from NASA RP 1383 Total Solar Eclipse of 1998 February 26, April 1996, p. 17 |url=http://sunearth.gsfc.nasa.gov/eclipse/SEhelp/safety.html |accessdate=2006-03-22 |publisher=NASA}}</ref> ಇದು ನೋವನ್ನು ಉಂಟುಮಾಡುವುದಿಲ್ಲವಾದ್ದರಿಂದ, ಅನುಭವವಿಲ್ಲದ ವೀಕ್ಷಕರಿಗೆ ಮತ್ತು ಮಕ್ಕಳಿಗೆ ಬಹಳ ಅಪಾಯಕಾರಿ: ತಮ್ಮ ದೃಷ್ಟಿಯು ಹಾಳಾಗುತ್ತಿದೆಯೆಂದು ವೀಕ್ಷಕರಿಗೆ ತಕ್ಷಣವೇ ಗೊತ್ತಾಗುವುದಿಲ್ಲ.
 
[[ಸೂರ್ಯೋದಯ]] ಮತ್ತು [[ಸೂರ್ಯಾಸ್ತ|ಸೂರ್ಯಾಸ್ತಗಳ]]ಗಳ ಸಮಯದಲ್ಲಿ ಬೆಳಕು ವಾಯುಮಂಡಲದ ಮೂಲಕ ಹೆಚ್ಚು ದೂರ ಕ್ರಮಿಸುವುದರ ಕಾರಣ, [[:en:Rayleigh scattering|ರ್ಯಾ‌ಲಿ]] ಮತ್ತು [[:en:mie theory|ಮೀ]] ಚದುರಿಕೆಗಳು ಬೆಳಕನ್ನು ದುರ್ಬಲಗೊಳಿಸುತ್ತವೆ. ಈ ಸನ್ನಿವೇಶಗಳಲ್ಲಿ ಕೆಲವೊಮ್ಮೆ ಸೂರ್ಯವು ಬರಿಗಣ್ಣಿನಿಂದ ನೇರವಾಗಿ ನೋಡಬಹುದಾದಷ್ಟು ಮಂದವಾಗಿರುತ್ತದೆ. ಮಂಜು, ವಾಯುಮಂಡಲದಲ್ಲಿ ಧೂಳು ಮತ್ತು ಗಾಳಿಯಲ್ಲಿ ಹೆಚ್ಚು ತೇವಾಂಶಗಳೂ ಬೆಳಕನ್ನು ದುರ್ಬಲಗೊಳಿಸುತ್ತವೆ.
 
ಬೆಳಕನ್ನು ಸೋಸುವ ಗಾಜುಗಳು/ವಸ್ತುಗಳು ಸೂರ್ಯನನ್ನು ನೋಡುವ ಬಳಕೆಗಾಗಿಯೇ ರೂಪಿತವಾಗಿರಬೇಕು: ಕೆಲವು ಸೋಸಕಗಳು ಅತಿನೇರಳೆ/ನಸುಗೆಂಪು ಕಿರಣಗಳಿಗೆ ಪಾರದರ್ಶಕವಾಗಿದ್ದು, ಕಣ್ಣಿಗೆ ಹಾನಿಯುಂಟಾಗಬಹುದು. ಹೀರಿಕೊಂಡ ಸೌರಕಾಂತಿಯಿಂದ ಬಿಸಿಯಾಗಿ [[:en:eyepiece|ಅಕ್ಷಿಕಾಚಕ]] ಸೋಸಕಗಳು ಛಿದ್ರವಾಗಬಹುದಾದ್ದರಿಂದ, ಸಾಮಾನ್ಯವಾಗಿ ದೂರದರ್ಶಕ ಮತ್ತು ದುರ್ಬೀನುಗಳಲ್ಲಿ ಸೋಸಕವು [[:en:objective lens|ವಸ್ತು ಕಾಚಕ]] ಅಥವಾ [[:en:aperture|ದ್ಯುತಿ ರಂಧ್ರ]]ದ ಮೇಲೆ ಇರಬೇಕು. ಬೆಸುಗೆ ಗಾಜಿನಿಂದ ಸೂರ್ಯನನ್ನು ಸುರಕ್ಷಿತವಾಗಿ ನೋಡಬಹುದು. ಆದರೆ, ಕ್ಯಾಮೆರಾ ಫಿಲ್ಮ್ ನಸುಗೆಂಪು ಬೆಳಕಿಗೆ ಪಾರದರ್ಶಕವಾದ್ದರಿಂದ, ಅದನ್ನು ಸೂರ್ಯ ವೀಕ್ಷಣೆಗೆ ಬಳಸಬಾರದು.
೪,೬೩೬

edits

"https://kn.wikipedia.org/wiki/ವಿಶೇಷ:MobileDiff/277444" ಇಂದ ಪಡೆಯಲ್ಪಟ್ಟಿದೆ